ದು ಬೆಳಗ್ಗೆ 10:30 ಗಂಟೆ ನಂತರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಲಿದ್ದು. ಫಲಿತಾಂಶ ನೋಡುವ ಡೈರೆಕ್ಟ ಲಿಂಕ್ ಮತ್ತು ಫೇಲ್ ಆದರೆ ಮುಂದೆ ಏನು ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.
ಎಸ್ ಎಸ್ ಎಲ್ ಸಿ ಫಲಿತಾಂಶ ಅಧಿಕೃತವಾಗಿ ಈ ಕೆಳಗಿನ ವೆಬ್ಸೈಟ್ಗಳಲ್ಲಿ ಮಧ್ಯಾಹ್ನ 1:00 ಗಂಟೆ ನಂತರ ಲಭ್ಯವಾಗಲಿದೆ.
ಫಲಿತಾಂಶವನ್ನು ನೋಡಲು ಈ ಕೆಳಕಂಡ ವೆಬ್‌ಸೈಟ್ ಅನ್ನು ಭೇಟಿ ನೀಡಬಹುದಾಗಿದೆ
https://kseab.karnataka.gov.in
https://karresults.nic.in
https://sslc.karnataka.gov.in
Karnataka SSLC Result 2024
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಬೆಳಗ್ಗೆ 10.30 ರಿಂದ ಅಂತರ್ಜಾಲದಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಫಲಿತಾಂಶ ನೋಡುವುದು ಹೇಗೆ?
ಅಧಿಕೃತ ಸೂಚನೆಯಂತೆ, ಫಲಿತಾಂಶವನ್ನು ಮೇ 9 ರಂದು ಬೆಳಗ್ಗೆ 10:30 ಕ್ಕೆ ಪತ್ರಿಕಾಗೋಷ್ಠಿಯ ಮೂಲಕ ಪ್ರಕಟಿಸಲಾಗುವುದು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು KSEAB ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು 2024 ಅನ್ನು ಅಧಿಕೃತ ವೆಬ್‌ಸೈಟ್ https://karresults.nic.in/ ಮತ್ತು https://kseab.karnataka.gov.in/ ನಲ್ಲಿ ಪರಿಶೀಲಿಸಲು ಮತ್ತು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಕರ್ನಾಟಕ SSLC ಫಲಿತಾಂಶ 2024 ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಪರಿಶೀಲಿಸಿ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಈಗಲೇ ನೀಡ್ಸ್ ಆಫ್ ಪಬ್ಲಿಕ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
ಹಂತ 1: kseab.karnataka.gov.in ಮತ್ತು karresults.nic.in ಅಧಿಕೃತ ವೆಬ್‌ಸೈಟ್‌ಗಳಿಗೆ ಹೋಗಿ
ಹಂತ 2: ಹೋಂ ಪೇಜ್ ನಲ್ಲಿ ಕರ್ನಾಟಕ SSLC ಫಲಿತಾಂಶ 2024 ಅನ್ನು ಡೌನ್‌ಲೋಡ್ ಮಾಡಲು ಲಿಂಕ್ ಕ್ಲಿಕ್ ಮಾಡಿ.
ಹಂತ 3: ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಬಳಸಿಕೊಂಡು ಲಾಗ್ ಇನ್ ಮಾಡಿ.
ಹಂತ 4: “Submit” ಬಟನ್ ಕ್ಲಿಕ್ ಮಾಡಿ.
ಹಂತ 5: ಕರ್ನಾಟಕ SSLC ಫಲಿತಾಂಶ 2024 ಅನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ
ಹಂತ 6: ಹೆಚ್ಚಿನ ರೆಫೆರೆನ್ಸ್ ಗಾಗಿ ಫಲಿತಾಂಶ ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ
ಅನುತ್ತೀರ್ಣರಾದರೆ ಮುಂದೇನು?
ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ಈ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಓದುತ್ತಿರುವವರು ಹಾಗೂ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು 3 ಬಾರಿ ಬರೆಯಬಹುದು. ಈ ಹಿಂದೆ ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಬರೆಯಬೇಕಿತ್ತು. ಆದರೆ ಈ ಸಾಲಿನಿಂದ ಪಾಸಾಗಲಿ, ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯುವ ಅವಕಾಶ ಇದೆ. ಪಾಸಾದರು ಸಹ ಅಂಕ ಹೆಚ್ಚಿಸಿಕೊಳ್ಳಲು ಮತ್ತೆ ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು. 3 ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಪರೀಕ್ಷೆಯನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಆದ್ದರಿಂದ ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದರೆ / ಕಡಿಮೆ ಅಂಕಗಳು ಬಂದರೆ ಪರೀಕ್ಷೆ-2 ತೆಗೆದುಕೊಳ್ಳಬಹುದು. ಪರೀಕ್ಷೆ-2 ಅನುತ್ತೀರ್ಣರಾದರೆ / ಕಡಿಮೆ ಅಂಕ ಬಂದರೆ ಪರೀಕ್ಷೆ-3 ತೆಗೆದುಕೊಳ್ಳಬಹುದು. ಇದರಲ್ಲಿ ಯಾವುದೇ ಪರೀಕ್ಷೆ ಪೂರಕ ಪರೀಕ್ಷೆ ಆಗಿರುವುದಿಲ್ಲ. ಅಂಕಪಟ್ಟಿಯಲ್ಲಿ ಫ್ರೆಶ್ ಸ್ಟೂಡೆಂಟ್ ಎಂದೇ ನಮೂದು ಆಗುತ್ತದೆ.
ಎಸ್ ಎಲ್ ಸಿ ನಂತರ ಮುಂದೇನು ಎನ್ನುವ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯ ಆಯ್ಕೆ ಮಾಡುವ ಒಂದಿಷ್ಟು ಬೆಸ್ಟ್ ಕೋರ್ಸ್ಗಳ ಪಟ್ಟಿ ಮಾಡಿ ಕೆಳಗೆ ಸಂಪೂರ್ಣವಾದ ಮಾಹಿತಿಯೊಂದಿಗೆ ಕೊಡಲಾಗಿದೆ ದಯವಿಟ್ಟು ಕೆಳಗಿನ ವರದಿಯನ್ನು ವರದಿಯನ್ನು ತಪ್ಪದೇ ಓದಿ ಮತ್ತು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರು ಮತ್ತು ಪಾಲಕ ಪೋಷಕರಿಗೆ ಶೇರ್ ಮಾಡಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.