ಅತೀ ಕಡಿಮೆ ಬೆಲೆಯೊಂದಿಗೆ, ಉತ್ತಮ ಮೈಲೇಜ್ (mileage) ನೀಡುತ್ತವೆ ಈ 5 ಬೈಕ್ ಗಳು.
ಇಂದು ದೇಶದಲ್ಲಿ ನಾನಾ ಬಗೆಯ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ ನ ವಾಹನಗಳನ್ನು ಬಿಡುಗಡೆ ಮಾಡಲು ಪೈಪೋಟಿ (competition) ನಡೆಯುತ್ತಲೇ ಇರುತ್ತದೆ. ಹಲವರು ಹೆಚ್ಚು ಸಿಸಿ ಉಳ್ಳ ಉತ್ತಮ ಮೈಲೇಜ್(best mileage) ನೀಡುವ ಬೈಕ್ ಗಳನ್ನು ಕೊಂಡುಕೊಳ್ಳುತ್ತಾರೆ. ಹಾಗೆಯೇ ಇನ್ನೂ ಕೆಲವರು ಕೈಗೆಟಕುವ ಬೆಲೆಗೆ ಉತ್ತಮ ಮೈಲೇಜ್ ನೀಡುವ ಬೈಕ್ ಗಳನ್ನು ಕೊಂಡು ಕೊಳ್ಳಲು ಬಯಸುತ್ತಾರೆ. ಯಾಕೆಂದರೆ, ಇಂದು 1 ಲೀಟರ್ ಪೆಟ್ರೋಲ್ ಗೆ ಬೆಲೆ (1leter petrol Price) 100 ಕ್ಕಿಂತಲೂ ಹೆಚ್ಚಿದೆ. ಹಾಗೆಯೇ ತಮ್ಮ ದೈನಂದಿನ ಬಳಕೆಗೆ ಹೆಚ್ಚು ಮೈಲೇಜ್ ನ ಬೈಕ್ ನ ಅವಶ್ಯಕತೆ ಇರುತ್ತದೆ. ಹಾಗೆಯೇ ಇದೀಗ 80 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ 5 ಬೈಕ್ ಗಳು ಲಭ್ಯವಿವೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೋಂಡಾ ಲಿವೋ (Honda Livo) :
ಹೋಂಡಾ ಲಿವೋ ಬೈಕ್(bike) ಉತ್ತಮ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. 109.51ಸಿಸಿ ಏರ್ ಕೋಲ್ಡ್ ಫ್ಯುಯೆಲ್ ಇಂಜೆಕ್ಟ್ದ್ ಪೆಟ್ರೋಲ್ ಎಂಜಿನ್ (Air cold fuel inject petrol engine) ಅನ್ನು ಹೊಂದಿದೆ. 8.79 ಪಿಎಸ್ ಗರಿಷ್ಠ ಪವರ್ ಮತ್ತು 9.30 ಎನ್ಎಂ ಪೀಕ್ ಟಾರ್ಕ್ (NM peak tark) ಉತ್ಪಾದಿಸುತ್ತದೆ. ಜೊತೆಗೆ 4-ಸ್ಪೀಡ್ ಗೇರ್ ಬಾಕ್ಸ್ನ್ನು ಈ ಬೈಕ್ ಒಳಗೊಂಡಿದೆ.
ಹೋಂಡಾ ಲಿವೋ (Honda Livo) ಬೆಲೆ (price) :
ಇದು ಗ್ರಾಹಕರಿಗೆ ರೂ.78,500 ದಿಂದ ರೂ. 82,500 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
ಈ ಹೋಂಡಾ ಲಿವೋ ಬೈಕ್ ನ ವೈಶಿಷ್ಟ್ಯತೆಗಳು (features) :
ಈ ಬೈಕ್ 60 ಕೆಎಂಪಿಎಲ್ವರೆಗೆ ಮೈಲೇಜ್ ನೀಡುತ್ತದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಸ್ವಿಚ್, ಸುರಕ್ಷತೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್ ಹಾಗೂ 113 ಕೆಜಿ ತೂಕವಿರುವ ಈ ಮೋಟಾರ್ಸೈಕಲ್, 9 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ 100 (Bajaj Platina 100) :
70 ಕೆಎಂಪಿಎಲ್ವರೆಗೆ ಮೈಲೇಜ್ ನೀಡುವ ಈ ಬೈಕ್ 102-ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ (singal cylinder air cold petrol engine) ಅನ್ನು ಒಳಗೊಂಡಿದೆ. 7.9 ಪಿಎಸ್ ಗರಿಷ್ಠ ಪವರ್ ಹಾಗೂ 8.3 ಎನ್ಎಂ ಪೀಕ್ ಟಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತದೆ. 4-ಸ್ಪೀಡ್ ಗೇರ್ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
ಈ ಪ್ಲಾಟಿನಾ 100 ಮೋಟಾರ್ಸೈಕಲ್ ಹಲವು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಹ್ಯಾಲೊಜೆನ್ ಹೆಡ್ಲೈಟ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಗಳು, ಸಿಂಗಲ್ ಪೀಸ್ ಸೀಟ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ಗಳು ಹಾಗೂ CBS (combined breaking system) ಅನ್ನು ಒಳಗೊಂಡಿದೆ.
ಬಜಾಜ್ ಪ್ಲಾಟಿನಾ 100 ಬೆಲೆ (price) :
ಈ ಗ್ರಾಹಕರಿಗೆ ಬೈಕ್ ರೂ.67,808 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) :
ಹೀರೊ ಸ್ಪ್ಲೆಂಡರ್ ಪ್ಲಸ್ 97.2 ಸಿಸಿ ಎಂಜಿನ್ ಪಡೆದಿದ್ದು, 8.02 ಪಿಎಸ್ ಗರಿಷ್ಠ ಪವರ್ ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 80.6 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಇದು ಕೂಡ ಉತ್ತಮ ಬೆಲೆಯ ಬೈಕ್ ಆಗಿದೆ.
ಮೋಟಾರ್ಸೈಕಲ್ ಗ್ರಾಹಕರಿಗೆ ರೂ.75,441 ದಿಂದ ರೂ.76,786 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.
ಟಿವಿಎಸ್ ಸ್ಪೋರ್ಟ್ (TVS Sport) :
ಅಗ್ಗದ ಬೆಲೆಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿರುವ ಈ ಬೈಕ್ 109.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 8.19 ಪಿಎಸ್ ಪವರ್ ಹಾಗೂ 8.7 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಹಾಗೆಯೇ 70 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಟಿವಿಎಸ್ ಸ್ಪೋರ್ಟ್ ನ ಬೆಲೆ (price) :
ರೂ.59,881 ದಿಂದ ರೂ.71,223 ಎಕ್ಸ್ ಶೋರೂಂ ದರದಲ್ಲಿ ದೊರೆಯುವ ಉತ್ತಮ ಬೈಕ್ ಇದಾಗಿದೆ.
ಹೋಂಡಾ ಶೈನ್ 100 (Honda Shine 100) :
98.98 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಒಳಗೊಂಡಿದ್ದು, 55 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಅತೀ ಕಡಿಮೆ ಬೆಲೆಯ ಉತ್ತಮ ಮೈಲೇಜ್ ನೀಡುವ ಬೈಕ್ ಗಳಲ್ಲಿ ಇದು ಕೂಡ ಒಂದು.
ಹೋಂಡಾ ಶೈನ್ 100 ಬೆಲೆ (price) :
ಈ ಮೋಟಾರ್ಸೈಕಲ್ ರೂ.64,900 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.