MG Comet EV : ಅತಿ ಕಡಿಮೆ ಬೆಲೆಗೆ ಬರೋಬ್ಬರಿ 230 KM ಮೈಲೇಜ್ ಕೊಡುವ ಇವಿ ಕಾರ್ ಬಿಡುಗಡೆ.!

MG Comet electric car

ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್, ಮೋಟರ್‌ ಬೈಕ್‌ಗಳು ಹಾಗೂ ಕಾರುಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಈ ನಡುವೆ ಚೀನಾದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಎಂಜಿ ಮೋಟಾರ್ಸ್ (MG motors) ತನ್ನ ಹೊಸ ಕಾಮೆಟ್ ಎಲೆಕ್ಟ್ರಿಕ್ ಕಾರನ್ನು (MG Comet electric car) ಬಿಡುಗಡೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಹೌದು, ಎಂಜಿ ಮೋಟಾರ್ಸ್ (MG motors) ಭಾರತದಲ್ಲಿ ಕಾಮೆಟ್ ಎಲೆಕ್ಟ್ರಿಕ್ ಕಾರು (MG Comet electric car) ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಎಂಜಿ ಕಾಮೆಟ್ ಇವಿ (MG Comet EV) ಕಾರಿನ ಬೆಲೆಯಲ್ಲಿ ಭಾರಿ ಕಡಿತ ಮಾಡಲಾಗಿದೆ. ಮಾರುತಿ ವ್ಯಾಗನಆರ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಕಾಮೆಟ್ ಇವಿ ಕಾರು ಲಭ್ಯವಾಗುತ್ತಿದೆ. ಎಂಜಿ ಮೋಟಾರ್ಸ್ ಭಾರತದಲ್ಲಿ ಕೆಲವೇ ಕೆಲವು ಕಾರುಗಳ ಮೂಲಕ ವಾಹನ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿದೆ. ಇನ್ನು ಎಲೆಕ್ಟ್ರಿಕ್ ಕಾರುಗಳ ಬೈಕಿ ZS ಬಳಿಕ ಸಣ್ಣ ಕಾರಾದ ಎಂಜಿ ಕಾಮೆಟ್ ಇವಿ ಬಿಡುಗಡೆ ಮಾಡಿದೆ.

ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು (MG Comet electric car)

20230302023647 Comet EV

ಎಂಜಿ ಕಾಮೆಟ್ ಇವಿ (MG Comet EV) ಎಕ್ಸಿಕ್ಯೂಟಿವ್(executive), ಎಕ್ಸೈಟ್ (Exlight) ಮತ್ತು ಎಕ್ಸ್‌ಕ್ಲೂಸಿವ್ (Exclusive) ಎಂಬ ಮೂರು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಎಕ್ಸಿಕ್ಯೂಟಿವ್ (Executive) ಹೊರತುಪಡಿಸಿ, ಉಳಿದೆಲ್ಲ ಮಾದರಿಗಳ ಬೆಲೆ ರೂ.10,000 ಅಧಿಕಗೊಂಡಿದೆ ಎಂದು ವರದಿಯಾಗಿದೆ. ಎಂಜಿ ಕಾಮೆಟ್ ಎಲೆಕ್ಟ್ರಿಕ್ ಸಣ್ಣ ಕಾರಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಹೇಳಿ ಮಾಡಿಸಿದ ಕಾರು ಇದಾಗಿದೆ. ಇದೀಗ ಈ ಕಾರಿನ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಬರೋಬ್ಬರಿ 99,000 ರೂಪಾಯಿ ಇಳಿಕೆಯಾಗಿದೆ. ಎಂಜಿ ಮೋಟಾರ್ಸ್ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಇದೀಗ 6.99 ಲಕ್ಷ ರೂಪಾಯಿ(ex showroom)ನಿಂದ ಆರಂಭಗೊಳ್ಳುತ್ತಿದೆ. ಈ ಮೂಲಕ ಮಾರಾಟದಲ್ಲಿ ಹೊಸ ದಾಖಲೆ ಬರೆಯಲು ಎಂಜಿ(MG) ಸಜ್ಜಾಗಿದೆ. ಇದರೊಂದಿಗೆ ಈ ಕಾರು, ರೂ.6.99 ಲಕ್ಷದಿಂದ ರೂ. 9.24 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ನೂತನ ಎಂಜಿ ಕಾಮೆಟ್ ಇವಿ (MG Comet EV) ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಅರೋರಾ ಸಿಲ್ವರ್(Aurora silver) ಹಾಗೂ ಕ್ಯಾಂಡಿ ವೈಟ್(Candy white) ಸೇರಿದಂತೆ 2-ಡುಯಲ್ ಟೋನ್(dual tone), 3-ಮೊನೊಟೋನ್(monotone) ಬಣ್ಣದ ಆಯ್ಕೆಯಲ್ಲಿಯೂ ಲಭ್ಯವಿದೆ. ಇದು 2-ಡೋರ್ (doors) ಆಯ್ಕೆಯನ್ನು ಹೊಂದಿದ್ದು, 4 ಮಂದಿ ಆರಾಮದಾಯವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಪಾರ್ಕಿಂಗ್(parking) ಮಾಡುವುದಕ್ಕೂ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿರುವುದಿಲ್ಲ.

whatss

ಬ್ಯಾಟರಿ ಹಾಗೂ ಚಾರ್ಜಿಂಗ್ ವಿವರ :

ಈ ಕಾರು 17.3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್(capacity battery pack) ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 42ps ಗರಿಷ್ಠ ಪವರ್ (Energy) ಮತ್ತು 110Nmಪೀಕ್ ಟಾರ್ಕ್(peak torque) ಉತ್ಪಾದಿಸುತ್ತದೆ. RWD (Rear wheel drive) ತಂತ್ರಜ್ಞಾನವನ್ನು (Tecnology) ಪಡೆದಿರುವ ಕಾಮೆಟ್ ಇವಿ, ಸಂಪೂರ್ಣ ಚಾರ್ಜ್(In full charge) ನಲ್ಲಿ 230 ಕಿ.ಮೀ ರೇಂಜ್ (Milage) ಕೊಡುತ್ತದೆ.

ಎಂಜಿ ಕಾಮೆಟ್ ಇವಿ 3.3kW ಚಾರ್ಜರ್(Charger) ಬಳಕೆಯಲ್ಲಿ 0 ಯಿಂದ 100% ಬ್ಯಾಟರಿ ಚಾರ್ಜ್(Battery charge) ಆಗಲು 7 ಗಂಟೆ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ 7.4 kW ಚಾರ್ಜರ್ ಉಪಯೋಗ ಮಾಡಿದಾಗ 0 ಯಿಂದ 100% ಬ್ಯಾಟರಿ ಚಾರ್ಜ್ ಆಗುವುದಕ್ಕೆ ಕೇವಲ 3.5 ಗಂಟೆ ಸಾಕಾಗುತ್ತದೆ.

ಈ ಹೊಸ ಕಾರಿನ ವೈಶಿಷ್ಟ್ಯಗಳು :

ಈ ಎಂಜಿ ಕಾಮೆಟ್ ಇವಿ (MG Comet EV) ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ ಡುಯಲ್ 10.25-ಇಂಚಿನ ಸ್ಕ್ರೀನ್(Screen) (ಇನ್ಫೋಟೈನ್‌ಮೆಂಟ್ ಸಿಸ್ಟಮ್‌ & ಇನ್ಸ್ಟ್ರುಮೆಂಟ್ ಕ್ಲಸ್ಟರ್), ಆಂಡ್ರಾಯ್ಡ್ ಆಟೋ(Android Auto), ಆಪಲ್ ಕಾರ್ ಪ್ಲೇ(Apple car play), 55ಕ್ಕೂ ಹೆಚ್ಚು ಕನೆಕ್ಟ್ದ್ ಕಾರ್ ಟೆಕ್ ಮತ್ತು ಕೀಲೆಸ್ ಎಂಟ್ರಿಯಂತಹ(key less entry) ವೈಶಿಷ್ಟ್ಯಗಳನ್ನು ತನ್ನದಾಗಿಕೊಂಡಿದೆ.

ನೂತನ ಎಂಜಿ ಕಾಮೆಟ್ ಇವಿ ಪುಟ್ಟ ಕಾರಾಗಿದ್ದರೂ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು (Safety features) ಹೊಂದಿದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್‌ (dual front Airbag), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ(Reverse parking Camera), ರೇರ್ ಪಾರ್ಕಿಂಗ್ ಸೆನ್ಸರ್ಸ್(Rear parking sensors), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಡಿಸ್ಕ್ ಬ್ರೇಕ್ಸ್, ಹೋಲ್ಡ್ ಅಸಿಸ್ಟ್‌ ಅನ್ನು ಪಡೆದಿದೆ. ಈ ಕಾರಿಗೆ ಟಾಟಾ ಟಿಯಾಗೊ ಇವಿ (Tata Tiago EV) ಮತ್ತು ಸಿಟ್ರಸ್ ಇಸಿ3 (Citroen eC3) ಮಾದರಿಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದ ಮೇಲೆ ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಅವರಿಗೂ ಮಾಹಿತಿಯನ್ನು ತಿಳಿಸಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!