2023 ಮತ್ತು 24ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇದೇ ಮಾರ್ಚ್ 30 ಅಂದ್ರೆ ನಾಳೆ ಶನಿವಾರದಂದು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ (KSEAB) ಅಧಿಕೃತವಾಗಿ ಪ್ರಕಟಿಸಲಿದೆ. ಪ್ರಥಮ ಪಿಯುಸಿ ಫಲಿತಾಂಶ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ಬೆಳಕೆ 9 ರಿಂದ 11 ಗಂಟೆ ಒಳಗೆ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳ ರೋಲ್ ನಂಬರ್ ಆಧರಿಸಿ ಫಲಿತಾಂಶಗಳನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ನಾಳೆ ಪ್ರಥಮ ಪಿಯುಸಿ ಫಲಿತಾಂಶ ( PUC Result)
ರಾಜ್ಯದಲ್ಲಿ ಫೆಬ್ರವರಿ ತಿಂಗಳು 12 ರಿಂದ 27ನೇ ತಾರೀಖಿನವರೆಗೂ ಪ್ರಥಮ ಪಿಯುಸಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದರು, ಈಗಾಗಲೇ ಎಲ್ಲಾ ಪರೀಕ್ಷೆಗಳ ಮೌಲ್ಯಮಾಪನ ಮುಗಿದಿದ್ದು ಫಲಿತಾಂಶವನ್ನು ನಾಳೆ ಮಾರ್ಚ್ 30ರಂದು ಮಂಡಳಿ ಪ್ರಕಟಿಸಲು ಮುಂದಾಗಿದೆ, ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ karresults.nic.in/ ಫಲಿತಾಂಶಗಳು ಲಭ್ಯವಾಗಲಿದ್ದು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕನೇ ರಿಸಲ್ಟ್ ಗಳನ್ನ ನೋಡಿಕೊಳ್ಳಬಹುದು, ಮತ್ತು ನಾಳೆ ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಕಾಲೇಜಿಗೆ ಭೇಟಿ ನೀಡುವ ಮೂಲಕವು ಫಲಿತಾಂಶಗಳನ್ನು ತಿಳಿದುಕೊಳ್ಳಬಹುದು.
ರಿಸಲ್ಟ್ ನೋಡುವುದು ಹೇಗೆ ?
karresults.nic.in/ ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ(Official website) ಭೇಟಿ ನೀಡಿ ನಿಮ್ಮ ನೋಂದಣಿ ಸಂಖ್ಯೆ (Register number) ಮತ್ತು ಜನ್ಮ ದಿನಾಂಕವನ್ನು(DOB) ಭರ್ತಿ ಮಾಡಿ
ನಿಮ್ಮ 1 ನೇ ಪಿಯುಸಿ ಫಲಿತಾಂಶ 2024 ಡೌನ್‌ಲೋಡ್ (Download)ಮಾಡಿ.
ಪೂರಕ ಪರೀಕ್ಷೆಗಳಿಗೆ ತಯಾರಿ
ಪ್ರಥಮ ಪಿಯುಸಿ ವಾರ್ಷಿಕ ಮತ್ತು ಸಪ್ಲಿಮೆಂಟರಿ ಪರೀಕ್ಷೆಗಳನ್ನು ಜಿಲ್ಲಾಮಟ್ಟದಲ್ಲಿ ಶಿಕ್ಷಣ ಇಲಾಖೆಯ ನಡೆಸಿಕೊಂಡು ಬರುತ್ತಿದ್ದು ಈ ಬಾರಿಯೂ ಸಪ್ಲಿಮೆಂಟರಿ ಪರೀಕ್ಷೆಗಳು ಸುಸೂತ್ರವಾಗಿ ನಡೆಸಿಕೊಂಡು ಬರಲು ಪ್ರತ್ಯೇಕವಾಗಿ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಥವಾ ಪರೀಕ್ಷೆಯನ್ನು ಬರೆಯಲಾರದೆ ಬಿಟ್ಟ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವನ್ನು ಕೊಡಲು ಬರುವ ಮೇ ತಿಂಗಳಿನಲ್ಲಿ ಸಪ್ಲಿಮೆಂಟರಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸಪ್ಲಿಮೆಂಟರಿ ಪರೀಕ್ಷೆಗೆ ಹಾಜರಂಗವ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಪಾವತಿಸಲು ಇದೇ ಏಪ್ರಿಲ್ 20ರವರೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಪ್ಲಿಮೆಂಟರಿ ಪರೀಕ್ಷೆಯ ವೇಳಾಪಟ್ಟಿ ವಿವರ ಹೀಗಿದೆ
– 20-05-2024: ಕನ್ನಡ, ಅರೇಬಿಕ್
– 21-05-2024: ಇತಿಹಾಸ / ಭೌತಶಾಸ್ತ್ರ
– 22-05-2024: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
– 23-05-2024: ಇಂಗ್ಲಿಷ್
– 24-05-2024: ಗಣಿತ, ಶಿಕ್ಷಣಶಾಸ್ತ್ರ, ಭೂಗೋಳಶಾಸ್ತ್ರ, ಜೀವಶಾಸ್ತ್ರ
– 25-05-2024: ಅರ್ಥಶಾಸ್ತ್ರ
– 27-05-2024: ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ, ಗೃಹ ವಿಜ್ಞಾನ
– 28-05-2024: ಜೀವಶಾಸ್ತ್ರ, ಸಮಾಜಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
– 29-05-2024: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
– 30-05-2024: ಹಿಂದಿ
– 31-05-2024: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್
– 31-05-2024: ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಬ್ಯೂಟಿಮೊಬೈಲ್, ಬ್ಯೂಟಿ ಅಂಡ್ ವೆಲ್‌ನೆಸ್ :
ರಾಜ್ಯದಲ್ಲಿ ಈಗಾಗಲೇ ಜಿಲ್ಲಾ ಮಟ್ಟದ ಪದವಿ ಪುರ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಸಪ್ಲಿಮೆಂಟರಿ ಪರೀಕ್ಷೆ ವಿವರ ಪ್ರಕಟಿಸುವಂತೆ ಸೂಚಿಸಲಾಗಿದ್ದು ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ತುಂಬಿ, ಪರೀಕ್ಷೆ ತರಿಸಲು ಬೇಕಾದ ಸಹಕಾರ ನೀಡುವಂತೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸೂಚನೆ : ಪಿಯುಸಿ ಫಲಿತಾಂಶದ ಕುರಿತು ಸುಳ್ಳು ಸುದ್ದಿ ಹರಡಿಸುವ ಮತ್ತು ಪ್ರತಿದಿನ ರಿಸಲ್ಟ್ ಅನೌನ್ಸ್ ಮಾಡುವ ವೆಬ್ಸೈಟ್ ಗಳಿಂದ ದೂರ ಇರಿ, ಮತ್ತು ಅಧಿಕೃತ ಫಲಿತಾಂಶದ ಮಾಹಿತಿ ಮತ್ತು ನಿಖರವಾದ ಸುದ್ದಿಗಳಿಗೆ ನೀಡ್ಸ್ ಆಫ್ ಪಬ್ಲಿಕ್ ಡಿಜಿಟಲ್ ಮಾಧ್ಯಮದ ಟೆಲಿಗ್ರಾಮ್ & ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಆರ್ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ LKG &1ನೇ ತರಗತಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
- ರೈತರೇ ಗಮನಿಸಿ, ನಿಮಗಿನ್ನೂ ಬರ ಪರಿಹಾರ ಹಣ ಬಂದಿಲ್ವಾ? ಈ ದಾಖಲೆ ಕೊಟ್ಟು ಎಲ್ಲಾ ಹಣ ಪಡೆಯಿರಿ
- 2024 ರ ಮತದಾರರ ಪಟ್ಟಿ ಬಿಡುಗಡೆ. ಮೊಬೈಲ್ ನಲ್ಲಿ ನೋಡುವುದು ಹೇಗೆ? Karnataka Voter List Download 2024
- ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2000/- ಹಣ ಜಮಾ ಆಗಿದೆ. ನಿಮ್ಮ ಖಾತೆಗೆ ಬರದೇ ಇದ್ರೆ ಹೀಗೆ ಮಾಡಿ!
- ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
My result