ರಿವರ್ಸ್ ಆಸ್ಮೋಸಿಸ್ (RO) ಪ್ಲಾಂಟ್ ಗಳಲ್ಲಿ 20 ಲೀಟರ್ ನೀರಿಗೆ 5 ರೂ ನಾಣ್ಯ ಬಳಸುತ್ತಿದ್ದರು. ಇದೀಗ ಅದು 10 ರೂ ಗೆ ಹೆಚ್ಚಳವಾಗಿದೆ.
Drinking water price hike : ಕುಡಿಯುವ ನೀರು ಇಂದು ಎಲ್ಲರಿಗೂ ಅವಶ್ಯಕ. ಅದರಲ್ಲೂ ಶುದ್ಧ ಕುಡಿಯುವ ನೀರು ಇಲ್ಲದೆ ಜನರು ಹೆಚ್ಚು ಹೆಚ್ಚು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಎಲ್ಲರೂ ಕೂಡ ಶುದ್ಧೀಕರಿಸಿದ ನೀರನ್ನು ಬಳಸುತ್ತಿರುವುದನ್ನು ನಾವು ಕಾಣಬಹುದು. ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಜನರೂ ಕೂಡ ಇಂದು ಆರ್ ಒ ಪ್ಲಾಂಟ್ ಗಳ (RO plant) ನೀರನ್ನು ಅವಲಂಬಿಸಿದ್ದಾರೆ. ಕೇವಲ 5 ರೂ ಗಳಿಗೆ 20 ಲೀಟರ್ ನೀರು ಸಿಗುತ್ತಿದ್ದಿದ್ದರಿಂದ ಜನರಿಗೆ ಉಪಯುಕ್ತವಾಗುತ್ತಿತ್ತು. ಆದರೆ ಇದೀಗ 20 ರೂ ಲೀಟರ್ ನೀರನ್ನು ಪಡೆಯಲು 5 ರೂ ಗಳ ಎರೆಡು ನಾಣ್ಯಗಳನ್ನು ಬಳಸಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಾಗರಿಕ ಸಂಸ್ಥೆ ಸ್ಥಾಪಿಸಿದ ಹಲವಾರು ರಿವರ್ಸ್ ಆಸ್ಮೋಸಿಸ್ (Reverse Osmosis) ಕುಡಿಯುವ ನೀರಿನ ಘಟಕಗಳ ಉಪಯೋಗವನ್ನು ಇಂದು ಜನರು ಪಡೆದುಕೊಳ್ಳುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಬಳಸಿ ಅರೋಗ್ಯವಂತ ಜೀವನವನ್ನು ನಡೆಸುತ್ತಿದ್ದಾರೆ. ತಾಲ್ಲೂಕಿನ ಯಾವುದೇ ಹಳ್ಳಿಗೆ ಹೋದರೂ ಜನರು ಶುದ್ಧ ಕುಡಿಯುವ ನೀರಿಗಾಗಿ ಆರ್ ಒ ಪ್ಲಾಂಟ್ ಗಳ ಬಳಕೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಹಣದ ಕಾರಣದಿಂದಲೋ ಅಥವಾ ಬೇರೆ ಬೇರೆ ಕಾರಣಗಳಿಂದ ಹಲವರಿಗೆ ತಮ್ಮ ತಮ್ಮ ಮನೆಗಳಲ್ಲಿ ನೀರನ್ನು ಶದ್ದೀಕರಿಸಲು ಸಾಧ್ಯವಾಗುವುದಿಲ್ಲ ಅಂಥವರು ಆರ್ ಒ ಪ್ಲಾಂಟ್ ಗಳ ಬಳಕೆಯಿಂದ ಶುದ್ಧ ಕುಡಿಯುವ ನೀರನ್ನು ಬಳಸುತ್ತಿದ್ದರು. ಅದರಲ್ಲೂ ಚಾಟ್ಸ್ ಸೆಂಟರ್ ಗಳು,ಕೂಲಿ ಕಾರ್ಮಿಕರು, ಪಿಜಿಗಳ ನಿರ್ವಹಣೆ ಮಾಡುವವರು ಹಾಗೂ ರಸ್ತೆ ಬದಿಗಳಲ್ಲಿ ಫಾಸ್ಟ್ ಫುಡ್ (fast food) ಮಾಡುವವರು ಕೂಡ ಆರ್ ಒ ಪ್ಲಾಂಟ್ ಗಳನ್ನು ಅವಲಂಬಿಸಿದ್ದರು.ಆದರೆ ಇದೀಗ ಈ ನೀರಿನ ದರ ಹೆಚ್ಚಳ ಆಗಿರುವುದು ಎಲ್ಲಾರ ಮನಸಲ್ಲೂ ಆತಂಕವನ್ನು ಸೃಷ್ಟಿ ಮಾಡಿದೆ.
ದರ ಏರಿಸಲು ಕಾರಣ ಏನು?
ಬೆಂಗಳೂರು ನಗರದಲ್ಲಿ ಒಟ್ಟು 1052 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಶುದ್ಧ ನೀರಿಗಾಗಿ 5 ರೂ. ಬಳಸಿ 20 ಲೀಟರ್ ನೀರನ್ನು ಪಡೆಯುತ್ತಿದ್ದೆವು, ಆದರೆ ಯಾವುದೇ ಸೂಚನೆಯನ್ನು ನೀಡದೆ ನೀರಿನ ನಿರ್ವಹಣೆ ಮಾಡುವ ಏಜೆನ್ಸಿಗಳು (agencies) ನೀರಿನ ಬೆಲೆಯನ್ನು 10 ರೂ ಗೆ ಮಾಡರುವುದು ಸರಿಯಲ್ಲ. ವಿದ್ಯುತ್ ಬಿಲ್ ಮತ್ತು ಘಟಕದ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಕಾರಣದಿಂದ ಹಲವು ಏಜೆನ್ಸಿಗಳು ಬೆಲೆ ಏರಿಕೆ ಮಾಡಿದ್ದಾರೆ ಎಂದು ಗಾಯಿತ್ರಿ ನಗರದ ನಿವಾಸಿ ಶಂಕರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಇನ್ನು ಮುಂದೆ ಆರ್ ಒ ಪ್ಲಾಂಟ್ ಗಳಲ್ಲಿ 20 ಲೀಟರ್ ನೀರನ್ನು ಪಡೆಯಲು 5 ರೂ.ಗಳ ಏರಡು ನಾಣ್ಯಗಳನ್ನು ಬಳಸಬೇಕಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.