ಉದ್ಯೋಗ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ದೇಶದ 43 ಬ್ಯಾಂಕ್ (Bank) ಗಳಲ್ಲಿ 8000 ಕ್ಕೂ ಹೆಚ್ಚು ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ.
ಇಂದು ಹಲವು ಜನರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಹಲವು ವಿಭಾಗಗಳಲ್ಲಿನ ಹುದ್ದೆಗಳ ಅರ್ಜಿ (application) ಆಹ್ವಾನಕ್ಕಾಗಿ ಕಾಯುತ್ತಿರುತ್ತಾರೆ. ಹಾಗೆಯೇ ಇದೀಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕು ಎಂದುಕೊಂಡಿರುವ ದೇಶದ ಲಕ್ಷಾಂತರ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದು ತಿಳಿದು ಬಂದಿದೆ. ದೇಶದ ಆರ್‌ಆರ್‌ಬಿ (RRB) ಹಾಗೂ ಪಿಎಸ್‌ಬಿ (PSB) ಸೇರಿ ಒಟ್ಟು 43 ಬ್ಯಾಂಕ್‌ಗಳಿಗೆ ಅಗತ್ಯ ಇರುವ ಸುಮಾರು 8370 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದರ ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಐಬಿಪಿಎಸ್(IBPS) ವಿವಿಧ 43 ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ :
ಇದೀಗ ಶೀಘ್ರವೇ ಅಧಿಸೂಚನೆಗೆ ಒಳಪಡುವ ಬ್ಯಾಂಕ್ ಅಥವಾ ಈ ಎಲ್ಲಾ ಹುದ್ದೆಗಳಿಗೆ ದೇಶದ ಬ್ಯಾಂಕ್‌ಗಳಲ್ಲಿನ ವಿವಿಧ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸುವ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) (Institute of baking parsonel selection) 43 ಬ್ಯಾಂಕ್‌ಗಳಲ್ಲಿನ ವಿವಿಧ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸುತ್ತದೆ. ಹಾಗೆಯೇ ಸದ್ಯದಲ್ಲೇ ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಮಾಡಿ ಅರ್ಜಿ ಆಹ್ವಾನಿಸಲಾಗುತ್ತದೆ.
ಖಾಲಿ ಇರುವ ಹುದ್ದೆಗಳು ಪಟ್ಟಿ ವಿವರ ಹೀಗಿದೆ :
ಈಗಾಗಲೇ ತಿಳಿಸಿರುವ ಮಾಹಿತಿ ಪ್ರಕಾರ ಐಬಿಬಿಎಸ್ ಆರ್‌ಆರ್‌ಬಿ, ಪಿಎಸ್‌ಬಿ ಹುದ್ದೆಗಳ ನೇಮಕಾತಿ ಪರೀಕ್ಷೆ 2024 ಉದ್ಯೋಗ ವಂಚಿತರಿಗೆ ಉದ್ಯೋಗ ಸೃಷ್ಟಿ ಮಾಡಿ ಕೊಡಲಿದೆ. ಹಾಗೆಯೇ ಇಲ್ಲಿ ಯಾವೆಲ್ಲ ಹುದ್ದೆಗಳು ಒಳಪಡುತ್ತವೆ. ಹಾಗೂ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಸಂಭಾವ್ಯ ಹುದ್ದೆಗಳು ಒಟ್ಟು – 8370
ಆಫೀಸ್ ಅಸಿಸ್ಟಂಟ್ -5650
ಆಫೀಸರ್ ಸ್ಕೇಲ್ – I2560
ಅಫೀಸರ್ ಸ್ಕೇಲ್ – II (ಕೃಷಿ ಅಧಿಕಾರಿಗಳು)122
ಮಾರ್ಕೆಟಿಂಗ್ ಆಫೀಸರ್ – 38
ಈ ಹುದ್ದೆಗಳಿಗೆ ಬೇಕಾಗುವ ವಿದ್ಯಾರ್ಹತೆಗಳು (education qualifications) :
ಆರ್‌ಆರ್‌ಬಿ(RRB) ಹಾಗೂ ಪಿಎಸ್‌ಬಿ ಹುದ್ದೆಗಳ ಪೈಕಿ ಯಾವುದೇ ಹುದ್ದೆಗೆ ಅರ್ಜಿ ಹಾಕಲು ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಪಾಸ್ ಮಾಡಿರಬೇಕು.
ಮ್ಯಾನೇಜರ್(manager) ಹಾಗೂ ಸೀನಿಯರ್ ಆಫೀಸರ್ ಲೆವೆಲ್ ಹುದ್ದೆಗಳಿಗೆ ಕಾರ್ಯಾನುಭವಗಳನ್ನು ಕೇಳಲಾಗುತ್ತದೆ.
3. ಹಾಗೆಯೇ ಯಾವ ಹುದ್ದೆಗೆ ಏನು ಕಾರ್ಯಾನುಭವ ಇರಬೇಕು ಎಂಬುದನ್ನು ಇನ್ನೂ ತಡವಾಗಿ ಅಧಿಕೃತ ನೋಟಿಫಿಕೇಶನ್ ಮೂಲಕ ತಿಳಿದು ಬರುತ್ತದೆ.
ಈ ಹುದ್ದೆಗಳಿಗೆ ಇರಬೇಕಾದ ವಯಸ್ಸಿನ ಅರ್ಹತೆಗಳು (qualifications) :
ಕ್ಲರ್ಕ್ ಹುದ್ದೆ : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
ಆಫೀಸರ್ ಸ್ಕೇಲ್ – 3 : ಕನಿಷ್ಠ 21 ರಿಂದ ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.
ಆಫೀಸರ್ ಸ್ಕೇಲ್ – 2 : ಕನಿಷ್ಠ 21 ರಿಂದ ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು.
ಆಫೀಸರ್ ಸ್ಕೇಲ್ -1 : ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಆಫೀಸ್ ಅಸಿಸ್ಟಂಟ್ : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
ಒಬಿಸಿ’ಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಆರ್‌ಆರ್‌ಬಿ ಹಾಗೂ ಪಿಎಸ್‌ಬಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನ (step for selection) :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಜತೆಗೆ, ಸಂದರ್ಶನ ಪ್ರಕ್ರಿಯೆ ಇರುತ್ತದೆ. ಈ ಹುದ್ದೆಗಳಿಗೆ ಈ ಎಲ್ಲ ಪರೀಕ್ಷೆಗಳ ಸಂಭಾವ್ಯ ವೇಳಾಪಟ್ಟಿ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ವೇಳಾಪಟ್ಟಿಯನ್ನು ಅಧಿಕೃತ ವೆಬ್ ಸೈಟ್(website) ಮೂಲಕ ತಿಳಿದು ಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.