ನಿಮ್ಮ ಬಳಿ BPL ರೇಷನ್ ಕಾರ್ಡ್ ಇದೆಯೇ? ಹಾಗಿದ್ದಲ್ಲಿ 3 ಗ್ಯಾಸ್ ಜೊತೆಗೆ ಸ್ಟವ್ ಕೂಡ ಉಚಿತವಾಗಿ ಸಿಗುತ್ತೆ! ಕೂಡಲೇ ಅರ್ಜಿ ಸಲ್ಲಿಸಿ. ನೀವು ಬಿಪಿಎಲ್ ರೇಷನ್ ಕಾರ್ಡ್ (BPL Ration card) ಬಳಕೆದಾರರೇ? ಹಾಗಿದ್ದಲ್ಲಿ ನಿಮಗೆ ಭರ್ಜರಿ ಗುಡ್ ನ್ಯೂಸ್ ಇದೆ. ಉಚಿತವಾದ 3 (Free Gas stove) ಗ್ಯಾಸ್ ಜೊತೆಗೆ ಸ್ಟೋವ್ ಕೂಡ ದೊರೆಯುತ್ತದೆ. ಅದಕ್ಕಾಗಿ ಅರ್ಜಿಯನ್ನು (Application) ಕೂಡ ಬಿಡುಗಡೆ ಮಾಡಿದ್ದಾರೆ. ಏನಿದು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಂದು 2016 ಸಾಕಷ್ಟು ಬಡ ಕುಟುಂಬದ ಮಹಿಳೆಯರಿಗೆ ಸಂತಸದ ದಿನ. ಆ ದಿನ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಯಾದ ಕ್ಷಣ. ಅಂದು ಬಡ ಕುಟುಂಬದ ಮಹಿಳೆಯರು ಯಾರೆಲ್ಲ ಇದ್ದಾರೆ ಅವರಿಗೆ ಉಚಿತವಾಗಿ ಗ್ಯಾಸ್ ಸೌಲಭ್ಯಗಳನ್ನು ಒದಗಿಸಿತ್ತು. ಅದರಿಂದಾಚೆಗೆ ಕೋಟ್ಯಾಂತರ ಮಹಿಳೆಯರು ತಮ್ಮ ಕೆಲಸ ಕಾರ್ಯಗಳಿಗೆ ತೆರಳುವ ಮುನ್ನ ಮನೆ ಕೆಲಸ ಅದರಲ್ಲೂ ಅಡುಗೆ ಕೆಲಸವನ್ನು ಬಹಳ ಬೇಗ ಮುಗಿಸುವಲ್ಲಿ ಸಹಾಯ ಮಾಡಿದ್ದು ಈ ಉಚಿತವಾದ ಗ್ಯಾಸ್ ಸೌಲಭ್ಯ. ಇಂದು ಈ ಸೌಲಭ್ಯದ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ಆಗಿ ಗ್ಯಾಸ್ ಜೊತೆಗೆ ಸ್ಟವ್ ಕೂಡ ಉಚಿತವಾಗಿ ಸಿಗುತ್ತಿದೆ. ಇದರ ಜೊತೆಗೆ ಈ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಹಲವಾರು ರೀತಿಯ ಸಾಲ ಗಳನ್ನೂ ಕೂಡ ಪಡೆಯಬಹುದು.
ಬಿಪಿಎಲ್ ಕಾರ್ಡ್ ಇದ್ದವರಿಗೆ ಭರ್ಜರಿ ನ್ಯೂಸ್
ನಿಮ್ಮ ಬಳಿ ರೇಷನ್ ಕಾರ್ಡ್ ಇದ್ರೆ ಸಾಕು, ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿದವರಿಗೆ ಸರ್ಕಾರದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಮಗೆಲ್ಲರಿಗೂ ತಿಳಿದೇ ಇದೆ ಸರ್ಕಾರ ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ ಹಲವಾರು ರೀತಿಯ ಪ್ರಯೋಜನಗಳು ಹಾಗೂ ಉಚಿತ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಇದೀಗ ಉಚಿತ 3 ಗ್ಯಾಸ್ ಮತ್ತು ಸ್ಟವ್ ಅನ್ನು ನೀಡಲಾಗುತ್ತಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 (PM Ujval Scheme ) :
ಮೋದಿ ಸರ್ಕಾರ ಬಡವರಿಗಾಗಿ ಪ್ರದಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದು. ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ಒದಗಿಸಲಾಗುತ್ತಿದೆ. ಉಚಿತ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್ (Gas Stove) ನೀಡುವುದರ ಮೂಲಕ ಉಚಿತವಾಗಿ ಗ್ಯಾಸ್ ಕನೆಕ್ಷನ್ (Free Gas Connection) ಪಡೆದುಕೊಳ್ಳಬಹುದು. ಇದು ಬಡವರ ಪಾಲಿಗೆ ಒಂದು ಉತ್ತಮ ಯೋಜನೆಯಾಗಿದೆ.
ಮಹಿಳೆಯರಿಗಾಗಿ ಬಡ್ಡಿ ರಹಿತ 1,600 ಸಾಲವನ್ನು ಕೂಡ ನೀಡಲಾಗುತ್ತಿದೆ :
ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾದ ಸೌಲಭ್ಯದ ಜೊತೆಗೆ 1,600 ಸಾಲವನ್ನು ( loan) ಕೂಡ ನೀಡಲಾಗುತ್ತಿದೆ. ಏಕೆಂದರೆ ಮನೆಯನ್ನು ನಿಭಾಯಿಸಲು ಹಣ ಬಹಳ ಮುಖ್ಯ. ಆದ್ದರಿಂದ ಮಹಿಳೆಯರಿಗೆ ಪ್ರಯೋಜನವಾಗಲಿ ಎಂದು 1600 ಹಣ ವನ್ನು ಯಾವುದೇ ಬಡ್ಡಿ ಇಲ್ಲದೆ ನೀಡಲಾಗುತ್ತಿದೆ. ಇದು ಒಂದು ಉತ್ತಮ ಮಟ್ಟದ ಉಪಯುಕ್ತವಾದ ಯೋಜನೆಯಾಗಿದ್ದು, ಮಹಿಳೆಯರಿಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯಕವಾಗಲಿದೆ.
ಈಗಾಗಲೇ ಉಜ್ವಲ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಆರ್ಥಿಕ ವರ್ಷದಲ್ಲಿ,ಉಚಿತ ಗ್ಯಾಸ್ ಸ್ಟೌಟ್ ವಿತರಣೆ ಮಾಡಿದ್ದು ಸುಮಾರು 10 ಮಿಲಿಯನ್ (10 million) ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು :
1. 18 ವರ್ಷದ ಮಹಿಳೆಯರು ಅರ್ಜಿ ಸಲ್ಲಿಸಬಹುದು
2. ಬೇರೆ ಗ್ಯಾಸ್ ಕನೆಕ್ಷನ್ ಇದ್ರೆ ಉಚಿತ ಗ್ಯಾಸ್ ಕನೆಕ್ಷನ್ ಸಿಗೋದಿಲ್ಲ.
3. ಗ್ರಾಮೀಣ ಭಾಗದಲ್ಲಿ ವಾಸಿಸುವವರು ಎಸ್ ಸಿ ಎಸ್ ಟಿ ಹಿಂದುಳಿದ ವರ್ಗಗಳು ಹೀಗೆ ಮೊದಲಾದ ಬಡ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲಾತಿಗಳು (Documents) :
1. ನಿಮ್ಮ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಗಳು
2. ಒಂದು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
3. ಬಿಪಿಎಲ್ ರೇಷನ್ ಕಾರ್ಡ್
4. ವಸತಿ ಪ್ರಮಾಣ ಪತ್ರ
5. ಬ್ಯಾಂಕ್ ಖಾತೆ
6. ಜಾತಿ ಪ್ರಮಾಣ ಪತ್ರ
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಆನ್ಲೈನಲ್ಲಿ ಅರ್ಜಿ (Online application) ಸಲ್ಲಿಸಬಹುದು, https://www.pmuy.gov.in/ ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ಉಜ್ವಲ ಯೋಜನಾ ವೆಬ್ಸೈಟ್ಗೆ (website) ಭೇಟಿ ನೀಡಿರಿ. ನಂತರ ಬೇಕಾಗುವಂತಹ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅಥವಾ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಹೋಗಿ ನಿಮ್ಮ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ