Job Alert: ಮೈಸೂರ್ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ!

IMG 20240622 WA0006

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ ಈ ವರದಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯಲ್ಲಿ  ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ನೇರ ನೇಮಕಾತಿ(recruitment):

ಮೈಸೂರು ಮಹಾನಗರ ಪಾಲಿಕೆ ತನ್ನ ಸಿಬ್ಬಂದಿ ಬಲವನ್ನು ಬಲಪಡಿಸಲು 252 ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳು ಪರೀಕ್ಷೆ ಅಥವಾ ವಿಶೇಷ ವಿದ್ಯಾರ್ಹತೆಗಳನ್ನು ಬಯಸದೆ, ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತವೆ.

ಹುದ್ದೆಯ ವಿವರಗಳು:

ನೇಮಕಾತಿ ಪ್ರಾಧಿಕಾರ: ಮೈಸೂರು ಮಹಾನಗರ ಪಾಲಿಕೆ(Mysore Metropolitan Corporation)

ಹುದ್ದೆ ಹೆಸರು: ಪೌರಕಾರ್ಮಿಕರು(Civil Servants)

ಹುದ್ದೆಗಳ ಸಂಖ್ಯೆ: 252

ವೇತನ ಶ್ರೇಣಿ: ರೂ.17000-28,950

ಅರ್ಹತೆಗಳು:

ವಿದ್ಯಾರ್ಹತೆ:  ಅನ್ವಯಿಸುವುದಿಲ್ಲ

ಕನ್ನಡ ಮಾತನಾಡುವ ಸಾಮರ್ಥ್ಯ
ಮೈಸೂರು ಮಹಾನಗರ ಪಾಲಿಕೆಯಲ್ಲಿ ಕನಿಷ್ಠ ಎರಡು ವರ್ಷ ಕೆಲಸ ನಿರ್ವಹಿಸಿರಬೇಕು.

ವಯೋಮಿತಿ: 18 ವರ್ಷ ಪೂರ್ಣ, ಗರಿಷ್ಠ 55 ವರ್ಷ

ಪ್ರಮುಖ ದಿನಾಂಕಗಳು:

ಅರ್ಜಿ ಪ್ರಾರಂಭ ದಿನಾಂಕ: 18-06-2024

ಅರ್ಜಿ ಕೊನೆ ದಿನಾಂಕ: 18-07-2024

ಅರ್ಜಿ ಸಲ್ಲಿಕೆ ವಿಳಾಸ:

ಮೈಸೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ಸಯ್ಯಾಜಿರಾವ್ ರಸ್ತೆ, ಮೈಸೂರು – 570004

ಅರ್ಜಿ ಸಲ್ಲಿಕೆಯ ಪ್ರಕ್ರಿಯೆ:

ಮೇಲ್ಕಾಣಿಸಿದ ವಿಳಾಸದಲ್ಲಿ ಅರ್ಜಿ ನಮೂನೆ ಪಡೆದು.

ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ.

ಅರ್ಜಿಯ ಮೇಲೆ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಅಂಟಿಸಿ.

ಅರ್ಜಿಯ ಮೇಲಿನ ಹೆಬ್ಬೆಟ್ಟಿನ ಗುರುತು ಅಥವಾ ಸಹಿ ಮಾಡಿ.

ಅರ್ಜಿಯನ್ನು 18-07-2024 ಸಂಜೆ 5:30 ರೊಳಗೆ ಕೇಂದ್ರ ಕಚೇರಿಗೆ ತಲುಪಿಸುವುದು.

ಹೆಚ್ಚಿನ ಸಂಪರ್ಕ:

ಮೈಸೂರು ಮಹಾನಗರ ಪಾಲಿಕೆಯ ವೆಬ್‌ಸೈಟ್: http://www.mysurucity.mrc.gov.in

ಈ ಅಧಿಸೂಚನೆಯು ಮುಂಬರುವ ವರ್ಷಗಳಲ್ಲಿ ನಗರವನ್ನು ಸ್ವಚ್ಛವಾಗಿಡಲು ಹಾಗೂ ಮೂಲಸೌಕರ್ಯಗಳನ್ನು ಉತ್ತಮಪಡಿಸಲು ಪ್ರಮುಖ ಹೆಜ್ಜೆಯಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದ ಒಳಗೆ ಅರ್ಜಿಯನ್ನು ಸಲ್ಲಿಸಿ, ಈ ಅವಕಾಶವನ್ನು ಬಳಸಿ ಕೊಳ್ಳಬಹುದಾಗಿದೆ.

ಅಧಿಕೃತ ಅಧಿಸೂಚನೆ

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!