Milk Incentive 2024: ಹಾಲಿನ ಪ್ರೋತ್ಸಾಹ ಧನ ಬಿಡುಗಡೆ, ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ!

milk incentive 2024

ರಾಜ್ಯ ಸರ್ಕಾರದಿಂದ (state government) ನೇರವಾಗಿ ಬರುವ 5 ರೂ.ಹಾಲಿನ ಸಹಾಯಧನ(Milk incentive )!.ಮನೆಯಲ್ಲಿಯೇ ಕೂತು ಚೆಕ್ ಮಾಡುವುದು ಹೇಗೆ?

ಇಂದು ನಮ್ಮ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ರೈತರು (Farmer’s) ಎನ್ನಬಹುದು. ಹೌದು ರೈತರೇ ನಮ್ಮ ದೇಶದ ಬೆನ್ನೆಲುಬು. ಕೇವಲ ಹಣ್ಣು(Fruits), ತರಕಾರಿ(vegetables), ಹೂ ಈ ರೀತಿಯಾದಂತಹ ಬೆಳೆಗಳನ್ನು ಬೆಳೆಯುವ ಜೊತೆಗೆ ಹಲವಾರು ಕುಲಕಸುಬುಗಳನ್ನು ಕೂಡ ನಮ್ಮ ರೈತರು ಮಾಡಿಕೊಂಡು ಮುಂದೆ ಬರುತ್ತಿದ್ದಾರೆ, ಜೊತೆಯಲ್ಲಿ ನಮ್ಮ ದೇಶವನ್ನು ಮುಂದೆ ತರುತ್ತಿದ್ದಾರೆ. ರೈತರು ಹಲವಾರು ಬೆಳೆಗಳನ್ನು ಬೆಳೆಯುವ ಜೊತೆಗೆ ತಮ್ಮ ಮನೆಗಳಲ್ಲಿ  ಹಸುಗಳನ್ನು ಕೂಡ ಸಾಕಿರುತ್ತಾರೆ. ಈ ಹಸು(cow)ಗಳನ್ನು ಕೇವಲ ಅವರ ದುಡಿಮೆಗಾಗಿ ಬಳಸಿಕೊಳ್ಳದೆ ಹಸುಗಳನ್ನು ದೇವರೆಂದು ಪೂಜೆ ಮಾಡುವ ಹಲವಾರು ರೈತರುಗಳನ್ನ ನಾವಿಂದು ಕಾಣಬಹುದು. ಎಲ್ಲಾ ರೈತರ ಮನೆಗಳಲ್ಲಿಯೂ ಕೂಡ ನಾವು ಹಸು ಸಾಗಾಣಿಕೆಯನ್ನು ನೋಡಬಹುದು. ಇನ್ನು  ತಮ್ಮ ಆರ್ಥಿಕ ನೆರವಿಗಾಗಿ ಈ ಹಸುವಿನಿಂದ ಬರುವಂತಹ ಹಾಲನ್ನು ಡೈರಿಗೆ ಹಾಕುತ್ತಾರೆ. ಇತ್ತೀಚಿಗೆ ತಂತ್ರಜ್ಞಾನ (technology) ಮುಂದುವರೆದಿರುವ  ಕಾರಣ ರೈತರಿಗೆ ಹಣವನ್ನು ನೇರವಾಗಿ ಕೊಡುವ ಬದಲು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಕರ್ನಾಟಕದ ಹಾಲುಮಂಡಳಿಗೆ ಹಾಲನ್ನು ಸರಬರಾಜು ಮಾಡುವ ರೈತರಿಗೆ  ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ಗೆ 5 ರೂ. ಪ್ರೋತ್ಸಾಹ ಧನವನ್ನು (Incentive money)
ನೀಡಲಾಗುತ್ತದೆ. ಇನ್ನು ಈ ಪ್ರೋತ್ಸಾಹ ಧನ ಯಾವಾಗ ನಮ್ಮ ಬ್ಯಾಂಕ್ ಖಾತೆ(Bank account)ಗೆ ಬಂತು? ಖಾತೆಗೆ ಜಮಾದ ಹಣ ಎಷ್ಟು? ಹಾಗೂ ಇದನ್ನು ಚೆಕ್ ಮಾಡುವುದು ಹೇಗೆ?ಎಂಬ ಸಂಪೂರ್ಣ ಮಾಹಿತಿಯನ್ನುತಿಳಿಯೋಣ ಬನ್ನಿ.

ಕರ್ನಾಟಕ ಹಾಲು ಮಹಾಮಂಡಳಿ (Karnataka Milk federation) :

ಕೆಎಂಎಫ್ (KMF) ಕರ್ನಾಟಕ ಸರ್ಕಾರದ ಸಹಕಾರ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿರುವ ಹಾಲು ಉತ್ಪಾದಕರ ಒಕ್ಕೂಟವಾಗಿದೆ. ಇಂದು ನಂದಿನಿ ಬ್ರಾಂಡ್ ಹೆಸರಿನಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆ, ಐಸ್ ಕ್ರೀಮ್, ಚಾಕಲೇಟ್, ಇತರೆ ಸಿಹಿತಿಂಡಿಗಳನ್ನು ಮಾರಾಟಮಾಡಲಾಗುತ್ತದೆ. ಇನ್ನೂ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಕೂಡ ನಾವು ಹಾಲು ಉತ್ಪಾದಕ ಸಹಕಾರಿ ಸಂಘಗಳನ್ನು ನೋಡಬಹುದು. ಕೆಎಂಎಫ್ ನಲ್ಲಿ ಸದಸ್ಯರಾಗಿರುವ ರೈತರಿಂದ ಹಾಲನ್ನು ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ರೈತರಿಗೂ ಆರ್ಥಿಕವಾಗಿ ನೆರವಾಗಲೆಂದು ಕೆಎಂಎಫ್ ನ ಡೈರಿಗಳಿಗೆ ಹಾಲನ್ನು ಪೂರೈಸುವ ರೈತರಿಗೆ ಪ್ರತಿ ಲೀಟರ್ (every liter) ಗೆ 5 ರೂ ಸಹಾಯಧನವನ್ನು ರಾಜ್ಯ ಸರಕಾರದಿಂದ ನೀಡಲಾಗುತ್ತಿದೆ.

ಇಂದು ತಂತ್ರಜ್ಞಾನ (technology) ಮುಂದುವರೆದಿರುವ ಕಾರಣ ಹಣವನ್ನು ರಾಜ್ಯ ಸರಕಾರದಿಂದ ನೇರ ನಗದು ವರ್ಗಾವಣೆ ಮೂಲಕ ವರ್ಗಾಯಿಸಲಾಗುತ್ತಿದೆ. ಆದರೆ ಇತ್ತೀಚೆಗೆ ರೈತರಿಗೆ ಈ ಪ್ರೋತ್ಸಾಹ ಧನ ಬರುತ್ತಿಲ್ಲ. ಇನ್ನು ಈ ಹಣ ಬಂದರೂ ಬ್ಯಾಂಕ ಖಾತೆಯಲ್ಲಿ ಎಷ್ಟು ಲೀಟರ್ ಹಾಲಿಗೆ ಎಷ್ಟು ಹಣ ಜಮಾ ಆಗಿದೆ?ಯಾವ ತಿಂಗಳಿನಂದು ಜಮಾ ಆಗಿದೆ? ಎಂಬ ವಿಷಯಗಳನ್ನು ಹೇಗೆ ತಿಳಿದುಕೊಳ್ಳುವುದು ಎಂದು ಹಲವಾರು ರೈತರಿಗೆ ತಿಳಿದಿರುವುದಿಲ್ಲ. ಮನೆಯಲ್ಲಿಯೇ ಕೂತು ಕೇವಲ ಆಧಾರ್ ನಂಬರ್ ಹಾಕುವ ಮೂಲಕ ಈ ಎಲ್ಲಾ ಮಾಹಿತಿಗಳನ್ನು ಮಾಹಿತಿಗಳನ್ನು ನಿಮ್ಮ ಮೊಬೈಲ್ ಮುಖಾಂತರ ತಿಳಿದುಕೊಳ್ಳಬಹುದು.

ಹಾಲಿನ ಪ್ರೋತ್ಸಾಹ ಧನ ನಿಮ್ಮ ಬ್ಯಾಂಕ್ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ ?

ಎರಡು ರೀತಿಯ ವಿಧಾನದಲ್ಲಿ ಹಾಲಿನ ಪ್ರೋತ್ಸಾಹ ಧನ ನಿಮ್ಮ ಬ್ಯಾಂಕ್ ಖಾತೆಗೆ ಬಂದಿರುವುದನ್ನು ಚೆಕ್ ಮಾಡಬಹುದು.
-ಮೊಬೈಲ್ ಆಪ್ ನ ಮೂಲಕ
-ಕ್ಷೀರಸಿರಿ ಜಾಲತಾಣದ ಮೂಲಕ

ಮೊಬೈಲ್ ಆಪ್ ನ (mobile app) ಮೂಲಕ ಚೆಕ್ ಮಾಡುವದು ಹೇಗೆ?

ಮೊದಲನೆಯದಾಗಿ ಗೂಗಲ್ ಪ್ಲೇ ಸ್ಟೋರ್ ಗೆ (Google play store) ಭೇಟಿ ನೀಡಿ DBT karantaka ಎಂಬ ಮೊಬೈಲ್ ಆಪನ್ನು ಡೌನ್ಲೋಡ್ ಮಾಡಬೇಕು.
ತದನಂತರ ನಿಮ್ಮ ಮನೆಯಲ್ಲಿ ಯಾರ ಹೆಸರಿನಲ್ಲಿ ಡೈರಿಗೆ ಹಾಲನ್ನು ಹಾಕುತ್ತಿರುತ್ತೀರೋ ಅವರ ಆಧಾರ್ ಸಂಖ್ಯೆಯನ್ನು ಹಾಕಬೇಕು.
ನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ (OTP)ಬರುತ್ತದೆ. ಓಟಿಪಿ (OTP) ನಮೂದಿಸಿದ ನಂತರ ನಾಲ್ಕು ಅಂಕಿಯ ಪಾಸ್ವರ್ಡ್ ಹಾಕಬೇಕು. ನಂತರ ಮುಖಪುಟಕ್ಕೆ ಹೋಗಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ನಂತರ DBT karnataka ಆಪ್ ನಲ್ಲಿ ಲಾಗಿನ್ ಆಗುತ್ತೀರಿ. ಬಲಬದಿಯಲ್ಲಿ ಕ್ಲಿಕ್ ಮಾಡುವ ಮೂಲಕ ಕನ್ನಡ ಅಥವಾ ಇಂಗ್ಲಿಷ್ ಅನ್ನು ಆಯ್ಕೆ ಮಾಡಬೇಕು. ತದನಂತರ ಮುಖಪುಟದಲ್ಲಿ ಕಾಣುವ ಪಾವತಿ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು.
ಇನ್ನೂ ಕೊನೆಯ ಹಂತದಲ್ಲಿ ಫಲಾನುಭವಿಯ ಡಿಬಿಟಿ (DBT) ಯೋಜನೆಯ ಮಾಹಿತಿ ಗೋಚರಿಸುತ್ತದೆ. “ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಯಾವ ಯಾವ ತಿಂಗಳು ಎಷ್ಟು ಹಣ ಜಮಾ ಆಗಿದೆ ಹಾಗೂ ಯಾವ ಬ್ಯಾಂಕ್ ಖಾತೆಗೆ ಹೋಗಿದೆ ಎಂಬ ಎಲ್ಲಾ ಮಾಹಿತಿ, UTR ನಂಬರ್, ಎಷ್ಟು ಹಣ, ಬಿಡುಗಡೆ ಆದ ದಿನಾಂಕ ಹಾಗೂ ಬ್ಯಾಂಕ್ ಹೆಸರು ಈ ಎಲ್ಲಾ ಮಾಹಿತಿಗಳನ್ನು ತೋರಿಸುತ್ತದೆ.

ಕ್ಷೀರಸಿರಿ ಜಾಲತಾಣದ ಮೂಲಕ ಚೆಕ್ ಮಾಡುವುದು ಹೇಗೆ?

ತಿಂಗಳವಾರು ಮಾಹಿತಿ ಬೇಕೆಂದರೆ FDI ನಂಬರ್ ಹಾಕುವ ಮೂಲಕ ಎಷ್ಟು ಲೀಟರ್ ಗೆ ಎಷ್ಟು ಹಣ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ಕ್ಷೀರಸಿರಿ ಜಾಲತಾಣದ  ವೆಬ್ ಸೈಟ್ ಗೆ ಭೇಟಿ ನೀಡುವ ಮುಖಾಂತರ ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

ಮೊದಲಿಗೆ ಕ್ಷೀರಸಿರಿ ವೆಬ್ ಸೈಟ್ (website) ಗೆ https://ksheerasiri.karnataka.gov.in/KMF_Milk ಭೇಟಿ ನೀಡಿ ಫಲಾನುಭವಿಯ FDI ನಂಬರ್ ಹಾಕಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ನಂತರ ವರ್ಷವನ್ನು ಕ್ಲಿಕ್ ಮಾಡಿ “View” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ಡೈರಿಗೆ ಪೂರೈಕೆ ಮಾಡಿದ ತಿಂಗಳುವಾರು ಹಾಲಿನ ವಿವರ ಮತ್ತು ಸಹಾಯಧನದ ಹಣ ವರ್ಗಾವಣೆ ಮಾಹಿತಿ ತೋರಿಸುತ್ತದೆ.;

ಈ ಮಾಹಿತಿಗಳನ್ನು ಓದಿ


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!