eScooter: ಕೇವಲ 8 ರೂ. ಗೆ 212Km ಮೈಲೇಜ್  ಸ್ಕೂಟರ್ ನ ಬೆಲೆ ಎಷ್ಟು ಗೊತ್ತಾ?

IMG 20240619 WA0001

ಅತೀ ಕಡಿಮೆ ಬೆಲೆಗೆ ದೊರೆಯಲಿದೆ 212 ಕಿಮೀ ಮೈಲೇಜ್ (212 km milage) ನೀಡುವಂತ ಇಲೆಕ್ಟ್ರಿಕ್ ಸ್ಕೂಟರ್!

ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಧದ  ವಾಹನಗಳನ್ನು ನಾವು ನೋಡುತ್ತೇವೆ. ಇಂಧನ ಚಾಲಿತ ವಾಹನಗಳು (fuel vehicles) ಒಂದು ಕಡೆಯಾದರೆ ಇನ್ನು ಎಲೆಕ್ಟ್ರಿಕ್ ಚಾಲಿತ ವಾಹನಗಳು (electric vehicles) ಇನ್ನೊಂದು ಕಡೆ. ಎರಡು ಮಾದರಿಯ ವಾಹನಗಳ ನಡುವೆ ಬಹಳ ಪೈಪೋಟಿ (competition) ನಡೆಯುತ್ತದೆ. ಇಂದು ಎರಡು ಮಾದರಿಯ ವಾಹನಗಳು ಹೆಚ್ಚು ಜನಪ್ರಿಯತೆಗಳನ್ನು ಹೊಂದಿದ್ದು, ವಿಶಿಷ್ಟವಾದ ಫಿಚರ್ಸ್ ಗಳು ಹಾಗೂ ಉತ್ತಮ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಹಾಗೆ ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ನೋಡುವುದಾದರೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹೊಸ ಫೀಚರ್ಗಳನ್ನು ಒಳಗೊಂಡು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಳು ನೋಡಲು ಆಕರ್ಷಿಕವಾಗಿದ್ದು ತನ್ನ ಕಡೆ ಜನರ ಗಮನವನ್ನು ಸೆಳೆಯುತ್ತಿವೆ. ಇದೀಗ 212km ಮೈಲೇಜ್ ನೀಡುವಂತ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

Simple One ಎಲೆಕ್ಟ್ರಿಕ್ ಸ್ಕೂಟರ್ :
simpleenergy one standard1684840866664

212 km ಮೈಲೇಜ್ ನೀಡುವ Simple One ಎಲೆಕ್ಟ್ರಿಕ್ ಸ್ಕೂಟರ್ ಒಂದು ಉತ್ತಮ ಸ್ಕೂಟರ್ ಆಗಿದ್ದು, ಉತ್ತಮ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. ಕಡಿಮೆ ಖರ್ಚಿನಲ್ಲಿ ಸಿಂಗಲ್ ಚಾರ್ಜ್ ನಲ್ಲಿ 212 km ಗಳ ರೇಂಜ್ ನೀಡುವ ಸಾಮರ್ಥ್ಯವನ್ನು ಕೂಡ ಹೊಂದಿರುವುದರಿಂದ ಈ ಸ್ಕೂಟರ್ ಉತ್ತಮ ಎನ್ನಬಹುದಾಗಿದೆ.

ಟೆಕ್ನಾಲಾಜಿ (technology) ಆಧಾರಿತ ಸ್ಕೂಟರ್ ಇದಾಗಿದೆ.

ಈ ಎಲೆಕ್ಟ್ರಿಕ್ ಸ್ಕೂಟರಲ್ಲಿ 12 ಇಂಚಿನ ಟ್ಯೂಬ್ ಲೆಸ್ ವೀಲ್ (12 inch tube less wheel) ಅನ್ನು ಹೊಂದಿದ್ದು, ಇದರ ಜೊತೆಗೆ 7 ಇಂಚಿನ ಟಿ ಎಫ್ ಟಿ ಸ್ಕ್ರೀನ್ (7 inch TFT screen) ಅನ್ನು ಕೂಡ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿದೆ. ಮೆಸೇಜಿಂಗ್ ಸೇರಿದಂತೆ ಸಾಕಷ್ಟು ಅತ್ಯಾಧುನಿಕ ಫೀಚರ್ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಪಾರ್ಕಿಂಗ್ ಅಸಿಸ್ಟೆಂಸ್ ಹಾಗೂ ಕನೆಕ್ಟೆಡ್ ಫೀಚರ್ಗಳು ಸೇರಿದಂತೆ ಸಾಕಷ್ಟು ಮಾಡೆಲ್ ಟೆಕ್ನಾಲಜಿ ಆಧಾರಿತ ವಿಶೇಷ ಫಿಚರ್ಸ್ ಇದರಲ್ಲಿದೆ.

Simple one ಸ್ಕೂಟರ್ ನ ಬ್ಯಾಟರಿ ಸಾಮರ್ಥ್ಯ (battery power) :

5 ಕಿಲೋ ವ್ಯಾಟ್ ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿಯನ್ನು Simple One ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಳವಡಿಸಲಾಗಿದೆ. 2 ಗಂಟೆಗಳ ಕಾಲ ಇದನ್ನ ಚಾರ್ಜ್ ಮಾಡಿದ್ರೆ ಸಾಕು, ನೀವು 100% ಫುಲ್ ಚಾರ್ಜ್ ನೀಡುತ್ತದೆ. 212 ಕಿಲೋಮೀಟರ್ಗಳ ಲಾಂಗ್ ರೇಂಜ್ ಅನ್ನು ಫುಲ್ ಚಾರ್ಜ್ ಮೇಲೆ ಇದು ನೀಡುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನ ಟಾಪ್ ಸ್ಪೀಡ್ 105 ಕಿ.ಮೀ ಪ್ರತಿ ಗಂಟೆಯಾಗಿದೆ.

Simple One ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ (price) :

Simple One ಎಲೆಕ್ಟ್ರಿಕ್ ಸ್ಕೂಟರ್  1.45 ರಿಂದ 1.50 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಲಭ್ಯವಿದೆ.

ಇಎಂಐ (EMI ) ಮೂಲಕ ಖರೀದಿಗೆ ಲಭ್ಯವಿದೆ ಈ ಸ್ಕೂಟರ್ :

ಈ ಸ್ಕೂಟರ್ ಅನ್ನು ಲೋನ್ ಮೇಲೆ ಅಥವಾ ಇ ಎಂ ಐ ಮೂಲಕ ಖರೀದಿ ಮಾಡಬಹುದು. 15385 ರೂಪಾಯಿಗಳನ್ನು ಮಾತ್ರ ಡೌನ್ ಪೇಮೆಂಟ್ ಮಾಡಿ, 1.38 ಲಕ್ಷ ರೂಪಾಯಿಗಳ ಲೋನ್ ಮಾಡಬೇಕಾಗಿರುತ್ತದೆ. 36 ತಿಂಗಳಿಗೆ 4,461 ರೂಪಾಯಿಗಳ ಕಂತಿನ ಲೆಕ್ಕಾಚಾರದಲ್ಲಿ ಲೋನ್ ಹಣವನ್ನು ಕಟ್ಟಿಕೊಂಡು ಈ ಎಲೆಕ್ಟ್ರಿಕ್ ಸ್ಕೂಟರನ್ನು  ಖರೀದಿ ಮಾಡಬಹುದಾಗಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!