ಮಳೆಗಾಗಿ ಕಾಯುತ್ತಿದ್ದೀರಾ? 2024ರಲ್ಲಿ ಈ ದಿನಾಂಕ ಗಳಲ್ಲಿ ಮಳೆಯಾಗುವ ಸಂಭವಗಳು ಹೆಚ್ಚು.
ವರ್ಷದಿಂದ ವರ್ಷಕ್ಕೆ ಸೂರ್ಯನ ತಾಪಮಾನ (temperature) ಹೆಚ್ಚಾಗುತ್ತಿದೆ. ಈ ಸುಡು ಬಿಸಿಲಿಗೆ ಜನರು ಮನೆಯಿಂದ ಹೊರಗೆ ಬರಲು ಬಹಳ ಕಷ್ಟ ಪಡುತ್ತಿದ್ದಾರೆ. ಅಂತಹ ಬೇಸಿಗೆಗಾಲ (summer season) ಸೃಷ್ಟಿಯಾಗಿದೆ. ಜನರು ಮಳೆಯ (rain) ಮೊರೆ ಹೋಗುತ್ತಿದ್ದಾರೆ ಸುಡು ಬಿಸಿಲಿನ ತಾಪಮಾನಕ್ಕೆ ಶಾಲಾ ಕಾಲೇಜುಗಳಿಗೆ (school and colleges) ರಜೆಗಳನ್ನು ಘೋಷಿಸಲಾಗಿದೆ. ಒಂದು ಕಡೆ ವಿಪರೀತ ಶೆಕೆ ಹಾಗೆಯೇ ಇನ್ನೊಂದು ಕಡೆ ಮಳೆಯ ನಿರೀಕ್ಷೆಯಿಲ್ಲ. ಭೂಮಿ ಬರಡಾಗಿದೆ ಇನ್ನು ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬೆಳೆ ಬೆಳೆಯಲು ಕುಡಿಯಲು ನೀರಿಲ್ಲದೆ ಸಂಕಷ್ಟದ ವಾತಾವರಣ ಸೃಷ್ಟಿಯಾಗಿದೆ. ಮಳೆ ಯಾವ ಮುನ್ಸೂಚನೆಯು ಕೂಡ ಇಲ್ಲ. 2024ರಲ್ಲಿ ಯಾವಾಗ ಮಳೆ ಆಗುತ್ತದೆ ಎಂಬುದರ ಬಗ್ಗೆ ಪಂಚಾಂಗದ ಮೂಲಕ ಮಳೆಯ ನಕ್ಷತ್ರಗಳ (rain stars) ಬಗ್ಗೆ ತಿಳಿದುಕೊಳ್ಳಬಹುದು. ಈ ಮಳೆಯ ನಕ್ಷತ್ರಗಳನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ ಮತ್ತು ಎಷ್ಟು ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಬಾರಿ ಯಾವ ಯಾವ ಮಳೆ ಬರಲಿದೆ?:
ಪಂಚಾಂಗದಲ್ಲಿನ ಮಳೆ ನಕ್ಷತ್ರಗಳ ಪ್ರಕಾರ 2024ರಲ್ಲಿ ಮಳೆ ಯಾವಾಗ ಆಗುತ್ತದೆ, ದಿನಾಂಕ ಮತ್ತು ವಾರದ ಮಾಹಿತಿ ನೀಡಿರುತ್ತಾರೆ. ಅಶ್ವಿನಿ ಇಂದ ಹಿಡಿದು ವಿಶಾಖ ತನಕ ಮಳೆ ನಕ್ಷತ್ರಗಳಿವೆ. ಇವುಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳ ಮಳೆ ನಕ್ಷತ್ರಗಳು ರಾಜ್ಯದಲ್ಲಿ ಮಳೆ ಸುರಿಸುವುದಿಲ್ಲ. ಮೇ, ಜೂನ್, ಜುಲೈ ಮತ್ತು ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ನಕ್ಷತ್ರಗಳ ಅನ್ವಯ ಮಳೆಯನ್ನು ಲೆಕ್ಕ ಹಾಕಲಾಗುತ್ತದೆ. ಈ ಮಳೆ ನಕ್ಷತ್ರಗಳ ಆಧಾರದ ಮೇಲೆಯೇ ಹಲವಾರು ಗಾದೆ ಮಾತುಗಳು ಸಹ ಹುಟ್ಟಿಕೊಂಡಿವೆ. ಮತ್ತು ಈ ಮಳೆ ನಕ್ಷತ್ರಗಳು ಹಲವು ಪ್ರಾಣಿಯ ವಾಹನಗಳಾಗಿ ಬರಲಿವೆ ಎಂಬ ಮಾತು ಕೂಡ ಇದೆ. ಬನ್ನಿ 2024ರ ಆ ಮಳೆ ನಕ್ಷತ್ರಗಳ ಬಗ್ಗೆ ತಿಳಿದು ಕೊಳ್ಳೋಣ.
ಅಶ್ವಿನಿ (Ashwini)
ದಿನಾಂಕ-13-4-2024 , ಶನಿವಾರ
ಅಶ್ವಿನಿ ನಕ್ಷತ್ರ ಮಳೆಯು ಆನೆಯನ್ನು ವಾಹನವಾಗಿ ಮಾಡಿಕೊಂಡು ಬರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ಪಂಚಾಂಗ ಹೇಳುತ್ತದೆ. ಆದರೆ ಈ ನಡೆಯು ಕೆಲವು ಕಡೆ ಈಗಾಗಲೇ ಬಂದಿದೆ.
ಭರಣಿ (bharani)
ದಿನಾಂಕ-27-4-2024, ಶನಿವಾರ
ಭರಣಿ ನಕ್ಷತ್ರ ಮಳೆಯು ಕತ್ತೆ ವಾಹನವಾಗಿದ್ದು, ಇದು ಸಾಧಾರಣ ಮಳೆಯಾಗುವ ನಿರೀಕ್ಷೆ ಇತ್ತು, ಅದರಂತೆಯೇ ಬೆಂಗಳೂರು ಮೈಸೂರು ಹಾಗೂ ಹಲವೆಡೆ ಈ ಮಳೆಯು ಬಂದು ಹೋಗಿದೆ.
ಕೃತಿಕಾ (kruthika)
ದಿನಾಂಕ -11-5-2024, ಶುಕ್ರವಾರ
ಕೃತಿಕ ನಕ್ಷತ್ರ ಕಪ್ಪೆಯನ್ನು ವಾಹನ ಮಾಡಿಕೊಂಡು ಬರಲಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ರೋಹಿಣಿ (rohini)
ದಿನಾಂಕ-24-5-2024, ಶುಕ್ರವಾರ
ರೋಹಿಣಿ ಮಳೆ ನವಿಲು ವಾಹನವಾಗಿ ಬರಲಿದ್ದು, ಸಾಮಾನ್ಯ ಮಳೆಯಾಗುವ ಸಾಧ್ಯತೆ ಹೆಚ್ಚಿದೆ
ಮೃಗಶಿರ (mrugashira)
ದಿನಾಂಕ 07-06-2024, ಶುಕ್ರವಾರ
ಮೃಗಶಿರ ಮಳೆ ಕುದುರೆ ಮೇಲೆ ಬರಲಿದ್ದು, ಸಾಧಾರಣ ಮಳೆಯಾಗಲಿದೆ ಎಂದು ತಿಳಿದು ಬಂದಿದೆ.
ಆರಿದ್ರಾ (Aridra)
ದಿನಾಂಕ 21-06-2024, ಶುಕ್ರವಾರ
ಆರಿದ್ರ ಮಳೆ ಟಗರು ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ಇದೆ.
ಪುನರ್ವಸು (punarvasu)
ದಿನಾಂಕ 05-7-2024, ಶುಕ್ರವಾರ
ಪುನರ್ವಸು ಮಳೆಯು ಆನೆ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ.
ಪುಷ್ಯ (pushya)
ದಿನಾಂಕ-19-7-2024, ಶುಕ್ರವಾರ
ಪುಷ್ಯ ಮಳೆ ಕಪ್ಪೆ ವಾಹನವಾಗಿ ಬರಲಿದ್ದು, ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದೆ.
ಆಶ್ಲೇಷ (Ashlesha)
ದಿನಾಂಕ-02-08-2024 ಶುಕ್ರವಾರ
ಆಶ್ಲೇಷ ಮಳೆಯು ಟಗರು ವಾಹನವಾಗಿದೆ. ಸಾಧಾರಣ ಮಳೆ ನಿರೀಕ್ಷೆ ಇದೆ.
ಮಘ (magha)
ದಿನಾಂಕ 16-08-2024, ಶುಕ್ರವಾರ
ಮಘ ಮಳೆ ಕುದುರೆ ವಾಹನವಾಗಿ ಬರಲಿದ್ದು, ಉತ್ತಮ ಮಳೆಯಾಗಲಿದೆ ಎಂದು ಪಂಚಾಂಗ ಅಂದಾಜಿಸಿದೆ.
ಹುಬ್ಬ (hubba)
ದಿನಾಂಕ-30-8-2024 ಶುಕ್ರವಾರ
ಹುಬ್ಬ ಮಳೆಯು ಇಲಿ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ.
ಉತ್ತರ (uttara)
ದಿನಾಂಕ-13-09-2024 ಶುಕ್ರವಾರ
ಉತ್ತರ ಮಳೆ ಆನೆ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ.
ಹಸ್ತ (hastha)
ದಿನಾಂಕ-26-09-2024 ಗುರುವಾರ
ಹಸ್ತ ಮಳೆಯು ಟಗರು ವಾಹನವಾಗಿ ಬರಲಿದ್ದು, ಉತ್ತಮ ಮಳೆಯ ನಿರೀಕ್ಷೆ ಇದೆ.
ಚಿತ್ತ (chitta)
ದಿನಾಂಕ-10-10-2024, ಗುರುವಾರ
ಚಿತ್ತ ಮಳೆಯು ಎಮ್ಮೆ ವಾಹನವಾಗಿ ಬರಲಿದ್ದು, ಉತ್ತಮ ಮಳೆಯಾಗಲಿದೆ.
ಸ್ವಾತಿ (swathi)
ದಿನಾಂಕ-23-10-2024, ಬುಧವಾರ
ಸ್ವಾತಿ ಮಳೆಯು ಟಗರು ವಾಹನವಾಗಿದೆ. ಉತ್ತಮ ಮಳೆಯ ನಿರೀಕ್ಷೆ ಇದೆ.
ವಿಶಾಖ (vishakha)
ದಿನಾಂಕ-6-11-2024, ಬುಧವಾರ
ವಿಶಾಖ ಟಗರು ವಾಹವಾಗಿದೆ ಸಾಧಾರಣ ಮಳೆ ನಿರೀಕ್ಷೆ ಮಾಡಲಾಗಿದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಈ ಮಾಹಿತಿಗಳನ್ನು ಓದಿ