ಆಧಾರ್ ಕಾರ್ಡ್ ಅನ್ನು ದೇಶದಾದ್ಯಂತ ಪ್ರಮುಖ ಐಡಿಯಾಗಿ ಮತ್ತು ಸರ್ಕಾರದ ಯೋಜನೆಗಳಿಗೆ ಬಳಸಲಾಗುತ್ತದೆ. ಮಾಹಿತಿಯ ಪ್ರಕಾರ, ಸುಮಾರು 1100 ಯೋಜನೆಗಳಲ್ಲಿ ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಇವುಗಳಲ್ಲಿ 319 ಯೋಜನೆಗಳು ಕೇಂದ್ರ ಸರ್ಕಾರದವು. ಹೆಚ್ಚುವರಿಯಾಗಿ, ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಂತಹ ಅನೇಕ ಹಣಕಾಸು ಸಂಸ್ಥೆಗಳು ಗ್ರಾಹಕರನ್ನು ದೃಢೀಕರಿಸಲು ಮತ್ತು ಆನ್‌ಬೋರ್ಡ್ ಮಾಡಲು ಆಧಾರ್ ಅನ್ನು ಬಳಸುತ್ತವೆ.
ನೀವು ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸಲು ಬಯಸಿದರೆ, ನೀವು ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ. UIDAI ನಿಂದ ಆನ್‌ಲೈನ್‌ನಲ್ಲಿ ಫೋಟೋ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಆದ್ದರಿಂದ, ನೀವು ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಫೋಟೋ ಬದಲಾಯಿಸಿಕೊಳ್ಳಬೇಕು.
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಲು ನೀವು ಬಯಸಿದರೆ, ನೀವು ಅದನ್ನು ಮನೆಯಲ್ಲಿ ಕುಳಿತು ಮಾಡಬಹುದು. ಇದಕ್ಕಾಗಿ ನೀವು https://myaadhaar.uidai.gov.in/ ಗೆ ಹೋಗಬೇಕು. ಇದರ ನಂತರ ನಿಮ್ಮ ವಿವರಗಳೊಂದಿಗೆ ಲಾಗಿನ್ ಮಾಡಿ. ನಂತರ ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ವಿಳಾಸವನ್ನು ನವೀಕರಿಸಿ. ಅಪ್‌ಡೇಟ್ ಆಧಾರ್ ಆನ್‌ಲೈನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಡೆಮೊಗ್ರಾಫಿಕ್ ಆಯ್ಕೆಯ ಅಡಿಯಲ್ಲಿ ವಿಳಾಸವನ್ನು ಆಯ್ಕೆಮಾಡಿ. ಆಧಾರ್ ಅನ್ನು ನವೀಕರಿಸುವುದನ್ನು ಮುಂದುವರಿಸಿ. ಡಾಕ್ಯುಮೆಂಟ್‌ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ. ಇತರ ಕೆಲವು ಮಾಹಿತಿಯನ್ನು ಕೇಳಲಾಗುತ್ತದೆ. ಇವುಗಳನ್ನು ನಮೂದಿಸಿ. ಇದರ ನಂತರ ಪಾವತಿಯ ಆಯ್ಕೆ ಬರುತ್ತದೆ ಆದರೆ ಈ ಕೆಲಸವು ಮುಂದಿನ ವರ್ಷ ಮಾರ್ಚ್ 14 ರವರೆಗೆ ಉಚಿತವಾಗಿರುತ್ತದೆ
ಆಧಾರ್ ಕಾರ್ಡನ್ನು ನವೀಕರಿಸುವ(update) ವಿಧಾನ :
How to update Aadhaar? : ಆಧಾರ್ ಕಾರ್ಡನ್ನು ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅಪ್ಡೇಟ್ ಮಾಡಬಹುದು. ನಿಮ್ಮ ಜನ್ಮ ದಿನಾಂಕ, ವಿಳಾಸ, ಹೆಸರು ಹೀಗೆ ಎಲ್ಲವನ್ನು ಆನ್ಲೈನ್ ಮುಖಾಂತರ ಅಪ್ಡೇಟ್ ಮಾಡುವ ವಿಧಾನ ಕೆಳಗಿನಂತಿದೆ :
ಹಂತ 1: ಮೊದಲನೆಯದಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://myaadhaar.uidai.gov.
ಹಂತ 2: ನಂತರ ಲಾಗಿನ್ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ, Captcha ಎಂಟರ್ ಮಾಡಿ,
ಹಂತ 3: Send OTP ಬಟನ್ ಮೇಲೆ ಕ್ಲಿಕ್ ಮಾಡಿ, ಓಟಿಪಿ ನಿಮ್ಮ ರಿಜಿಸ್ಟರ್ ಫೋನ್ ನಂಬರ್ಗೆ ಬರುತ್ತದೆ ಅದನ್ನು enter ಮಾಡಿ ಲಾಗಿನ್ ಆಗಿ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಹಂತ 4: ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ ‘Address Update’ ಆಯ್ಕೆ ಮಾಡಿ.
ಹಂತ 5: ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.
ಹಂತ 6: ಆ ಬಳಿಕ ‘Submit’ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 7: ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ.
ಹಂತ 8: 15 ದಿನಗಳೊಳಗೆ ನಿಮ್ಮ ವಿಳಾಸ ಅಥವಾ ಇತರ ಯಾವುದೇ ಮಾಹಿತಿ ಆಧಾರ್ ನಲ್ಲಿ ಅಪ್ಡೇಟ್ ಆಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..