ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ 1 ರಂದು LPG ಸಿಲಿಂಡರ್ ಬೆಲೆ(LPG cylinder price)ಗಳನ್ನು ಪರಿಷ್ಕರಿಸುತ್ತವೆ. ಜಾಗತಿಕ ಮಾರುಕಟ್ಟೆ ಬೆಲೆಗಳು, ತೆರಿಗೆಗಳು ಮತ್ತು ಇತರ ಅಂಶಗಳನ್ನು ಅವಲಂಬಿಸಿರುವ ಬೆಲೆಗಳು ಏರಿಳಿತಗೊಳ್ಳಬಹುದು. ಮೇ ತಿಂಗಳಿನಲ್ಲಿ, ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಬೆಲೆ ಕಡಿತವು ದೇಶೀಯ ಮತ್ತು ವಾಣಿಜ್ಯ ಸಿಲಿಂಡರ್ಗಳ ಎರಡೂ ವಿಧಗಳಿಗೆ ಅನ್ವಯಿಸುತ್ತದೆ. ಜೂನ್ 1, 2024 ರಂದು ಹೊಸ ಬೆಲೆಗಳು ಜಾರಿಗೆ ಬರುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
LPG ಸಿಲಿಂಡರ್(LPG cylinder) ಬಳಕೆದಾರರಿಗೆ ಇದು ಮಹತ್ತರ ಸುದ್ದಿಯಾಗಿದೆ. ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿರುವ ಎಲ್ಲಾ ಜನರಿಗೂ ಜೂನ್ ಒಂದರಿಂದ ನಿಯಮಗಳಲ್ಲಿ ಬದಲಾಗುತ್ತಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನಲ್ಲಿ ಲಭ್ಯವಿರುವ ಸಬ್ಸಿಡಿ(subsidy) ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಉಜ್ವಲ ಯೋಜನೆ(ujwala scheme)ಯಡಿ ₹ 300 ಸಬ್ಸಿಡಿ ನೀಡಲಾಗುತ್ತಿದೆ. ಹಾಗೆಯೇ ಪ್ರತಿಯೊಬ್ಬರು ಕೆವೈಸಿಯನ್ನು(KYC) ಮಾಡಿಸುವುದು ಕೂಡ ಕಡ್ಡಾಯವಾಗಿದೆ.
ಚುನಾವಣೆಯ ನಂತರ ಜನರಿಗೆ ಭರ್ಜರಿ ಉಡುಗೊರೆ ನೀಡಲು ಹೊರಟಿರುವ ಸರ್ಕಾರ ₹ 903ಕ್ಕೆ ಸಿಗುವ ಗ್ಯಾಸ್ ಸಿಲಿಂಡರ್ ₹ 300ರ ರಿಯಾಯಿತಿಯ ಸಬ್ಸಿಡಿಯು ₹ 600ಕ್ಕೆ ಸಿಗಲಿದೆ ಎನ್ನಲಾಗುತ್ತಿದೆ. ಅಂದರೆ ಸಬ್ಸಿಡಿ ದರವು 300 ರಿಂದ 600ರೂಗಳಿಗೆ ಹೆಚ್ಚಳವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಕೆವೈಸಿಯನ್ನು ಮಾಡಿಸುವುದು ಅಗತ್ಯ.
ಈ ಹಿಂದೆಯೂ ಮಾರ್ಚ್ 31 ರ ಮೊದಲು ಇ-ಕೆವೈಸಿ ಮಾಡಬೇಕೆಂದು ಸರ್ಕಾರ ಹೇಳಿತ್ತು, ಆದರೆ ನಂತರ ಕೆಲವು ತಿಂಗಳಗಳ ವರೆಗೆ ಅವಕಾಶವನ್ನು ನೀಡಲಾಗಿದೆ. ಅದರಿಂದ ಎಲ್ಲರೂ ತಪ್ಪದೇ ಕೆವೈಸಿಯನ್ನು ಮಾಡಿಸಿಕೊಳ್ಳಿ. ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಕೂಡ ಹೆಚ್ಚಾಗುತ್ತವೆ ಅಥವಾ ಕಡಿಮೆಯಾಗುತ್ತವೆ. ₹ 10 ರಿಂದ ₹ 50 ರವರೆಗಿನ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಈ ಬಾರಿಯೂ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ LPG ಗ್ಯಾಸ್ ಸಿಲಿಂಡರ್ ರೂ 903, ಮುಂಬೈ : 902 ಮತ್ತು ಗುರ್ಗಾಂವ್ 911, ಬೆಂಗಳೂರು: 905, ಚಂಡೀಗಢ : 912, ಜೈಪುರ : 906, ಪಾಟ್ನಾ : 1001, ಕೋಲ್ಕತ್ತಾ 929, ಚೆನ್ನೈ 918, ನೋಯ್ಡಾ 929, ಹೈದರಾಬಾದ್ 955, ಲಕ್ನೋ 940.
ನಿಮ್ಮ ಗ್ಯಾಸ್ ಸಿಲಿಂಡರಿಗೆ ಇ-ಕೆವೈಸಿ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಕೆ ವೈ ಸಿ ಆಗಿದೆಯೇ ಎಂದು ತಿಳಿದುಕೊಳ್ಳಲು ಇನ್ನೊಂದು ವಿಧಾನವಿದೆ, ಇದರ ಸಂಪೂರ್ಣ ವಿವರ ಕೆಳಗಿನಂತಿದೆ.
ಕೆವೈಸಿ ಸ್ಟೇಟಸ್ ಚೆಕ್(status check) ಮಾಡುವ ವಿಧಾನ :
ಹಂತ 1: ಮೊದಲಿಗೆ, www.ಮೈಲ್ಪಗ್.in ಇನ್ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.
ಹಂತ 2: ನಂತರ ನೀವು ಬಳಸುತ್ತಿರುವ ಸಿಲಿಂಡರ್ ಕಂಪನಿಯ ಚಿತ್ರದ ಮೇಲೆ ಕ್ಲಿಕ್ ಮಾಡಿ
ಹಂತ 3: ನೀವೇನಾದರೂ ಈ ವೆಬ್ ಸೈಟನ್ನು ಮೊದಲೇ ಬಳಸುತ್ತಿದ್ದರೆ sign in ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇಲ್ಲವಾದರೆ new user ಆಯ್ಕೆಯನ್ನು ಮಾಡಿ
ಹಂತ 4: new user ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಕಾನ್ಸ್ಯುಮರ್ ನಂಬರ್ ಹಾಗೂ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ಹಾಕಿ. ಲಾಗಿನ್ ಅನ್ನು ಆಗಲು ಪಾಸ್ವರ್ಡ್ ಅನ್ನು ರಚನೆ ಮಾಡಬೇಕಾಗಿರುತ್ತದೆ.
ಹಂತ 5: ನಂತರ ಪಾಸ್ವರ್ಡ್ ಅನ್ನು ಬಳಸಿಕೊಂಡು ಲಾಗಿನ್ ಆಗಬೇಕು. ಮುಂದುವರೆದು Aadhar linked with LPG distributor : yes ಎಂದಿದ್ದರೆ ಕೆವೈಸಿ ಆಗಿದೆ ಎಂದರ್ಥ No ಎಂದಿದ್ದರೆ ಕೆವೈಸಿ ಆಗಿಲ್ಲ ಎಂದರ್ಥ.
ಹೀಗೆ ನೀವು ಕೆವೈಸಿ ಆಗಿದೆಯೇ ಇಲ್ಲವೇ ಎಂದು ಚೆಕ್ ಮಾಡಿಕೊಂಡು ಮುಂದುವರೆಯಬಹುದು.
ಈ ಮಾಹಿತಿಗಳನ್ನು ಓದಿ