ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ 100 ರೂಪಾಯಿ ನೋಟು ಬ್ಯಾನ್ ಸುದ್ದಿ! ನಿಜನಾ ? ಈ ಕುರಿತು RBI ಸ್ಪಷ್ಟನೆ ನೀಡಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಳೆ ನೂರು ರೂಪಾಯಿ ಬಂದ್ :
ಸೋಶಿಯಲ್ ಮೀಡಿಯಾ(Social Media) ಒಂದು ಅದ್ಭುತ ವೇದಿಕೆ. ಯಾವುದೇ ವ್ಯಕ್ತಿ ರಾತ್ರೋರಾತ್ರಿ ಪ್ರಸಿದ್ಧಿ ಪಡೆಯಬಹುದು. ಇದಕ್ಕೆ ಕಾರಣ ಗಾಸಿಪ್(Gossip). ಹಣಕಾಸಿನ ವಿಷಯದಲ್ಲಿ ಗಾಸಿಪ್ಗಳು ಬೆಂಕಿಯಂತೆ ಹರಡುತ್ತವೆ. ಇತ್ತೀಚೆಗೆ ಒಂದು ಗಾಸಿಪ್ ವೈರಲ್ ಆಯಿತು. “ಹಳೆಯ 100 ರೂಪಾಯಿ ನೋಟುಗಳನ್ನು RBI ಬ್ಯಾನ್ ಮಾಡಿದೆ(RBI Banned Old Rs 100 Notes)” ಎಂದು. ನಿಮ್ಮ ಮೊಬೈಲ್‌ಗೂ ಈ ಸುದ್ದಿ ಬಂದಿದ್ದರೆ, ಖಂಡಿತವಾಗಿಯೂ ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು.
ಹಳೆಯ ನೂರು ರೂಪಾಯಿ ನೋಟುಗಳು ಚಲಾವಣೆಯಲ್ಲಿವೆಯೇ?
ಕಳೆದ ಕೆಲವು ವರ್ಷಗಳ ಹಿಂದೆ ಡಿಮೋನಿಟೈಸ್ಸೇಷನ್ ಪ್ರಕ್ರಿಯೆ ಮೂಲಕ ಭಾರತ ಸರ್ಕಾರವು 500 ಮತ್ತು 1000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ದಿಟ್ಟ ನಿರ್ಧಾರವನ್ನು ಕೈಗೊಂಡಿತು. ಈ ಕ್ರಮದ ಉದ್ದೇಶ ಕಪ್ಪು ಹಣ, ಭ್ರಷ್ಟಾಚಾರ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ನಕಲಿ ನೋಟುಗಳ ಚಲಾವಣೆಯನ್ನು ತಡೆಗಟ್ಟುವುದಾಗಿತ್ತು. ಇದರಿಂದ ಸಾಕಷ್ಟು ಅಕ್ರಮ ವ್ಯವಹಾರಗಳಿಗು ಕೂಡ ಕಡಿವಾಣ ಹಾಕಲಾಗಿತ್ತು.
ಅಂದಿನಿಂದ, ನೋಟ್ ಬ್ಯಾನ್ ಎಂಬ ವಿಚಾರ ವೈರಲ್ ಆಗುತ್ತಲೇ ಇವೆ. ಇನ್ನು ಇತ್ತೀಚಿಗೆ, 2023ರ ಡಿಸೆಂಬರ್‌ನಲ್ಲಿ RBI 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಈ ಘೋಷಣೆಯಿಂದಾಗಿ ಕೆಲವರು 100 ರೂಪಾಯಿ ನೋಟುಗಳನ್ನೂ ಭವಿಷ್ಯದಲ್ಲಿ ಬ್ಯಾನ್ ಮಾಡಲಾಗುವುದು ಎಂದು ತಪ್ಪಾಗಿ ಕಲ್ಪಿಸಿದ್ದು, ಸೋಶಿಯಲ್ ಮೀಡಿಯಾ ದಲ್ಲಿ ಈ ಸುದ್ದಿಯನ್ನು ವೈರಲ್ ಮಾಡಿದ್ದಾರೆ. ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಥವಾ ಕೇಂದ್ರ ಸರ್ಕಾರವು ಯಾವಾಗ ಬೇಕಾದರೂ ನೋಟುಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಅದಕ್ಕೆ ಕೆಲವು ನಿಯಮಗಳು ಮತ್ತು ಕಾನೂನುಗಳಿವೆ.
ವೈರಲ್ ನ್ಯೂಸ್ ಗೆ RBI ನೀಡಿದ ಸ್ಪಷ್ಟನೆ:
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಸುದ್ದಿ(fake news)ಯೊಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಳೆಯ ರೂ. 100 ನೋಟುಗಳು. ಕಪೋಲಕಲ್ಪಿತ ಸುದ್ದಿಯು ಈ ನೋಟುಗಳಿಗೆ ಮಾರ್ಚ್ 31, 2024 ಕೊನೆಯ ದಿನಾಂಕ ಎಂದು ಹೇಳುತ್ತದೆ, ಏಪ್ರಿಲ್ 1 ರಿಂದ ಅವುಗಳನ್ನು ಅಮಾನ್ಯಗೊಳಿಸುತ್ತದೆ ಎಂಬ ತಪ್ಪು ಮಾಹಿತಿಯು ಅವ್ಯವಸ್ಥೆಯನ್ನು ಉಂಟುಮಾಡಿದೆ, ಅಂಗಡಿಗಳು, ಬೀದಿ ವ್ಯಾಪಾರಿಗಳು, ಟ್ಯಾಕ್ಸಿ/ಆಟೋ ಚಾಲಕರು ಹಳೆಯ 100 ರೂ. ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಆದರೆ ಇದು ಸುಳ್ಳು ಸುದ್ದಿ, ಆರ್ ಬಿ ಐ(RBI), ಇಂತಹ ಯಾವುದೇ ನಿರ್ಧಾರವನ್ನು ಕೇಂದ್ರ ಬ್ಯಾಂಕ್ (Bank) ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಉಳಿಯುತ್ತವೆ ಮತ್ತು ಜನರು ಯಾವುದೇ ಕಾಳಜಿ ಇಲ್ಲದೆ ಅವುಗಳನ್ನು ಬಳಸಬಹುದು ಎಂದು ಸ್ಪಷ್ಟನೆ ನೀಡಿದೆ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ “ಹಳೆಯ ನೂರು ರೂಪಾಯಿ ನೋಟು ಅಮಾನ್ಯವಾಗುತ್ತದೆ” ಎಂಬ ಸುದ್ದಿಯು ಶುದ್ಧ ಸುಳ್ಳು ಎಂದು ತಿಳಿದುಬಂದಿದೆ. ಆದ್ದರಿಂದ ಹಳೆಯ ನೂರು ರೂಪಾಯಿ ನೋಟುಗಳನ್ನು ನೀವು ಯಾರಿಗೆ ಬೇಕಾದರೂ ಕೊಡಬಹುದು ಮತ್ತು ಯಾವುದೇ ರೀತಿಯಲ್ಲಿ ಬ್ಯಾಂಕಿಗೆ ನೋಟ ಬದಲಾಯಿಸುವಾಂತಿಲ್ಲಾ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಯಾವುದೇ ಸುದ್ದಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ RBI ಯ ಅಧಿಕೃತ ವೆಬ್‌ಸೈಟ್ ಅಥವಾ ಇತರ ವಿಶ್ವಾಸಾರ್ಹ ಮೂಲಗಳನ್ನು ಪರಿಶೀಲಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಆರ್ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ LKG &1ನೇ ತರಗತಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
- ಈಗ ಮೊಬೈಲ್ನಲ್ಲೇ ಹಳೆಯ ವೋಟರ್ ಕಾರ್ಡ್ ಡೌನ್ಲೋಡ್ ಮಾಡಿ, ಇಲ್ಲಿದೆ ಲೈವ್ ವಿಡಿಯೋ @voters.eci.gov.in
- 2024 ರ ಮತದಾರರ ಪಟ್ಟಿ ಬಿಡುಗಡೆ. ಮೊಬೈಲ್ ನಲ್ಲಿ ನೋಡುವುದು ಹೇಗೆ? Karnataka Voter List Download 2024
- ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
- ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಅಂತ ಸುಳ್ಳು ಸುದ್ದಕೊಟ್ಟಿರುವವರನ್ನುತಕ್ಷಣ ಹಿಡಿದು ಬಂದಿಸಿ.