4k ಲೇಟೆಸ್ಟ್ ಸ್ಮಾರ್ಟ್ (4k latest smart TV) ಟಿವಿಯನ್ನು ಬಿಡುಗಡೆ ಮಾಡಿದ ಸ್ಯಾಮ್ ಸಂಗ್!
ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ ಸಂಗ್ (Samsung) ಇಂದು ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ಸ್ಯಾಮ್ ಸಂಗ್ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ವಿಶಿಷ್ಟ ಮತ್ತು ಉತ್ತಮ ಫಿಚರ್ಸ್ ಗಳ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಕೇವಲ ಸ್ಮಾರ್ಟ್ ಫೋನ್ ಗಳೊಂದೇ ಅಲ್ಲ ಅದರ ಹೊರತಾಗಿ, ವಿವಿಧ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಟಿವಿಯನ್ನು ಕೂಡ ಬಿಡುಗಡೆ ಮಾಡುತ್ತದೆ. ಹಾಗೆಯೇ ಇದೀಗ ಹೊಸ 4k ಸ್ಮಾರ್ಟ್ ಟಿವಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಸ್ಯಾಮ್ ಸಂಗ್ ಕ್ಯೂಎಲ್ಇಡಿ 4ಕೆ ಸ್ಮಾರ್ಟ್ ಟಿವಿ (Samsung 4k QLED smart TV) :
ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್ ಮಾಡೆಲ್ ಬಿಡುಗಡೆಯಾಗಿದೆ. ಇದು 55, 65 ಮತ್ತು 75 ಇಂಚಿನ ಪರದೆ ಹೊಂದಿರುವ ನೂತನ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿ ಕ್ವಾಂಟಮ್ ಡಾಟ್ (quantum dot) ಮತ್ತು ಕ್ವಾಂಟಮ್ ಹೆಚ್‌ಡಿಆರ್ ತಂತ್ರಜ್ಞಾನದೊಂದಿಗೆ (quantum HDR technology) ದೇಶದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್ ಟಿವಿ ದರ ₹65,990 ರಿಂದ ಆರಂಭವಾಗಲಿದೆ. ಸ್ಯಾಮ್ ಸಂಗ್ ಸ್ಟೋರ್, ಆನ್ ಲೈನ್ ಮತ್ತು ಪ್ರಮುಖ ಇ ಕಾಮರ್ಸ್ ಹಾಗೂ ರಿಟೇಲ್ ಮಳಿಗೆಗಳ ಮೂಲಕ ನೂತನ ಟಿವಿ ಲಭ್ಯವಾಗಲಿದೆ.
ಕ್ಯೂಎಲ್ಇಡಿ ಸ್ಮಾರ್ಟ್ ಟಿವಿಯಲ್ಲಿ ಕ್ವಾಂಟಮ್ ತಂತ್ರಜ್ಞಾನ (Quantum technology) ಅಳವಡಿಕೆ :
2024 ರಲ್ಲಿ ಬಿಡುಗಡೆ ಆಗಿರುವ ಈ ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತಿದೆ. ಈ ಪ್ರೊಸೆಸರ್ ವೀಕ್ಷಣೆ ಮತ್ತು ಆಡಿಯೋ ಗುಣಮಟ್ಟವನ್ನು ಉತ್ತಮಗೊಳಿಸುವ ಶಕ್ತಿಶಾಲಿ ಪ್ರೊಸೆಸರ್ ಆಗಿದೆ. ಹೆಚ್ಚುವರಿಯಾಗಿ ಕ್ವಾಂಟಮ್ ಎಚ್‌ಡಿಆರ್ ಫೀಚರ್ ಇದ್ದು, ಸಿನಿಮೀಯ ಪ್ರಮಾಣದಲ್ಲಿ ವಿಸ್ತಾರ ವ್ಯಾಪ್ತಿಯ ಕಾಂಟ್ರಾಸ್ಟ್ ಅನ್ನು ಒದಗಿಸುತ್ತದೆ. ಮತ್ತು ಬಣ್ಣಗಳ ಒಂದು ಬಿಲಿಯನ್ ಶೇಡ್‌ಗಳು ಕಾಣಿಸುತ್ತವೆ. ಜತೆಗೆ ವಿವಿಧ ಹಂತದ ಬ್ರೈಟ್‌ನೆಸ್‌ನಲ್ಲಿಯೂ ಬಣ್ಣಗಳನ್ನು ನಿಖರವಾಗಿ ಪ್ರದರ್ಶಿಸುತ್ತದೆ.
ಈ ಟಿವಿಯಲ್ಲಿ 4k ಗುಣಮಟ್ಟದ ದೃಶ್ಯಗಳನ್ನು ವೀಕ್ಷಿಸಬಹುದು :
ಈ ಸ್ಮಾರ್ಟ್ ಟಿವಿ ಯು 4ಕೆ ಅಪ್‌ಸ್ಕೇಲಿಂಗ್ ಫೀಚರ್ (up scaling features) ಹೊಂದಿದ್ದು, ಗ್ರಾಹಕರಿಗೆ ಉತ್ತಮವಾದ ದೃಶ್ಯ ಅನುಭವವನ್ನು ನೀಡುತ್ತದೆ. ಬಳಕೆದಾರರು ವೀಕ್ಷಿಸುತ್ತಿರುವ ಕಂಟೆಂಟ್‌ನ ರೆಸಲ್ಯೂಶನ್ ಏನೇ ಆಗಿದ್ದರೂ ಟಿವಿಗಳು ಸ್ವಯಂಚಾಲಿತವಾಗಿ ಟೋನಿಯರ್-4ಕೆ ಮಟ್ಟವನ್ನು ಅಪ್‌ಗ್ರೇಡ್ ಮಾಡುವುದರಿಂದ ಅವರು 4ಕೆ ಗುಣಮಟ್ಟದ ದೃಶ್ಯಗಳನ್ನು ಆನಂದಿಸಬಹುದು. ಹಾಗೆಯೇ ಪ್ಯಾಂಟೋನ್ ಮೌಲ್ಯೀಕರಣವು 2000ಕ್ಕೂ ಬಣ್ಣಗಳನ್ನು ಹೆಚ್ಚು ನಿಖರವಾಗಿ ತೋರಿಸುತ್ತದೆ ಮತ್ತು ಡ್ಯುಯಲ್ ಎಲ್ಇಡಿಯ ನವೀನ ಬ್ಯಾಕ್‌ಲೈಟಿಂಗ್ ತಂತ್ರಜ್ಞಾನವು ವೀಕ್ಷಿಸುತ್ತಿರುವ ದೃಶ್ಯದ ಪ್ರಕಾರಕ್ಕೆ ತಕ್ಕಂತೆ ಬ್ಯಾಕ್‌ಲೈಟ್ ಬಣ್ಣದ ಟೋನ್ ಅನ್ನು ಬದಲಿಸುವ ಮೂಲಕ ಉತ್ತಮ ಕಾಂಟ್ರಾಸ್ಟ್ ನ ದೃಶ್ಯವನ್ನು ವೀಕ್ಷಿಸಬಹುದು.
ಉತ್ತಮ ಧ್ವನಿ ಗುಣಮಟ್ಟ (good sound effect) :
ತೀವ್ರವಾದ ದೃಶ್ಯ ವೀಕ್ಷಣೆಯ ಅನುಭವ ಒದಗಿಸಲು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಸರಣಿಯು ಕ್ಯೂ-ಸಿಂಫನಿ, ಓಟಿಎಸ್ ಲೈಟ್ ಮತ್ತು ಅಡಾಪ್ಟಿವ್ ಸೌಂಡ್ ಫೀಚರ್‌ಗಳನ್ನು ಹೊಂದಿದೆ. ಈ ಫೀಚರ್‌ಗಳು ಬಳಕೆದಾರರಿಗೆ ಆನ್-ಸ್ಕ್ರೀನ್ ವೀಕ್ಷಣೆಯನ್ನು ಉತ್ತಮ ರೀತಿಯಲ್ಲಿ ಅನುಭವಿಸಲು ಅನುವು ಮಾಡಿಕೊಡುತ್ತದೆ. ನೈಜ-ಸಮಯದ ದೃಶ್ಯ ವಿಶ್ಲೇಷಣೆ ಮಾಡುವ ಮೂಲಕ 3ಡಿ ಸರೌಂಡ್ ಸೌಂಡ್ ಸೌಕರ್ಯವನ್ನು ಒದಗಿಸುತ್ತದೆ.
ಈ ಸ್ಮಾರ್ಟ್ ಟಿವಿಯಲ್ಲಿ ಉತ್ತಮ ಗೇಮಿಂಗ್ ಸೌಲಭ್ಯವಿದೆ (gaming facility) :
2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಮೋಷನ್ ಎಕ್ಸಲರೇಟರ್ ಮತ್ತು ಆಟೋ ಲೋ ಲೋಟೆನ್ಸಿ ಮೋಡ್ (ಎಎಲ್ಎಲ್ಎಂ) ತಂತ್ಪಜ್ಞಾನ ಹೊಂದಿದೆ. ಅದರಿಂದಾಗಿ ಗೇಮರ್‌ಗಳು ಉತ್ತಮ ಗೇಮ್ ಆಡಬಹುದಾಗಿದೆ. ಫ್ರೇಮ್‌ಗಳ ನಡುವಿನ ಚಲನೆಯನ್ನು ಮೊದಲೇ ಊಹಿಸಬಹುದಾಗಿದೆ. ಈ ಫೀಚರ್‌ಗಳು ಸ್ಕ್ರೀನ್ ಚಲನೆಯ ಮೃದುತ್ವವನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಲೇಟೆನ್ಸಿ ಜತೆಗೆ ಫ್ರೇಮ್ ಬದಲಾವಣೆನ್ನು ವೇಗಗೊಳಿಸುತ್ತದೆ.
ಇತರ ಸ್ಮಾರ್ಟ್ ಫೀಚರ್‌ಗಳು (other features) :
2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಸ್ಯಾಮ್‌ಸಂಗ್‌ನ ಟಿವಿ ಪ್ಲಸ್ ಫೀಚರ್ ಹೊಂದಿದ್ದು, 100+ ಉಚಿತ ಚಾನಲ್‌ಗಳನ್ನು ಒದಗಿಸುತ್ತದೆ. ಇದಲ್ಲದೆ, ಅಂತರ್ನಿರ್ಮಿತ ಮಲ್ಟಿ ವಾಯ್ಸ್ ಅಸಿಸ್ಟೆಂಟ್ ಫೀಚರ್ ಗ್ರಾಹಕರಿಗೆ ಉತ್ತಮ ಕನೆಕ್ಟಿವಿಟಿ ಒದಗಿಸುತ್ತದೆ. ಜತೆಗೆ ಉನ್ನತ ಶ್ರೇಣಿಯ ಭದ್ರತಾ ಪರಿಹಾರವಾದ ಸ್ಯಾಮ್‌ಸಂಗ್ ನಾಕ್ಸ್ ಸುರಕ್ಷಿತ ಅನುಭವವನ್ನು ಒದಗಿಸುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.