ಸರ್ಕಾರಿ ಶಾಲೆಗಳಲ್ಲಿ LKG, UKG ಪ್ರಾರಂಭ, ಅಕ್ಷರ ಆವಿಷ್ಕಾರ ಯೋಜನೆ

LKG and UKG started in govt schools

ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಯುಕೆಜಿ (UKG) ಎಲ್ ಕೆಜಿ (LKG) ತರಗತಿಗಳು ಆರಂಭ. ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ (akshara avishkara scheme)119 ಸರ್ಕಾರಿ ಶಾಲೆಗಳಲ್ಲಿ(government schools) ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳು

ನಮ್ಮ ಭಾರತ ದೇಶದಲ್ಲಿ ಕೇವಲ ವಿಜ್ಞಾನ ತಂತ್ರಜ್ಞಾನಗಳಲ್ಲದೆ  (science and technology) ಹಲವಾರು ರೀತಿಯಲ್ಲಿ, ಎಲ್ಲಾ ದೇಶಗಳಿಗಿಂತಲೂ ಮುಂಚೂಣಿಯಲ್ಲಿ ಬರಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ನಮ್ಮ ಭಾರತ ಶೈಕ್ಷಣಿಕವಾಗಿಯೂ ಕೂಡ ಮುಂದುವರೆಯಲು ಪ್ರಯತ್ನಿಸುತ್ತಿರುವ ಕಾರಣ ಶೈಕ್ಷಣಿಕ ಕ್ಷೇತ್ರದಲ್ಲಿ (educational field) ಹಲವಾರು ಯೋಜನೆಗಳು ಹಾಗೂ ಮಕ್ಕಳನ್ನು ಪ್ರೇರೇಪಿಸುವ ಕೆಲಸವನ್ನು ಮಾಡುತ್ತಿದೆ. ಅದರಲ್ಲೂ ಮನೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಲು ತಂದೆ ತಾಯಿಯರು ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಪೋಷಕರಿಗೆ ಅನುಕೂಲವಾಗುವಂತಹ ಶಾಲೆ (school) ಯಾವುದಿದೆ ಎಂದು ಹುಡುಕುತ್ತಲೇ ಇರುತ್ತಾರೆ. ಅದರಲ್ಲೂ ಎರಡೂವರೆ ವರ್ಷದಿಂದ ಆರು ವರ್ಷದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಹೆಚ್ಚಿರುತ್ತದೆ. ಆದ್ದರಿಂದ ತಮ್ಮ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲವನ್ನಿಟ್ಟುಕೊಂಡು ತಮ್ಮ ಮಕ್ಕಳನ್ನು ಎಲ್ ಕೆಜಿ, ಯುಕೆಜಿಯಂತಹ ತರಗತಿಗಳಿಗೆ (LKG, UKG classes) ಸಾವಿರಾರು ರೂಪಾಯಿ ಪ್ರವೇಶ ಶುಲ್ಕವನ್ನು ಕಟ್ಟಿ ಖಾಸಗಿ ಶಾಲೆಗಳಿಗೆ (Private school) ಸೇರಿಸುತ್ತಾರೆ. ಆದರೆ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರ ಎಲ್ಲಾ ಮಕ್ಕಳು ಕೂಡ ಎಲ್ ಕೆಜಿ, ಯುಕೆಜಿಯಂತಹ ತರಗತಿಗಳಲ್ಲಿ ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಇನ್ನು ಮುಂದೆ ಎಲ್ ಕೆಜಿ, ಯುಕೆಜಿಯಂತಹ ತರಗತಿಗಳ  ಉಚಿತ ಶಿಕ್ಷಣವನ್ನು (Free education) ಸರ್ಕಾರಿ ಶಾಲೆಗಳಲ್ಲಿ ಪಡೆಯಬಹುದು. ಯಾವ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಸೇರಿಸಬಹುದು? ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಈ ಹಿಂದೆ 4-5 ನೇ ವರ್ಷದ ಮಕ್ಕಳಿಗೆ ಎಲ್ ಕೆಜಿ (LKG), ಯುಕೆಜಿ (UKG) ತರಗತಿಗಳನ್ನು ಸರ್ಕಾರಿ ಶಾಲೆಗಳಲ್ಲಿಯೂ ಪ್ರಾರಂಭಿಸುವಂತೆ ಪೋಷಕರು ಬೇಡಿಕೆ ಇಟ್ಟಿದ್ದರು, ಆದ್ದರಿಂದ ಈ ವರ್ಷ ಅಕ್ಷರ ಆವಿಷ್ಕಾರ(Akshara Aavishkhara scheme)ದ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ (government schools)  ‘ಪೂರ್ವ ಪ್ರಾಥಮಿಕ’ ಎಲ್ ಕೆಜಿ (LKG), ಯುಕೆಜಿಯಂತಹ (UKG) ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. 2024-2025 ನೇ ಸಾಲಿನಿಂದ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಶೈಕ್ಷಣಿಕ ವಲಯದಲ್ಲಿ ಮೇಲುಗೈ ಸಾಧಿಸಲು ಪ್ರಾಥಮಿಕ ಹಂತದಲ್ಲಿ ಅರ್ಹ ಸರ್ಕಾರಿ ಶಾಲೆಗಳಲ್ಲಿ “ಪೂರ್ವ ಪ್ರಾಥಮಿಕವಾಗಿ’’ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರಾದ ಬಿ.ಉಮಾದೇವಿ  ತಿಳಿಸಿದ್ದಾರೆ.

ಈ ಯೋಜನೆಯಡಿಯಲ್ಲಿ ಬರುವ ಸೌಲಭ್ಯಗಳು (facilities) :

ಖಾಸಗಿ ಶಾಲೆಯಷ್ಟೇ ಅಲ್ಲದೆ ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಉತ್ತಮ ಸೌಲಭ್ಯಗಳನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತಿದೆ, ಅದರಲ್ಲೂ ಎಲ್ ಕೆಜಿ, ಯುಕೆಜಿ ಗೆ ಸೇರುವ ವಿದ್ಯಾರ್ಥಿಗಳು ಮಕ್ಕಳಾಗಿರುವ ಕಾರಣ ಸುಸಜ್ಜಿತ ಕೊಠಡಿ ವ್ಯವಸ್ಥೆ ಸೇರಿದಂತೆ ಮಕ್ಕಳನ್ನು  ಆಕರ್ಷಿಸಲು ಕಾರ್ಟೂನ್ (cartoon) ಪಾತ್ರಗಳ  ಚಿತ್ರಗಳು, ಹಾಗೂ ಹಲವಾರು ರೀತಿಯ ಬಣ್ಣಗಳು, ಪ್ರಾಣಿಗಳು, ತರಕಾರಿ, ಹಣ್ಣುಗಳ ಪ್ಲಾಸ್ಟಿಕ್ ಆಟಿಕೆಗಳು ಸೇರಿದಂತೆ ಪೂರ್ವ ಸಂಖ್ಯಾಜ್ಞಾನ ಆಟಿಕೆಗಳು, ಬಿಲ್ಡಿಂಗ್ ಬ್ಲಾಕ್ಸ್, ಪಜಲ್ಸ್, ಬುಕ್ಸ್ ಮತ್ತು ಹೊರಾಂಗಣ ಆಟದ ಸಾಮಗ್ರಿಗಳನ್ನು ಹಾಗೂ ಇನ್ನು ಹಲವು ಆಕರ್ಷಣೀಯ  ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಎರಡೂವರೆ ವರ್ಷದಿಂದ ಆರು ವರ್ಷದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಹೆಚ್ಚಿರುವ ಕಾರಣ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದಂತಹ ಯುಕೆಜಿ (UKG)ಎಲ್ ಕೆಜಿಯಂತಹ (LKG)ತರಗತಿಗಳನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಕೂಡ ಈ ತರಗತಿಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂಬ ಆಶಯದೊಂದಿಗೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆದ್ದರಿಂದ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯು ಮಹತ್ತರ ದಾಪುಗಾಲನ್ನು ‘ಅಕ್ಷರ ಆವಿಷ್ಕಾರ’ ಯೋಜನೆಯತ್ತ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 119 ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ.

ಹೆಚ್ಚು ಶುಲ್ಕ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲು ಶುಲ್ಕ ರಹಿತ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ (government schools) ಗುಣಮಟ್ಟದ ಶಿಕ್ಷಣವನ್ನು (quality education) ಪಡೆಯುವುದರ ಜೊತೆಗೆ ಯೋಜನೆಯ ಸದುಪಯೋಗವನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಶಿಕ್ಷಣ ಇಲಾಖೆಯ (educational department) ಮಹತ್ವದ ಯೋಜನೆಯಾದ ಅಕ್ಷರ ಆವಿಷ್ಕಾರದ ಯೋಜನೆಯ ಕುರಿತಾಗಿ ಪೋಷಕರು ಹೆಚ್ಚು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!