Bank Holidays: ಆಗಸ್ಟ್​ ತಿಂಗಳು ಬರೋಬ್ಬರಿ 13 ದಿನ ಬ್ಯಾಂಕ್ ರಜೆ.! ಯಾವ ದಿನ ಇಲ್ಲಿದೆ ಲಿಸ್ಟ್

Aug Bank Holidays

ಇದು ಜುಲೈ ತಿಂಗಳ ಕೊನೆಯ ವಾರವಾಗಿದ್ದು, ಇನ್ನೇನು ನಾಲ್ಕು ದಿನಗಳಲ್ಲಿ ಆಗಸ್ಟ್ ತಿಂಗಳ ಬರಲಿದೆ. ಅಗಸ್ಟ್ ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್ ರಜೆ ಬಂದಿದ್ದು, ನೀವೇನಾದರೂ ಬ್ಯಾಂಕಿಗೆ ಸಂಬಂಧಿಸಿದ ಕೆಲಸಗಳನ್ನು ಹೊಂದಿದ್ದರೆ ಇದು ನಿಮಗೆ ಉಪಯುಕ್ತವಾದ ಸುದ್ದಿಯಾಗಿದೆ. ಇನ್ನೇನು ಆಶಾಡ ಮುಗಿದು ಶ್ರಾವಣ ಪ್ರವೇಶಿಸುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರುತ್ತಿವೆ, ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಬರುವ ಬ್ಯಾಂಕ್ ರಜಾ ದಿನಗಳ ಪಟ್ಟಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಗಸ್ಟ್ 2024 ರಲ್ಲಿ ಬ್ಯಾಂಕ್ ರಜಾದಿನಗಳು

ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ರಕ್ಷಾಬಂಧನ ಮತ್ತು ಜನ್ಮಾಷ್ಟಮಿ ಸೇರಿದಂತೆ ಹಲವು ಹಬ್ಬಗಳಿವೆ. ಮುಂದಿನ ತಿಂಗಳು ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ 13 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ, ಇವುಗಳಲ್ಲಿ ಶನಿವಾರ ಮತ್ತು ಭಾನುವಾರ ಸಾಪ್ತಾಹಿಕ ರಜೆಗಳೂ ಸೇರಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ 13 ದಿನಗಳಲ್ಲಿ ಬ್ಯಾಂಕ್‌ನಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಇದು ದೇಶಾದ್ಯಂತ ಇರುವ ಬ್ಯಾಂಕ್‌ಗಳಿಗೆ ಅನ್ವಯವಾಗಲಿದ್ದು, ಪ್ರಾದೇಶಿಕವಾರು ರಜೆಗಳು ಇರಲಿವೆ.

ಆಗಸ್ಟ್‌ನಲ್ಲಿ ಎರಡನೇ-ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ವಾರದ ರಜಾದಿನಗಳ ಕಾರಣ ಆರು ರಜಾದಿನಗಳಿವೆ. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಹಬ್ಬಗಳ ಕಾರಣ ಬ್ಯಾಂಕುಗಳು 7 ದಿನಗಳವರೆಗೆ ಮುಚ್ಚಲ್ಪಡುತ್ತವೆ.

3 ಆಗಸ್ಟ್ (ಶನಿವಾರ) – ಕೇರ್ ಪೂಜೆ – ಕೆರ್ ಪೂಜೆ ಕಾರಣ ಅಂದು ಬ್ಯಾಂಕ್​ಗೆ ರಜೆ ಇರುತ್ತದೆ. (ಕೆರ್ ಪೂಜೆ ಹಬ್ಬವು ತ್ರಿಪುರಾದ ವಾರ್ಷಿಕ ಹಬ್ಬವಾಗಿದೆ. ಇದನ್ನು ಪ್ರತಿ ವರ್ಷ ಆಗಸ್ಟ್‌ನಲ್ಲಿ ಆಚರಿಸಲಾಗುತ್ತದೆ.)

4 ಆಗಸ್ಟ್ (ಭಾನುವಾರ) – ಸಾಪ್ತಾಹಿಕ ರಜೆ.

7 ಆಗಸ್ಟ್ ಹರಿಯಾಲಿ ತೀಜ್ (ಹರಿಯಾಲಿ ತೀಜ್ ಒಂದು ಹರಿಯಾಣದ ಹಬ್ಬ. ಈ ದಿನ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.)

ಆಗಸ್ಟ್ 8 (ಗುರುವಾರ) -ಟೆಂಡಾಂಗ್ ಲೊ ರಮ್ ಫತ್ (ಟೆಂಡಾಂಗ್ ಲೊ ರಮ್ ಫ್ಯಾಟ್ ಎಂಬುದು ವಾರ್ಷಿಕ ಹಬ್ಬವಾಗಿದ್ದು, ಈ ಹಬ್ಬವನ್ನು ಲೆಪ್ಚಾ ಜನರು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.)

10 ಆಗಸ್ಟ್ (ಶನಿವಾರ) – ಎರಡನೇ ಶನಿವಾರ.

11 ಆಗಸ್ಟ್ (ಭಾನುವಾರ) – ಸಾಪ್ತಾಹಿಕ ರಜೆ.

13 ಆಗಸ್ಟ್ (ಮಂಗಳವಾರ) – ದೇಶಪ್ರೇಮಿ ದಿನ – ಮಣಿಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

15 ಆಗಸ್ಟ್ (ಗುರುವಾರ_- ಸ್ವಾತಂತ್ರ್ಯ ದಿನ/ಪಾರ್ಸಿ ಹೊಸ ವರ್ಷ- ಭಾರತದಲ್ಲಿ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಟ್ಟಿವೆ.

18 ಆಗಸ್ಟ್ (ಭಾನುವಾರ) – ಸಾಪ್ತಾಹಿಕ ರಜೆ.

19 ಆಗಸ್ಟ್ – (ಸೋಮವಾರ) – ರಕ್ಷಾ ಬಂಧನ / ಜುಲಾನಾ ಪೂರ್ಣಿಮಾ / ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಅವರ ಜನ್ಮದಿನ – ತ್ರಿಪುರಾ, ಗುಜರಾತ್, ಒರಿಸ್ಸಾ, ಉತ್ತರಾಖಂಡ, ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಆಗಸ್ಟ್ 20 – (ಮಂಗಳವಾರ) – ಶ್ರೀ ನಾರಾಯಣ ಗುರು ಜಯಂತಿಯ ಸಂದರ್ಭದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಆಗಸ್ಟ್ 24 (ಶನಿವಾರ) – ನಾಲ್ಕನೇ ಶನಿವಾರ.

25 ಆಗಸ್ಟ್ (ಭಾನುವಾರ) – ಸಾಪ್ತಾಹಿಕ ರಜೆ.

26 ಆಗಸ್ಟ್-(ಸೋಮವಾರ)- ಜನ್ಮಾಷ್ಟಮಿ (ಶ್ರಾವಣ ವದ-8)/ಕೃಷ್ಣ ಜಯಂತಿ. ಗುಜರಾತ್, ಒರಿಸ್ಸಾ, ಚಂಡೀಗಢ, ತಮಿಳುನಾಡು, ಉತ್ತರಾಖಂಡ, ಸಿಕ್ಕಿಂ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಜಮ್ಮು, ಉತ್ತರ ಪ್ರದೇಶ, ಬಂಗಾಳ, ಬಿಹಾರ, ಛತ್ತೀಸ್‌ಗಢ ರಾಜ್ಯ, ಜಾರ್ಖಂಡ್, ಮೇಘಾಲಯ, ಹಿಮಾಚಲ ಪ್ರದೇಶ ಮತ್ತು ಶ್ರೀನಗರದಲ್ಲಿ ಮುಚ್ಚಲ್ಪಡುತ್ತವೆ.

ಪ್ರಾದೇಶಿಕ ಅಗತ್ಯತೆಗಳ ಕಾರಣದಿಂದಾಗಿ, ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ, ಹೀಗೆ ಸಾಲು ಸಾಲು ಹಬ್ಬಗಳ ಪ್ರಯುಕ್ತ ಆಗಸ್ಟ್ ತಿಂಗಳಲ್ಲಿ 13 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜೆ ಇರಲಿದೆ. ಆದರೂ ಕೂಡ, ನೀವು ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂಗಳನ್ನು ಬಳಸಬಹುದು. ಯಾವಾಗ ಬೇಕಾದರೂ ಆನ್‌ಲೈನ್ ಮೂಲಕ ಹಣವನ್ನು ಪಾವತಿ ಮಾಡಬಹುದು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!