ಸದ್ಯದಲ್ಲೇ ವಿಶ್ವದ ಮೊದಲ ಸಿ ಎನ್ ಜಿ ದ್ವಿಚಕ್ರ ಸ್ಕೂಟರ್ (CNG two wheel scooter) ಅನ್ನು ಬಿಡುಗಡೆಗೊಳಿಸಲಿದೆ ಟಿವಿಎಸ್(TVS)!
ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ವಾಹನಗಳನ್ನು ನೋಡುತ್ತೇವೆ. ಅದರಲ್ಲೂ ಇಂದು ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗಿ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ. ಇಂಧನ ಚಾಲಿತ ವಾಹನಗಳು ಹಾಗೂ ಎಲೆಕ್ಟ್ರಿಕ್ ಚಾಲಿತ ವಾಹನಗಳು ಪರಸ್ಪರ ಪೈಪೋಟಿಯನ್ನು ನೀಡುತ್ತಿವೆ. ದಿನದಿಂದ ದಿನಕ್ಕೆ ವಿಶೇಷ ತಂತ್ರಜ್ಞಾನ ಅಳವಡಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನಗಳಂತೂ (two wheel vehicles) ಹೇಳುವುದೇ ಬೇಡ ಇಂದಿನ ಯುವಕರ ಕ್ರೇಜ್ ಆಗಿಬಿಟ್ಟಿದೆ. ಹಾಗೆಯೇ ಇದೀಗ ಜನಪ್ರಿಯ ಟಿವಿಎಸ್ ಕಂಪನಿಯು ಶೀಘ್ರದಲ್ಲಿ ವಿಶ್ವದ ಮೊದಲ ಸಿ ಎನ್ ಜಿ ಚಾಲಿತ ದ್ವಿಚಕ್ರ ವಾಹನವನ್ನು ಬಿಡುಗಡೆ ಗೊಳಿಸಲು ಸಜ್ಜಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಿ ಎನ್ ಜಿ ದ್ವಿಚಕ್ರ ವಾಹನ ತಯಾರಿಸುವ ಉದ್ದೇಶ :
ಮುಂದಿನ ದಿನಗಳಲ್ಲಿ ಜನಪ್ರಿಯವಾದ ಜುಪಿಟರ್ (Jupiter) ಸ್ಕೂಟರ್ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಲಭ್ಯವಾಗಲಿದೆ. ಟಿವಿಎಸ್ ಮೋಟಾರ್ ತಿಂಗಳಿಗೆ ಸರಿ ಸುಮಾರು 1,000 ಯುನಿಟ್ ಸಿಎನ್‌ಜಿ ಸ್ಕೂಟರ್‌ಗಳನ್ನು ಮಾರಾಟಗೊಳಿಸುವ ಸಾಧಾರಣ ಗುರಿಯನ್ನು ಹೊಂದಿದೆ. ಇದು ಕಂಪನಿಯು ಇಂಗಾಲ ಹೊರಸೂಸುವ ದ್ವಿಚಕ್ರ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶವಾಗಿದೆ. ಈಚೆಗೆ ಬಿಡುಗಡೆಗೊಂಡ ಪ್ರಪಂಚದ ಮೊದಲ ಬಜಾಜ್ ಫ್ರೀಡಂ 125 ಸಿಎನ್‌ಜಿ ಮೋಟಾರ್‌ಸೈಕಲ್‌ನಂತೆ ಜುಪಿಟರ್ ಸ್ಕೂಟರ್ ಕೂಡ ಸಿಎನ್‌ಜಿ/ ಪೆಟ್ರೋಲ್ ಟ್ಯಾಂಕ್ ಎರಡನ್ನು ಹೊಂದಿರಬಹುದು ಎನ್ನಲಾಗಿದೆ.
ಸಿಎನ್‌ಜಿ (CNG) ಎಂಜಿನ್‌ನ್ನು ಪರಿಚಯಿಸಲು ಮುಂದಾದ ಟಿವಿಎಸ್ :
ಭಾರತದಲ್ಲಿ ವಾಹನಗಳ ತಯಾರಿಕೆಯಲ್ಲಿ ಹೆಸರುವಾಸಿ ಮಾಡಿದ ಕಂಪನಿ ಎಂದರೆ ಅದು ಟಿವಿಎಸ್. ಇಂದು ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕವಾಗಿರುವ ಹಲವು ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಹಾಗೆಯೇ ಇದೀಗ ಟಿವಿಎಸ್ ಕಂಪನಿಯು ವಿವಿಧ ಪರ್ಯಾಯ ಇಂಧನ (Fuel) ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ದ್ವಿಚಕ್ರ ವಾಹನಗಳಲ್ಲಿ ಸಿಎನ್‌ಜಿ (CNG) ಎಂಜಿನ್‌ನ್ನು ಪರಿಚಯಿಸಲು ಸಾಕಷ್ಟು ತಯಾರಿ ನಡೆಸುತ್ತಿದೆ. ಶೀಘ್ರದಲ್ಲಿ ಈ ಒಂದು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ.
125 ಸಿಸಿ ಸಿಎನ್‌ಜಿ ಸ್ಕೂಟರ್ ಕೆಲಸ ಶುರುವಾಗಿದ್ದು, 2025 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಬಹುದು :
ಟಿವಿಎಸ್ ಕಂಪನಿ ‘ಯು740’ ಸಂಕೇತ ನಾಮ (Code Name) ಹೊಂದಿರುವ 125 ಸಿಸಿ ಸಿಎನ್‌ಜಿ ಸ್ಕೂಟರ್ ಅಭಿವೃದ್ಧಿಪಡಿಸುವ ಕೆಲಸವನ್ನು ಶುರು ಮಾಡಿದೆ. ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಉತ್ಪಾದನೆ ಆರಂಭವಾಗಬಹುದು ಎನ್ನಲಾಗಿದ್ದು, ಈ ವರ್ಷಾಂತ್ಯ ಅಥವಾ 2025ರ ಆರಂಭದಲ್ಲಿ ಮಾರುಕಟ್ಟೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಬಹುಶಃ ಇದೇ ವಿಶ್ವದ ಪ್ರಥಮ ಸಿಎನ್‌ಜಿ ಸ್ಕೂಟರ್ ಎಂಬ ಹೆಸರು ಕೂಡ ಟಿವಿಎಸ್ ಪಡೆದುಕೊಳ್ಳಬಹುದು.
ಪ್ರಸ್ತುತ ದೇಶೀಯವಾಗಿ ಖರೀದಿಗೆ ಸಿಗುವ ಇಂಧನ ಚಾಲಿತ ಟಿವಿಎಸ್ ಜೂಪಿಟರ್ 125 :
ಟಿವಿಎಸ್ ಜೂಪಿಟರ್ 125 (TVS Jupiter 125) ಸ್ಕೂಟರ್ ರೂ.89,155 ದಿಂದ ರೂ.99,805 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಜುಪಿಟರ್ ಸ್ಕೂಟರ್ 124.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.2 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 10.5 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 57.27 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 108 ಕೆಜಿ ತೂಕವಿದ್ದು, 5.1 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.
ನೂತನವಾಗಿ ತಯಾರಾಗುವ ಸಿಎನ್‌ಜಿ ಚಾಲಿತ ಸ್ಕೂಟರ್ ನ ವೈಶಿಷ್ಟತೆಗಳು (features) :
ನೂತನ ಟಿವಿಎಸ್ ಜುಪಿಟರ್ ಡ್ರಮ್, ಡಿಸ್ಕ್ ಮತ್ತು ಸ್ಮಾರ್ಟ್‌ಕನೆಕ್ಟ್ ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯನ್ನು ಹೊಂದಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. ಜೊತೆಗೆ ಲಗೇಜ್ ಸಾಗಿಸಲು ಆಸನದ ಕೆಳಗೆ (ಸೀಟ್ ಅಂಡರ್) ಬರೋಬ್ಬರಿ 33 ಲೀಟರ್ ಸಾಮರ್ಥ್ಯದ ಸ್ಟೋರೇಜ್ (ಸಂಗ್ರಹ ಪೆಟ್ಟಿಗೆ) ಕೂಡ ಇದೆ.
ಈ ಸ್ಕೂಟರ್ ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಎಲ್‌ಇಡಿ ಟೈಲ್ ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) 12-ಇಂಚಿನ ಅಲಾಯ್ ವೀಲ್‌ಗಳು ಹಾಗೂ 90/90-12 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.