ಬ್ಯಾಂಕ್ ಖಾತೆಯ ಹಣ ವರ್ಗಾವಣೆಯ ಇತಿಮಿತಿ ಹಾಗೂ ನಿಯಮಗಳ ಬಗ್ಗೆ ಮಾಹಿತಿ ತಿಳಿಯಿರಿ.
ಇಂದು ಎಲ್ಲರು ಬ್ಯಾಂಕ್ ಖಾತೆ(Bank account)ಯನ್ನು ಹೊಂದಿದ್ದಾರೆ. ದಿನನಿತ್ಯ ಹಲವಾರು ವಹಿವಾಟುಗಳು (transactions) ಬ್ಯಾಂಕ್ ಖಾತೆಯ ಮೂಲಕ ನಡೆಯುತ್ತದೆ. ಹಾಗೆಯೇ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಹಲವಾರು ನಿಯಮಗಳಿವೆ. ಈ ನಿಯಮಗಳುನಸಾರ ನಡೆದುಕೊಳ್ಳಬೇಕಾಗುತ್ತದೆ. ವರ್ಷಕ್ಕೆ ಇಂತಿಷ್ಟು ಹಣ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಜಮಾ ಆಗಬೇಕು, ಇಲ್ಲ ತಮ್ಮ ಬ್ಯಾಂಕ್ ಖಾತೆಯಿಂದ ಮತ್ತೊಬ್ಬರ ಖಾತೆಗೆ ಕಳುಹಿಸಬಹುದು. ಈ ನಿಯಮಗಳು ಯಾವುವು ಮತ್ತು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
10 ಲಕ್ಷ ರೂಗಿಂತ ಹೆಚ್ಚು ಹಣ ಖಾತೆಗೆ ಬಂದರೆ ಅದರ ಬಗ್ಗೆ ವಿಚಾರಿಸುವ ಹಕ್ಕು ಇಲಾಖೆಗೆ ಇದೆ :
ಬ್ಯಾಂಕ್ ಖಾತೆಗಳಿಂದ ಹಣದ ವಹಿವಾಟು ಬಹಳ ನಡೆಯುತ್ತದೆ. ನಮ್ಮ ಆದಾಯ ಮತ್ತು ವ್ಯವಹಾರಕ್ಕೆ ಅನುಗುಣವಾಗಿ ಬ್ಯಾಂಕ್ ಖಾತೆಗೆ (bank account) ಹಣ ಹರಿದುಬರುತ್ತದೆ. ಬ್ಯಾಂಕ್ ಖಾತೆಯಲ್ಲಿ ಇಷ್ಟೇ ಹಣ ಇಡಬೇಕು ಎನ್ನುವ ಮಿತಿ ಇಲ್ಲ. ಎಷ್ಟು ಬೇಕಾದರೂ ಜಮೆ ಮಾಡಬಹುದು.
ಆದರೆ, 10 ಲಕ್ಷ ರೂಗಿಂತ ಹೆಚ್ಚು ಹಣ ಖಾತೆಗೆ ಬಂದರೆ ಆ ಹಣ ಯಾವ ಮೂಲದ್ದು ಎಂದು ಇಲಾಖೆ ಕೇಳುತ್ತದೆ. ಇದು ಬ್ಯಾಂಕ್ ನ ನಿಯಮಗಳ ಅಡಿಯಲ್ಲಿ ಬರುತ್ತದೆ.
ರೂ. 10 ಲಕ್ಷ ಗಿಂತ ಹೆಚ್ಚು ವರ್ಗಾವಣೆ ಆದರೆ, ಕೇಂದ್ರೀಯ ತೆರಿಗೆ ಮಂಡಳಿಯ ಗಮನಕ್ಕೆ :
ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಬ್ಯಾಂಕ್ ಖಾತೆಗಳನ್ನು ಹೊಂದಬಹುದು. ಹಾಗೆಯೇ ಎಷ್ಟು ಬೇಕಾದರೂ ಹಣವನ್ನು ಖಾತೆಗಳಲ್ಲಿ ಇರಿಸಿಕೊಳ್ಳಬಹುದು. ಅದಕ್ಕೆ ಮಿತಿ ಎಂಬುದು ಇರುವುದಿಲ್ಲ. ಆದರೆ, ಲೆಕ್ಕಕಿಂತ ಮೀರಿದ ಹಣವನ್ನು ಬ್ಯಾಂಕ್ ಖಾತೆಗೆ ಹಾಕುವುದಕ್ಕೆ ಕೆಲವೊಂದು ನಿಯಮಗಳಿವೆ. ಯಾವುದೇ ಬ್ಯಾಂಕ್ ಖಾತೆಗೆ 10 ಲಕ್ಷ ರೂ (above 10 lakh) ಗಿಂತ ಹೆಚ್ಚು ಹಣವನ್ನು ವರ್ಗಾವಣೆ ಮಾಡಿದರೆ, ಆ ಬ್ಯಾಂಕ್ ಅದರ ಮಾಹಿತಿಯನ್ನು ಸಿಬಿಡಿಟಿ ಅಥವಾ ಕೇಂದ್ರೀಯ ನೇರ ತೆರಿಗೆ ಮಂಡಳಿಯ(Tax Department) ಗಮನಕ್ಕೆ ತರುತ್ತದೆ.
ಖಾತೆಗೆ ಕ್ಯಾಷ್ ಡೆಪಾಸಿಟ್ ಮಾಡಿದರೂ ಈ ನಿಯಮ ಅನ್ವಯಿಸುತ್ತದೆ :
ಮ್ಯೂಚುವಲ್ ಫಂಡ್ (mutual fund), ಷೇರು, ಬಾಂಡು, ಎಫ್ ಡಿ (FD) ಇತ್ಯಾದಿ ಹೂಡಿಕೆಗಳಿಗೂ ಈ ನಿಯಮ ಅನ್ವಯ ಆಗುತ್ತದೆ. 10 ಲಕ್ಷ ರೂ ಹಣ ಖಾತೆಗೆ ವರ್ಗಾವಣೆ ಆದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ, ಆದಾಯ ತೆರಿಗೆ ಇಲಾಖೆ ಆ ಹಣದ ಮೂಲವನ್ನು ಕೇಳಬಹುದು. ಕ್ಯಾಷ್ ಡೆಪಾಸಿಟ್ (cash deposit) ಮಾಡಿದ್ದರೆ ಆ ನಗದು ಹಣ ಎಲ್ಲಿಂದ ಬಂತು ಎಂಬ ಮಾಹಿತಿಯನ್ನು ನೀಡಬೇಕಾಗುತ್ತದೆ.
ಅಕ್ರಮ ಚಟುವಟಿಕೆ ಮೂಲಕ ವರ್ಗಾವಣೆ ಆದ ಹಣಕ್ಕೆ ಆದಾಯ ತೆರಿಗೆ ಇಲಾಖೆಯಿಂದ ದಂಡ ವಿಧಿಸಲಾಗುತ್ತದೆ :
ಒಂದು ವೇಳೆ ಬ್ಯಾಂಕ್ ಖಾತೆಗೆ (bank account) ಅಕ್ರಮ ಚಟುವಟಿಕೆಯ ಮೂಲಕ ಹಣ ಬಂದಿದೆ ಎಂದು ತಿಳಿದು ಬಂದರೆ ಆ ಹಣಕ್ಕೆ ಆದಾಯ ತೆರಿಗೆ ಇಲಾಖೆ ಶೇ. 60ರಷ್ಟು ತೆರಿಗೆ, ಶೇ. 25ರಷ್ಟು ಹೆಚ್ಚುವರಿ ತೆರಿಗೆ ಮತ್ತು ಶೇ. 4ರಷ್ಟು ಸೆಸ್ ವಿಧಿಸುತ್ತದೆ. ಅಂದರೆ, ನೂರಕ್ಕೆ ತೊಂಬತ್ತರಷ್ಟು ಹಣ ತೆರಿಗೆ ಪಾಲಾಗುತ್ತದೆ. ಖಾತೆ ದಾರರಿಗೆ ಉಳಿಯುವುದು ಶೇ.10 ಮಾತ್ರವಷ್ಟೆ. ಆದ್ದರಿಂದ ದೊಡ್ಡ ಮೊತ್ತದ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಿದ್ದರೆ, ಆ ಹಣದ ಮೂಲ ಎಲ್ಲಿಯದು ಎಂಬುದರ ದಾಖಲೆ ಅಥವಾ ಪುರಾವೆ ನಿಮ್ಮ ಬಳಿ ಇರಬೇಕು.
ಬಡ್ಡಿ ಆದಾಯಕ್ಕೆ ತೆರಿಗೆ ಕಡ್ಡಾಯ :
ಸೇವಿಂಗ್ಸ್ ಅಕೌಂಟ್ ನಲ್ಲಿ (savings account) ನೀವು ಎಷ್ಟು ಬೇಕಾದರೂ ಹಣವನ್ನು ಠೇವಣಿ ಇಡಬಹುದು. ಆದರೆ, ಇದರಿಂದ ಬ್ಯಾಂಕ್ ನೀಡುವ ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ. ಒಂದು ವರ್ಷದಲ್ಲಿ ಈ ರೀತಿಯ ಬಡ್ಡಿ ಹಣ 10,000 ರೂಗಿಂತ ಕಡಿಮೆ ಇದ್ದರೆ ಆಗ ತೆರಿಗೆ ಹಾಕಲಾಗುವುದಿಲ್ಲ. 60 ವರ್ಷ ವಯೋವೃದ್ಧರ ಠೇವಣಿಗೆ ಒಂದು ವರ್ಷದಲ್ಲಿ 50,000 ರೂ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.