Flipkart sale: ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಮೇಲೆ ಭರ್ಜರಿ ರಿಯಾಯಿತಿ !

mobiles bonanza

ಫ್ಲಿಫ್ ಕಾರ್ಟ್ ನಲ್ಲಿ ಮೆಗಾ ಜೂನ್ ಬೊನಾಂಜಾ ಸೇಲ್ (Flipkart Mega June Bonanza sale) ಪ್ರಯುಕ್ತ ದೊರೆಯಲಿವೆ 10000 ರೂಗಳ ಸ್ಮಾರ್ಟ್ ಫೋನ್ ಗಳು!

ಇಂದು ಎಲ್ಲ ಡಿಜಿಟಲ್ (digital) ಮಯವಾಗಿದೆ. ಮನೆಯಲ್ಲಿಯೇ ಕೂತು ಎಲ್ಲ ವಸ್ತುಗಳನ್ನು ಕೊಂಡು ಕೊಳ್ಳುತ್ತೇವೆ. ಅದಕ್ಕಂತಲೇ ಹಲವಾರು ಇ ಕಾಮರ್ಸ್ ವೆಬ್ ಸೈಟ್ (e commerce website) ಗಳು ಇದ್ದಾವೆ. ಇಂತಹ ಹಲವಾರು ವೆಬ್ ಸೈಟ್ ಗಳಲ್ಲಿ ಫ್ಲಿಫ್ ಕಾರ್ಟ್ ಕೂಡ ಒಂದು. ಫ್ಲಿಫ್ ಕಾರ್ಟ್ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದು, ಅನೇಕ ಗ್ರಾಹಕರನ್ನು ಒಳಗೊಂಡಿದೆ. ಹಾಗೆಯೇ ಸೀಸನ್ ಗೆ ತಕ್ಕಂತೆ ಫ್ಲಿಫ್ ಕಾರ್ಟ್ ಹಲವಾರು ಸೇಲ್, ಆಫರ್ಸ್ , ಕೊಡುಗೆಗಳು, ಮತ್ತು ರಿಯಾಯಿತಿ ದರಗಳನ್ನು ನೀಡುತ್ತದೆ. ಹಾಗೆಯೇ ಇದೀಗ ಜೂನ್ ನ ಮೆಗಾ ಸೇಲ್ (June mega sale) ನಲ್ಲಿ ಮೊಬೈಲ್ ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಯಾವೆಲ್ಲ ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಗೆ ದೊರೆಯುತ್ತವೆ  ಈ ಸೇಲ್ ನ ಎಲ್ಲಿಯವರಿಗೂ ಇರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಫ್ಲಿಫ್ ಕಾರ್ಟ್ ಮೆಗಾ ಜೂನ್ ಬೊನಾಂಜಾ ಸೇಲ್ (Flipkart Mega June Bonanza sale) :

ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಜೂನ್ ಬೊನಾಂಜಾ ಮಾರಾಟವನ್ನು ಘೋಷಿಸಿದೆ . ಮಾರಾಟದ ಸಮಯದಲ್ಲಿ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ (e commerce platform) ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು(Laptops), ಗೃಹೋಪಯೋಗಿ ವಸ್ತುಗಳು , ಅಡುಗೆ ಉಪಕರಣಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳಲ್ಲಿ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ.

ಫ್ಲಿಪ್‌ಕಾರ್ಟ್ ಜೂನ್ ಬೊನಾಂಜಾ ಮಾರಾಟ ದಿನಾಂಕಗಳು (last date) :

ಫ್ಲಿಪ್‌ಕಾರ್ಟ್ ಜೂನ್ ಬೊನಾಂಜಾ ಮಾರಾಟವು ಈಗ ಲೈವ್ ಆಗಿದ್ದು, ಜೂನ್ 19 ರವರೆಗೆ ಮುಂದುವರಿಯುತ್ತದೆ. ಆನ್‌ಲೈನ್ ಶಾಪರ್‌ಗಳು ಈ ಅವಧಿಯಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಎಲ್ಲಾ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು.

10,000 ರೂ ಗಳ ಒಳಗೆ ಸ್ಮಾರ್ಟ್ ಫೋನ್ ಗಳ ವಿವರ (smartphone details) ಹೀಗಿದೆ :

ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಯಲ್ಲಿ ಈ ಬೊನಾಂಜಾ ಸೇಲ್ ನಲ್ಲಿ ಪಡೆಯಬಹುದಾಗಿದೆ. ರಿಯಾಯಿತಿ ಜೊತೆಗೆ ಫ್ಲಿಪ್‌ಕಾರ್ಟ್ ತ್ವರಿತ ಬ್ಯಾಂಕ್ ರಿಯಾಯಿತಿಗಳು, ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದ EMI ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ನೀಡುತ್ತದೆ. ಅವುಗಳ ಬಗ್ಗೆ ಈ ಕೆಳಗೆ ತಿಳಿದುಕೊಳ್ಳೋಣ.

ಪೊಕೋ ಸಿ61 (POCO C61) :

ಈ ಸ್ಮಾರ್ಟ್ ಫೋನ್ 6GB RAM, 128GB ROM ವೇರಿಯಂಟ್‌ ನಲ್ಲಿ ದೊರೆಯಲಿದ್ದು, ಕೇವಲ 9,999 ಮೂಲ ಬೆಲೆಯಲ್ಲಿ ಲಭ್ಯವಿದೆ. ಹಾಗೆಯೇ ಇದೀಗ ಈ ಬೊನಾಂಜಾ ಸೇಲ್‌ ನಲ್ಲಿ ಖರೀದಿಸಿದರೆ ಬರೋಬ್ಬರಿ 30% ರಿಯಾಯಿತಿಯಲ್ಲಿ ಕೇವಲ 6,999 ರೂ. ಗಳಿಗೆ ದೊರೆಯಲಿದೆ.

ಮೊಟೊರೋಲಾ ಜಿ04ಎಸ್ (Motorola g04s) :

ಈ ಸ್ಮಾರ್ಟ್ ಫೋನ್ 4GB RAM ಹಾಗೂ 64GB ROM ವೇರಿಯಂಟ್‌ ಆಗಿದ್ದು, ಇದರ ಮೂಲ ಬೆಲೆ 9,999 ರೂ. ಇರುತ್ತದೆ. ಇದೀಗ ಫ್ಲಿಪ್‌ಕಾರ್ಟ್‌ನ ಬೊನಾಂಜಾ ಸೇಲ್‌ ಸಂದರ್ಭದಲ್ಲಿ ಖರೀದಿಸಿದರೆ ಭರ್ಜರಿ 30% ರಿಯಾಯಿತಿಯೊಂದಿಗೆ ಕೇವಲ 6,999 ರೂ. ಗಳಿಗೆ ಖರೀದಿಸಬಹುದಾಗಿದೆ.

ಪೊಕೋ ಎಂ6 5G (POCO M6 5G) :

ಈ ಸ್ಮಾರ್ಟ್ 4GB RAM ಮತ್ತು 128GB ROM ಮಾದರಿಯ ಸ್ಟೋರೇಜ್ ನಲ್ಲಿ ದೊರೆಯಲಿದ್ದು, ಇದರ ಮೂಲ ಬೆಲೆ 12,999 ರೂ. ಆಗಿರುತ್ತದೆ. ಆದರೆ ಜೂನ್ ಮೆಗಾ ಬೊನಾಂಜಾ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಿದರೆ 30% ರಿಯಾಯಿತಿಯೊಂದಿಗೆ ಕೇವಲ 8,999 ರೂ. ಗಳಿಗೆ ಖರೀದಿಸಬಹುದಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್04 (Samsung Galaxy F04) :

ಈ ಸ್ಮಾರ್ಟ್‌ಫೋನ್‌ ನ 4GB RAM ಹಾಗೂ 64GB ROM ವೇರಿಯಂಟ್‌ನಲ್ಲಿ ದೊರೆಯಲಿದ್ದು, ಇದರ ಮೂಲ ಬೆಲೆ 11,499 ರೂ. ಗಳಾಗಿದ್ದು, ಇದೀಗ ಬೊನಾಂಜಾ ಡೀಲ್‌ ಮೂಲಕ ಖರೀದಿಸದರೆ 30% ರಿಯಾಯಿತಿಯೊಂದಿಗೆ ರೂ. 7,999 ರೂ. ಗಳಿಗೆ ಫ್ಲಿಫ್ ಕಾರ್ಟ್ ನಲ್ಲಿ ಲಭ್ಯವಿದೆ.

(ಇಂಫಿನಿಕ್ಸ್ ಸ್ಮಾರ್ಟ್ 8ಹೆಚ್ ಡಿ) Infinix SMART 8 HD:

3GB RAM ಮತ್ತು 64GB ROM ಮಾದರಿಯ ಈ ಸ್ಮಾರ್ಟ್ ಫೋನ್ 7,999 ರೂ. ಮೂಲ ಬೆಲೆ ಹೊಂದಿದ್ದು, ಇದೀಗ ಫ್ಲಿಪ್‌ಕಾರ್ಟ್‌ನ ಜೂನ್ ಬೊನಾಂಜಾ ಸೇಲ್‌ ಮೂಲಕ ಖರೀದಿಸದರೆ ಶೇ.18% ರಿಯಾಯಿತಿ ಯೊಂದಿಗೆ 6,499 ರೂ. ಗಳಿಗೆ ಲಭ್ಯವಿದೆ.

ಇದಿಷ್ಟು ಅಲ್ಲದೆ, ಇನ್ನು ಹಲವಾರು ಸ್ಮಾರ್ಟ್ ಫೋನ್ ಗಳ ಮೇಲೆ ಅತೀ ಹೆಚ್ಚಿನ ರಿಯಾಯಿತಿ ದೊರೆಯುತ್ತದೆ. ಹಾಗೆಯೇ, ಇನ್ನು ಕೆಲವು ವಸ್ತುಗಳ ಮೇಲೆ ರಿಯಾಯಿತಿ ಮತ್ತು ಸ್ಪೆಷಲ್ ಆಫರ್ಸ್ ಗಳು ಫ್ಲಿಫ್ ಕಾರ್ಟ್  ಮೆಗಾ ಜೂನ್ ಬೊನಾಂಜಾ ಸೇಲ್ ನಲ್ಲಿ ಲಭ್ಯವಿದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!