ರೈತರಿಗೆ ಕೃಷಿ ಸೌಲಭ್ಯ ಕಲ್ಪಿಸಲು ಸರ್ಕಾರ ಹಲವು ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆ ಅಡಿಯಲ್ಲಿ, ರೈತರಿಗೆ ಸೌರ ಪಂಪ್‌ಗಳನ್ನು ಅಳವಡಿಸಲು ಸರ್ಕಾರವು ಸಹಾಯಧನವನ್ನು ನೀಡುತ್ತದೆ. ಈ ಸಹಾಯಧನವನ್ನು ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ನೀಡುತ್ತದೆ. ಪ್ರತಿ ರಾಜ್ಯದಲ್ಲಿ ಸಬ್ಸಿಡಿ ಅನುಪಾತವು ವಿಭಿನ್ನವಾಗಿರುತ್ತದೆ. ಈಗ ಇಂತಹ ಪರಿಸ್ಥಿತಿಯಲ್ಲಿ ರೈತರು ಈ ಯೋಜನೆಯ ಮೂಲಕ ಕಡಿಮೆ ಮೊತ್ತದಲ್ಲಿ ಸೋಲಾರ್ ಪಂಪ್ ಅಳವಡಿಸಿ ಬರಡು ಭೂಮಿಯಲ್ಲಿಯೂ ಅಳವಡಿಸಿ ಉತ್ತಮ ಆದಾಯ ಗಳಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಪ್ರಧಾನ ಮಂತ್ರಿ ಕುಸುಮ್ ಯೋಜನೆ:
ಕೇಂದ್ರ ಸರ್ಕಾರ ದೇಶದ ಕೃಷಿಯನ್ನು ಸುಧಾರಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ‘ಪ್ರಧಾನ ಮಂತ್ರಿ ಕುಸುಮ್ ಯೋಜನೆ ಆರಂಭಿಸಿದೆ. ಈ ಯೋಜನೆಯಡಿ ಕೃಷಿ ನೀರಾವರಿಗಾಗಿ ಸೌರಶಕ್ತಿ ಪಂಪ್ ಸೆಟ್‌ಗಳನ್ನು ನಿರ್ಮಿಸಲಾಗುವುದು. ಈ ಕುರಿತ ಪೂರ್ಣ ವಿವರ ಇಲ್ಲಿದೆ.
ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ( agriculture development ) ಕಾಣಬೇಕು. ದೇಶದಲ್ಲಿ ರೈತರ ನೀರಾವರಿ ಸೌಲಭ್ಯವನ್ನು ಹೆಚ್ಚಿಸಲು ಈ ಹೊಸ ಯೋಜನೆಯನ್ನು ತಂದಿದ್ದಾರೆ. ದೇಶದಲ್ಲಿ ಕೃಷಿಯ ಮಹತ್ವವನ್ನು ಹೆಚ್ಚಿಸಲು ಮತ್ತು ರೈತರ ಆದಾಯವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಆರಂಭಿಸಿದ್ದಾರೆ.
ಸೌರ ಪಂಪ್‌ಸೆಟ್‌ಗಾಗಿ 18 ಸಾವಿರ ರೈತರ ನೋಂದಣಿ
ರಾಜ್ಯದಾದ್ಯಂತ ಪಿಎಂ–ಕುಸುಮ್ ಬಿ‘ ಯೋಜನೆಯಡಿ ಸೌರ ಪಂಪ್‌ಸೆಟ್ ಪಡೆಯಲು ರಾಜ್ಯದಾದ್ಯಂತ 18 ಸಾವಿರ ರೈತರು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದಾರೆ. ‘ಕುಸುಮ್ –ಬಿ ಯೋಜನೆಯಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ರಾಜ್ಯ ಸರ್ಕಾರ ನೀಡುವ ಸಬ್ಸಿಡಿ ಪಾಲನ್ನು ಶೇ 30ರಿಂದ 50ಕ್ಕೆ ಹೆಚ್ಚಿಸಲಾಗಿದೆ‘ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.
‘ಕುಸುಮ್ ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್‌ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್ ಸ್ಟ್ರಕ್ಚರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಪೂರೈಸಲಾಗುತ್ತದೆ‘ ಎಂದು ತಿಳಿಸಿದರು.
ಅರ್ಜಿ ಸಲ್ಲಿಸಿದವರಿಗೆ ಮತ್ತೊಂದು ಸುವರ್ಣಾವಕಾಶ!
ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಅಪ್ಲಿಕೇಶನ್ ರಿಸಲ್ಟ್ ಇದೇ ಬರುವ ಜೂನ್ 20ರ ಒಳಗಾಗಿ ಅಗತ್ಯ ದಾಖಲೆಗಳನ್ನು ಆನ್ಲೈನ್ ಪೋರ್ಟಲ್ಲಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅರ್ಜಿದಾರರು ತಮ್ಮ ಜಮೀನಿನ ಇತ್ತೀಚಿನ ಜಮಾ ಬಂದಿ ಮತ್ತು ನಕ್ಷೆಯನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು ಮತ್ತು ಈ ದಾಖಲಾತಿ ಆರು ತಿಂಗಳ ಒಳಗಿನ ದಾಖಲಾತಿ ಆಗಿರಬೇಕು. ಎಂದು ಉಪ ನಿರ್ದೇಶಕಿ ಆರತಿ ಯಾದವ್ ತಿಳಿಸಿದ್ದಾರೆ.
ಎಷ್ಟು ಸಹಾಯಧನ ಸಿಗಲಿದೆ:
ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರ ನೀರಾವರಿಗಾಗಿ ಸೌರ ಚಾಲಿತ ಪಂಪ್ ಸೆಟ್ಗಳನ್ನು ಒದಗಿಸುತ್ತಿದೆ ಹಾಗೆಯೇ ಈ ಯೋಜನೆಗೆ ಸಹಾಯ ಧನ ಎಷ್ಟು ಸಿಗಲಿದೆ ಮತ್ತು ಅದಕ್ಕೆ ಬೇಕಾಗುವ ದಾಖಲಾತಿಗಳ ಬಗ್ಗೆ ನೋಡೋಣ.
3 ಎಚ್.ಪಿ.ಸೋಲಾರ್ ಪಂಪ್‌ಸೆಟ್‌ಗೆ 1 ಲ.ರೂ., 5 ಎಚ್‌ಪಿ ಹಾಗೂ ಹೆಚ್ಚಿನ ಸಾಮರ್ಥ್ಯದ ಪಂಪ್ ಸೆಟ್‌ಗಳಿಗೆ 1.50 ಲಕ್ಷ ರೂ. ಸಹಾಯಧನ ಸಿಗಲಿದೆ.
3 ಎಚ್‌ಪಿಯ ಸೋಲಾರ್ ಪಂಪ್ ಸೆಟ್‌ಗಳಿಗೆ ಘಟಕ ವೆಚ್ಚ 1.98 ಲಕ್ಷ ರೂ.ಗೆ ಶೇ.50ರಂತೆ 0.99 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ.
5 ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಪಂಪ್‌ಸೆಟ್‌ಗಳಿಗೆ 3 ಲಕ್ಷ ರೂ.ಗಳ ಶೇ.50 ರಂತೆ 1.50 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ. ಸೋಲಾರ್ ಪಂಪ್ ಸೆಟ್‌ಗಳಿಗೆ ವಿಮೆ ಮಾಡಿಸುವುದು ಕಂಪೆನಿಯ ಜವಾಬ್ದಾರಿಯಾಗಿದ್ದು ಅವರಿಂದ ಸೂಕ್ತ ದಾಖಲೆ ಪಡೆಯಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು :
ಪಹಣಿ
ಆಧಾರ್ ಕಾರ್ಡ್
ಬೆಳೆ ದೃಢೀಕರಣ ಪತ್ರ
ಬ್ಯಾಂಕ್ ಪಾಸ್ ಬುಕ್
ಜಾತಿ-ಆದಾಯ ಪತ್ರ
20 ರೂ.ನ ಬಾಂಡ್ ಪೇಪರ್
ಅರ್ಜಿದಾರರ ಫೋಟೋ
ಎಫ್‌ಐಡಿ ಸಂಖ್ಯೆ
ಅರ್ಜಿ ಎಲ್ಲಿ ಸಲ್ಲಿಸಬೇಕು?
ಈ ಯೋಜನೆಗೆ ಕೆಳಗೆ ಕೊಡಲಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
https://souramitra.com/solar/beneficiary/register/Kusum-Yojana-Component-B
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.