ಮಾರುಕಟ್ಟೆಗೆ ಲಗ್ಗೆ ಇಟ್ಟ ಅತೀ ಕಡಿಮೆ ಬೆಲೆಯ ಹೀರೊ ಕಂಪೆನಿಯ (Hero company) ನಾಲ್ಕು ವಿವಿಧ ಸ್ಕೂಟರ್ ಗಳು : ಹೀರೊ ಜೂಮ್, ಡೆಸ್ಟಿನಿ ಪ್ರೈಮ್, ಡೆಸ್ಟಿನಿ 125 ಹಾಗೂ ಪ್ಲೆಷರ್ ಪ್ಲಸ್.
ಇಂದು ಜಗತ್ತು ಬಹಳ ಮುಂದೆ ಸಾಗುತ್ತಿದೆ. ಅದರಲ್ಲೂ ತಂತ್ರಜ್ಞಾನ (technology) ಮತ್ತು ಡಿಜಿಟಲೀಕರಣ (digitalisation) ಹೊಸ ಹೊಸ ಅನ್ವೇಷಣೆಗೆ ಸಹಾಯ ಮಾಡುತ್ತಿದೆ. ವಿಜ್ಞಾನದಿಂದ (science) ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಉದಾಹರಣೆಗೆ ವಾಹನಗಳ ವಿಚಾರಕ್ಕೆ ಬಂದರೆ ನಮಗೆ ಹಳೇ ಕಾಲದ ಯಾವುದೇ ವಾಹನಗಳು ನೋಡಲು ಸಿಗುವುದಿಲ್ಲ, ಅದರ ಬದಲಾಗಿ ತಂತ್ರಜ್ಞಾನ ಅಳವಡಿಕೆಗೊಂಡ ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದರಲ್ಲೂ ಇದೀಗ ಎಲೆಕ್ಟ್ರಿಕ್ ವಾಹನಗಳು (electric vehicles) ಉಳಿದ ಇಂಧನ ಚಾಲಿತ ವಾಹನಗಳಿಗೆ ಪೈಪೋಟಿ ಕೊಡುತ್ತಿವೆ. ಆದರೂ ಇಂಧನ ಚಾಲಿತ ವಾಹನಗಳ ಕಂಪನಿಗಳು ಹೊಸ ತಂತ್ರಜ್ಞಾನ ಮತ್ತು ವಿಶೇಷ ಲಕ್ಷಣಗಳ ವಾನಗಳನ್ನು ಮಾರುಕಟ್ಟೆಗೆ ಪರಿಯಿಚಯಿಸುತ್ತಿದ್ದಾರೆ. ಇದು ಗ್ರಾಹಕರಿಗೆ ಖುಷಿಯ ವಿಷಯ ಎನ್ನಬಹುದು.
ಹೌದು, ಜನರು ಹೆಚ್ಚು ಬೈಕ್ (bike) ಮತ್ತು ಸ್ಕೂಟರ್ (scooter) ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಅತೀ ಹೆಚ್ಚು ಜನರು ಸ್ಕೂಟರ್ ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಯಾಕೆಂದರೆ, ಸ್ಕೂಟರ್ ನಿಂದ ಹಲವಾರು ಪ್ರಯೋಜನಗಳು ಇವೆ. ಜನರು ಎರಡು ಮೂರು ಕೆಲಸಗಳನ್ನು ಒಂದೇ ಸಲ ಮಾಡಿ ಮುಗಿಸಲು ಇಚ್ವಿಸುತ್ತಾರೆ. ಇದಕ್ಕೆ ಈ ಸ್ಕೂಟರ್ ಗಳು ಬಹಳ ಸಹಾಯಕವಾಗಿವೆ. ಹಾಗೆಯೇ ಇಂದು ಮಾರುಕಟ್ಟೆಯಲ್ಲಿ ಸ್ಕೂಟರ್ ಗಳ ಸ್ಪರ್ಧೆ ಹೆಚ್ಚುತ್ತಿದ್ದೆ. ಒಂದಾದ ನಂತರ ಒಂದು ಹೊಚ್ಚ ಹೊಸ ಅಪ್ಡೆಟೆಡ್ ಸ್ಕೂಟರ್ ಗಳು (updated scooter’s) ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಹೀರೋ ಕಂಪನಿಯ ಜೂಮ್, ಡೆಸ್ಟಿನಿ ಪ್ರೈಮ್, ಡೆಸ್ಟಿನಿ 125 ಹಾಗೂ ಪ್ಲೆಷರ್ ಪ್ಲಸ್ ಸ್ಕೂಟರ್‌ಗಳು ಬಿಡುಗಡೆ ಯಾಗಿವೆ. ಬನ್ನಿ ಈ ಸ್ಕೂಟರ್ ಗಳ ವಿಶೇಷತೆ ಮತ್ತು ಅವುಗಳ ಬೆಲೆ ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೀರೋ ಜೂಮ್ (Hero Xoom 110)
ಹೀರೊ ಕಂಪೆನಿಯು ಬಿಡುಗಡೆ ಮಾಡಿದ ಸ್ಕೂಟರ್ ಗಳಲ್ಲಿ ಹೀರೋ ಜೂಮ್ (Hero Xoom 110) ಸ್ಕೂಟರ್ ಕೂಡ ಒಂದು. ಇದರಲ್ಲಿ ಹಲವು ಫೀಚರ್ಸ್ ಗಳನ್ನು ಕಾಣಬಹುದು. ಇನ್ನು ಈ ಸ್ಕೂಟರ್ ನ ಇಂಜಿನ್ ಬಗ್ಗೆ ಹೇಳುವುದಾದರೆ, 110.9 ಸಿಸಿ ಏರ್ ಕೂಲ್ಡ್, ಪ್ಯೂಯೆಲ್ ಇಂಜೆಕ್ಷನ್ ಎಂಜಿನ್ ಪಡೆದಿದ್ದು, 8.15 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 8.70 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೂ ಈ ಹೀರೋ ಜೂಮ್ 45 ಕೆಎಂಪಿಎಲ್ ಮೈಲೇಜ್ ನೀಡಲಿದೆ.
ಈ ಸ್ಕೊಟರ್ ನ ವೈಶಿಷ್ಟಗಳು (features) :
ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ರೂಪಾಂತರ (ವೇರಿಯೆಂಟ್)ಗಳಿಗೆ ಅನುಗುಣವಾಗಿ ಡಿಸ್ಕ್ ಅಥವಾ ಡ್ರಮ್ ಬ್ರೇಕ್ ನ ಆಯ್ಕೆ ಕೂಡ ಈ ಒಂದು ಸ್ಕೂಟರ್ ನಲ್ಲಿ ಇದೆ.
ಹೀರೋ ಜೂಮ್ (Hero xoom) ಭಾರತೀಯ ಮಾರುಕಟ್ಟೆಯಲ್ಲಿ ಮೂರು ರೂಪಾಂತರಗಳಲ್ಲಿ ಲಭ್ಯವಿದೆ, ಅವುಗಳೆಂದರೆ : ಶೀಟ್ ಡ್ರಮ್, ಕ್ಯಾಸ್ಟ್ ಡ್ರಮ್ ಮತ್ತು ಕ್ಯಾಸ್ಟ್ ಡಿಸ್ಕ್. ಕಂಪನಿಯು ಹೀರೋ ಜೂಮ್ ಸ್ಕೂಟರ್ ಅನ್ನು ನಾಲ್ಕು ಬಣ್ಣಗಳಲ್ಲಿ ಪರಿಚಯಿಸಿದೆ ಪೋಲೆಸ್ಟಾರ್ ಬ್ಲೂ, ಬ್ಲ್ಯಾಕ್, ಸ್ಪೋರ್ಟ್ಸ್ ರೆಡ್ ಮತ್ತು ಮ್ಯಾಟ್ ಅಬ್ರಾಕ್ಸ್ ಆರೆಂಜ್.
ಹಾಗೆಯೇ ಈ ಸ್ಕೂಟರ್ ನ ಬೆಲೆ ನೋಡುವುದಾದರೆ, ಇದು ರೂ.75,761 ದಿಂದ ರೂ.84,400 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಹೀರೋ ಪ್ಲೆಷರ್ ಪ್ಲಸ್ (Hero Pleasure Plus) :
ಹೀರೊ ಕಂಪೆನಿಯ ಮತ್ತೊಂದು ಸ್ಕೂಟರ್ ಹೀರೋ ಪ್ಲೆಷರ್ ಪ್ಲಸ್ (Hero Pleasure Plus). ಈ ಸ್ಕೂಟರ್ ಕೂಡ ತನ್ನ ವಿಶೇಷ ಲಕ್ಷಣಗಳು ಮತ್ತು ಅತೀ ಕಡಿಮೆ ಬೆಲೆಗೆ ದೊರೆಯುವ ಒಂದು ಉತ್ತಮ ಸ್ಕೂಟರ್ ಎನ್ನಬಹುದು. ಈ ಸ್ಕೂಟರ್ ನ ಇಂಜಿನ್ ಬಗ್ಗೆ ನೋಡುವುದಾದರೆ, ಇದು 110.9 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್, 8.1 ಪಿಎಸ್ ಪವರ್ ಮತ್ತು 8.7 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 50 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ.
ಈ ಸ್ಕೊಟರ್ ನ ವೈಶಿಷ್ಟಗಳು (features) :
ಎಲೆಕ್ಟ್ರಿಕ್ ಸ್ಟಾರ್ಟರ್, ಎಲ್‌ಸಿಡಿ ಸ್ಕ್ರೀನ್, ಬ್ಲೂಟೂಟ್ ಕನೆಕ್ಟಿವಿಟಿ, ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ ಅನ್ನು ಹೊಂದಿದೆ.
ಈ ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್ ಗ್ರಾಹಕರಿಗೆ ವಿವಧ ಬಣ್ಣಗಳಲ್ಲಿ ಲಭ್ಯವಿದೆ. ಅವುಗಲೆಂದರೆ, ಪರ್ಲ್ ಸಿಲ್ವರ್ ವೈಟ್, ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ ರೆಡ್ ಮತ್ತು ಮ್ಯಾಟ್ ಮೆಡ್ ರೆಡ್.
ಇನ್ನು ಈ ಸ್ಕೂಟರ್ ನ ಬೆಲೆಯ ಬಗ್ಗೆ ಹೇಳುವುದಾದರೆ, ರೂ.71,788 – ರೂ.83,918 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಹೀರೋ ಡೆಸ್ಟಿನಿ ಪ್ರೈಮ್ (Hero Destini Prime) :
ಹೀರೋ ಡೆಸ್ಟಿನಿ ಪ್ರೈಮ್ (Hero Destini Prime) ಸ್ಕೂಟರ್ ಕೂಡ ಹೀರೊ ಕಂಪೆನಿಯ ಮತ್ತೊಂದು ಸ್ಕೂಟರ್ ಆಗಿದೆ. ಇದು ಕೂಡ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ದೊರೆಯುವ ಒಂದು ಒಂದು ಉತ್ತಮ ಸ್ಕೂಟರ್ ಆಗಿದೆ. ಈ ಸ್ಕೂಟರ್ ನ ಇಂಜಿನ್ 125 ಸಿಸಿ ಸಿಂಗಲ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 9.09 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 10.36 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಬರೋಬ್ಬರಿ 56 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ.
ಈ ಸ್ಕೊಟರ್ ನ ವೈಶಿಷ್ಟಗಳು (features) :
ಹೀರೋ ಡೆಸ್ಟಿನಿ ಪ್ರೈಮ್ ಎಲ್‌ಇಡಿ ಡಿಆರ್‌ಎಲ್, ಹ್ಯಾಲೊಜೆನ್ ಹೆಡ್ ಲ್ಯಾಂಪ್ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬೂಟ್ ಲೈಟ್, ಮೊಬೈಲ್ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದ್ದು, ಡ್ರಮ್ ಬ್ರೇಕ್ ಆಯ್ಕೆಯನ್ನು ಈ ಸ್ಕೂಟರ್ ನಲ್ಲಿದೆ. 115 ಕೆಜಿ ತೂಕವಿರುವ ಈ ಸ್ಕೂಟರ್, 5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಹೊಂದಿದೆ.
ಹೀರೋ ಡೆಸ್ಟಿನಿ ಪ್ರೈಮ್ ಲಭ್ಯವಿದೆ 3 ಬಣ್ಣಗಳಲ್ಲಿ ಲಭ್ಯವಿದೆ. ಪರ್ಲ್ ಸಿಲ್ವರ್ ವೈಟ್, ನೋಬೆಲ್ ರೆಡ್, ಮೆಟಾಲಿಕ್ ನೆಕ್ಸಸ್ ಬ್ಲೂ.
ಇನ್ನು ಈ ಸ್ಕೂಟರ್ ಬೆಲೆ ಬಗ್ಗೆ ನೋಡುವುದಾದರೆ, ರೂ.76,518 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ.
ಹೀರೋ ಡೆಸ್ಟಿನಿ 125 (Hero Destini 125) :
ಹೀರೊ ಕಂಪೆನಿಯ ಮತ್ತೊಂದು ಸ್ಕೂಟರ್ ಎಂದರೆ, ಅದು ಹೀರೋ ಡೆಸ್ಟಿನಿ 125 (Hero Destini 125). ಈ ಸ್ಕೂಟರ್ ಕೂಡ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ಇಂಜಿನ್ ಬಗ್ಗೆ ಹೇಳುವುದಾದರೆ, 124.6 ಸಿಸಿ ಎಂಜಿನ್ ಹೊಂದಿದ್ದು, 9.10 ಪಿಎಸ್ ಪವರ್ ಮತ್ತು 10.4 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕೆಎಂಪಿಎಲ್ ಮೈಲೇಜ್ ಕೊಡಲಿದ್ದು, ಸುರಕ್ಷತೆಗಾಗಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಈ ಸ್ಕೊಟರ್ ನ ವೈಶಿಷ್ಟಗಳು (features) :
ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಓಡೋಮೀಟರ್ ರೀಡಿಂಗ್‌ಗಳು, ಸರ್ವಿಸ್ ರಿಮೈಂಡರ್ ಮತ್ತು ಕಡಿಮೆ ಇಂಧನ ಸೂಚಕದಂತಹ ಮಾಹಿತಿಯನ್ನು ಪ್ರದರ್ಶಿಸುವ ಅರೆ-ಡಿಜಿಟಲ್ ಉಪಕರಣ ಕನ್ಸೋಲ್ ಅನ್ನು ಹೀರೋ ಡೆಸ್ಟಿನಿ 125 ಪ್ಯಾಕ್ ಮಾಡುತ್ತದೆ. ಹೆಚ್ಚುವರಿ ಅನುಕೂಲಕ್ಕಾಗಿ ಇದು USB ಚಾರ್ಜಿಂಗ್ ಪೋರ್ಟ್, ಬೂಟ್ ಲ್ಯಾಂಪ್ ಮತ್ತು ಬಾಹ್ಯ ಇಂಧನ ತುಂಬುವಿಕೆಯನ್ನು ಸಹ ಹೊಂದಿದೆ.
ಉನ್ನತ-ಮಟ್ಟದ Xtec ಮಾದರಿಯು LED ಹೆಡ್‌ಲ್ಯಾಂಪ್, ಮೆತ್ತನೆಯ ಪಿಲಿಯನ್ ಬ್ಯಾಕ್‌ರೆಸ್ಟ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಮತ್ತು ಅಪ್‌ಗ್ರೇಡ್ ಮಾಡಿದ ಉಪಕರಣ ಫಲಕದಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಅದು ಸೈಡ್ ಸ್ಟ್ಯಾಂಡ್ ಅಲರ್ಟ್ ಮತ್ತು ಕರೆ ಮತ್ತು SMS ಅಧಿಸೂಚನೆಗಳಿಗಾಗಿ ಬ್ಲೂಟೂತ್ ಸಂಪರ್ಕವನ್ನು ಕೂಡ ಹೊಂದಿದೆ.
ಹೀರೋ ಡೆಸ್ಟಿನಿ 125 ಮೂರು ರೂಪಾಂತರಗಳಲ್ಲಿ ಲಭ್ಯವಿದೆ: Prime, LX ಮತ್ತು Xtec.
ಡೆಸ್ಟಿನಿ 125 ಪ್ರೈಮ್ ಬೆಲೆ ರೂ 71,499 ಮತ್ತು ಮೂರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಪಿಯರ್ ಸಿಲ್ವರ್ ವೈಟ್, ನೋಬಲ್ ರೆಡ್ ಮತ್ತು ನೆಕ್ಸಸ್ ಬ್ಲೂ.
LX ರೂಪಾಂತರದ ಬೆಲೆ 80,048 ರೂ ಮತ್ತು ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ: ನೋಬಲ್ ರೆಡ್, ಪ್ಯಾಂಥರ್ ಬ್ಲಾಕ್, ಚೆಸ್ಟ್ನಟ್ ಬ್ರೋಂಜ್ ಮತ್ತು ಪರ್ಲ್ ಸಿಲ್ವರ್ ವೈಟ್.
ಶ್ರೇಣಿಯ ಅಗ್ರಸ್ಥಾನದಲ್ಲಿರುವ Xtec ರೂಪಾಂತರವು ಪರ್ಲ್ ಸಿಲ್ವರ್ ವೈಟ್, ಮ್ಯಾಟ್ ರೇ ಸಿಲ್ವರ್, ನೋಬಲ್ ರೆಡ್, ಚೆಸ್ಟ್‌ನಟ್ ಕಂಚಿನ ಮತ್ತು ಮ್ಯಾಟ್ ಬ್ಲ್ಯಾಕ್‌ನಲ್ಲಿ ಲಭ್ಯವಿದೆ ಮತ್ತು ಇದರ ಬೆಲೆ ರೂ 86,538 ಆಗಿದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ
ಈ ಮಾಹಿತಿಗಳನ್ನು ಓದಿ