ಕೇವಲ ಮನೆಗಳಿಗೆ ಉಚಿತವಾಗಿದ್ದ ವಿದ್ಯುತ್, ಇದೀಗ ರಾಜ್ಯದ ಸರ್ಕಾರಿ ಶಾಲೆಗಳಿಗೂ (government school) ಉಚಿತವಾಗಿ ಸಿಗಲಿದೆ.
ಕಾಂಗ್ರೆಸ್ ಸರ್ಕಾರದ (Congress government) ಐದು ಗ್ಯಾರಂಟಿ ಯೋಜನೆಗಲ್ಲಿ (five guarantee scheme) ಒಂದಾದ ಗೃಹಜ್ಯೋತಿ (gruha jyothi) ಯೋಜನೆ ಅಡಿಯಲ್ಲಿ ಮನೆಗಳಿಗೆ ಉಚಿತ ವಿದ್ಯುತ್(free current) ಸರಬರಾಜು ಮಾಡಲಾಗುತ್ತಿದೆ. ಇದರಿಂದ ಹಲವಾರು ಮನೆಗಳಿಗೆ ಉಪಯೋಗವಾಗಿದೆ. ಸರಕಾರ ಇದೀಗ ಹೊಸ ಆದೇಶವೊಂದನ್ನು ಹೊರಡಿಸಿದೆ, ಇದರ ಅಡಿಯಲ್ಲಿ ಕೇವಲ ಮನೆಗಳಿಗೆ ಸೀಮಿತವಾಗಿದ್ದ ಉಚಿತ ವಿದ್ಯುತ್ (Free electric) ಸರಬರಾಜು ಇದೀಗ ಸರಕಾರಿ ಶಾಲೆಗಳಿಗೂ ಕೂಡ ಅನ್ವಯಿಸುತ್ತದೆ. ಈ ಒಂದು ಆದೇಶದಿಂದ ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಪಯೋಗವಾಗಲಿದ್ದು, ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲು ಎಷ್ಟು ವೆಚ್ಚ ಖರ್ಚಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ :
ಹೌದು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಉಚಿತ ವಿದ್ಯುತ್ ಸರಬರಾಜು ಮಾಡುವಂತೆ ಸರ್ಕಾರ ಆದೇಶವನ್ನು (government order) ಹೊರಡಿಸಿದೆ. ಕೇವಲ ಶಾಲೆಗಳಿಗೆ ಸೀಮಿತವಾಗಿರದೆ ಪದವಿ(degree) ಪೂರ್ವ ಕಾಲೇಜುಗಳಿಗೂ ಕೂಡ ಈ ಸೌಲಭ್ಯ ದೊರೆಯಲಿದ್ದು, ಉಚಿತ ವಿದ್ಯುತ್ ಸರಬರಾಜು, ಜೊತೆಯಲ್ಲಿ ಉಚಿತ ನೀರಿನ(free water) ಸೌಲಭ್ಯವನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.
ಉಲ್ಲೇಖಿತ (1)ರ ಸರ್ಕಾರದ ಪತ್ರದಲ್ಲಿ ಇರುವಂತೆ 2024 -25 ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಆಯವ್ಯಯ ಘೋಷಿತ ಕಂಡಿಕೆ 102 ರಲ್ಲಿ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಿಗೂ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಸರಬರಾಜು ಮತ್ತು ಉಚಿತ ನೀರಿನ ಸರಬರಾಜನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.
ಮುಂದುವರೆದು ಉಲ್ಲೇಖಿತ (2)ರ ಸರ್ಕಾರಿ ಯೋಜನೆ / ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2024 ರವರಿಗೆ ಕೇವಲ ಮೂರು ತಿಂಗಳ ಅನುದಾನವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. 2024-25 ನೇ ಸಾಲಿನ ರಾಜ್ಯ ವಲಯದ ವೆಚ್ಚಗಳಿಗೆ ಏಪ್ರಿಲ್ 2024 ರಿಂದ ಜೂನ್, B 2202-01-053-0-02-058 ರಲ್ಲಿ ಸರ್ಕಾರಿ ಶಾಲೆಗಳ (government school) ವಿದ್ಯುತ್ ಮತ್ತು ನೀರಿನ ವೆಚ್ಚವನ್ನು ಭರಿಸಲು ರೂ.1000.00 ಲಕ್ಷಗಳ ಅನುದಾನ ನಿಗದಿಗೊಳಿಸಲಾಗಿದೆ. ಪ್ರಸ್ತುತ ರೂ. 250.00 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ.
ಎಷ್ಟು ಶಾಲೆಗಳಿಗೆ ಅನುಕೂಲವಾಗಲಿದೆ:
ಸರ್ಕಾರದ ಈ ಆದೇಶದ ಅಡಿಯಲ್ಲಿ ರಾಜ್ಯದ 46,829 ಸರ್ಕಾರಿ ಶಾಲೆಗಳು ಮತ್ತು 1234 ಪದವಿ ಪೂರ್ವ ಕಾಲೇಜುಗಳಿಗೆ ಅನುಕೂಲವಾಗುತ್ತದೆ.
ಎಷ್ಟು ವೆಚ್ಚ ಖರ್ಚಾಗಬಹುದು :
ಈ ಉತ್ತಮ ಉದ್ದೇಶಕ್ಕಾಗಿ ಒಟ್ಟು 25 ಕೋಟಿ ರೂ. ವೆಚ್ಚವಾಗಲಿದೆ ಎಂದು ಘೋಷಿಸಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.