ರಾಜ್ಯದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಬೆಂಗಳೂರು – ಹುಬ್ಬಳ್ಳಿ ಹಾಗೂ ಬೆಂಗಳೂರು – ವಿಜಯಪುರ ನಡುವೆ ವಿಶೇಷ 2 ರೈಲುಗಳ ಸಂಚಾರವನ್ನು ನಡೆಸಲಿದೆ. ಈ ರೈಲುಗಳು 6 ಮತ್ತು 7ನೇ ತಾರೀಕಿನಂದು ಸಂಚಾರ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಸಾಕಷ್ಟು ಜನ ಉತ್ತರ ಕರ್ನಾಟಕದ ಜನರು ಕೆಲಸಕ್ಕಾಗಿ ವಲಸೆ ಬಂದಿದ್ದು, ಮತದಾನ ಮಾಡುವುದಕ್ಕಾಗಿ ಸಾಕಷ್ಟು ಜನ ತಮ್ಮ ಊರಿಗೆ ತೆರಳುವ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆ ಈ ಕ್ರಮಗಳನ್ನು ಕೈಗೊಂಡಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಪ್ರಯಾಣಿಸಲು ಬಸ್ ಮತ್ತು ರೈಲುಗಳಿಗೆ ಭಾರಿ ಬೇಡಿಕೆ ಬಂದಿದ್ದು. ಹೆಚ್ಚಿನ ಹಣ ಕೊಟ್ಟು ಪ್ರಾಣಿಸುವ ಪರಿಸ್ಥಿತಿಯನ್ನು ತಪ್ಪಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿರುವುದು ಸಾರ್ವಜನಿಕರಿಗೆ ಬಾರಿ ಅನುಕೂಲವಾಗಿದೆ.
ಬೆಂಗಳೂರು ಹುಬ್ಬಳ್ಳಿ ರೈಲು
ರೈಲು ಸಂಖ್ಯೆ 07391 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ಏಕಮುಖ ವಿಶೇಷ ರೈಲು ಇದಾಗಿದೆ. ಮೇ 6 (ಸೋಮವಾರ) ರಾತ್ರಿ 11 ಗಂಟೆಗೆ ಕೆಎಸ್ಆರ್ ಬೆಂಗಳೂರು (ಎಸ್ಬಿಸಿ) ನಿಲ್ದಾಣದಿಂದ ಹೊರಡಲಿದೆ. ಮರು ದಿನ ಬೆಳಿಗ್ಗೆ 7.55 ಕ್ಕೆ ಹುಬ್ಬಳ್ಳಿ ತಲುಪಲಿದೆ.
ಮಾರ್ಗ
ಈ ರೈಲು ಬೆಂಗಳೂರು ದಂಡು (ಕಂಟೋನ್ಮೆಂಟ್), ತುಮಕೂರು, ದಾವಣಗೆರೆ, ಹರಿಹರ, ಹಾವೇರಿ ಮಾರ್ಗದ ಮೂಲಕ ಸಂಚಾರ ನಡೆಸಲಿದೆ. ಯಶವಂತಪುರ ಜಂಕ್ಷನ್ಗೆ ಈ ರೈಲು ಆಗಮಿಸುವುದಿಲ್ಲ.
ಬೆಂಗಳೂರು ಹುಬ್ಬಳ್ಳಿ ಮಾರ್ಗದಲ್ಲಿ ರಾತ್ರಿ ಸಂಚರಿಸುವ ರೈಲುಗಳು
- ಬೆಂಗಳೂರು ಬೆಳಗಾವಿ ಸೂಪರ್ಫಾಸ್ಟ್ – ರಾತ್ರಿ 9ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಡಲಿದೆ. ಬೆಳಿಗ್ಗೆ 4.30 ಹುಬ್ಬಳ್ಳಿ ತಲುಪಲಿದೆ.
- ರಾಣಿಚೆನ್ನಮ್ಮ ಎಕ್ಸ್ಪ್ರೆಸ್ – ರಾತ್ರಿ 11 ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಡಲಿದೆ. ಬೆಳಿಗ್ಗೆ 6.30 ಕ್ಕೆ ಹುಬ್ಬಳ್ಳಿ ತಲುಪಲಿದೆ. ನಂತರ ಬೆಳಗಾವಿ ಮಾರ್ಗವಾಗಿ ಮೀರಜ್ ಸಾಂಗ್ಲಿಗೆ ಸಾಗಲಿದೆ.
- ಬೆಂಗಳೂರು ಹುಬ್ಬಳ್ಳಿ ಸೂಪರ್ ಪಾಸ್ಟ್ ರಾತ್ರಿ 11 .55 ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಡಲಿದೆ. ಬೆಳಿಗ್ಗೆ 7.30 ಕ್ಕೆ ಹುಬ್ಬಳ್ಳಿ ತಲುಪಲಿದೆ.
- ಬೆಂಗಳೂರು ಹುಬ್ಬಳ್ಳಿ ಎಕ್ಸ್ಪ್ರೆಸ್ ಮಧ್ಯರಾತ್ರಿ 12.15 ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಡಲಿದೆ. ಬೆಳಿಗ್ಗೆ 9 ಕ್ಕೆ ಹುಬ್ಬಳ್ಳಿ ತಲುಪಲಿದೆ.
ಎಸ್ಎಂವಿಟಿ ಬೆಂಗಳೂರು-ವಿಜಯಪುರ
ಎಸ್ಎಂವಿಟಿ ಬೆಂಗಳೂರು-ವಿಜಯಪುರ (06231/06232) ಮಧ್ಯೆ ಮೇ 6ರಂದು ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಮೇ 6ರಂದು ರಾತ್ರಿ 9ಕ್ಕೆ ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೈಯ್ಯಪ್ಪನಹಳ್ಳಿನಿಂದ ಹೊರಡುವ ರೈಲು ಬೆಳಿಗ್ಗೆ 9.30ಕ್ಕೆ ಇಬ್ರಾಹಿಂಪುರ ನಿಲ್ದಾಣ ತಲುಪಲಿದೆ. ಇದೇ ರೈಲು ಮೇ 7 ರಂದು ಸಂಜೆ 7ಕ್ಕೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 11.30ಕ್ಕೆ ಚಿಕ್ಕಬಾಣಾವರ ನಿಲ್ದಾಣ ತಲುಪಲಿದೆ. ಈ ರೈಲು ಚಿಕ್ಕಬಾಣಾವರ, ತುಮಕೂರ, ರಾಯದುರ್ಗ, ಹೊಸಪೇಟೆ, ಬಾಗಲಕೋಟ ಮಾರ್ಗವಾಗಿ ಸಂಚರಿಸಲಿದೆ.
ವಿಜಯಪುರಕ್ಕಿರುವ ಇತರೆ ರೈಲುಗಳು
- ಬೆಂಗಳೂರು ಯಶವಂತಪುರ ಜಂಕ್ಷನ್ನಿಂದ ನಿತ್ಯ ರಾತ್ರಿ 9.30 ಕ್ಕೆ ಯಶವಂತಪುರ- ವಿಜಯಪುರ ವಿಶೇಷ ರೈಲು ಸಂಚರಿಸುತ್ತದೆ. ಬೆಳಿಗ್ಗೆ 11 ಕ್ಕೆ ವಿಜಯಪುರ ತಲುಪಲಿದೆ. ದಾವಣಗೆರೆ, ಹೊಸಪೇಟೆ, ಗದಗ, ಬಾಗಲಕೋಟೆ ಮಾರ್ಗದಲ್ಲಿ ಸಂಚರಿಸಲಿದೆ.
- ಮೈಸೂರು ಬೆಂಗಳೂರು ಪಂಢರಾಪುರ ರೈಲು ಈ ರೈಲು ನಿತ್ಯ ಸಂಜೆ 6.20ಕ್ಕೆ ಕೆಎಸ್ಆರ್ ಬೆಂಗಳೂರಿಗೆ ಆಗಮಿಸಲಿದೆ. ಬೆಳಿಗ್ಗೆ 9ಕ್ಕೆ ವಿಜಯಪುರ ತಲುಪಲಿದೆ. ದಾವಣಗೆರೆ, ಹುಬ್ಬಳ್ಳಿ, ಗದಗ, ಬಾಗಲಕೋಟೆ ಮಾರ್ಗದಲ್ಲಿ ಸಂಚರಿಸಲಿದೆ.
ಈ ಮೇಲಿನ ಮಾರ್ಗಗಳಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ತಪ್ಪದೆ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರ ವಾಟ್ಸಾಪ್ ಗ್ರೂಪ್ಗಳಲ್ಲಿ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ತುಂಬಾ ಜನರಿಗೆ ಅನುಕೂಲವಾಗಲಿದೆ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್