ಮುಂದಿನ ತಿಂಗಳು ಅಂದರೆ ಜುಲೈ ತಿಂಗಳು 12 ದಿನಗಳು ಬ್ಯಾಂಕ್ ಗಳು ರಜೆಯಲ್ಲಿರುತ್ತವೆ. ಬ್ಯಾಂಕ್ (bank) ಗಳಿಗೆ ಹೋಗುವ ಮುನ್ನ ಎಚ್ಚರ ಗ್ರಾಹಕರೇ?
ವಾಸ್ತವವಾಗಿ ರಜೆ ಎಂದರೆ ಎಲ್ಲರಿಗೂ ಖುಷಿಕೊಡುವ ಸಂಗತಿ ಆದರೆ, ಕೆಲವೊಮ್ಮೆ ಕೆಲವೊಬ್ಬರಿಗೆ ಈ ರಜೆ ಯಾಕೆ ಆದ್ರೂ ಬಂತೋ ಅನ್ನಿಸಿ ಬಿಡುತ್ತದೆ. ಅದರಲ್ಲೂ ಬ್ಯಾಂಕ್ ರಜೆಗಳು. ಯಾಕೆಂದರೆ ಯಾವಾಗ, ಯಾವ ಸಂದರ್ಭದಲ್ಲಿಯಾದರೂ ತುರ್ತು ಸಂದರ್ಭಗಳು (emergency situations) ಎದುರಾಗಬಹುದು. ಆದರೆ ಇಂದು ನಾವು ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಬ್ಯಾಂಕ್ ಅವಶ್ಯಕತೆ ಹೆಚ್ಚೇನೂ ಇರುವುದಿಲ್ಲ ಎಂದು ಅನಿಸುವುದುಂಟು. ಆದರೆ ಕೆಲವೊಮ್ಮೆ ಬಹಳ ಮುಖ್ಯವಾದ ಕೆಲಸಗಳಿಗೆ ಬ್ಯಾಂಕ್ ಗಳಿಗೆ ತೆರಳುವ ಸಂದರ್ಭ ಎದುರಾಗಿಯೇ ಎದುರಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಮುಂದಿನ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಬ್ಯಾಂಕ್ ರಜಾ ದಿನಗಳ ಪಟ್ಟಿಯ ಪ್ರಕಾರ ಜುಲೈನಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ತಿಂಗಳು ಬ್ಯಾಂಕ್ ಗಳಿಗೆ ಹೋಗದೆ ನಿಮ್ಮ ಕಾರ್ಯಗಳನ್ನು ಮುಂದೂಡಿದ್ದೀರಾ? ನಿಮ್ಮ ಕೆಲಸ ಕಾರ್ಯಗಳಿಗೆ ಬ್ಯಾಂಕ್ ಗಳನ್ನು ಅವಲಂಬಿಸಿದ್ದರೆ ಬ್ಯಾಂಕ್ ರಜಾ ದಿನಗಳ ಬಗ್ಗೆ ಎಚ್ಚರವಹಿಸಿ. ರಾಷ್ಟ್ರೀಯ ಮತ್ತು ರಾಜ್ಯ ರಜಾದಿನಗಳು, ಸಾಂಸ್ಕೃತಿಕ ಅಥವಾ ಧಾರ್ಮಿಕ ಆಚರಣೆಗಳು, ಸರ್ಕಾರಿ ಪ್ರಕಟಣೆಗಳು ಮತ್ತು ಇತರೆ ಅಂಶಗಳನ್ನು ಪರಿಗಣಿಸಿ ಆರ್‌ಬಿಐ ವರ್ಷದ ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿಯನ್ನು (Bank Holidays July 2024) ಬಿಡುಗಡೆ ಮಾಡಿದೆ.ಪ್ರತಿ ತಿಂಗಳ ಎಲ್ಲ ಭಾನುವಾರ ಮತ್ತು 2ನೇ ಮತ್ತು 4ನೇ ಶನಿವಾರದಂದು ಬ್ಯಾಂಕುಗಳಿಗೆ ರಜೆ ಇರುತ್ತದೆ.ಇದನ್ನು ಹೊರತುಪಡಿಸಿ ಜುಲೈ ತಿಂಗಳಲ್ಲಿ ಬಹಳ ದಿನಗಳ ಕಾಲ ಬ್ಯಾಂಕ್ ರಜೆಗಳು ಬಂದಿರುವುದರಿಂದ ನೀವು ಯಾವ ದಿನ ಬ್ಯಾಂಕ್ ರಜೆ ಇದೆ ಎಂದು ತಿಳಿದುಕೊಂಡು ಬ್ಯಾಂಕ್ ಗಳಿಗೆ ಹೋಗುವುದು ಸೂಕ್ತ.
ಜುಲೈ ತಿಂಗಳಲ್ಲಿ 12 ದಿನಗಳು ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ:
ಜುಲೈ 03 : ಬೆಹ್‌ಡಿಯೆನ್‌ಖ್ಲಾಮ್ ( BehDienkhlam) ಅಂಗವಾಗಿ ಮೇಘಾಲಯದ ಶಿಲ್ಲಾಂಗ್ನಲ್ಲಿ ಬ್ಯಾಂಕುಗಳು ಜುಲೈ 3, 2024 ರಂದು ಮುಚ್ಚಲ್ಪಡುತ್ತವೆ.
ಜುಲೈ 06 : ಎಂಎಚ್ಐಪಿ (MHIP) ದಿನದ ಅಂಗವಾಗಿ ಐಜ್ವಾಲ್ನಲ್ಲಿ ಬ್ಯಾಂಕುಗಳು ಜುಲೈ 06, 2024 ರಂದು ಮುಚ್ಚಲ್ಪಡುತ್ತವೆ.
ಜುಲೈ 07 : ಭಾನುವಾರವಾದ್ದರಿಂದ, ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೂ ಜುಲೈ 07, 2024 ರಂದು ವಾರಾಂತ್ಯ ರಜೆ ಇರುತ್ತದೆ.
ಜುಲೈ 08 : ಕಾಂಗ್ ರಥಜಾತ್ರಾ ಅಂಗವಾಗಿ ಇಂಫಾಲ್ನಲ್ಲಿ ಬ್ಯಾಂಕುಗಳು ಜುಲೈ 8, 2024 ರಂದು ಮುಚ್ಚಲ್ಪಡುತ್ತವೆ.
ಜುಲೈ 09 : ದ್ರುಕ್ಪಾ ತ್ಶೆ-ಝಿ (Drukpa Tshe-zi) ಅಂಗವಾಗಿ ಗ್ಯಾಂಗ್‌ಟಾಕ್‌ನಲ್ಲಿ ಬ್ಯಾಂಕುಗಳು ಜುಲೈ 9,2024 ರಂದು ಮುಚ್ಚಲ್ಪಡುತ್ತವೆ.
ಜುಲೈ 13 : ಎರಡನೇ ಶನಿವಾರವಾದ್ದರಿಂದ ಎಲ್ಲಾ ಬ್ಯಾಂಕುಗಳಿಗೂ ಜುಲೈ 13, 2024 ರಂದು ರಜೆ ಇರುತ್ತದೆ.
ಜುಲೈ 14 : ಭಾನುವಾರವಾದ್ದರಿಂದ ದೇಶಾದ್ಯಂತ ಎಲ್ಲ ಬ್ಯಾಂಕ್‌ಗಳಿಗೂ ಜುಲೈ 14, 2024 ಸಾಪ್ತಾಹಿಕ ಬ್ಯಾಂಕ್ ರಜಾದಿನವಾಗಿದೆ.
ಜುಲೈ 16 : ಹರೇಲಾ ಅಂಗವಾಗಿ ಡೆಹ್ರಾಡೂನ್ ಬ್ಯಾಂಕುಗಳು ಜುಲೈ 16, 2024 ರಂದು ಮುಚ್ಚಲ್ಪಡುತ್ತವೆ.
ಜುಲೈ 17 : ಮೊಹರಂ ಅಂಗವಾಗಿ ದೇಶದ ಹಲವು ರಾಜ್ಯಗಳಲ್ಲಿ ಜುಲೈ 17, 2024 ರಂದು ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ.
ಆರ್‌ಬಿಐ (RBI) ಪಟ್ಟಿಯ ಪ್ರಕಾರ ಮೊಹರಂ ದಿನದಂದು ದೇಶದ ಅನೇಕ ಬ್ಯಾಂಕುಗಳಲ್ಲಿ ರಜೆ ಇರುವ ರಾಜ್ಯಗಳು ಅಗರ್ತಲಾ, ಐಜ್ವಾಲ್, ಬೇಲಾಪುರ, ಬೆಂಗಳೂರು, ಭೋಪಾಲ್, ಚೆನ್ನೈ, ಹೈದರಾಬಾದ್ ಆಂಧ್ರಪ್ರದೇಶ, ಹೈದರಾಬಾದ್ ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತಾ, ಲಕ್ನೋ, ಮುಂಬೈ, ನಾಗ್ಪುರ, ದೆಹಲಿ, ಪಾಟ್ನಾ, ರಾಂಚಿ, ರಾಯ್ಪುರ, ಶಿಲ್ಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಆ ದಿನದಂದು ಯಾವೆಲ್ಲ ಬ್ಯಾಂಕ್ ಗಳು ತೆರೆದಿರುತ್ತವೆ :
ಪಣಜಿ, ತಿರುವನಂತಪುರಂ, ಕೊಚ್ಚಿ, ಕೊಹಿಮಾ, ಇಟಾನಗರ, ಇಂಫಾಲ್, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಚಂಡೀಗಢ, ಭುವನೇಶ್ವರ್, ಅಹಮದಾಬಾದ್‌ನ ಬ್ಯಾಂಕ್‌ಗಳು ತೆರೆದಿರುತ್ತವೆ.
ಜುಲೈ 21: ಭಾನುವಾರವಾದ್ದರಿಂದ ದೇಶದ ಎಲ್ಲಾ ಬ್ಯಾಂಕುಗಳು ಜುಲೈ 21, 2024 ರಂದು ಮುಚ್ಚಲ್ಪಡುತ್ತವೆ.
ಜುಲೈ 27 : ನಾಲ್ಕನೇ ಶನಿವಾರವಾದ್ದರಿಂದ ಎಲ್ಲಾ ಬ್ಯಾಂಕುಗಳಿಗೂ ಜುಲೈ 27, 2024 ರಂದು ರಜೆ ಇರುತ್ತದೆ.
ಜುಲೈ 28 : ಈ ದಿನ ಜುಲೈ ತಿಂಗಳ ಕೊನೆಯ ಭಾನುವಾರವಾಗಿರುವುದರಿಂದ, ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಗಮನಿಸಿ (notice) :
ಬ್ಯಾಂಕ್ ರಜಾ ದಿನಗಳಲ್ಲಿ ಎಟಿಎಂ(ATM) ಹಾಗೂ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಲಭ್ಯವಿರುತ್ತದೆ. ಈ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಈ ಕಾರಣದಿಂದಾಗಿ, ಸ್ಥಳೀಯ ಜನರು ತಮ್ಮ ತಮ್ಮ ಕೆಲಸಗಳನ್ನು ರಜಾ ದಿನಗಳೂ ಮಾಡಿಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.