ಜಿಯೋ ಬಳಕೆದಾರರಿಗೆ ಬಂಪರ್ ಆಫರ್ 3 ಹೊಸ ಪ್ಲಾನ್ ಬಿಡುಗಡೆ.! ಇಲ್ಲಿದೆ ಡೀಟೇಲ್ಸ್

IMG 20240724 WA0006

ಜಿಯೋ (jio) ನ ಮೂರು ಹೊಸ ಪ್ರಿಪೇಯ್ಡ್  (pre paid) ಯೋಜನೆಗಳು. ಡಿಸ್ನಿ+ ಹಾಟ್ ಸ್ಟಾರ್, ಝೀ5 ಮತ್ತು ಸೋನಿ ಲಿವ್ ನಂತಹ ದೊಡ್ಡ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯು ಉಚಿತ.

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು (popularity) ಹೊಂದಿರುವ ಜಿಯೋ (Jio) ಕಂಪನಿ ತನ್ನ ಗ್ರಾಹಕರಿಗೆ ಹಲವಾರು ರೀತಿಯ ಪ್ಲಾನ್ ರಿಯಾಯಿತಿ ಯನ್ನು ನೀಡುತ್ತ ಬಂದಿದೆ. ಆದರೆ ಇತ್ತೀಚಿಗೆ ಜಿಯೋ ಟೆಲಿಕಾಂ ಸಂಸ್ಥೆ ರಿಚಾರ್ಜ್ ದರವನ್ನು (recharge rate) ಏರಿಕೆ ಮಾಡಿತ್ತು. ಇದರಿಂದ ಗ್ರಾಹಕರಿಗೆ ತುಂಬಾ ಬೇಸರವಾಗಿದ್ದರಿಂದ ಹಲವರು ಜಿಯೋ ಸಂಸ್ಥೆಯ ಸಿಮ್ ಗಳನ್ನು ಪೋರ್ಟ್ ಮಾಡಿದ್ದೂ ಉಂಟು. ಆದ್ದರಿಂದ ಗ್ರಾಹಕರನ್ನು  ಸೆಳೆಯಲು ಹಾಗೂ ಗ್ರಾಹಕರನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಹೆಚ್ಚುವರಿ ಕೊಡುಗೆಗಳನ್ನು ನೀಡುವ ರೀಚಾರ್ಜ್ ಪ್ಲಾನ್ ಗಳನ್ನು ಸಹ ನೀಡುತ್ತಿದೆ. ಆ ಯೋಜನೆಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜಿಯೋ ರಿಚಾರ್ಜ್ ಪ್ಲಾನ್ ಗಳ (jio recharge plan) ದರ ಏರಿಕೆ ಯನ್ನು ಮಾಡಿದ ನಂತರ ತನಗೆ ಅರಿವಿಲ್ಲದೇ ಹಲವಾರು ಗ್ರಾಹಕರನ್ನು ಕಳೆದುಕೊಂಡಿತ್ತು. ಆದ್ದರಿಂದ ತನ್ನ ನೆಚ್ಚಿನ ಗ್ರಾಹಕರಿಗಾಗಿ ವಿವಿಧ ರೀತಿಯ ಪ್ರಿಪೇಯ್ಡ್  (pre paid) ಯೋಜನೆಗಳನ್ನು ನೀಡುತ್ತಿದೆ. ಅದರಲ್ಲೂ ಪ್ರಿಪೇಯ್ಡ್ ಯೋಜನೆಯಲ್ಲಿ ಡಿಸ್ನಿ+ ಹಾಟ್ ಸ್ಟಾರ್, ಝೀ5 ಮತ್ತು ಸೋನಿ ಲಿವ್ ನಂತಹ ದೊಡ್ಡ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯು ಉಚಿತವಾಗಿ ಲಭ್ಯವಿರುತ್ತದೆ. ಆದ್ದರಿಂದ ರಿಲಯನ್ಸ್ (reliance) ಜಿಯೋ (jio) ಹೊಸದಾಗಿ ರೂ. 329, ರೂ. 949 ಮತ್ತು ರೂ. 1049 ಬೆಲೆಯ 3 ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರಿಗಾಗಿ ಈ ಮೂರು ಹೊಸ ಯೋಜನೆಗಳನ್ನು ಪರಿಚಯಿಸಿದ್ದು ಈ ಹೊಸ ಯೋಜನೆಗಳಲ್ಲಿ ಉಚಿತ ಕರೆ, ಡೇಟಾ ಹಾಗೂ ಓಟಿಟಿ ಸ್ಟ್ರೀಮಿಂಗ್‌ನ ಪ್ರಯೋಜನವನ್ನು ಪಡೆಯಬಹುದು.

ರಿಲಯನ್ಸ್ ಜಿಯೋ 329 ರೂ. ಪ್ರಿಪೇಯ್ಡ್ ಯೋಜನೆ  :

ಈ ಒಂದು ಯೋಜನೆ 28 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತಿದ್ದು. ತನ್ನ ಗ್ರಾಹಕರಿಗಾಗಿ ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನದೊಂದಿಗೆ 1.5GB ದೈನಂದಿನ ಡೇಟಾವನ್ನು ನೀಡುತ್ತಿದೆ. ಒಟ್ಟಾರೆಯಾಗಿ 42 GB ಡೇಟಾವನ್ನು ಪಡೆಯಬಹುದು. JioSaavn Pro ನ ಜೊತೆ ಜಿಯೋ ಸಿನಿಮಾ, ಜಿಯೋ ಟಿವಿ ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಆದರೆ ಈ ಯೋಜನೆಯೊಂದಿಗೆ ಯಾವುದೇ 5G ಕೊಡುಗೆಯನ್ನು ಸೇರಿಸಲಾಗಿಲ್ಲ.

ರಿಲಯನ್ಸ್ ಜಿಯೋ 949 ರೂ  ಪ್ರಿಪೇಯ್ಡ್ ಯೋಜನೆ:

ಈ ಒಂದು ಯೋಜನೆ 84 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತಿದ್ದು. ತನ್ನ ಗ್ರಾಹಕರಿಗಾಗಿ ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನದೊಂದಿಗೆ 2 GB ದೈನಂದಿನ ಡೇಟಾವನ್ನು ನೀಡುತ್ತಿದೆ. ಒಟ್ಟಾರೆಯಾಗಿ   168 GB ಡೇಟಾವನ್ನು ಪಡೆಯಬಹುದು. 90 ದಿನಗಳು ಅಂದರೆ 3 ತಿಂಗಳುಗಳ ಕಾಲ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ಗೆ ಉಚಿತ ಒಟಿಟಿ (free OTT) ಪ್ರಯೋಜನವನ್ನು ನೀಡಲಾಗುತ್ತಿದೆ. ಹಾಗೂ ಜಿಯೋ ಟಿವಿ ಮತ್ತು ಜಿಯೋ ಸಿನಿಮಾದ ಚಂದಾದಾರಿಕೆಯನ್ನು ಸಹ ಪಡೆಯಬಹುದು. ಈ ಒಂದು ಯೋಜನೆಯಲ್ಲಿ ಗ್ರಾಹಕರು ಜಿಯೋದಿಂದ 5G ಸ್ವಾಗತ ಕೊಡುಗೆಯನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ.

ರಿಲಯನ್ಸ್ ಜಿಯೋ 1049 ರೂ ಪ್ರಿಪೇಯ್ಡ್ ಯೋಜನೆ:

ಈ ಒಂದು ಯೋಜನೆ 84 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತಿದ್ದು. ತನ್ನ ಗ್ರಾಹಕರಿಗಾಗಿ ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನದೊಂದಿಗೆ 2 GB ದೈನಂದಿನ ಡೇಟಾವನ್ನು ನೀಡುತ್ತಿದೆ. ಒಟ್ಟಾರೆಯಾಗಿ   168 GB ಡೇಟಾವನ್ನು ಪಡೆಯಬಹುದು. JioTV ಮೊಬೈಲ್ ಅಪ್ಲಿಕೇಶನ್ ಮೂಲಕ ಸೋನಿ ಲಿವ್ (SonyLIV) ಮತ್ತು ಝೀ5 (ZEE5) ಹಾಗೂ ಜಿಯೋ ಟಿವಿ ಮತ್ತು ಜಿಯೋ ಸಿನಿಮಾಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಈ ಒಂದು ಯೋಜನೆಯಲ್ಲಿ ಅನಿಯಮಿತ 5G ಕೊಡುಗೆಯೂ ಸಹ ಸೇರಿಕೊಂಡಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!