ಹೊಸ ಶ್ರೇಣಿಯ ಹೆಚ್ಚಿನ ಮತ್ತು ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು (electric two wheeler vehicles) ಬಿಡುಗಡೆ ಮಾಡಿದ ಜಿಟಿ ಫೋರ್ಸ್ (GT force) ಕಂಪನಿ!
ಇಂದು ಯಾರ ಬಳಿ ದ್ವಿಚಕ್ರ ವಾಹನಗಳು ಇಲ್ಲ ಹೇಳಿ. ಎಲ್ಲರ ಬಳಿಯೂ ವಾಹನಗಳು ಇದ್ದಾವೆ. ಅದರಲ್ಲಂತೂ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರ ಬಳಿ ದ್ವಿಚಕ್ರ ವಾಹನಗಳೆ ಜಾಸ್ತಿ. ಇಂದು ಬೈಕ್ ಮತ್ತು ಸ್ಕೂಟರ್ ಗಳು ವಿಭಿನ್ನ ಕ್ರೇಜ್ (craze) ಅನ್ನು ನೀಡುತ್ತವೆ. ಹೌದು ದ್ವಿಚಕ್ರ ವಾಹನಗಳಲ್ಲಿ ಇಂದು ಎಲ್ಲರೂ ಸ್ಕೂಟರ್ ಖರೀದಿಸುತ್ತಿದ್ದಾರೆ ಯಾಕೆಂದರೆ ಅತಿ ಕಡಿಮೆ ಬೆಲೆಗೆ ದೊರೆಯುತ್ತದೆ ಹಾಗೆ ಸ್ಕೂಟರ್ ನಿಂದ ಹೆಚ್ಚು ಉಪಯೋಗವಿದೆ. ಇಂದು ಮಾರುಕಟ್ಟೆಯಲ್ಲಿ ಇಂಧನ ಚಾಲಿತ ಸ್ಕೂಟರ್ ಗಳು ದಿನದಿಂದ ದಿನಕ್ಕೆ ಬಿಡುಗಡೆಯಾಗುತ್ತಿವೆ. ಅವುಗಳಿಗೆ ಪೈಪೋಟಿ (competition) ನೀಡುವಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈಗಾಗಲೇ ಹಲವು ಕಂಪನಿಗಳ ದ್ವಿಚಕ್ರ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗೆಯೇ ಇದೀಗ ಜಿಟಿ ಫೋರ್ಸ್ ಕಂಪನಿ ಹೊಸ ಜಿಟಿ ಸರಣಿಯ ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಅದರ ವಿಶೇಷತೆ ಏನು ? ಅದರ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಜಿಟಿ ಕಂಪನಿಯು ಇದೀಗ ತನ್ನ ಹೊಸ ‘ಜಿಟಿ ವೇಗಾಸ್, ಜಿಟಿ ಒನ್ ಪ್ಲಸ್ ಪ್ರೊ, ಜಿಟಿ ರೈಡ್ ಪ್ಲಸ್ ಮತ್ತು ಜಿಟಿ ಡ್ರೈವ್ ಪ್ರೊ’ ಎಂಬ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ.
ಜಿಟಿ ಡ್ರೈವ್ ಪ್ರೊ (GT drive pro) :
ಜಿಟಿ ಡ್ರೈವ್ ಪ್ರೊ ಒಂದೇ ಚಾರ್ಜ್‌ನಲ್ಲಿ 70 ಕಿ.ಮೀ. ವರೆಗಿನ ರೈಡಿಂಗ್ ಶ್ರೇಣಿಯನ್ನು ಹೊಂದಿದೆ. ಹಾಗೆಯೇ ಕಂಪೆನಿಯು ಹೈಸ್ಪೀಡ್ ಗಾಗಿ ಜಿಟಿ ಡ್ರೈವ್ ಪ್ರೊ ಅನ್ನು ತಯಾರಿಸಿದ್ದಾರೆ. ಇದು ಹೆಚ್ಚಿನ ಇನ್ಸುಲೇಟೆಡ್ ಬಿಎಲ್ ಡಿಸಿ ಮೋಟರ್‌ಗಳು ಮತ್ತು 2.5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. 70 ಕಿ.ಮೀ ಟಾಪ್ ಸ್ಪೀಡ್ ಮತ್ತು 180 ಕೆ.ಜಿ ಲೋಡ್ ಸಾಮರ್ಥ್ಯದೊಂದಿಗೆ 110 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪೆನಿಯು ಹೇಳಿದೆ.
ಗಾತ್ರ ಮತ್ತು ಎತ್ತರ :
ಜಿಟಿ ಡ್ರೈವ್ ಪ್ರೊ ಇವಿ ಸ್ಕೂಟರ್ 800 ಎಂಎಂ ಸ್ಯಾಡಲ್ ಎತ್ತರ, 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 85 ಕೆ.ಜಿ ತೂಕವನ್ನು ಈ ಸ್ಕೂಟರ್ ಹೊಂದಿದೆ.
ಬಣ್ಣಗಳು (colours) :
ಈ ಸ್ಕೂಟರ್ ಮುಖ್ಯವಾಗಿ ಬ್ಲೂ, ವೈಟ್, ರೆಡ್ ಮತ್ತು ಬ್ರೌನ್ ಬಣ್ಣಗಳಲ್ಲಿ ಲಭ್ಯವಿದೆ.
ಜಿಟಿ ಡ್ರೈವ್ ಪ್ರೊ ನ ಬೆಲೆ (price) :
ಮಾರುಕಟ್ಟೆಯಲ್ಲಿ 84,555 ರೂ. ಬೆಲೆಯಲ್ಲಿ ಖರೀದಿಗೆ ಜಿಟಿ ಡ್ರೈವ್ ಪ್ರೊ ಲಭ್ಯವಿದೆ.
ಜಿಟಿ ಒನ್ ಪ್ಲಸ್ ಪ್ರೊ (GT one plus pro) :
ನಂತರ ಸರಣಿಯಲ್ಲಿ ನೋಡಬಹುದಾದ ಸ್ಕೂಟರ್ ಎಂದರೆ ಅದು ಜಿಟಿ ಒನ್ ಪ್ಲಸ್ ಪ್ರೋ. ಇದು ಜಿಟಿ ಒನ್ ಪ್ರೊ ನ ಸರಣಿಯಲ್ಲಿ ಬರುತ್ತದೆ.
70 ಕಿ.ಮೀ ವೇಗದಲ್ಲಿ ಚಲಿಸುವ ಹೈಸ್ಪೀಡ್ ಸ್ಕೂಟರ್ ಆಗಿದ್ದು, 180 ಕೆ.ಜಿ ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಸಿಂಗಲ್ ಚಾರ್ಜ್‌ನಲ್ಲಿ 110 ಕಿ.ಮೀ ಚಲಿಸುತ್ತದೆ. ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಚಾರ್ಜ್ ಆಗಲು 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಬಣ್ಣಗಳು (colours) :
ಈ ಸ್ಕೂಟರ್ ಬ್ಲಾಕ್, ಬ್ಲೂ ಮತ್ತು ಬ್ರೌನ್ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇದು ಅತಿ ಕಡಿಮೆ ಬೆಲೆಗೆ ದೊರೆಯುವ ಒಂದು ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
ಜಿಟಿ ಒನ್ ಪ್ಲಸ್ ಪ್ರೊ ನ ಬೆಲೆ (price) :
ಈ ಸ್ಕೂಟರ್ 76,555 ರೂ. ಬೆಲೆಗೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಜಿಟಿ ವೇಗಾಸ್ (GT Vegas) :
ಜಿಟಿ ವೇಗಾಸ್ ಕೂಡ ಮತ್ತೊಂದು ಜಿಟಿ ಸರಣಿಯ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಇದು 1.5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಅತ್ಯುತ್ತಮ ಪರ್ಫಾಮೆನ್ಸ್ ನೀಡಲಿದೆ.
ವೈಶಿಷ್ಟ್ಯತೆಗಳು (features) :
ಈ ಸ್ಕೂಟರ್ ನಲ್ಲಿ ಆಟೋ-ಕಟ್ ವೈಶಿಷ್ಟ್ಯವನ್ನು ನೀಡಲಾಗಿದ್ದು, ಇದರ ಮೈಕ್ರೋ ಚಾರ್ಜರ್ 4-5 ಗಂಟೆಗಳಲ್ಲಿ ಪೂರ್ಣವಾಗಿ ಚಾರ್ಜ್ ಆಗುತ್ತದೆ. 70 ಕಿ.ಮೀ ರೇಂಜ್ ಮತ್ತು 25 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಜಿಟಿ ವೇಗಾಸ್, 150 ಕೆ.ಜಿ ಲೋಡ್ ಸಾಮರ್ಥ್ಯ, 760 ಎಂಎಂ ಸ್ಯಾಡಲ್ ಎತ್ತರ, 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 88 ಕೆ.ಜಿ ತೂಕವನ್ನು ಹೊಂದಿದೆ. ಇದು ಕೂಡ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ದೊರೆಯುವ ಸ್ಕೂಟರ್ ಆಗಿದೆ.
ಬಣ್ಣಗಳು (colours) :
ಜಿಟಿ ವೇಗಾಸ್ ಎಲೆಕ್ಟ್ರಿಕ್ ಸ್ಕೂಟರ್ ಕಿತ್ತಳೆ, ಕೆಂಪು ಮತ್ತು ಬೂದು ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಜಿಟಿ ವೇಗಾಸ್ ಎಲೆಕ್ಟ್ರಿಕ್ ನ ಬೆಲೆ (price) :
ಜಿಟಿ ವೇಗಾಸ್ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಇದು 55,555 ರೂ.ಗಳ ಬೆಲೆಯಲ್ಲಿ ಲಭ್ಯವಿದೆ.
ಜಿಟಿ ರೈಡ್ ಪ್ಲಸ್ (GT ride plus) :
ಜಿಟಿ ರೈಡ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಜಿಟಿ ಸರಣಿಯ ಮತ್ತೊಂದು ಸ್ಕೂಟರ್ ಆಗಿದ್ದು, ಇದು 2.2 ಕಿಲೋವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿಯಿಂದ ಚಲಿಸುತ್ತದೆ. ಇದು ಒಮ್ಮೆ ಚಾರ್ಜ್ ಮಾಡಿದ್ರೆ 95 ಕಿ.ಮೀ ವಿಸ್ತೃತ ರೇಂಜ್ ನೀಡುತ್ತದೆ. ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಮತ್ತು 160 ಕೆ.ಜಿ ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಜಿಟಿ ರೈಡ್ ಪ್ಲಸ್ 680 ಎಂಎಂ ಸ್ಯಾಡಲ್ ಎತ್ತರ, 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 90 ಕೆ.ಜಿ ತೂಕವನ್ನು ಹೊಂದಿದೆ.
ಬಣ್ಣಗಳು (colours) :
ಬ್ಲೂ, ಸಿಲ್ವರ್ ಮತ್ತು ಗ್ರೇ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಜಿಟಿ ರೈಡ್ ಪ್ಲಸ್ ನ ಬೆಲೆ (price) :
ಈ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಲಭ್ಯವಿದ್ದು, ಇದು ರೂ. 65,555 ಗೆ ದೊರೆಯಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..