ಜೂನ್ 6 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಒನ್ ಪ್ಲಸ್ (one plus) ನ ಹೊಸ ಸ್ಮಾರ್ಟ್ ಫೋನ್.
ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಹೊಂದಿದ ಸ್ಮಾರ್ಟ್ ಫೋನ್ ಗಳಲ್ಲಿ ಒನ್ ಪ್ಲಸ್ ಕೂಡ ಒಂದು. ಈ ಬ್ರ್ಯಾಂಡ್ ಬಿಡುಗಡೆ ಗೊಳಿಸುವ ಸ್ಮಾರ್ಟ್ ನ ಕ್ಯಾಮರಾ ಹಾಗೂ ಅದರ ಇತರ ಫಿಚರ್ಸ್ ಗಳು ಗ್ರಾಹಕರ ಗಮನ ಸೆಳೆಯುತ್ತದೆ. ಒನ್ ಪ್ಲಸ್ ಸ್ಮಾರ್ಟ್ ಫೋನ್ ಇಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಉತ್ತಮ ಫಿಚರ್ಸ್ ಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಹಾಗೆಯೇ ಇದೀಗ ಒನ್‌ಪ್ಲಸ್ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ಒನ್‌ಪ್ಲಸ್ 12 ಗ್ಲಾಸಿಯಲ್ ವೈಟ್ ಕಲರ್ ವೇರಿಯಂಟ್ (OnePlus 12 Glacial White) ಸ್ಮಾರ್ಟ್‌ಫೋನ್ ಗ್ರಾಹಕರ ಗಮನ ಸೆಳೆದಿದ್ದು, ಇದರ ಪ್ರಥಮ ಸೇಲ್ ಇದೇ ಜೂನ್ 6 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಪ್ರಾರಂಭ ವಾಗಲಿದೆ ಎಂದು ತಿಳಿದು ಬಂದಿದೆ.ಈ ಒಂದು ಸ್ಮಾರ್ಟ್ ಫೋನ್ ನ ವೈಶಿಷ್ಟ್ಯತೆಗಳೇನು? ಇದರ ಬೆಲೆ ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಒನ್‌ಪ್ಲಸ್ 12 Glacial White ವೇರಿಯಂಟ್ ಫೀಚರ್ಸ್‌ಗಳ (features) ವಿವರ :
ಡಿಸ್ಪ್ಲೇ (display) :
ಒನ್‌ಪ್ಲಸ್ ಸ್ಮಾರ್ಟ್‌ಫೋನ್ 6.82 ಇಂಚಿನ QHD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1440 x 3168 ಪಿಕ್ಸೆಲ್ ಸ್ಕ್ರೀನ್ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು LTPO ProXDR 10-ಬಿಟ್ ಅನ್ನು ಒದಗಿಸಲಿದ್ದು, 120Hz ರಿಫ್ರೆಶ್ ರೇಟ್ ಬೆಂಬಲವನ್ನು ಒಳಗೊಂಡಿದೆ. ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಅನ್ನು ಕೂಡ ಹೊಂದಿದೆ.
ಪ್ರೊಸೆಸರ್ (prosessor) :
ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ಪವರ್ ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ನಲ್ಲಿ ಕಾರ್ಯ ನಿರ್ವಹಿಸಲಿದೆ.
ಸ್ಟೋರೇಜ್ (storage) :
ಈ ಫೋನ್ ಸ್ಟೋರೇಜ್ ಬಗ್ಗೆ ನೋಡುವುದಾದರೆ, 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದೆ.
ಕ್ಯಾಮೆರಾ (camera) :
ಒನ್‌ಪ್ಲಸ್‌ನ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸಲ್‌ನ 4 ನೇ ಜನರಲ್ ಹ್ಯಾಸೆಲ್ಬ್ಲಾಡ್ ಕ್ಯಾಮೆರಾ ಅಳವಡಿಸಲಾಗಿದೆ. ದ್ವಿತೀಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ, ತೃತೀಯ ಕ್ಯಾಮೆರಾ 48 ಮೆಗಾಪಿಕ್ಸಲ್ ಸೆನ್ಸಾರ್ ಹೊಂದಿದೆ. ಇಷ್ಟೇ ಅಲ್ಲದೆ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಬ್ಯಾಟರಿ (battery) :
OnePlus 12 ಸ್ಮಾರ್ಟ್‌ಫೋನ್ 5400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದು 100W ಸೂಪರ್‌ವೂಕ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇದರಿಂದ ಸ್ಮಾರ್ಟ್‌ಫೋನ್ ಅನ್ನು ಕೇವಲ 25 ನಿಮಿಷಗಳಲ್ಲಿ 0 ರಿಂದ 100% ವರೆಗೆ ತ್ವತಿತವಾಗಿ ಚಾರ್ಜ್ ಮಾಡಬಹುದಾಗಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ 50W AIRVOOC ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಸಹ ಇದೆ.
ಈ ಸ್ಮಾರ್ಟ್ ಫೋನ್ ನ ಬೆಲೆ (price) :
ಹೊಸ ಕಲರ್‌ನಲ್ಲಿ ಎಂಟ್ರಿ ಕೊಟ್ಟಿರುವ ಫೋನಿನ ಬೆಲೆಯು 64,999ರೂ. ಆಗಿದ್ದು, ಗ್ರಾಹಕರು ಒನ್‌ಪ್ಲಸ್ ವೆಬ್‌ಸೈಟ್ ಹಾಗೂ ಅಮೆಜಾನ್(Amazone) ಮೂಲಕ ಖರೀದಿಸಬಹುದುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.