ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ.
ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು ಮುಂದೆ ಇದಕ್ಕೆಲ್ಲ ಬ್ರೇಕ್ ಬೀಳಲಿದೆ. ಪ್ರಯಾಣಿಕರ ಹಿತಾಸಕ್ತಿ ಹಾಗೂ ಪ್ರಯಾಣಿಕರು ಮತ್ತು ಕಂಡಕ್ಟರ್ ಗಳಿಗೆ ಅನುಕೂಲವಾಗುವಂತೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಗದು (ksrtc) ರಹಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಏನಿದು ನಗದುರಹಿತ ವ್ಯವಸ್ಥೆ? ಇನ್ನು ಮುಂದೆ ಟಿಕೆಟ್ ವಿತರಣೆ ಹೇಗಿರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಸ್ ಗಳಲ್ಲಿ ಇನ್ನು ಚಿಲ್ಲರೆ ಇಲ್ಲ ಎನ್ನುವ ಸಮಸ್ಯೆ ಇಲ್ಲ :
ಈ ನಗದು ರಹಿತ ವ್ಯವಸ್ಥೆಯನ್ನು ತರುವಂತೆ ಈ ಹಿಂದೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಇಂದು ಜಾಗತಿಕ ಮಟ್ಟದಲ್ಲಿ ಎಲ್ಲರೂ ಎಲ್ಲಾ ಕಡೆಯೂ ಡಿಜಿಟಲೀಕರಣದ (digitalisation) ವ್ಯವಸ್ಥೆಯನ್ನು ಹಾಗೂ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಬಳಕೆ ಹೆಚ್ಚಾಗಿರುವುದರಿಂದ ಎಲ್ಲರೂ ಎಲ್ಲಾ ಕೆಲಸಗಳಿಗೂ ಡಿಜಿಟಲೀಕರಣಕ್ಕೆ ಹೊಂದಿಕೊಂಡಿದ್ದಾರೆ. ಸಾರ್ವಜನಿಕರೇ ಹೇಳುವಂತೆ ಬಸ್ ಪ್ರಯಾಣದಲ್ಲಿಯೂ ಕೂಡ ಇದರ ಅಳವಡಿಕೆ ಬಂದರೆ ತುಂಬಾ ಅನುಕೂಲವಾಗುತ್ತದೆ ಹಾಗೂ ಹಣಕ್ಕಾಗಿ ಅಥವಾ ಚಿಲ್ಲರೆಗಾಗಿ ಪರದಾಡುವ ಪರಿಸ್ಥಿತಿ ಬರುವುದಿಲ್ಲ.ಆದ್ದರಿಂದ ಸಾರ್ವಜನಿಕರಿಗೂ ಅನುಕೂಲವಾಗುವಂತೆ ನಗದು ರಹಿತ ವಹಿವಾಟನ್ನು (cashless transaction) ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತೀರ್ಮಾನಿಸಿದೆ.
ಕಂಡಕ್ಟರ್ ಗಳಿಗೆ ಎಲೆಕ್ಟ್ರಾನಿಕ್ ಟಿಕೇಟಿಂಗ್ ಯಂತ್ರಗಳನ್ನು ಬಳಸುವ ಬಗ್ಗೆ ಸಜ್ಜುಗೊಳಿಸಲಾಗುತ್ತಿದೆ. ಈ ಎಲೆಕ್ಟ್ರಾನಿಕ್ ಟೀಕೆಟಿಂಗ್ ಯಂತ್ರಗಳು (ಇಟಿಎಂಗಳು) ಏಕೀಕೃತ ಪಾವತಿಗಳ ಇಂಟರ್ಫೇಸ್ (interface) (ಯುಪಿಐ) ಮತ್ತು ಇತರ ನಗದು ರಹಿತ ವಹಿವಾಟು ವಿಧಾನಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (intelligence transport management system) (ಐಟಿಎಂಎಸ್) ನಿಯೋಜಿಸಲು ಎಬಿಕ್ಸ್ ಕ್ಯಾಶ್ ಲಿಮಿಟೆಡ್ ಕಂಪನಿ (Ebics cash limited company) ದೀರ್ಘಾವಧಿಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಇನ್ನು ಈ ಒಪ್ಪಂದದ ಆರಂಭಿಕ ಹಂತವು ಐದು ವರ್ಷಗಳವರೆಗೆ ಇರಲಿದೆ ಎಂದು ಕೆ ಎಸ್ ಆರ್ ಟಿ ಸಿ ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಬಾಡಿಗೆ ಆಧಾರದ ಮೇಲೆ ಇ ಟಿ ಎಂ ಗಳ (ETM) ಪೂರೈಕೆ, ಕಾರ್ಯಾಆರಂಭ ಮತ್ತು ನಿರ್ವಹಣೆಗಾಗಿ ತಂತ್ರಜ್ಞಾನ ಪೂರೈಕೆದಾರರ ಆಯ್ಕೆಗಾಗಿ ಕೆಎಸ್ ಆರ್ ಟಿಸಿ (KSRTC) ಜನವರಿಯಲ್ಲಿ ಟೆಂಡರ್ ಕರೆದಿತ್ತು. ಆರಂಭದ ದಿನಗಳಲ್ಲಿ ಒಟ್ಟು 8000 ಬಸ್ ಗಳಿಗೆ 10,245 ಎಲೆಕ್ಟ್ರಾನಿಕ್ ಟೀಕೆಟಿಂಗ್ ಯಂತ್ರಗಳ ಅವಶ್ಯಕತೆ ಇದೆ. ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿ 15 ಸಾವಿರ ಹೊಸ ಯಂತ್ರಗಳನ್ನು ಖರೀದಿ ಮಾಡಲು ಯೋಜಿಸಲಾಗಿದೆ.
ಕೆಎಸ್‌ಆರ್‌ಟಿಸಿ ಮಾಡಿರುವ ಅಂದಾಜಿನಲ್ಲಿ ಬೆಂಗಳೂರು ಸೆಂಟ್ರಲ್‌ಗೆ 825, ರಾಮನಗರಕ್ಕೆ 595, ಮಂಡ್ಯಕ್ಕೆ 600, ಮೈಸೂರಿಗೆ 1,435, ಚಾಮರಾಜನಗರಕ್ಕೆ 645, ಕೋಲಾರಕ್ಕೆ 730, ಚಿಕ್ಕಬಳ್ಳಾಪುರಕ್ಕೆ 700, ಚಿಕ್ಕಬಳ್ಳಾಪುರಕ್ಕೆ 700 ಇಟಿಎಂಗಳನ್ನು ವಿತರಿಸಲಾಗುವುದು ಎಂದು ಹೇಳಿದೆ. ತುಮಕೂರಿಗೆ, ಹಾಸನಕ್ಕೆ 740, ಚಿಕ್ಕಮಗಳೂರಿಗೆ 685, ಮಂಗಳೂರಿಗೆ 600, ಪುತ್ತೂರಿಗೆ 570, ದಾವಣಗೆರೆಗೆ 490, ಶಿವಮೊಗ್ಗಕ್ಕೆ 450, ಚಿತ್ರದುರ್ಗಕ್ಕೆ 370, ಕೆಂಪೇಗೌಡ ಬಸ್ ನಿಲ್ದಾಣಕ್ಕೆ 10.
ಆದಷ್ಟು ಬೇಗ ಬಸ್ ಪ್ರಯಾಣದಲ್ಲಿಯೂ ನಗದುರಹಿತ ವಹಿವಾಟು (cashless transaction) ಪರಿಚಯವಾಗುತ್ತದೆ. ಇದರಿಂದ ಸಾರ್ವಜನಿಕರಿಗೂ ಹೆಚ್ಚು ಉಪಯುಕ್ತವಾಗುತ್ತದೆ. ಅನೇಕ ಜನರು ಯುಪಿಐ (UPI) ಬಳಸುತ್ತಿರುವುದರಿಂದ ನಗದುರಹಿತ ಟಿಕೆಟ್ ಪಡೆಯಲು ಹೆಚ್ಚು ಸಮಸ್ಯೆಯಾಗುವುದಿಲ್ಲ. ಹಾಗೂ ಕಂಡಕ್ಟರ್ ಗಳಿಗೂ (conducter) ಚಿಲ್ಲರೆ ಸಮಸ್ಯೆಗಳು ಎದುರಾಗುವುದಿಲ್ಲ. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಕೆ ಎಸ್ ಆರ್ ಟಿ ಸಿ ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಈ ಮಾಹಿತಿಗಳನ್ನು ಓದಿ