ಸ್ಪೋರ್ಟ್ಸ್ ಬೈಕ್ (sports bike) ಪ್ರಿಯರಿಗೆ ಒಕಾಯ ಫೆರಾಟೋ ಡಿಸ್‌ರಪ್ಟರ್ ಸ್ಪೋರ್ಟ್ಸ್ ಬೈಕ್ (Okaya Ferrato Disruptor sports bike) ಒಂದು ಉತ್ತಮ ಆಯ್ಕೆ. ಕಡಿಮೆ ಬೆಲೆ (low price) ಹಾಗೂ ಖರೀದಿಗೆ ಸಿಗಲಿದೆ ಸಬ್ಸಿಡಿ(subsidy)!
ಕೇವಲ ಯುವಕರಷ್ಟೇ ಅಲ್ಲ ಎಲ್ಲರೂ ಕೂಡ ಬೈಕ್ ಗಳನ್ನು ಇಷ್ಟ ಪಡುತ್ತಾರೆ. ಹಾಗೆ ಹೆಚ್ಚು ಮೈಲೇಜ್ ಕೊಡುವ ಕಡಿಮೆ ಬೆಲೆಯ ಬೈಕುಗಳನ್ನು ಖರೀದಿಗೆ ಹುಡುಕುತ್ತಿರುತ್ತಾರೆ. ಯುವಕರಿಗೆ ಹೆಚ್ಚು ಪ್ರಿಯಾಗುವಂತಹ ಬೈಕ್ ಎಂದರೆ ಅದು ಸ್ಪೋರ್ಟ್ಸ್ ಬೈಕ್(sport’s bike). ಹೌದು ಇತ್ತೀಚಿಗೆ ಸ್ಪೋರ್ಟ್ಸ್ ಬೈಕ್ ಗಳ ಮಾರಾಟ ಹೆಚ್ಚಾಗಿದೆ. ಆದ್ದರಿಂದ ಹೊಸ ಹೊಸ ಕಂಪನಿಯು ಹೊಸ ವಿನ್ಯಾಸದಲ್ಲಿ ಸ್ಪೋರ್ಟ್ಸ್ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಸ್ಪೋರ್ಟ್ಸ್ ಬೈಕ್ ಗಳು ಶಕ್ತಿಶಾಲಿ ಹಾಗೂ ಸ್ಟೈಲಿಶ್ ಬೈಕ್ ಗಳಾಗಿರುತ್ತವೆ. ಹಾಗೂ ಈ ಸ್ಪೋರ್ಟ್ಸ್ ಬೈಕ್ ಗಳೆಂದರೆ ಯುವಕರಿಗೆ ಕ್ರೇಜ್. ಆ ನಿಟ್ಟಿನಲ್ಲಿ ಒಳ್ಳೆಯ ಸ್ಪೋರ್ಟ್ಸ್ ಬೈಕ್ ಗಳು ಮಾರುಕಟ್ಟೆಗೆ ಬಂದಿವೆ.ಅದರಲ್ಲೂ ಕಡಿಮೆ ಬೆಲೆ ಹಾಗೂ ಹೆಚ್ಚು ಮೈಲೇಜ್ (high mileage) ಕೊಡುವ ಸ್ಪೋರ್ಟ್ಸ್ ಬೈಕ್ ಇದೀಗ ಮಾರುಕಟ್ಟೆಗೆ ಬಂದಿದೆ. ಈ ಸ್ಪೋರ್ಟ್ಸ್ ಬೈಕ್ ಯಾವುದು? ಇದರ ಬೆಲೆ ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಡಿಮೆ ಬೆಲೆಯ ಸ್ಪೋರ್ಟ್ಸ್ ಬೈಕ್ :
ಸ್ಪೋರ್ಟ್ಸ್ ಬೈಕ್ ಗಳು ಬೇಗ ಜನರನ್ನು ಆಕರ್ಷಿಸುತ್ತವೆ (attracting). ಯುವಕರಿಗೆ ಈ ಬೈಕ್ ಗಳಲ್ಲಿ ಹೋಗುವುದೇ ಒಂದು ಖುಷಿ. ಯಾಕೆಂದರೆ ಸ್ಪೋರ್ಟ್ಸ್ ಬೈಕ್ ನ ಪರ್ಫಾರ್ಮೆನ್ಸ್ (performance) ಮತ್ತು ವಿನ್ಯಾಸ (style) ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಸ್ಪೋರ್ಟ್ಸ್ ಬೈಕ್ ಗಳು ಹೆಚ್ಚು ಮಾರಾಟಕ್ಕಿರುವುದರಿಂದ ಹಾಗೂ ಉತ್ತಮ ಬೈಕ್ ಗಳಾಗಿರುವುದರಿಂದ ಸ್ಪೋರ್ಟ್ಸ್ ಬೈಕ್ ನ ಬೆಲೆಯೂ ದುಬಾರಿಯಾಗಿರುತ್ತದೆ. ಆದರೆ ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಕಡಿಮೆ ನಿರ್ವಹಣಾ ವೆಚ್ಚದ ಬೈಕ್. ಇನ್ನು ಈ ಬೈಕ್ನ ಬೆಲೆಯೂ ಎಲ್ಲಾ ಸ್ಪೋರ್ಟ್ಸ್ ಬೈಕ್ ಗಳಿಗಿನ್ನ ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ. ಹೌದು ಭಾರತದಲ್ಲಿ ಇದೀಗ ಒಕಾಯ ಸ್ಟಾಟ್ ಅಪ್ ಕಂಪನಿ ಹೊಸ ಸ್ಪೋರ್ಟ್ಸ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಒಕಾಯ ಫೆರಾಟೋ ಡಿಸ್‌ರಪ್ಟರ್ ಸ್ಪೋರ್ಟ್ಸ್ ಬೈಕ್ 1ಕಿ.ಮೀಗೆ 25 ಪೈಸೆ ಖರ್ಚು ಹಾಗೂ ಕಡಿಮೆ ಬೆಲೆಗೆ ಈ ಸ್ಪೋರ್ಟ್ಸ್ ಬೈಕ್ ದೊರೆಯುತ್ತಿದೆ. ಇದೆಲ್ಲವುದಕ್ಕಿನ್ನ ಮಿಗಿಲಾಗಿ ಈ ಒಂದು ಸ್ಪೋರ್ಟ್ಸ್ ಬೈಕ್ ಖರೀದಿಸುವ ಗ್ರಾಹಕರಿಗೆ ಸರ್ಕಾರದಿಂದ ಸಬ್ಸಿಡಿ ಕೂಡ ಲಭ್ಯವಿದೆ.
ಸರ್ಕಾರದಿಂದ ಈಪ್ ಸ್ಪೋರ್ಟ್ಸ್ ಬೈಕ್ ಗೆ ಸಬ್ಸಿಡಿ (subsidy) ಕೊಡುತ್ತಿರುವ ಕಾರಣ?
ಹೌದು, ಒಕಾಯ ಫೆರಾಟೋ ಡಿಸ್‌ರಪ್ಟರ್ ಸ್ಪೋರ್ಟ್ಸ್ ಬೈಕ್ ಗೆ ಸರ್ಕಾರದಿಂದ ಸಬ್ಸಿಡಿ(subsidy from government) ಕೂಡ ಸಿಗುತ್ತಿದೆ. ಏಕೆಂದರೆ ಈ ಒಂದು ಸ್ಪೋರ್ಟ್ಸ್ ಬೈಕ್ ಎಲೆಕ್ಟ್ರಿಕ್ ಬೈಕ್ ಆಗಿರುವುದರಿಂದ ಕೇಂದ್ರ ಸರ್ಕಾರದ ಪೇಮ್ 2 ಸಬ್ಸಿಡಿ ಯೋಜನೆ (fame 2 subsidy scheme ) ಅನ್ವಯವಾಗಲಿವೆ. ಆದ್ದರಿಂದ ಈ ಬೈಕ್ ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ ಸಬ್ಸಿಡಿ ಸಿಗಲಿದೆ. ಆದ್ದರಿಂದ ಒಕಾಯ ಫೆರಾಟೋ ಡಿಸ್‌ರಪ್ಟರ್ ಸ್ಪೋರ್ಟ್ಸ್ ನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.
ಒಕಾಯಾ ಫೆರಾಟೋ ಡಿಸ್‌ರಪ್ಟರ್ ಫೀಚರ್ಸ್ (features) :
ಈ ಒಂದು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಆಕರ್ಷಕವಾಗಿ ವಿನ್ಯಾಸಗೊಂಡಿರುವ ಜೊತೆಗೆ ಅತ್ಯುತ್ತಮ ಪರ್ಫಾರ್ಮೆನ್ಸ್ ನಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ಈ ಸ್ಪೋರ್ಟ್ಸ್ ಬೈಕ್ ಹೆಚ್ಚು ಇಷ್ಟವಾಗಲು ಕಾರಣ ಈ ಬೈಕ್ ನೀಡುವ ಮೈಲೇಜ್ ನಿಂದ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 129 ಕಿ. ಮೀ ಮೈಲೇಜ್ ನೀಡುತ್ತಿರುವ ಈ ಒಂದು ಸ್ಪೋರ್ಟ್ಸ್ ಬೈಕ್ ಜನರ ಗಮನವನ್ನು ಸೆಳೆಯುತ್ತಿದೆ.
ಒಕಾಯಾ ಫೆರಾಟೋ ಡಿಸ್‌ರಪ್ಟರ್ ಬೈಕ್ ನಿರ್ವಹಣೆ ಅತೀ ಕಡಿಮೆ :
ಒಮ್ಮೆ ಚಾರ್ಜ್ ಮಾಡಿದರೆ 129 ಕಿ. ಮೀ ಮೈಲೇಜ್ ನೀಡುವ ಈ ಸ್ಪೋರ್ಟ್ ಬೈಕ್ ಕೇವಲ 32 ರೂಪಾಯಿಯಲ್ಲಿ ಫುಲ್ ಚಾರ್ಜ್ ಮಾಡಬಹುದು. ಈ ನಿಟ್ಟಿನಲ್ಲಿ ಪ್ರತಿ ಕಿಲೋಮೀಟರ್ ಗೆ 25 ಪೈಸೆ ಖರ್ಚಾಗಲಿದೆ. ಹಾಗೂ ಪ್ರತಿ ಗಂಟೆಗೆ ಒಕಾಯಾ ಫೆರಾಟೋ ಡಿಸ್‌ರಪ್ಟರ್ ಗರಿಷ್ಠ ವೇಗ 95.ಕಿ.ಮೀ. ಆದ್ದರಿಂದ ಒಕಾಯ ಸ್ಪೋರ್ಟ್ಸ್ ಬೈಕ್ ನಿರ್ವಹಣೆ ಅತಿ ಕಡಿಮೆ.
ಒಕಾಯಾ ಫೆರಾಟೋ ಡಿಸ್‌ರಪ್ಟರ್ ಬೈಕ್ ನ ವಾರೆಂಟಿ (warranty) :
ಈ ಸ್ಪೋರ್ಟ್ಸ್ ಬೈಕ್ ಗೆ ಮೂರು ವರ್ಷಗಳ ವಾರಂಟಿ ಅಥವಾ 30,000 ಕಿ.ಮೀ ಬ್ಯಾಟರಿ ವಾರೆಂಟಿಯನ್ನು ಕಂಪನಿ ನೀಡುತ್ತಿದೆ. ಬೇರೆ ಸ್ಪೋರ್ಟ್ಸ್ ಬೈಕ್ ಗಳಿಗೆ ಹೋಲಿಕೆ ಮಾಡಿದರೆ ಒಕಾಯಾ ಫೆರಾಟೋ ಡಿಸ್‌ರಪ್ಟರ್ ಬೈಕ್ ನ ವಿನ್ಯಾಸ ಹಾಗೂ ಬ್ಯಾಟರಿ ಪರ್ಫಾರ್ಮೆನ್ಸ್ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.
ಒಕಾಯಾ ಫೆರಾಟೋ ಡಿಸ್‌ರಪ್ಟರ್ ಬೈಕ್ ನ ಬೆಲೆ (price) ಎಷ್ಟು?
ಕೇವಲ 1.60 ಲಕ್ಷ ರೂಪಾಯಿ ಯಲ್ಲಿ ಒಕಾಯಾ ಫೆರಾಟೋ ಡಿಸ್‌ರಪ್ಟರ್ ಬೈಕ್ ಸಿಗಲಿದೆ. ಹೊಸ ಸ್ಪೋರ್ಟ್ಸ್ ಬೈಕ್ ಖರೀದಿಸಬೇಕೆಂದಿದ್ದ ಯುವಕರಿಗೆ ಈ ಬೈಕ್ ಒಂದು ಉತ್ತಮ ಆಯ್ಕೆಯಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.