ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಿಂದ (Atal pension scheme) ಕಾರ್ಮಿಕರಿಗೆ ಪ್ರತಿ ತಿಂಗಳು 5000 ರೂ!
ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು, ಪಿಂಚಣಿಗಳು, ಸಾಲ(loan) ಸೌಲಭ್ಯಗಳು :
ಕೇಂದ್ರ ಸರ್ಕಾರದಿಂದ (Central government) ಇಂದು ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲ ಯೋಜನೆಗಳಿಂದ ಜನರಿಗೆ ತಮ್ಮ ಜೀವನ ರೂಪಿಸಿಕೊಳ್ಳಲು, ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಹಲವಾರು ರೀತಿಯ ಯೋಜನೆಗಳು, ಪಿಂಚಣಿಗಳು, ಸಾಲ ಸೌಲಭ್ಯಗಳು ಜಾರಿಯಲ್ಲಿವೆ. ಹಾಗೂ ಎಲ್ಲ ಯೋಜನೆಗಳನ್ನು ಸರ್ಕಾರವು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಿರುತ್ತದೆ. ಹಾಗೆ ಇದೀಗ ಸರ್ಕಾರದಿಂದ ಉದ್ಯೋಗ ವೃತ್ತಿಯಲ್ಲಿರುವ ವೃದ್ಯಾಪ್ಯ ಜೀವನವನ್ನು (retired life) ನಡೆಸುತ್ತಿರುವವರಿಗಾಗಿ ಒಂದು ಪಿಂಚಣಿಯನ್ನು ರೂಪಿಸಿದೆ. ಈ ಪಿಂಚಣಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗ ನಿವೃತ್ತಿಯ ನಂತರ ವೃದ್ಧಾಪ್ಯ ಜೀವನನ್ನು ನಡೆಸಲು ಅಟಲ್ ಪಿಂಚಣಿ ಯೋಜನೆ (Atal pension scheme) :
ಅಟಲ್ ಪಿಂಚಣಿ ಯೋಜನೆ (APY) ಆದಾಯ ತೆರಿಗೆ ಪಾವತಿದಾರರಲ್ಲದ 18-40 ವರ್ಷ ವಯಸ್ಸಿನ ಉಳಿತಾಯ ಖಾತೆದಾರರಿಗೆ ವೃದ್ಧಾಪ್ಯ ಆದಾಯ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಲ್ಲಿ ದೀರ್ಘಾಯುಷ್ಯದ ಅಪಾಯಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಮತ್ತು ಕಾರ್ಮಿಕರು ತಮ್ಮ ನಿವೃತ್ತಿಯ ಜೀವನನ್ನು ನಡೆಸಲು ಸಹಾಯ ಮಾಡುತ್ತದೆ. ಹಾಗೆಯೇ ಅವರು ಸರ್ಕಾರದಿಂದ ಬರುವ ಹಲವಾರು ಯೋಜನೆಗಳಿಗೆ ಹೂಡಿಕೆ ಮಾಡಲು ಕಾಯುತ್ತಿರುತ್ತಾರೆ. ಭಾರತದಲ್ಲಿ ಸಂಘಟಿತ ವಲಯದಲ್ಲಿ ಹಲವಾರು ಉದ್ಯೋಗಿಗಳು ಕೇಂದ್ರ ಸರಕಾರದ ಹಲವು ಯೋಜನೆಗಳಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ. ಅಸಂಘಟಿತ ವಲಯದ ಜನರಿಗೆ, ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕರಿಗೆ ಹೂಡಿಕೆ ಅಥವಾ ಸರ್ಕಾರದ ಈ ಯೋಜನೆಗಳ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ. ಅಂತಹ ಜನರಿಗಾಗಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅಸಂಘಟಿತ ವಲಯಕ್ಕೆ ಸೇರಿದ ಉದ್ಯೋಗಿಗಳು ಅಥವಾ ಕಾರ್ಮಿಕರಿಗೆ ವರದಾನವಾಗಿದೆ.
ಅಟಲ್ ಪಿಂಚಣಿ ಯೋಜನೆಗೆ ಅನುಸರಿಸಬೇಕಾದ ನಿಯಮಗಳು (rules) :
ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು, ಕನಿಷ್ಠ 210 ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳಿಗೆ 5,000 ರೂ.ಗಳ ಪಿಂಚಣಿ ಪಡೆಯಬಹುದು. ಈ ಯೋಜನೆಯಿಂದ ಅರ್ಹ ಅಭ್ಯರ್ಥಿಗಳು ಅವರ ಜೀವನದುದ್ದಕ್ಕೂ ಪ್ರತಿ ವರ್ಷ 60,000 ರೂ.ಗಳ ಪಿಂಚಣಿಯನ್ನು ಪಡೆಯಬಹುದು.
60 ವರ್ಷದ ನಂತರ ತಿಂಗಳಿಗೆ ಗರಿಷ್ಠ 5,000 ರೂ.ಗಳ ಪಿಂಚಣಿ ಪಡೆಯಬಹುದು. ಈ ಅಟಲ್ ಪಿಂಚಣಿ ಯೋಜನೆಯ ನಿಬಂಧನೆಗಳ ಪ್ರಕಾರ, 18 ನೇ ವಯಸ್ಸಿನಲ್ಲಿ ತಿಂಗಳಿಗೆ ಗರಿಷ್ಠ 5,000 ರೂ.ಗಳ ಪಿಂಚಣಿ ಪಡೆಯಲು ನಿರ್ಧರಿಸಿದರೆ, ಪ್ರತಿ ತಿಂಗಳಿಗೆ 210 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಹಾಗೆಯೇ ಮೂರು ತಿಂಗಳಿಗೊಮ್ಮೆ ಪಾವತಿಸಲು ಬಯಸಿದರೆ, 626 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಆರು ತಿಂಗಳವರೆಗೆ ಆಯ್ಕೆ ಮಾಡಿದರೆ, 1,239 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಅಷ್ಟೇ ಅಲ್ಲದೇ ನೀವೇನಾದರೂ ನಿವೃತ್ತಿಯ ನಂತರ ತಿಂಗಳಿಗೆ 1,000 ರೂ.ಗಳ ಪಿಂಚಣಿ ಮಾಡಲು ಬಯಸಿದರೆ, 18 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನೀವು ತಿಂಗಳಿಗೆ 42 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ, ಒಬ್ಬ ವ್ಯಕ್ತಿಯು ತಿಂಗಳಿಗೆ 1,000 ರಿಂದ 5,000 ರೂ.ಗಳ ಪಿಂಚಣಿ ಪಡೆಯಬಹುದು. ಭಾರತ ಸರ್ಕಾರವು (indian government) ಕನಿಷ್ಠ ಪಿಂಚಣಿಯ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಡಿ 1,000, 2,000, 3,000, 4,000 ಮತ್ತು 5,000 ರೂ.ಗಳ ಪಿಂಚಣಿ ಲಭ್ಯವಿದೆ. ನೀವು ಪಡೆಯುವ ಪಿಂಚಣಿ ನೀವು ಎಷ್ಟು ಹೂಡಿಕೆ ಮಾಡುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಅಟಲ್ ಪಿಂಚಣಿ ಯೋಜನೆಗೆ ಇರಬೇಕಾದ ಅರ್ಹತೆಗಳು (qualifications) :
APY ಗೆ ಸೇರುವ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು.
ನಿವೃತ್ತಿ ಮತ್ತು ಪಿಂಚಣಿ ಪ್ರಾರಂಭದ ವಯಸ್ಸು 60 ವರ್ಷಗಳು.
APY ಗೆ ಚಂದಾದಾರರ ಕೊಡುಗೆಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಚಂದಾದಾರರ ಉಳಿತಾಯ ಬ್ಯಾಂಕ್ ಖಾತೆಯಿಂದ ನಿಗದಿತ ಕೊಡುಗೆ ಮೊತ್ತದ ‘ಸ್ವಯಂ- ಡೆಬಿಟ್’ ಸೌಲಭ್ಯದ ಮೂಲಕ ಮಾಡಲಾಗುತ್ತದೆ.
ಚಂದಾದಾರರು APY ಗೆ ಸೇರುವ ವಯಸ್ಸಿನಿಂದ 60 ವರ್ಷ ವಯಸ್ಸಿನವರೆಗೆ ನಿಗದಿತ ಕೊಡುಗೆ ಮೊತ್ತವನ್ನು ನೀಡಬೇಕಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.