ಅತೀ ಕಡಿಮೆ ಬೆಲೆಗೆ ಉತ್ತಮ ಫಿಚರ್ಸ್ ಗಳ ಸ್ಯಾಮ್‌ಸಂಗ್ ಗ್ಯಾಲಕ್ಸಿಯ (samsung galaxy) ಹೊಸ M34 5G ಸ್ಮಾರ್ಟ್‌ಫೋನ್!
ಇಂದು ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳು ಲಭ್ಯವಿವೆ. ಹಾಗೆ ಇದೀಗ ಮಾರುಕಟ್ಟೆಗೆ ಉತ್ತಮ ಫೀಚರ್ ಗಳುಳ್ಳ ಹೊಸ ಸ್ಮಾರ್ಟ್ ಫೋನ್ ಗಳು ಅತಿ ಕಡಿಮೆ ಬೆಲೆಗೆ ದೊರೆಯುತ್ತವೆ. ಹಾಗೆ ನೋಡುವುದಾದರೆ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಉತ್ತಮ ಫೀಚರ್ಸ್ ಗಳ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲು ಕಾಯುತ್ತಿದ್ದಾರೆ. ಹಾಗೆ ಇದೀಗ ಮಾರುಕಟ್ಟೆಗೆ (market) ಅತ್ಯಂತ ಜನಪ್ರಿಯ ಮೊಬೈಲ್ ಕಂಪನಿಯಾದ ಸ್ಯಾಮ್ಸಂಗ್ ಗ್ಯಾಲಕ್ಸಿಯು ತನ್ನ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಬನ್ನಿ ಈ ಸ್ಮಾರ್ಟ್ ಫೋನ್ ನ ಬೆಲೆ ಎಷ್ಟು?ಹಾಗೂ ಅದರ ಪಿಚರ್ಸ್ ಗಳೇನು? ಹಾಗೂ ಆಫರ್ಸ್ ಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇ ಕಾಮರ್ಸ್ ಸೈಟ್ (e- commerce site) ನಲ್ಲಿ ಉತ್ತಮ ಆಫರ್ಸ್ (offers) :
ಸ್ಯಾಮ್ಸಂಗ್ ಗ್ಯಾಲಕ್ಸಿಯು ತನ್ನ ಹೊಸ M34 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಇ ಕಾಮರ್ಸ್ ಸೈಟ್ನಲ್ಲಿ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದೊಂದು ಗುಡ್ ನ್ಯೂಸ್ ಎನ್ನಬಹುದು. ಇ ಕಾಮರ್ಸ್ ಸೈಟ್ ನಲ್ಲಿ ಈ ಫೋನಿಗೆ ದೊಡ್ಡ ಮಟ್ಟದ ಆಫರ್ ಘೋಷಣೆಯಾಗಿದೆ.
M34 5G ಸ್ಮಾರ್ಟ್‌ಫೋನ್ ಅತೀ ಕಡಿಮೆ ಬೆಲೆಗೆ ಅಮೆಜಾನ್ ನಲ್ಲಿ (amazon) ಲಭ್ಯ :
ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್ ಫೋನ್ ಅನ್ನು ಅತೀ ಕಡಿಮೆ ಬೆಲೆಗೆ. ಅಮೆಜಾನ್‌ನಲ್ಲಿ (Amazon) 6GB RAM + 128GB ಸ್ಟೋರೇಜ್ (storage) ವೇರಿಯಂಟ್ ಫೋನ್ ಅನ್ನು 12,999 ರೂ.ಗಳಿಗೆ ಲಭ್ಯವಿದೆ. ಅಷ್ಟೇ ಅಲ್ಲದೆ ಈ ವೇರಿಯೆಂಟ್ ಮೇಲೆ ಬ್ಯಾಂಕ್ ಆಫರ್ ಅನ್ನು ಕೂಡ ನೀಡಲಾಗಿದ್ದು, 1,299 ರೂ.ಗಳ ಹೆಚ್ಚುವರಿ ತ್ವರಿತ ಬ್ಯಾಂಕ್ ರಿಯಾಯಿತಿಯೊಂದಿಗೆ ಲಭ್ಯವಿದೆ. ಹಾಗಾಗಿ 11,700 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಇಎಮ್ಐ ನ (EMI) ಮೂಲಕ ಖರೀದಿ ಮಾಡಬಹುದು :
ಸ್ಯಾಮ್ ಸಂಗ್ ಗ್ಯಾಲಕ್ಸಿ M34 5G ಸ್ಮಾರ್ಟ್ ಫೋನ್ ಅನ್ನು 16,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆ ಮಾಡಿದ ಬೆಲೆಯಿಂದ 4,000 ರೂ.ಗಳ ರಿಯಾಯಿತಿಯಲ್ಲಿ ಗ್ರಾಹಕರು ಖರೀದಿ ಮಾಡಬಹುದು. ಹಾಗೆಯೇ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ಇಎಮ್‌ಐ ಆಯ್ಕೆ ನಿಮ್ಮ ಮುಂದೆ ಇದೆ. ಪ್ರತಿ ತಿಂಗಳು 630 ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಸ್ಮಾರ್ಟ್ ಫೋನ್ ಅನ್ನು ಪಡೆಯಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಫೀಚರ್ಸ್ ಗಳು (features) :
M34 5G ಸ್ಮಾರ್ಟ್‌ಫೋನ್ ಡಿಸ್ಪ್ಲೇ (display) :
M34 5G ಸ್ಮಾರ್ಟ್‌ಫೋನ್ 6.6 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. 120Hz ಹೆಚ್ಚಿನ ರಿಫ್ರೆಶ್ ರೇಟ್ ಹಾಗೂ ಫುಲ್‌ಹೆಚ್‌ಡಿ+ ರೆಸಲ್ಯೂಶನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ 1,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ನೀಡಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ಈ ಸ್ಮಾರ್ಟ್ ಫೋನ್ ಅನ್ನು ಕವರ್ ಮಾಡಲಾಗಿದೆ.
ಪ್ರೊಸೆಸರ್ (processor) :
ಈ ಸ್ಮಾರ್ಟ್ ಫೋನ್ ಅನ್ನು ಎಕ್ಸಿನೋಸ್ 1280 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಇದು ಸ್ಯಾಮ್ ಸಂಗ್ ಗ್ಯಾಲಕ್ಸಿಯ ಒಂದು ಉತ್ತಮ ಪ್ರೊಸೆಸರ್ ಆಗಿದೆ.
ಸ್ಟೋರೇಜ್ (storage) :
8GB RAM ಮತ್ತು 128GB ಇಂಟರ್ ಸ್ಟೋರೇಜ್ ನ ಎರಡು ಆಯ್ಕೆಗಳಲ್ಲಿ ಲಭ್ಯ ಇದೆ. ಹಾಗೆಯೇ ಇದನ್ನು 12GB ವರೆಗೆ ವಿಸ್ತರಿಸಬಹುದಾಗಿದ್ದು, ಇದರಲ್ಲಿ ಆಂತರಿಕ 1TB ವರೆಗೆ ಇಂಟರ್ ಸ್ಟೋರೇಜ್ ಅನ್ನು ಹೆಚ್ಚು ಮಾಡಬಹುದಾಗಿದೆ.
ಕ್ಯಾಮೆರಾ (camera) :
ಈ ಸ್ಮಾರ್ಟ್ ಫೋನ್ ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ನೀಡಲಾಗಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಓಐಎಸ್ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಸೆಲ್ಫಿ, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಕರೆಗಾಗಿ 13 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ (battery) :
ಈ ಸ್ಮಾರ್ಟ್‌ಫೋನ್ ನಲ್ಲಿ 6,000mAh ಸಾಮರ್ಥ್ಯದ 25W ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ನೀಡಿದ್ದಾರೆ.
ಇತರ ಫಿಚರ್ಸ್ ಗಳು (other features) :
ಹಾಗೆಯೇ ಈ ಸ್ಮಾರ್ಟ್ ಫೋನ್ ನಲ್ಲಿ ವರ್ಧಿತ ಧ್ವನಿಗಾಗಿ ಡಾಲ್ಬಿ ಅಟ್ಮಾಸ್ ಆಯ್ಕೆಯನ್ನು ನೀಡಿದ್ದಾರೆ. ಹಾಗೂ 5G ಸಾಮರ್ಥ್ಯ, ವೈ ಫೈ , ಬ್ಲೂಟೂತ್ ಮತ್ತು ಜಿಪಿಎಸ್ ಅನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..