ರಾಜ್ಯದ ಈ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ‘LKG, UKG’ ಆರಂಭ! ಇಲ್ಲಿದೆ ಡೀಟೇಲ್ಸ್!

LKG UKG started

ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ(akshara avishkara scheme) ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಯುಕೆಜಿ (UKG) ಎಲ್ ಕೆಜಿ (LKG) ತರಗತಿಗಳು ಆರಂಭ. ಮೊದಲಿಗೆ ತರಗತಿಗಳನ್ನು ನೆಡೆಸಲು ಆಯ್ಕೆಯಾದ ಕುಷ್ಟಗಿ ತಾಲೂಕಿನ 36 ಸರ್ಕಾರಿ ಶಾಲೆಗಳು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷರ ಆವಿಷ್ಕಾರದ ಯೋಜನೆ:

ವಿಜ್ಞಾನ ತಂತ್ರಜ್ಞಾನವಲ್ಲದೆ (science and technology) ಶೈಕ್ಷಣಿಕವಾಗಿಯೂ ನಮ್ಮ ಭಾರತ ಮುಂಚೂಣಿಯಲ್ಲಿದೆ. ಮನೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಲು ತಂದೆ ತಾಯಿಯರು ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಮಗು ಹುಟ್ಟಿದ ನಂತರವೇ ನಾವು ನಮ್ಮ ಮಗುವನ್ನು ಯಾವ ಶಾಲೆಗೆ ಹಾಕುವುದು?, ನಮಗೆ ಅನುಕೂಲವಾಗುವಂತಹ ಯಾವ ಶಾಲೆ (school) ಇದೆ ಎಂದು ಹುಡುಕುತ್ತಲೇ ಇರುತ್ತಾರೆ. ಅದರಲ್ಲೂ ಮಕ್ಕಳ ಬೆಳವಣಿಗೆಯಲ್ಲಿ ಎರಡೂವರೆ ವರ್ಷದಿಂದ ಆರು ವರ್ಷದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಹೆಚ್ಚಿರುತ್ತದೆ. ಇನ್ನು ಈ ವರ್ಷಗಳಲ್ಲಿ ಮಕ್ಕಳಿಗೆ ಏನೇ ಕಲಿಸಿದರು ಬಹಳ ಬೇಗ ಕಲಿಯುತ್ತಾರೆ. ಹಾಗೂ ದೀರ್ಘಕಾಲದಲ್ಲಿ ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆದ್ದರಿಂದ ಹೆಚ್ಚು ಖರ್ಚಾದರೂ ಪರವಾಗಿಲ್ಲ ಒಳ್ಳೆಯ ಶಾಲೆಗಳಿಗೆ ನಮ್ಮ ಮಕ್ಕಳನ್ನು ಸೇರಿಸಬೇಕೆಂದು ಎಲ್ ಕೆಜಿ, ಯುಕೆಜಿಯಂತಹ ತರಗತಿಗಳಿಗೆ (LKG, UKG classes) ಸಾವಿರಾರು ರೂಪಾಯಿ ಪ್ರವೇಶ ಶುಲ್ಕವನ್ನು ಕೊಡುವುದರ ಮೂಲಕ ಖಾಸಗಿ ಶಾಲೆ(private schools)ಗಳಿಗೆ ಸೇರಿಸುತ್ತಾರೆ. ಆದರೆ ಹಲವಾರು ಕಾರಣಗಳಿಂದ ಕೆಲವು ಪೋಷಕರಿಗೆ ಎಷ್ಟೇ ಪ್ರಯತ್ನ ಪಟ್ಟರು ಅವರ ಮಕ್ಕಳನ್ನು ಖಾಸಗಿ ಶಾಲೆಗೆ (Private school) ಸೇರಿಸಲು ಆಗುವುದಿಲ್ಲ. ಆದರೆ ಇನ್ನು ಮುಂದೆ ಎಲ್ ಕೆಜಿ, ಯುಕೆಜಿಯಂತಹ ತರಗತಿಗಳಿಗೆ  ಸಾವಿರಾರು ರೂಪಾಯಿಯ ಪ್ರವೇಶ ಶುಲ್ಕವನ್ನು(admission fees) ಕಟ್ಟದೆ, ಉಚಿತ ಶಿಕ್ಷಣವನ್ನು (Free education) ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಪಡೆಯಬಹುದು. ಯಾವ ಯಾವ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ತರಗತಿಗಳು ಆರಂಭವಾಗುತ್ತಿವೆ? ಯಾವಾಗ ಆರಂಭವಾಗುತ್ತಿವೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಹೌದು, ಈ ವರ್ಷ ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ (government schools) ಇಸಿಸಿಇ (ECCE), ಎಲ್ ಕೆಜಿ (LKG), ಯುಕೆಜಿ(UKG) ಹಾಗೂ ದ್ವಿಭಾಷಾ ತರಗತಿಗಳನ್ನು(bilingual classes) ಪ್ರಾರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಣ ಇಲಾಖೆಯ ಈ ಮಹತ್ವದ ನಿರ್ಧಾರದ ಹಿಂದಿರುವ ಕಾರಣ ಸುಮಾರು ಸಮಯಗಳ ಹಿಂದೆ 4-5 ನೇ ವರ್ಷದ ಮಕ್ಕಳಿಗೆ ಎಲ್ ಕೆಜಿ, ಯುಕೆಜಿ ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿಯೂ ಪ್ರಾರಂಭಿಸುವಂತೆ  ಪೋಷಕರು ಬೇಡಿಕೆ ಇಟ್ಟಿದ್ದರಿಂದ ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಸಾವಿರಾರು ರೂಪಾಯಿ ಶುಲ್ಕ (fee) ಉಳಿತಾಯ :

ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಮುಖಾಂತರ ಕೇವಲ ಎಲ್ ಕೆಜಿ, ಯುಕೆಜಿಯಂತಹ ತರಗತಿಗಳಿಗೆ ಸಾವಿರಾರು ರೂಪಾಯಿಯ ಪ್ರವೇಶ ಶುಲ್ಕವನ್ನು ಕಟ್ಟುತ್ತಿದ್ದರು. ಇದರಿಂದ ಮನೆಗೆ ಬರುವ ಆದಾಯದಲ್ಲಿ ಉಳಿತಾಯವನ್ನು ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಇದೀಗ ಅಕ್ಷರ ಆವಿಷ್ಕಾರದ ಯೋಜನೆ ಅಡಿಯಲ್ಲಿ ಸಾವಿರಾರು ರೂಪಾಯಿಯ ಶುಲ್ಕವನ್ನು ಉಳಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು  (quality education) ಶುಲ್ಕ ರಹಿತವಾಗಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್ ಕೆಜಿ, ಯುಕೆಜಿ ಹಾಗೂ ದ್ವಿಭಾಷಾ ತರಗತಿಗಳನ್ನು  ಪಡೆಯಬಹುದು.

ಯಾವಾಗ ಆರಂಭವಾಗುತ್ತಿದೆ ಈ ಒಂದು ಯೋಜನೆ  :

ಇನ್ನು ಈ ಯೋಜನೆಯನ್ನು ಶೀಘ್ರದಲ್ಲಿಯೇ  ಜಾರಿಗೊಳಿಸುತ್ತಿದೆ ಶಿಕ್ಷಣ ಇಲಾಖೆ (educational department). ಅಂದರೆ 2024-25ನೇ ಶೈಕ್ಷಣಿಕ ಸಾಲಿನ ಆರಂಭಿಕ ದಿನಾಂಕವಾದ ಮೇ 29ರೊಳಗಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಈ ಯೋಜನೆಯಡಿಯಲ್ಲಿ ಬರುವ ಸೌಲಭ್ಯಗಳು (facilities) :

ಎಲ್ ಕೆಜಿ, ಯುಕೆಜಿ ಗೆ ಸೇರುವ ವಿದ್ಯಾರ್ಥಿಗಳು ಇನ್ನೂ ಮಕ್ಕಳಾಗಿರುವ ಕಾರಣ ಸುಸಜ್ಜಿತ ಕೊಠಡಿ ವ್ಯವಸ್ಥೆ, ಇನ್ನು ಮಕ್ಕಳನ್ನು ಆಕರ್ಷಿಸಲು ಕಾರ್ಟೂನ್ (cartoon) ಪಾತ್ರಗಳ ಚಿತ್ರಗಳು, ಹಾಗೂ ಹಲವಾರು ರೀತಿಯ ಬಣ್ಣಗಳು, ಪ್ರಾಣಿಗಳು, ತರಕಾರಿ,ಹಣ್ಣುಗಳ ಪ್ಲಾಸ್ಟಿಕ್ ಆಟಿಕೆಗಳು ಸೇರಿದಂತೆ ಪೂರ್ವ ಸಂಖ್ಯಾಜ್ಞಾನ ಆಟಿಕೆಗಳು, ಬಿಲ್ಡಿಂಗ್ ಬ್ಲಾಕ್ಸ್, ಪಜಲ್ಸ್, ಬುಕ್ಸ್ ಮತ್ತು ಹೊರಾಂಗಣ ಆಟದ ಸಾಮಗ್ರಿಗಳು ಸೇರಿದಂತೆ ಹಲವು ರೀತಿಯ ಆಕರ್ಷಣೀಯ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಈ ಯೋಜನೆಯಡಿಯಲ್ಲಿ ಮೊದಲಿಗೆ ಆಯ್ಕೆಯಾದ ಶಾಲೆಗಳು  :

ಪ್ರಸ್ತುತ  ಶೈಕ್ಷಣಿಕ ವರ್ಷದಲ್ಲಿ  ಕುಷ್ಟಗಿ ತಾಲೂಕಿನ 36 ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್ ಕೆಜಿ ಹಾಗೂ ಯುಕೆಜಿ ತರಗತಿಗಳು ಹಾಗೂ 31 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಆರಂಭ ಮಾಡಲಾಗುತ್ತಿದೆ.

ಆಯ್ಕೆಯಾದ ಶಾಲೆಗಳ ಪಟ್ಟಿ  :

ಚಳಗೇರಾ, ದೋಟಿಹಾಳ, ಗರ್ಜನಾಳ, ಗೋತಗಿ, ಹಾಬಲಕಟ್ಟಿ, ಕುರುಬಗೇರಾ, ಹನುಮಸಾಗರ, ಹಿರೇಗೊಣ್ಣಾಗರ, ಹಿರೇಮನ್ನಾಪುರ, ಹಿರೇನಂದಿಹಾಳ, ಹುಲಿಯಾಪುರ, ಜಾಗೀರಗುಡೂರು, ಕಬ್ಬರಗಿ, ಕಲಾಬಂಡಿ, ಕೊರಡಕೇರಿ, ಕುಂಬಳಾವತಿ, ಬಾಲಕಿಯರ ಶಾಲೆ ಕುಷ್ಟಗಿ, ಲಿಂಗದಳ್ಳಿ, ಮಾಲಗಿತ್ತಿ, ಮನ್ನೇರಾಳ, ನಿಡಶೇಸಿ, ನಿಲೋಗಲ್‌, ಶಾಖಾಪುರ ತುಗ್ಗಲಡೋಣಿ, ವಣಗೇರಿ, ಯಲಬುಣಚಿ, ಆರ್‌ಎಂಎಸ್‌ಎ ಅಡವಿಭಾವಿ, ಬೆನಕನಾಳ, ಬಿಜಕಲ್, ಹಿರೇಬನ್ನಿಗೋಳ, ಕಂದಕೂರ, ಕಾಟಾಪುರ, ಕಡೇಕೊಪ್ಪ ಮೇಣೆಧಾಳ, ಮಿಟ್ಟಲಕೋಡ, ಆ‌ರ್.ಎಂ.ಎಸ್.ಎ. ಶಾಲೆ ಮೂಗನೂರು, ಯರಗೇರಾ ಸೇರಿದಂತೆ  ಒಟ್ಟು 36 ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ, ಯುಕೆಜಿ ತರಗತಿಗಳು ಪ್ರಸ್ತುತ  ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗುತ್ತಿವೆ.

ಇನ್ನು ಶಿಕ್ಷಣ ಇಲಾಖೆಯ (educational department) ಮಹತ್ವದ ಯೋಜನೆಯಾದ ಅಕ್ಷರ ಆವಿಷ್ಕಾರದ ಯೋಜನೆಯ ಕುರಿತಾಗಿ ಪೋಷಕರು ಹೆಚ್ಚು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚು ಶುಲ್ಕ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲು ಶುಲ್ಕ ರಹಿತ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ (government schools) ಗುಣಮಟ್ಟದ ಶಿಕ್ಷಣವನ್ನು (quality education) ಪಡೆಯುವುದರ ಜೊತೆಗೆ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!