ಕಳೆದ ಒಂದೂವರೆ ವರ್ಷಗಳ ಹಿಂದೆ ಅಂದರೆ 2023ರ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ (Vidhan sabha election) ನಡೆದಿತ್ತು. ಈ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳ ವಿತರಣೆ ಮತ್ತು ಹೊಸ ಅರ್ಜಿಗಳು ಹಾಗೂ ತಿದ್ದುಪಡಿ ಕೆಲಸಗಳನ್ನು ಸ್ಥಗಿತಗಿತಗೊಳಿಸಲಾಗಿತ್ತು. ಇನ್ನು ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ಕಾರಣ ಅಷ್ಟೇನೂ ಗಮನವನ್ನು ಕೊಡಲಿಲ್ಲ. ಆದರೆ ಜನಗಳ ಒತ್ತಾಸೆಯ ಮೇರೆಗೆ ಮತ್ತೆ ಅರ್ಜಿ ಆಹ್ವಾನಿಸಲು ಮುಂದಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಲೋಕಸಭೆ ಚುನಾವಣೆ ಮತ ಎಣಿಕೆ ಮುಗಿದ ಬಳಿಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮಾಹಿತಿ ನೀಡಿದೆ. ಇದೀಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಗ್ಯಾರಂಟಿ ಯೋಜನೆಗಳಿಗೂ ಈ ರೇಷನ್ ಕಾರ್ಡ್ ಬೇಕೆ ಬೇಕು. ಆದ್ದರಿಂದ ಇದರ ಅಗತ್ಯ ಅನಿವಾರ್ಯ ಆಗಿಬಿಟ್ಟಿದೆ.
ಆದರೆ ಈ ಕಾರ್ಡ್ ಇಲ್ಲದೆ ಅದೆಷ್ಟೋ ಮಂದಿ ಅರ್ಹರು ಈ ಸೌಲಭ್ಯಗಳಿಂದ ವಂಚಿತರಾಗಿದ್ದು, ಹೊಸ ಕಾರ್ಡ್ ಅರ್ಜಿ ಸಲ್ಲಿಕೆಗೆ ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಸರ್ಕಾರ ಜೂನ್ನಲ್ಲಿ ಹೊಸ ರೇಷ್ನ್ ಕಾರ್ಡ್ಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಹಾಗಾದರೆ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಯಾವೆಲ್ಲ ದಾಖಲೆಗಳು ಬೇಕು?
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜನ್ಮ ದಾಖಲೆಯ ಪ್ರಮಾಣ ಪತ್ರ (5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇದ್ದರೆ )
- ಮೊಬೈಲ್ ನಂಬರ್
ಇವರಿಗೆ ಮಾತ್ರ ಸಿಗಲಿದೆ ರೇಷನ್ ಕಾರ್ಡ್
- ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು,
- ಹೊಸದಾಗಿ ಮದುವೆಯಾದ ದಂಪತಿ ಹೊಸ ಪಡಿತರ (ration card) ಚೀಟಿಗೆ ಅರ್ಜಿ ಸಲ್ಲಿಸಬಹುದು,
- ರಾಜ್ಯದಲ್ಲಿ ಈಗಾಗಲೇ ಪಡಿತರ ಚೀಟಿ ಹೊಂದಿರದ ಕುಟುಂಬಗಳು ಅರ್ಹರಾಗಿರುತ್ತಾರೆ,
- ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದಿದ್ದರೆ ಬಡತನ ರೇಖೆಗಿಂತ (below poverty line)ಕೆಳಗಿನವರು ಆಗಿರಬೇಕು,
- ನಿಮ್ಮ ಆದಾಯ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಬಿಪಿಎಲ್ ಹಾಗೂ ಅದಕ್ಕಿಂತ ಜಾಸ್ತಿ ಇದ್ದರೆ ಎಪಿಎಲ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ:
ಗ್ರಾಮ ಒನ್(Gram one), ಬೆಂಗಳೂರು ಒನ್(Bengaluru one) , ಮತ್ತು ಇತರ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ (Online) ಮೂಲಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಪೋರ್ಟಲ್ ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಸೇವಾ ಕೇಂದ್ರದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ.
ಸೂಚನೆ : ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬಯೋಮೆಟ್ರಿಕ್ ಡಿವೈಸ್ ಅವಶ್ಯಕತೆ ಇದ್ದು ಸ್ವತಃ ನೀವೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಹಾಗಾಗಿ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಗಮನಿಸಿ :
ರೇಷನ್ ಕಾರ್ಡ್ನ ಸ್ಥತಿ ತಿಳಿಯಲು ಈ ವೆಬ್ಸೈಟ್ಗೆ ಭೇಟಿ ನೀಡಿ https://ahara.kar.nic.in/WebForms/Show_RationCard.aspx
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಬಂಧಿಸಿದ ಮಾಹಿತಿಗಳಿಗೆ https://ahara.kar.nic.in/Home/EServices ಭೇಟಿ ನೀಡಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಈ ಮಾಹಿತಿಗಳನ್ನು ಓದಿ