ಗುಡ್ ನ್ಯೂಸ್ : ಅವಿವಾಹಿತ ಯುವಕರಿಗೆ ಸರ್ಕಾರದಿಂದ ಹೊಸ ಯೋಜನೆ!

IMG 20240707 WA0000

ಉತ್ತರ ಕನ್ನಡದಲ್ಲಿ ‘ಜೀವನ ಸಂಗಮ’ ಪೋರ್ಟಲ್ ಆರಂಭ (Jeevana Sangama Portal) : ಅವಿವಾಹಿತರಿಗೆ ಇದೊಂದು ಶುಭ ಸುದ್ದಿ.

ಮದುವೆ ಕೇವಲ ಸಮಾರಂಭವಲ್ಲ, ತನ್ನ ಕಷ್ಟ ಸುಖಗಳಿಗೆ ಆಗಬಲ್ಲ ಜೀವನ ಸಂಗಾತಿ ಸಿಗುವ ಒಂದು ಅದ್ಭುತ ಕ್ಷಣ. ಆದರೆ ಇಂದು ಮದುವೆಯಾದರು ಕೂಡ ಹಲವಾರು ಕಾರಣಗಳಿಂದ ಮದುವೆಯಾದವರು ಬೇರ್ಪಡುತ್ತಿದ್ದಾರೆ. ಇದಕ್ಕೆ ಕಾರಣ ಹಲವು ಇದ್ದರೆ, ಮದುವೆಯಾಗಲು ಯುವಕರಿಗೆ ಹುಡುಗಿಯೇ ಸಿಗುತ್ತಿಲ್ಲ. ಯುವ ರೈತರೊಬ್ಬರು ಮದುವೆಯಾಗಲು ಕನ್ಯೆ ಹುಡುಕಿಕೊಡುವಂತೆ ಇತ್ತೀಚೆಗೆ ನಡೆದ ಜನಸ್ಪಂದನ (janaspamdana) ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದ ವಿಷಯ ಬಹಳ ಸುದ್ದಿ ಮಾಡಿತ್ತು. ಈ ಒಂದು ಘಟನೆಯಿಂದ ರೈತರು ಅದರಲ್ಲೂ ಯುವಕರು ವಿವಾಹವಾಗಲು  ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ಆದರೆ ಇದೀಗ ಅಂತಹ ರೈತರಿಗೆ ಶುಭ ಸುದ್ದಿ ತಿಳಿದು ಬಂದಿದೆ. ಹೌದು, ವಿವಾಹ ಬಯಸುವ ಯುವಕ ಹಾಗೂ ಯುವತಿಯರಿಗೆ ಸಹಾಯವಾಗುವಂತೆ ಉತ್ತರ ಕನ್ನಡ (Uttar kannada) ಜಿಲ್ಲಾಡಳಿತವು ವಿನೂತನ ವೇದಿಕೆ  ‘ಜೀವನ ಸಂಗಮ’ ಪೋರ್ಟಲ್ ಆರಂಭಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಪೋರ್ಟಲ್‌ನಿಂದ ಅವಿವಾಹಿತ ಯುವಕರಿಗೆ ವಿವಾಹ ಭಾಗ್ಯ ಸಿಗಲಿದ್ದು,ಯುವಕರು ಹುಡುಗಿ ಸಿಗುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲಾಡಳಿತದ ಮೂಲಕ ಯುವಕರಿಗೆ ಅದರಲ್ಲೂ ರೈತರಿಗೆ ಪರಿಹಾರ ನೀಡುತ್ತಿದ್ದು, ಕೇವಲ ರೈತರಿಗೆ ಅಷ್ಟೇ ಅಲ್ಲದೆ ವಿಕಲಚೇತನರು, ವಿಧವೆಯರಿಗೆ, ಹೆಚ್ ಐವಿ ಪೀಡಿತರಿಗೆ ವಿವಾಹವಾಗಲು ಸೂಕ್ತ ವೇದಿಕೆ  ‘ಜೀವನ ಸಂಗಮ’ ಪೋರ್ಟಲ್ ಆಗಲಿದ್ದು, ಈ ರೀತಿಯ ವಿಭಿನ್ನ ಹಾಗೂ ವಿಶೇಷ ಪ್ರಯತ್ನಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿರುವುದು ಹಲವು ಯುವಕರಿಗೆ ಹಾಗೂ ಯುವತಿಯರಿಗೆ ಸಂತಸವನ್ನು ತಂದಿದೆ.

ನೋಂದಣಿ ಮಾಡಿಕೊಳ್ಳಲು ಶುಲ್ಕದ ಅಗತ್ಯವಿಲ್ಲ.

ಸಂಬಂಧಗಳನ್ನು ಬಯಸುವಂತಹ ವ್ಯಕ್ತಿಗಳಿಗೆ ‘ಜೀವನ ಸಂಗಮ’ ಪೋರ್ಟಲ್ (Jeevan Sangam Portal) ಅನುಕೂಲಕರವಾಗಿದೆ. ಅರ್ಜಿ ಸಲ್ಲಿಸುವಂತಹ ಅರ್ಹರಿಗೆ ಅವರ ವಿವಾಹ ಸಂಬಂಧಗಳಲ್ಲಿ ಸುರಕ್ಷತೆ ಹಾಗೂ ಗೌರವಾನ್ವಿತ ವಾತಾವರಣವನ್ನು ಕಲ್ಪಿಸಿಕೊಡಲಾಗುತ್ತದೆ. ಬಹಳ ಮುಖ್ಯವಾಗಿ ಈ ಪೋರ್ಟಲ್ ಸೇವೆಯನ್ನು ಪಡೆಯಲು ಬಳಕೆದಾರರು ಯಾವುದೇ ರೀತಿಯ ಶುಲ್ಕವನ್ನು ನೀಡುವ ಅಗತ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹಾಗೂ  ಶಿಕ್ಷಣದ ಕೊರತೆ ಮತ್ತು ನಿರುದ್ಯೋಗಿಗಳಾಗಿರುವಂತಹ ಯುವಕರಿಗೆ ಹಾಗೂ ಯುವತಿಯರಿಗೆ ಸೂಕ್ತವಾದಂತಹ ಜೀವನ ಸಂಗಾತಿಯನ್ನು ಹುಡುಕಿ ಕೊಡುವ ಒಂದು ಉತ್ತಮ ವೇದಿಕೆ.

ಉತ್ತರಕನ್ನಡ ಜಿಲ್ಲಾಡಳಿತದ ವೆಬ್  ಸೈಟ್ (website) https://uttarakannada.nic.in/ನಲ್ಲಿ ‘ಜೀವನ ಸಂಗಮ’ ಎಂಬ ಪೋರ್ಟಲ್ ಅನ್ನು ಆರಂಭಿಸಲಾಗಿದೆ.ಅರ್ಜಿ ಸಲ್ಲಿಸಿರುವಂತಹ ವ್ಯಕ್ತಿಯ ಹಿನ್ನೆಲೆ,ವಾಸಸ್ಥಳ, ಉದ್ಯೋಗ, ಕೌಟುಂಬಿಕ ಪರಿಸ್ಥಿತಿ, ಆತನ ಆದಾಯ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿತಿಗತಿ ಬಗ್ಗೆ ಜಿಲ್ಲೆಯ ವಿವಿಧ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಅರ್ಹ ವ್ಯಕ್ತಿಗಳಿಗೆ ಮಾತ್ರ ಸರಿ ಹೊಂದುವಂತಹ ಸಂಗಾತಿಯನ್ನು ಹುಡುಕಿ ಕೊಡುತ್ತಾರೆ.

ಇ ಪೋರ್ಟಲ್‌ (e portal) ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅತ್ಯಂತ ಸುರಕ್ಷಿತವಾಗಿ ಇಡಲಿದ್ದು,ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ಎಲ್ಲರ ಗೌಪ್ಯತೆ ಮತ್ತು ಘನತೆಗೆ ಆದ್ಯತೆ ನೀಡಲಾಗಿದೆ. ಕೇವಲ ವಿವಾಹ ಹೊಂದಾಣಿಕೆಯ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ಬಳಸಲಾಗುತ್ತದೆ. ವಿವಾಹವಾಗಲು ಸಲ್ಲಿಸುವ ಅರ್ಜಿ ಮತ್ತು ಪ್ರೊಫೈಲ್ ಗಳನ್ನು (profile) ವ್ಯಕ್ತಿಯು ವಾಸವಾಗಿರುವ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸೇರಿದಂತೆ ಉತ್ತರ ಕನ್ನಡ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ಗಮನಿಸಿ (Notice) :

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ-ಯುವತಿಯರಿಗೆ ಮಾತ್ರ  ‘ಜೀವನ ಸಂಗಮ’ ಪೋರ್ಟಲ್ ಉಪಯೋಗವಾಗಲಿದ್ದು, ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಇದರ ನೆರವು ದೊರೆಯಲಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!