ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರಿಗೆ ಮುಗಿಬಿದ್ದ ಗ್ರಾಹಕರು .. 26 ಕಿ.ಮೀ ಮೈಲೇಜ್!

IMG 20240708 WA0001

ರೂ. 6 ಲಕ್ಷ ಬೆಲೆಯಲ್ಲಿ ಲಭ್ಯವಿದ್ದು, ಅತೀ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್ ನ ಮೈಕ್ರೋ ಎಸ್‌ಯುವಿ ಪಂಚ್!

ಭಾರತದಲ್ಲಿ ವಾಹನಗಳ ಅಬ್ಬರ ಹೆಚ್ಚಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ರೋಡಿಗಿಳಿಯುತ್ತವೆ. ಹಾಗೆಯೇ ವಾಹನ ತಯಾರಿಕೆ ಮತ್ತು ಕೊಂಡು ಕೊಳ್ಳುವವರು ಕೂಡ ಹೆಚ್ಚಾಗಿದ್ದಾರೆ. ಹೌದು, ವಾಹನ ತಯಾರಿಕ ಕಂಪನಿಗಳು ಒಂದರ ನಂತರ ಒಂದು ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಅತಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್(mileage) ನೀಡುವ ಮತ್ತು ತಂತ್ರಜ್ಞಾನ ಅಳವಡಿತ ವಾಹಗಳು ಇಂದು ಜನರನ್ನು ಆಕರ್ಷಿಸುತ್ತವೆ. ಭಾರತದಲ್ಲಿ ಹೆಸರು ವಾಸಿಯಾಗಿರುವ ವಾಹನ ತಯಾರಿಕ ಕಂಪನಿಗಳು ಹಲವಾರಿವೆ. ಅದರಲ್ಲೂ ಅತ್ಯಂತ ಜನಪ್ರಿಯ ಮತ್ತು ಹೆಸರು ವಾಸಿಯಾಗಿರುವ ವಾಹನ ತಯಾರಿಕಾ ಕಂಪನಿ ಎಂದರೆ ಅದು ಟಾಟಾ ಮೋಟಾರ್ಸ್ (Tata Motors). ಇದೀಗ ಈ ಕಂಪನಿಯ ಕಾರೊಂದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಹೆಚ್ಚು ಮಾರಾಟವಾಗಿದೆ. ಬನ್ನಿ ಹಾಗಾದರೆ, ಈ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರು ಟಾಟಾ ಪಂಚ್ ಮೈಕ್ರೋ-ಎಸ್‌ಯುವಿ (Tata Punch Micro-Suv) :
eed7oot4 tata punch micro suv official unveil live updates features specifications launch date

ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ಕಳೆದ ತಿಂಗಳು (ಜೂನ್ 2024) ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ಜನಪ್ರಿಯ ಮೈಕ್ರೋ ಎಸ್‌ಯುವಿ ‘ಪಂಚ್’ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾರು ಎಂದು ತಿಳಿದು ಬಂದಿದೆ. ಈ ಕಾರು ವರ್ಷದ ಮೊದಲ ಮೂರು ತಿಂಗಳಲ್ಲಿ ಹೆಚ್ಚು ಮರಾಟವಾಗಿದೆ. ಜೂನ್‌ನಲ್ಲಿ 18,238 ಯುನಿಟ್, ಮಾರ್ಚ್‌ನಲ್ಲಿ 17,547 ಹಾಗೂ ಏಪ್ರಿಲ್‌ನಲ್ಲಿ 19,158 ಯುನಿಟ್ ಪಂಚ್ ಎಸ್‌ಯುವಿಗಳನ್ನು ಮಾರಾಟವಾಗಿವೆ.

ಎರಡು ಆಯ್ಕೆಗಳಲ್ಲಿ ಲಭ್ಯವಿದೆ ಈ ಕಾರು :

ಟಾಟಾ ಪಂಚ್ ಮೈಕ್ರೋ-ಎಸ್‌ಯುವಿ (Tata Punch Micro-Suv) ಇಂಧನ ಹಾಗೂ ವಿದ್ಯುತ್ ಚಾಲಿತ ಎರಡು ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಪ್ಯೂರ್ ಮತ್ತು ಅಡ್ವೆಂಚರ್ ಸೇರಿದಂತೆ ವಿವಿಧ ವೇರಿಯೆಂಟ್ ಗಳ (different varient) ಆಯ್ಕೆಯನ್ನು ಹೊಂದಿದೆ. ಅಟಾಮಿಕ್ ಆರೆಂಜ್, ಟ್ರಾಪಿಕಲ್ ಮಿಸ್ಟ್, ಡೇಟೋನಾ ಗ್ರೇ ಒಳಗೊಂಡಂತೆ ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ಟಾಟಾ ಪಂಚ್ ಮೈಕ್ರೋ-ಎಸ್‌ಯುವಿ ಇಂಧನ ಚಾಲಿತ ಮತ್ತು ಎಲೆಕ್ಟ್ರಿಕ್ ಚಾಲಿತ ಕಾರಿನ ವೈಶಿಷ್ಟ್ಯತೆಗಳು (features) :
ಇಂಧನ ಚಾಲಿತ ಕಾರಿನ ಮೈಲೇಜ್ ಮತ್ತು ಇಂಜಿನ್ ಸಾಮರ್ಥ್ಯ (milage and Engine power) :

ಪಂಚ್ ಎಸ್‌ಯುವಿಯು ಕಾರು  1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಪೆಟ್ರೋಲ್ ಚಾಲಿತ ಮಾದರಿಗಳು 18.8 ರಿಂದ 20.09 ಕೆಎಂಪಿಎಲ್, ಸಿಎನ್‌ಜಿ ಚಾಲಿತ ರೂಪಾಂತರಗಳು 26.99 ಕೆಎಂ/ಕೆಜಿ ಮೈಲೇಜ್ ನೀಡುತ್ತವೆ.

ಟಾಟಾ ಪಂಚ್ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಾಯಾಣಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ದೊಡ್ಡದಾದ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ರೇರ್-ವ್ಯೂ ಕ್ಯಾಮೆರಾವನ್ನು ಹೊಂದಿದೆ.

ಟಾಟಾ ಪಂಚ್ ಎಲೆಕ್ಟ್ರಾನಿಕ್ ಕಾರು (Tata Punch Electric EV) :

ಈ ಕಾರು ರೂ.10.99 ಲಕ್ಷದಿಂದ ರೂ.15.49 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಸೇರಿದಂತೆ ಹಲವು ರೂಪಾಂತರಗಳೊಂದಿಗೆ ದೊರೆಯುತ್ತದೆ. ಸ್ಮಾರ್ಟ್ ಸಿಂಗಲ್ ಟೋನ್, ಫಿಯರ್‌ಲೆಸ್ ರೆಡ್ ಡುಯಲ್ ಟೋನ್, ಡೇಟೋನಾ ಗ್ರೇ ಡುಯಲ್ ಟೋನ್ ಒಳಗೊಂಡಂತೆ 1 ಮೊನೊಟೋನ್ ಹಾಗೂ 5 ಡುಯಲ್ ಟೋನ್ ಬಣ್ಣಗಳನ್ನು ಹೊಂದಿದೆ.

ಪಂಚ್ ಇವಿ ಮೈಲೇಜ್ ಮತ್ತು ಬ್ಯಾಟರಿ ಸಾಮರ್ಥ್ಯ (battery and power) :

ಪಂಚ್ ಇವಿ 25 ಮತ್ತು 35 ಕೆಡಬ್ಲ್ಯೂಹೆಚ್ ಬ್ಯಾಟರಿ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 315 ರಿಂದ 421 ಕಿಲೋಮೀಟರ್ ಓಡುತ್ತದೆ. ಇದರ ಬ್ಯಾಟರಿ ಪ್ಯಾಕ್ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇಕಡ 10-80% ಚಾರ್ಜ್ ಆಗುವುದಕ್ಕೆ 56 ನಿಮಿಷ ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 5 ಜನರು ಕುಳಿತು ಆರಾಮವಾಗಿ ಪ್ರಯಾಣಿಸಬಹುದು.

ಟಾಟಾ ಪಂಚ್ ಇವಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!