PDO Recruitment 2024: 247 ಪಿಡಿಓ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಪ್ರಕಟ, ಕೊನೆಯ ದಿನಾಂಕ ನಿಗದಿ.

pdo recruitment 2024

ಕರ್ನಾಟಕ ಲೋಕಸೇವಾ ಆಯೋಗವು ಅಧಿಕೃತವಾಗಿ ಬಿಡುಗಡೆ ಮಾಡಿದ ಜಾಹೀರಾತಿನ ಪ್ರಕಾರ, ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (Department of Rural Development and Panchayat Raj, Government of Karnataka) ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಒಟ್ಟು 247 ಹುದ್ದೆಗಳಿವೆ. ಅರ್ಜಿ ಸಲ್ಲಿಸುವ ದಿನಾಂಕವು 15ನೇ ಏಪ್ರಿಲ್ 2024 ರಿಂದ 15ನೇ ಮೇ 2024 ರವರೆಗೆ ಇರುತ್ತದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://kpsc.kar.nic.in/ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕಳೆದುಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

KPSC PDO ನೇಮಕಾತಿ 2024:

ಇಲಾಖೆ ಹೆಸರು: ಕರ್ನಾಟಕ ಲೋಕಸೇವಾ ಆಯೋಗ

ಹುದ್ದೆಗಳ ಹೆಸರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ವರ್ಷ: 2024

ಒಟ್ಟು ಹುದ್ದೆಗಳು : 247

ಅಪ್ಲಿಕೇಶನ್ ವಿಧಾನ: Online

ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ(Karnataka Public Service Commission, KPSC )

ಉದ್ಯೋಗ ಇಲಾಖೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ

ಹುದ್ದೆ ಹೆಸರು : ಪಂಚಾಯಿತಿ ಅಭಿವೃದ್ಧಿ ಅಧಿಕಾರಿ[Panchayat Development Officer (HK & RPC)]

ಒಟ್ಟು ಹುದ್ದೆಗಳ ಸಂಖ್ಯೆ: 247

ಹೈದರಾಬಾದ್-ಕರ್ನಾಟಕ – 97 ಪೋಸ್ಟ್

ಉಳಿದ ಪೋಷಕ ವರ್ಗ  – 150  ಪೋಸ್ಟ್

ವಿದ್ಯಾರ್ಹತೆ:

ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು(Undergraduation)ಪೂರ್ಣಗೊಳಿಸಿರಬೇಕು ..

ವಯೋಮಿತಿ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 15-ಮೇ-2024 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ ಸಮಾನ್ಯ ವರ್ಗಕ್ಕೆ -35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

SC/ST/Cat-1 ಅಭ್ಯರ್ಥಿಗಳು: 05 ವರ್ಷಗಳು

ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು

PWD/ವಿಧವೆ ಅಭ್ಯರ್ಥಿಗಳು: 10 ವರ್ಷಗಳು

ಸಂಬಳ ಎಷ್ಟು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (HK/RPC) ಆಗಿ ಸೇವೆ ಸಲ್ಲಿಸುವ ಅವಕಾಶ ಲಭ್ಯವಿದೆ. ಈ ಹುದ್ದೆಗೆ ಆಯ್ಕೆಯಾದವರು ₹37,900/- ರಿಂದ ₹70,850/- ರವರೆಗಿನ ಮಾಸಿಕ ವೇತನ ಪಡೆಯಲು ಅರ್ಹರಾಗುತ್ತಾರೆ.

ಅರ್ಜಿ ಶುಲ್ಕ:

SC/ST/Cat-I/PWD ಅಭ್ಯರ್ಥಿಗಳು: ಇಲ್ಲ

ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50/-

ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: ರೂ.300/-

ಸಾಮಾನ್ಯ ಅಭ್ಯರ್ಥಿಗಳು: ರೂ.600/-

ಆಯ್ಕೆ ಪ್ರಕ್ರಿಯೆ :

ಪಂಚಾಯತ್ ಅಭಿವೃದ್ಧಿ ಅಧಿಕಾರಿ (HK/RPC) ಹುದ್ದೆಗೆ ಆಯ್ಕೆ, ಕನ್ನಡ ಭಾಷಾ ಪರೀಕ್ಷೆ( Kannada Language Test)ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Competitive Examination) ಅಭ್ಯರ್ಥಿಗಳ ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ.

ಕನ್ನಡ ಭಾಷಾ ಪರೀಕ್ಷೆಯು ಸ್ಥಳೀಯ ಭಾಷೆಯಲ್ಲಿನ ಪರಿಣತಿಯನ್ನು ಅಳೆಯುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯು ಅಭ್ಯರ್ಥಿಗಳ ಸಾಮರ್ಥ್ಯ ಮತ್ತು ಹುದ್ದೆಗೆ ಸಂಬಂಧಿಸಿದ ಜ್ಞಾನವನ್ನು ಪರೀಕ್ಷಿಸುತ್ತದೆ

ಕರ್ನಾಟಕದ RDPRD ನಲ್ಲಿ PDO (HC/PRC) ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ:
https://kpsc.kar.nic.in/

ಹಂತ 2: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ:

‘ವಿವಿಧ ಅಧಿಸೂಚನೆಗಳಿಗಾಗಿ ಆನ್‌ಲೈನ್‌ನಲ್ಲಿ ಅನ್ವಯಿಸು’ ಕ್ಲಿಕ್ ಮಾಡಿ.

‘ಪಂಚಾಯತ್ ಅಭಿವೃದ್ಧಿ ಅಧಿಕಾರಿ [HK/RPC]’ ಆಯ್ಕೆಮಾಡಿ.

ಹಂತ 3: ನೋಂದಾಯಿಸಿ:
ಅಗತ್ಯವಿರುವ ವಿವರಗಳನ್ನು ಒದಗಿಸಿ ನೋಂದಾಯಿಸಿ. ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಪಡೆಯಿರಿ.

ಹಂತ 4: ಅರ್ಜಿ ಸಲ್ಲಿಸಿ:
ಲಾಗಿನ್ ಮಾಡಿ, ಅಗತ್ಯವಿರುವ ವಿವರಗಳು ಮತ್ತು ದಾಖಲೆಗಳನ್ನು ಒದಗಿಸಿ.
ಶುಲ್ಕ ಪಾವತಿಸಿ ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15-04-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-05-2024

ಪ್ರಮುಖ ಲಿಂಕುಗಳು

ಅಧಿಕೃತ ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ 

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

ಕೇಂದ್ರ ಕಚೇರಿ ಮಾಹಿತಿ ಕೇಂದ್ರ ಮತ್ತು ಸಹಾಯವಾಣಿ ಸಂಖ್ಯೆ:  080-30574957/30574901

ಪ್ರಾಂತೀಯ ಕಛೇರಿ ಮೈಸೂರು:  0821-2545956

ಪ್ರಾಂತೀಯ ಕಛೇರಿ ಬೆಳಗಾವಿ:  0831-2475345

ಪ್ರಾಂತೀಯ ಕಛೇರಿ ಕಲಬುರಗಿ:  08472-227944

ಪ್ರಾಂತೀಯ ಕಛೇರಿ ಶಿವಮೊಗ್ಗ:  08182-228099.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!