ಜುಲೈ 23ರಂದು ಮಂಡನೆಯಾಗುವ ಬಜೆಟ್ ನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಹಣ ಹೆಚ್ಚಳ ಆಗುವ ಸಾಧ್ಯತೆ.
ಕೇಂದ್ರ ಸರ್ಕಾರ(central government)ದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವಂತಹ ಎನ್ ಡಿ ಎ ಸರ್ಕಾರ (NDA Government) ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಅದರಲ್ಲೂ ದೇಶದಲ್ಲಿ ಇರುವಂತಹ ಬಡ ಜನರು ಹಾಗೂ ಮಧ್ಯಮ ವರ್ಗದ ಜನರನ್ನು ಮುಂದೆ ತರುವ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಮುಂಬರುವಂತಹ ಅಂದರೆ ಜುಲೈ 23ರಂದು ಮಂಡನೆಯಾಗುವ ಬಜೆಟ್ ನಲ್ಲಿ ಹಲವು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ. ಅದರಲ್ಲೂ ಬಡ ಜನರು ಹಾಗೂ ಮಾಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಅವರ ಅನಾರೋಗ್ಯದ ಸಮಯದಲ್ಲಿ ಸಹಾಯವಾಗುವಂತಹ ಆಯುಷ್ಮಾನ್ ಭಾರತ್ ಯೋಜನೆಯ ಮೇಲೆ ಮಹತ್ತರ ನಿರ್ಧಾರವನ್ನು ಕೈಗೊಳ್ಳಲಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ (Ayushman Bharat PM Jan Arogya Yojana) ಭಾರತದಲ್ಲಿ ಅರೋಗ್ಯ ವಿಮೆಯ (Helath insurance) ವ್ಯಾಪ್ತಿ ಹೆಚ್ಚಿದೆ. ಆರೋಗ್ಯದ ಸಮಸ್ಯೆ ಹಲವು ಕಾರಣಗಳಿಂದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಬರುವಂತಹ ವೆಚ್ಚವನ್ನು ನಿಭಾಯಿಸಲು ಆಗುವುದಿಲ್ಲ. ಆದ್ದರಿಂದ ಈ ಯೋಜನೆಯ ಬಗ್ಗೆ ಇನ್ನಷ್ಟು ಓತ್ತು ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಜುಲೈ 23ರಂದು ಮಂಡನೆಯಾಗುವ ಬಜೆಟ್ ನಲ್ಲಿ ಆರೋಗ್ಯ ವಿಮೆ ಇಲ್ಲದವರಿಗೆ ಆರೋಗ್ಯ ವಿಮೆಗಳನ್ನು ಮಾಡಿಸಿಕೊಡುವುದರ ಜೊತೆಗೆ, ಒಂದು ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಗಳವರೆಗೆ ಇದ್ದಂತಹ ಆರೋಗ್ಯ ವಿಮೆಯನ್ನು 10 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಆಯುಷ್ಮಾನ್ ವಿಮೆಯ (Ayushman Insurence) ಮೊತ್ತವನ್ನು ಹೆಚ್ಚಿಸುವುದರ ಜೊತೆಗೆ ಫಲಾನುಭವಿಗಳ ಸಂಖ್ಯೆಯನ್ನು ಈಗಾಗಲೇ ಇರುವದಕ್ಕಿಂತ ಎರಡು ಪಟ್ಟು ಹೆಚ್ಚಿಸುವ ಬಗ್ಗೆ ಗಮನ ಹರಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫಲಾನುಭವಿಗಳ ಸಂಖ್ಯೆಯನ್ನು ಎರಡು ಪಟ್ಟು ಹೆಚ್ಚಿಸುವುದರಿಂದ ಲಾಭ ದುಪ್ಪಟ್ಟಾಗಲಿದೆ. ಈ ಹಿಂದೆ 70 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗಿರುವುದಿಲ್ಲ, ಆದರೆ ಇದೀಗ ಅವರಿಗೆ ಆದ್ಯತೆ ನೀಡಿ ಮುಂದಿನ ಮೂರು ವರ್ಷದಲ್ಲಿ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯನ್ನೂ ಆಯುಷ್ಮಾನ್ ಭಾರತ್ ಅರೋಗ್ಯ ವಿಮೆ ಯೋಜನೆಗೆ (Ayushman Bharat Health Insurance Scheme) ತರಲು ಸರ್ಕಾರ ಚಿಂತನೆ ನಡೆಸಿದೆ. ಇನ್ನು ವರ್ಷಕ್ಕೆ 5 ಲಕ್ಷ ನೀಡುತ್ತಿದ್ದ ಹಣ 10 ಲಕ್ಷ ರೂ.ಗೆ ಹೆಚ್ಚಿಸುತ್ತಿರುವುದರಿಂದ ಫಲಾನುಭವಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (NHA) ಸಿದ್ಧಪಡಿಸಿದ ಅಂದಾಜಿನ ಪ್ರಕಾರ ವಿಮೆ ಮೊತ್ತ ಹೆಚ್ಚಳ ಮತ್ತು ಫಲಾನುಭವಿಗಳ ಸಂಖ್ಯೆ ಹೆಚ್ಚಳದಿಂದ ಸರ್ಕಾರಕ್ಕೆ ವರ್ಷಕ್ಕೆ ಸುಮಾರು ₹ 12,076 ಕೋಟಿ ರೂನಷ್ಟು ಹೆಚ್ಚುವರಿ ವೆಚ್ಚ ಆಗಬಹುದು ಎಂದು ವರದಿ ತಿಳಿಸಿದೆ.ಈಗಾಗಲೇ ಒಟ್ಟು 12 ಕೋಟಿ ಕುಟುಂಬಕ್ಕೆ ಹೆಲ್ತ್ ಕವರ್ ಇದೆ. ಈಗ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನೂ ಈ ಯೋಜನೆಯ ವ್ಯಾಪ್ತಿ ವಿಸ್ತರಿಸುವುದರಿಂದ ಫಲಾನುಭವಿಗಳ ಸಂಖ್ಯೆ 16-17 ಕೋಟಿಯಷ್ಟಾಗಬಹುದು ಎಂಬ ಅಂದಾಜು ಇದೆ.
ಈ ಯೋಜನೆಯ ಲಾಭ ಪಡೆಯಲು ಅರ್ಜಿ (Application) ಸಲ್ಲಿಸಿದವರಿಗೆ ಕೇಂದ್ರವು ಆಯುಷ್ಮಾನ್ ಕಾರ್ಡ್ ನೀಡುತ್ತದೆ.ಈ ಆಯುಷ್ಮಾನ್ ಕಾರ್ಡ್ ಆಧಾರ್ ಕಾರ್ಡ್ ಇದ್ದಂತೆ. ಹಣ ಹೆಚ್ಚುವರಿ ಮಾಡಿದಲ್ಲಿ ಫಲಾನುಭವಿಗಳು ಆಸ್ಪತ್ರೆಯಲ್ಲಿ 10 ಲಕ್ಷ ರೂ.ಗಳ ವರಿಗೆ ಉಚಿತ ಚಿಕಿತ್ಸೆ ಪಡೆಯಬಹುದು. ವಾಸ್ತವದಲ್ಲಿ ಇನ್ಷೂರೆನ್ಸ್ ಕವರೇಜ್ (Insurence coverage) ಇಲ್ಲದವರ ಪ್ರಮಾಣವು ಶೇ. 30ಕ್ಕಿಂತಲೂ ಹೆಚ್ಚಿರಬಹುದು ಎಂದು 2021 ರ ನೀತಿ ಆಯೋಗ ವರದಿ ಮಾಡಿತ್ತು. ಆರೋಗ್ಯ ವಿಮೆಯಿಂದ ವಂಚಿತರಾಗಿರುವ ಈ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ತಲುಪಿಸುವುದು ಸರ್ಕಾರದ ಗುರಿಯಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.