ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ಫಲಿತಾಂಶ ಅಧಿಕೃತವಾಗಿ ಈ ಕೆಳಗಿನ ವೆಬ್ಸೈಟ್ಗಳಲ್ಲಿ ಮಧ್ಯಾಹ್ನ 1:00 ಗಂಟೆ ನಂತರ ಲಭ್ಯವಾಗಲಿದೆ. ಫಲಿತಾಂಶವನ್ನು ನೋಡಲು ಈ ಕೆಳಕಂಡ ವೆಬ್‌ಸೈಟ್ ಅನ್ನು ಭೇಟಿ ನೀಡಬಹುದಾಗಿದೆ
https://kseab.karnataka.gov.in
https://karresults.nic.in
https://sslc.karnataka.gov.in
ಈ ಬಾರಿಯ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ 94% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 92.12% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೊನೆಯ ಸ್ಥಾನ ಗಳಿಸಿದ ಯಾದಗಿರಿ ಜಿಲ್ಲೆಯಲ್ಲಿ ಶೇ 50.59 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಈ ಬಾರಿ ಒಟ್ಟಾರೆ ಶೇ. 73.40 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 83.89 ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಶೇ. 10 ಫಲಿತಾಂಶ ಕುಸಿತವಾಗಿದೆ. ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 16 ಕೊನೇ ದಿನವಾಗಿದ್ದು, ಶುಲ್ಕ ಪಾವತಿಗೆ ಮೇ 17 ಅಂತಿಮ ದಿನವಾಗಿದೆ. ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಮೇ 22ರವರೆಗೆ ಅವಕಾಶ ನೀಡಲಾಗಿದೆ.
ಮಂಡಳಿಯು ಈಗಾಗಲೇ ಪರೀಕ್ಷೆ-1, 2, 3 ನ ಹೊಸ ಮಾದರಿಯನ್ನು ಪರಿಚಯಿಸಿರುವುರಿಂದ ಮೊದಲನೆಯ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ಉತ್ತೀರ್ಣರಾಗದಿದ್ದರೆ, ವಿದ್ಯಾರ್ಥಿಯ ಫಲಿತಾಂಶವನ್ನು NC Not Completed (ಪೂರ್ಣಗೊಳಿಸಲಾಗಿಲ್ಲ) ಎಂದು ತೋರಿಸಲಾಗುತ್ತದೆ. ನಂತರ ಮೂರೂ ಪರೀಕ್ಷೆಗಳ ಪೈಕಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು.
ಯಾವ ಜಿಲ್ಲೆಯ ಫಲಿತಾಂಶ ಎಷ್ಟು?
ಉಡುಪಿ – 94 ಶೇಕಡಾ
ದಕ್ಷಿಣ ಕನ್ನಡ- 92. 12 ಶೇಕಡಾ
ಶಿವಮೊಗ್ಗ-88.67 ಶೇಕಡಾ
ಕೊಡಗು-88.67 ಶೇಕಡಾ
ಉತ್ತರ ಕನ್ನಡ- 86.54 ಶೇಕಡಾ
ಹಾಸನ- 86.28 ಶೇಕಡಾ
ಮೈಸೂರು-85.5
ಶಿರಸಿ-84.64
ಬೆಂಗಳೂರು ಗ್ರಾಮೀಣ-83.67
ಚಿಕ್ಕಮಗಳೂರು-83.39
ವಿಜಯಪುರ-79.82
ಬೆಂಗಳೂರು ದಕ್ಷಿಣ-79
ಬಾಗಲಕೋಟೆ-77.92
ಬೆಂಗಳೂರು ಉತ್ತರ-77.09
ಹಾವೇರಿ- 75.85
ತುಮಕೂರು-75.16
ಗದಗ-74.76
ಚಿಕ್ಕಬಳ್ಳಾಪುರ- 73.61
ಮಂಡ್ಯ-73.59
ಕೋಲಾರ-73.57
ಚಿತ್ರದುರ್ಗ-72.85
ಧಾರವಾಡ-72.67
ದಾವಣಗೆರೆ-72.49
ಚಾಮರಾಜನಗರ-71.59
ಚಿಕ್ಕೋಡಿ-69.82
ರಾಮನಗರ-69.53
ವಿಜಯನಗರ-65.61
ಬಳ್ಳಾರಿ-64.99
ಬೆಳಗಾವಿ-64.93
ಮಧುಗಿರಿ-62.44
ರಾಯಚೂರು-61.2
ಕೊಪ್ಪಳ-61.16
ಬೀದರ್-57.52
ಕಲಬುರಗಿ-53.04
ಯಾದಗಿರಿ-50.59
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ