Maruti Suzuki : ಬರೋಬ್ಬರಿ 34 ಕಿ.ಮೀ ಮೈಲೇಜ್ ಕೊಡುವ ಸೆಲೆರಿಯೋ ಕಾರಿಗೆ ಭರ್ಜರಿ ಡಿಸ್ಕೌಂಟ್

maruti suzuki

ಮಾರುತಿ ಸುಜುಕಿ(Maruti Suzuki), ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ, ಈ ಏಪ್ರಿಲ್‌ನಲ್ಲಿ ದೇಶಾದ್ಯಂತ ಅರೆನಾ ಮತ್ತು ನೆಕ್ಸಾ ಡೀಲರ್‌ಗಳ ಮೂಲಕ ವಿವಿಧ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ. ಜನಪ್ರಿಯ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ (Maruti Suzuki Celerio) ಈ ಏಪ್ರಿಲ್‌ನಲ್ಲಿ ಭಾರಿ ರಿಯಾಯಿತಿಯನ್ನು ಪಡೆಯುತ್ತಿದೆ. ಈ ಕಾರು ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಈ ಏಪ್ರಿಲ್‌ನಲ್ಲಿ ಮಾರುತಿ ಸುಜುಕಿ ರಿಯಾಯಿತಿ ಯೋಜನೆಯು ಖರೀದಿದಾರರಿಗೆ ಕಾರು ಖರೀದಿಸಲು ಉತ್ತಮ ಅವಕಾಶವನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಾರುತಿ ಸುಜುಕಿ ಸೆಲೆರಿಯೊ(Maruti Suzuki Celerio) ವಿನ್ಯಾಸ ಮತ್ತು ವೈಶಿಷ್ಟ್ಯಗಳು :

celerio exterior right front three quarter 5

ಈ ಕಾರು ಚೆಂದದ ವಿನ್ಯಾಸವನ್ನು ಹೊಂದಿದೆ ಮತ್ತು ಎಲ್ಎಕ್ಸ್ಐ(LXI), ವಿಎಕ್ಸ್ಐ(VXI), ಮತ್ತು ಅಡ್ಎಕ್ಸ್ಐ(AdXI) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.
ಕೆಫೀನ್ ಬ್ರೌನ್, ಪರ್ಲ್ ಮಿಡ್ನೈಟ್ ಬ್ಲಾಕ್, ಗ್ಲಿಸ್ಟೆನಿಂಗ್ ಗ್ರೇ, ಸಿಲ್ಕಿ ಸಿಲ್ವರ್ ಮತ್ತು ಸ್ಪೀಡಿ ಬ್ಲೂ ಸೇರಿದಂತೆ ಹಲವಾರು ಬಣ್ಣಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಚಿಕ್ಕ ಕಾರು ಆಗಿದ್ದರೂ, ಐದು ಜನರು ಆರಾಮವಾಗಿ ಕುಳಿತು ಪ್ರಯಾಣಿಸಬಹುದಾದ ಕಾರ್ ಇದಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ(Maruti Suzuki Celerio) ಎಂಜಿನ್ ಮತ್ತು ಗೇರ್‌ಬಾಕ್ಸ್ (Engine and Gearbox):

ಈ ಕಾರು ಎರಡು ಪವರ್ಟ್ರೇನ್ (powertrain) ಆಯ್ಕೆಗಳಲ್ಲಿ ಲಭ್ಯವಿದೆ.1.0-ಲೀಟರ್ ಪೆಟ್ರೋಲ್ ಎಂಜಿನ್ 67 ಗರಿಷ್ಠ ಶಕ್ತಿ ಮತ್ತು 89Nm ಗರಿಷ್ಠ ಟಾರ್ಕ್ ಅನ್ನು ಬಳಸುತ್ತದೆ.5-ಸ್ಪೀಡ್ ಮ್ಯಾನುವಲ್(Speed manual) ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಲ್ಲಿ(Speed automatic gearbox) ಲಭ್ಯವಿದೆ.

whatss

ಸಿಎನ್‌ಜಿ(CNG) ಚಾಲಿತ ಕಾರು ಸಹ ಇದೇ ಎಂಜಿನ್(Engine) ಆಯ್ಕೆಯನ್ನು ಪಡೆದಿದೆ. 57Ps ಪವರ್ ಹಾಗೂ 82Nm ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 5 – ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಪೆಟ್ರೋಲ್ ರೂಪಾಂತರಗಳು 25.24 ರಿಂದ 26.68 Kmpl ಮೈಲೇಜ್ (Mileage) ಕೊಡುತ್ತವೆ. ಸಿಎನ್‌ಜಿ (CNG) ಮಾದರಿ 34.43 km/kg ಇಂಧನ ದಕ್ಷತೆಯನ್ನು ಪಡೆದಿದೆ

ಈ ಮಾರುತಿ ಸುಜುಕಿ ಸೆಲರಿಯೊ(Maruti Suzuki Celerio) ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 7 – ಇಂಚಿನ ಟಚ್‌ಸ್ಕ್ರೀನ್(Touch screen), ಪುಶ್ ಬಟನ್(Push buttons) ಸ್ಟಾರ್ಟ್ & ಸ್ಟಾಪ್, ಕೀಲೆಸ್ ಎಂಟ್ರಿ(Keyless entry) ಹಾಗೂ ಮ್ಯಾನುವಲ್ ಎಸಿಯನ್ನೂ(Manual Ac) ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌(dual front airbag), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಸೆಲೆರಿಯೊ ಕಾರಿಗೆ ಟಾಟಾ ಟಿಯಾಗೊ (Tata Tiago) ಮತ್ತು ಸಿಟ್ರನ್ ಸಿ3(Citroen C3) ಗಂಭೀರ ಪೈಪೋಟಿ ನೀಡುತ್ತಿವೆ. ಹೌದು, ಟಾಟಾ ಟಿಯಾಗೊ ಮತ್ತು ಸಿಟ್ರನ್ ಸಿ3 ಕಾರುಗಳು ಸೆಲೆರಿಯೊಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತವೆ. ಸೆಲೆರಿಯೊಗಿಂತ ಟಿಯಾಗೊ ಮತ್ತು ಸಿ3 ಕಾರುಗಳ ಬೆಲೆ ಸ್ವಲ್ಪ ಹೆಚ್ಚು, ಆದರೆ ರಿಯಾಯಿತಿಗಳಿಂದ ಉತ್ತಮ ಮೌಲ್ಯವನ್ನು ನೀಡಬಹುದು. ಈ ರಿಯಾಯಿತಿ ಪ್ರಯೋಜನಗಳು ರಾಜ್ಯಕ್ಕೆ ಮತ್ತು ಬಣ್ಣಗಳ ಆಧಾರದ ಮೇಲೆ ಬದಲಾಗಬಹುದು. ನಿಮ್ಮ ರಾಜ್ಯದಲ್ಲಿ ರಿಯಾಯಿತಿಗಳ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಹತ್ತಿರದ ಮಾರುತಿ ಸುಜುಕಿ ಶೋರೂಂಗೆ (Suzuki showroom) ಭೇಟಿ ನೀಡಿ.

ಮಾರುತಿ ಸುಜುಕಿ ಸೆಲರಿಯೊ ಕಾರಿನ ರಿಯಾಯಿತಿ ವಿವರಗಳು (offer details):

ಮಾರುತಿ ಸುಜುಕಿ ಸೆಲರಿಯೊ ಕಾರು ಈಗ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ. ಸೆಲರಿಯೊ ಕಾರಿನ ಆಟೋಮೆಟಿಕ್ ಮಾದರಿಯ(Automatic varient) ಮೇಲೆ ₹61,000 ರಿಯಾಯಿತಿ ಪಡೆಯಿರಿ.ಮ್ಯಾನುವಲ್ ಸೆಲರಿಯೊ ಕಾರು ಈಗ ₹56,000 ಕಡಿಮೆ ಬೆಲೆಯಲ್ಲಿ ಖರೀದಿಸಿ. ಸಿಎನ್‌ಜಿ ಸೆಲರಿಯೊ(CNG Celerio) ಕಾರಿನ ಮೇಲೆ ₹46,00 ರಿಯಾಯಿತಿ ಪಡೆದು ಇಂಧನ ಖರ್ಚು ಉಳಿಸಿ. ದೇಶದಾದ್ಯಂತ ಮಾರುತಿ ಸುಜುಕಿ ಡೀಲರ್‌ಶಿಪ್‌ಗಳಲ್ಲಿ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸೆಲರಿಯೊ ಕಾರು ಖರೀದಿಗೆ ಲಭ್ಯವಿದೆ. ಮತ್ತು ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ₹5.37 ಲಕ್ಷದಿಂದ ಪ್ರಾರಂಭವಾಗುವ ಬೆಲೆಯಲ್ಲಿ ಸೆಲರಿಯೊ ಕಾರು ನಿಮ್ಮದಾಗಿಸಿಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದ ಮೇಲೆ ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಅವರಿಗೂ ಮಾಹಿತಿಯನ್ನು ತಿಳಿಸಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!