ಗೃಹಜ್ಯೋತಿ ಸ್ಕೀಮ್ ನಲ್ಲಿ (Gruhajyothi scheme) ಕರೆಂಟ್ ಬಿಲ್ (current bill) ನಿಂದ ಆಧಾರ ಕಾರ್ಡ್ (Adhar card link) ಲಿಂಕ್ ಮಾಡುವ ವಿಧಾನ :
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress government five guarantee schemes) ಒಂದಾದ ಗೃಹಜ್ಯೋತಿ ಯೋಜನೆಯ ಲಾಭವನ್ನು ಈಗಾಗಲೇ ಸಾಕಷ್ಟು ಜನರು ಪಡೆದುಕೊಂಡಿದ್ದಾರೆ. ಹಾಗೆ ಗೃಹಜ್ಯೋತಿ ಯೋಜನೆಯಿಂದ ಬಹಳಷ್ಟು ಬಡ ಕುಟುಂಬಗಳಿಗೆ ಒಳ್ಳೆಯದಾಗಿದ್ದು, ಅವರಿಗೆ ಆರ್ಥಿಕವಾಗಿ ನೆರವಾಗಲು ಈ ಯೋಜನೆ ಸಹಾಯವಾಗಿದೆ. ಯಾವ ಕುಟುಂಬಗಳು 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುತ್ತಾರೋ ಅವರು ಯಾವುದೇ ಹಣ ಕಟ್ಟುವಂತಿಲ್ಲ, ಆದರೆ ಈ ಯೋಜನೆಯ ಲಾಭ ಪಡೆಯುತ್ತಿರುವ ಎಲ್ಲಾ ಗ್ರಾಹಕರು ಆಧಾರ್ ಕಾರ್ಡ್ ಲಿಂಕ್ (Adhar card link) ಮಾಡಬೇಕು. ಆದರೆ ಒಂದೇ ಆಧಾರ್ ಕಾರ್ಡ್ ನಂಬರ್ ಅನ್ನು ಎರೆಡು ಸಲ ಬಳಸಲು ಕಷ್ಟ ಆದ್ದರಿಂದ ಆಧಾರ್ ಡೀಲಿಂಕ್ ಮಾಡಬೇಕಾಗುತ್ತದೆ. ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ಬೆಸ್ಕಾಂ ಖಾತೆಗೆ (Bescom account) ಆಧಾರ್ ನಂಬರ್ (Adhar Number) ಅನ್ನು ಲಿಂಕ್ ಮಾಡಬೇಕು. ಆದರೆ ಸ್ವಂತ ಮನೆಗಳಲ್ಲಿ ಇರುವವರು ಒಮ್ಮೆ ಆಧಾರ್ ಲಿಂಕ್ ಮಾಡಿದರೆ ಮತ್ತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಇನ್ನೂ ಬಾಡಿಗೆ ಮನೆಯಲ್ಲಿ ಇರುವವರು ತಮಗೆ ಬರುವ ವಿದ್ಯುತ್ ಬಿಲ್ ಗಳಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಿಸಿರುತ್ತಾರೆ. ಕೆಲವು ಸಂದರ್ಭಗಳು ಸನ್ನಿವೇಶಗಳಿಗೆ ಒಳಗಾಗಿ ಈಗಾಗಲೇ ಇರುವ ಬಾಡಿಗೆ ಮನೆಯನ್ನು ಬಿಟ್ಟು ಬೇರೆ ಬಾಡಿಗೆ ಮನೆಗೆ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಈ ಹಿಂದೆ ಅವರು ವಾಸವಿದ್ದ ಬಾಡಿಗೆ ಮನೆಯ ವಿದ್ಯುತ್ ಬಿಲ್ ಗೆ ಆಧಾರ್ ಜೋಡಣೆ ಮಾಡಿರುವುದರಿಂದ ಹೊಸ ಬಾಡಿಗೆ ಮನೆಯ ವಿದ್ಯುತ್ ಬಿಲ್ ಗಳಿಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಸಾಕಷ್ಟು ಬಾಡಿಗೆದಾರರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಬಾಡಿಗೆದಾರರ ಈ ಕಷ್ಟವನ್ನು ನೋಡಲಾಗದೆ ವಿದ್ಯುತ್ ಬಿಲ್ ನಿಂದ ಆಧಾರ್ ಡೀಲಿಂಕ್ ಮಾಡಲು ಸರ್ಕಾರ ಮತ್ತು ಎಸ್ಕಾಂ ಅವಕಾಶ ಮಾಡಿಕೊಟ್ಟಿದೆ. ಆಫ್ ಲೈನ್ (offline) ಮತ್ತು ಆನ್ ಲೈನ್ (online) ಎರಡು ರೀತಿಯಾಗಿಯೂ ಕೂಡ ಆಧಾರ್ ಡೀಲಿಂಕ್ ಮಾಡಬಹುದು.
ಗೃಹಜ್ಯೋತಿ ಯೋಜನೆಯಿಂದ ಆಫ್ ಲೈನ್ ಡೀಲಿಂಕ್ (Delink) ಮಾಡುವುದು ಹೇಗೆ?:
ಆಫ್ ಲೈನ್ ನಲ್ಲಿ ಗ್ರಾಹಕರು ವಿದ್ಯುತ್ ಬಿಲ್ ಗೆ ಲಿಂಕ್ ಮಾಡಲಾದ ಆಧಾರ್ ಕಾರ್ಡ್ ನಂಬರ್ ಅನ್ನು ಆಫ್ ಲೈನ್ ಮುಖಾಂತರವೂ ಕೂಡ ಡೀಲಿಂಕ್ ಮಾಡಬಹುದು. ನಿಮ್ಮ ಮನೆಗೆ ಹತ್ತಿರವಾದ ಎಸ್ಕಾಂ (Escom) ಕಚೇರಿಗೆ ಹೋಗುವ ಮೂಲಕ ಆಧಾರ್ ಕಾರ್ಡ್ ಡೀಲಿಂಕ್ ಮಾಡಿಸಬಹುದು.
ಆಫ್ ಲೈನ್ ಡೀಲಿಂಕ್ ಮಾಡುವಾಗ ಬೇಕಾಗುವ ಅಗತ್ಯ ದಾಖಲೆಗಳು (documents) :
ಮನೆಯ ವಿದ್ಯುತ್ ಬಿಲ್
ಲಿಂಕ್ ಆಗಿರುವ ಆಧಾರ್ ಕಾರ್ಡ್
ನಿಮ್ಮ ಭಾವಚಿತ್ರ
ಹಾಗೂ ಗೃಹಜ್ಯೋತಿ ಯೋಜನೆಗೆ ಅಜ್ಜಿ ಸಲ್ಲಿಸಲಾಗಿದ್ದ ಅಪ್ಲಿಕೇಶನ್ ನಂಬರ್ ಹಾಗೂ ಮೊಬೈಲ್ ನಂಬರ್ ಗಳನ್ನು ಎಸ್ಕಾಂ ಕಛೇರಿಗೆ ಬಾಡಿಗೆದಾರರು ನೀಡಬೇಕು.
ಗೃಹಜ್ಯೋತಿ ಯೋಜನೆಯಿಂದ ಆನ್ ಲೈನ್(online) ಡೀಲಿಂಕ್ ಮಾಡುವುದು ಹೇಗೆ?
ಸದ್ಯಕ್ಕೆ ಆಫ್ ಲೈನ್ ಮುಖಾಂತರ ಡೀಲಿಂಕ್ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಶೀಘ್ರದಲ್ಲಿ ಆನ್ ಲೈನ್ ಮುಖಾಂತರವೂ ಡೀಲಿಂಕ್ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಆಗ ಗ್ರಾಹಕರು ಸೇವಾ ಸಿಂಧು ವೆಬ್ ಸೈಟ್ ಗೆ ಹೋಗಿ ಆದರ್ ಡೀಲಿಂಕ್ ಮಾಡಬಹುದು.
ಆನ್ ಲೈನ್ ಡೀಲಿಂಕ್ ಮಾಡಲು ಬಳಸುವ ಪೋರ್ಟಲ್ ಲಿಂಕ್ : sevasindhugs1.karnataka.gov.In/gruhajyothi ಈ ಲಿಂಕ್ ಮುಖಾಂತರ ಆನ್ ಲೈನ್ ನಲ್ಲಿ ಡೀಲಿಂಕ್ ಮಾಡಬಹುದು.
ಮೊದಲಿಗೆ ಲಿಂಕ್ ಓಪನ್ ಮಾಡಿ ಮುಖಪುಟದಲ್ಲಿ ಗೃಹ ಜ್ಯೋತಿ ಅರ್ಜಿ (Gruha jyothi application) ರದ್ದುಗೊಳಿಸಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡುವ ಮುಖಾಂತರ ರದ್ದುಗೊಳಿಸಲು ಇರುವ ಕಾರಣ ಹಾಗೂ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಸ್ಕ್ಯಾನ್ಡ್ ಕಾಪಿ ಅಥವಾ ಫೋಟೋ ಕಾಪಿಯನ್ನು ಅಪ್ಲೋಡ್ ಮಾಡಿ ಸಲ್ಲಿಸಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.