Realme Narzo 70: ರಿಯಲ್‌ಮಿ ಮತ್ತೊಂದು ಮೊಬೈಲ್ ಫೋನ್ ಗ್ರ್ಯಾಂಡ್‌ ಎಂಟ್ರಿ..! ಇಲ್ಲಿದೆ ಫೀಚರ್ಸ್

Realme Narzo 70

1,200 ನಿಟ್ಸ್‌ ವರೆಗಿನ ಗರಿಷ್ಠ ಹೊಳಪಿನೊಂದಿಗೆ(Brightness) ಏಪ್ರಿಲ್ 24 ರಂದು ಮಾರುಕಟ್ಟೆಗೆ ಲಗ್ಗೆ ಇಟ್ಟ Realme Narzo 70 ಮೊಬೈಲ್

Realme Narzo 70 ಹೆಚ್ಚು ಜನಪ್ರಿಯ ಹಾಗೂ ಪ್ರಚಲಿತದೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮೊಬೈಲ್ ಫೋನ್. ಇದೀಗ ಕಂಪನಿಯು ಉತ್ತಮ ಗುಣಮಟ್ಟದೊಂದಿಗೆ realme Narzo 70 ಮೊಬೈಲ್ ಅನ್ನು ಏಪ್ರಿಲ್ 24 ರಂದು ಹೊಸ ಫೀಚರ್ ಗಳೊಂದಿಗೆ ಬಿಡುಗಡೆ ಮಾಡಿದೆ. ಕಂಪನಿ ಶುರುವಿನಿಂದಲೂ ರಿಯಲ್‌ಮಿ ತನ್ನ ಮೊಬೈಲ್‌ ಡಿಸೈನ್‌ ಬಗ್ಗೆ ಹೆಚ್ಚು ಚರ್ಚೆಯಲ್ಲಿ ಇರುವಂತಹ ಒಂದು ಉತ್ತಮ ಬ್ರಾಂಡ್ ಎಂದು ಗ್ರಾಹಕರು ಅಭಿಪ್ರಾಯ ಪಟ್ಟಿದ್ದಾರೆ. Realme Narzo 70 ಸಹ ಈ ಸಾಲಿಗೆ ಸೇರುವ ಸ್ಮಾರ್ಟ್‌ಫೋನ್ ಆಗಿದೆ. ಹಾಗಿದ್ರೆ ಈ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿರಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಿಯಲ್‌ಮಿ(Realme) Narzo 70:
PC 3 1710755007246 1710755018147

ರಿಯಲ್‌ಮಿ (Realme) ತನ್ನ ಹೊಸ ಅವೃತ್ತಿಯ ರಿಯಲ್‌ಮಿ ನಾರ್ಜೋ 70 5G ಅನ್ನು ಇದೀಗ ಅನಾವರಣ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್ಸ್( special features) ನೊಂದಿಗೆ ಮೀಡಿಯಾಟೆಕ್‌ ಪ್ರೊಸೆಸರ್‌ನಲ್ಲಿ  ಕಾರ್ಯನಿರ್ವಹಿಸಲಿವೆ .ಇನ್ನು ರಿಯಲ್‌ಮಿ ನಾರ್ಜೋ 70 5G ಯನ್ನು ವಿಶೇಷವಾಗಿ ಭಾರತದಲ್ಲಿ( India) ಅನಾವರಣ ಮಾಡಲಾಗಿದ್ದು ಇದರಿಂದ ಭಾರತೀಯರ ಗಮನವನ್ನು ಈಗಾಗಲೇ ತನ್ನತ್ತ ಸೆಳೆದುಕೊಂಡಿದೆ. ಇದರ ಜೊತೆಗೆ IP54-ರೇಟೆಡ್( Rated) ಪಡೆದಿರುವ  ರಿಯಲ್‌ಮಿ ನಾರ್ಜೋ 70 5G ಯ ವೈಶಿಷ್ಟ್ಯತೆಗಳನ್ನು ನೋಡೋಣ ಬನ್ನಿ.

ರಿಯಲ್‌ಮಿ ನಾರ್ಜೋ 70 5G ವೈಶಿಷ್ಟ್ಯತೆಗಳು :

ಡಿಸೈನ್ ಬಗ್ಗೆ ಹೆಚ್ಚು ಹೊತ್ತು ನೀಡುವ ರಿಯಲ್‌ಮಿ ಗ್ರಾಹಕರನ್ನು ಯಾವಾಗಲೂ ತನ್ನತ್ತ ಸೆಳೆಯುವ ಹಂಬಲದಲ್ಲಿ ಹೊಸ ಹೊಸ ಪ್ರಯತ್ನವನ್ನು ಹಾಗೂ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ. ಹಾಗೆ ತನ್ನ ಹೊಸ ಆವೃತ್ತಿಯ Realme Narzo 70 ಸಹ ಈ ಸಾಲಿಗೆ ಸೇರುವ ಸ್ಮಾರ್ಟ್‌ಫೋನ್ ಆಗಿದೆ. ವಿಭಿನ್ನ ಹಾಗೂ ವಿಶಿಷ್ಟ ಡಿಸೈನ್‌ನಿಂದ ಗ್ರಾಹರಕನ್ನು ಈಗಾಗಲೇ ತನ್ನತ್ತ ಬರಮಾಡಿಕೊಂಡಿದೆ. ವಿಶೇಷವಾಗಿ ಗ್ರಾಕರನ್ನು ಸೆಳೆದಿರುವುದು ಮೊಬೈಲ್ ನ ಹಿಂದಿನ ಭಾಗ( Backside ). ಮುಖ್ಯವಾಗಿ ಅದರ ಅರ್ಧಭಾಗ( Half part ) ಗ್ಲಾಸ್‌ ಬ್ಯಾಕ್‌ ಆಗಿದ್ದು, ಇನ್ನು ಅರ್ಧ ಭಾಗ ಶೈನಿ ಫಿನಿಷ್ ಹೊಂದಿದೆ. ಬಹಳ ವಿಭಿನ್ನ ಹಾಗೂ ವಿನೂತನದಿಂದ  ಕಾಣುತ್ತಿರುವ ಈ ಫೋನ್‌ ನ ತೂಕ(Weight) 198 ಗ್ರಾಮ್‌(Gram ).

ರಿಯಲ್‌ಮಿ ನಾರ್ಜೋ 70 5G ಫೀಚರ್ಸ್ :

ಈ ರಿಯಲ್ ಮಿ ನಾರ್ಜೋ 70 5G ಫೀಚರ್ಸ್ ಏನೆಲ್ಲಾ ಇರಬಹುದು ಎಂದು ತಿಳಿಯಲು ಹೋದರೆ, ರಿಯಲ್‌ಮಿ  ನಾರ್ಜೋ 70 5G ಸ್ಮಾರ್ಟ್ ಫೋನ್  (Realme Narzo 70 Smartphone) 6.67 ಇಂಚಿನ HD ಡಿಸ್ ಪ್ಲೇ (1,080×2,400 ಪಿಕ್ಸೆಲ್‌) ಅಮೋಲೆಡ್‌ ಹೊಂದಿದ್ದು, 120Hz ರಿಫ್ರೆಶ್ ರೇಟ್( Refresh rate) ಜೊತೆಗೆ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ( Touch sampling rate )ಮತ್ತು 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌( Brightness) ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ UI 5.0 ಸ್ಕೀಮ್ ನಲ್ಲಿ ರನ್‌ ಆಗಲಿದ್ದು, ಮೂರು ವರ್ಷಗಳ ಭದ್ರತಾ ನವೀಕರಣದ ಜೊತೆಗೆ ಎರಡು ವರ್ಷಗಳ ಸಾಫ್ಟ್‌ವೇರ್ ನವೀಕರಣದ ಗ್ಯಾರಂಟಿಯನ್ನು  ನೀಡಲಾಗಿದೆ. ಈ ಫೋನ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇನ್ನು 6GB ಮತ್ತು 8GB RAM ಆಯ್ಕೆಗಳಲ್ಲಿ ಲಭ್ಯ ಇದ್ದು , RAM ವಿಸ್ತರಣೆಗೂ ಕೂಡ ಅವಕಾಶ ನೀಡಲಾಗಿದೆ.

ರಿಯಲ್‌ಮಿ ನಾರ್ಜೋ 70 5G ಕ್ಯಾಮೆರಾ :

ರಿಯಲ್‌ಮಿ ನಾರ್ಜೊ 70 5G ಈ ಭಾರಿ ಕೇವಲ ತನ್ನ ಮೊಬೈಲ್‌ ಡಿಸೈನ್‌ ಬಗ್ಗೆ ಮಾತ್ರ ಯೋಚನೆ ಮಾಡದೆ, ಕ್ಯಾಮೆರಾದಿಂದಲೂ ಕೂಡ ಹೆಚ್ಚು ಚರ್ಚಿತವಾಗಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಫೀಚರ್ಸ್‌ ಹೊಂದಿದ್ದು, 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ f/1.8 ಅಪರ್ಚರ್ ಮತ್ತು 2-ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ಪಡೆದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್‌ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಹೆಚ್ಚಿನದಾಗಿ ಫೋನ್ 5G, ವೈ ಫೈ ಮತ್ತು ಬ್ಲೂಟೂತ್ ಆವೃತ್ತಿ 5.2 ಅನ್ನು ಒಳಗೊಂಡಿವೆ.

ರಿಯಲ್‌ಮಿ ನಾರ್ಜೋ 70 5G, 45W ವೇಗದ ಚಾರ್ಜಿಂಗ್( fast charging) ಬೆಂಬಲ ಇರುವ 5,000mAh ಶಕ್ತಿಯುತ ಬ್ಯಾಟರಿಯನ್ನು ( Battery)ಹೊಂದಿದ್ದು, ಗ್ಲಾಸ್‌ ಗ್ರೀನ್‌( Glass green) ಹಾಗೂ ಗ್ಲಾಸ್‌ ಗೋಲ್ಡ್‌ಗಳಲ್ಲಿ ( Glass gold)ಮಾರುಕಟ್ಟೆಯಲ್ಲಿ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಫೋನ್‌ 15999 ಹಾಗೂ 16999 ರೂಪಾಯಿಗಳಿಗೆ ಲಭ್ಯವಾಗಲಿದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!