ಕೇಂದ್ರ ಸರ್ಕಾರದ ‘ಉಚಿತ ಮನೆ’ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

IMG 20240731 WA0001

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (pradhan mantri avas yojana) ಕೇಂದ್ರ ಸರ್ಕಾರದಿಂದ (central government) ಸಿಗಲಿದೆ ಉಚಿತ ಮನೆ. ಅರ್ಜಿ ಸಲ್ಲಿಸುವುದು ಹೇಗೆ?

ನಮ್ಮ ಜೀವನದಲ್ಲಿ ಮನೆಯಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಅದರಲ್ಲೂ ಎಲ್ಲರೂ ಕೂಡ ಒಂದೊಳ್ಳೆ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬ ದೊಡ್ಡ ಕನಸನ್ನು ಇಟ್ಟುಕೊಂಡಿರುತ್ತಾರೆ. ಹಾಗೆಯೇ ಸ್ವಂತ ಮನೆಯೊಂದನ್ನು (own House) ಹೊಂದಬೇಕೆನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ (dream). ಆದರೆ ಈಗಿನ ಕಾಲದಲ್ಲಿ ಅದು ಪ್ರತಿಯೊಬ್ಬರಿಗೂ ಬಹಳ ಕಷ್ಟವಾದಂತಹ ಪರಿಸ್ಥಿತಿ. ಆದ್ದರಿಂದ ಕೇಂದ್ರ ಸರ್ಕಾರವು ಮನೆಗಳ ಕೊರತೆಯುಳ್ಳ ಎಲ್ಲರಿಗೂ ಕೂಡ ಮನೆ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (pradhan mantri avas yojana) ದೇಶದ ಎಲ್ಲ ಜನರಿಗೂ ಶಾಶ್ವತ ಮನೆ ಒದಗಿಸುತ್ತಿದೆ. ಹಾಗೆಯೇ 2024ರಲ್ಲಿಯೂ ಮನೆ ಇಲ್ಲದ ಅಥವಾ ಕಚ್ಚೆ ಮನೆಗಳಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ಈ ಯೋಜನೆಯಿಂದ ಬಹಳ ಅನುಕೂಲವಾಗಲಿದೆ. ದೇಶದಲ್ಲಿರುವ ಬಡತನ ಹಾಗೂ ಬಡತನ ರೇಖೆಗಿಂತ ಕೆಳಗಿರುವಂತಹ ಜನರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಆರಂಭಿಸಲಾಗಿದೆ. 2015 ರಲ್ಲಿ, ಕೇಂದ್ರ ಸರ್ಕಾರವು (central government) ವಸತಿರಹಿತರು ಮತ್ತು ಮನೆ ಕಟ್ಟುವವರಿಗೆ ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶವೆಂದರೆ ಎಲ್ಲಾ ಜನರು ಕೂಡ ತಮ್ಮ ವಾಸಕ್ಕಾಗಿ ಸ್ವಂತ ಮನೆಯನ್ನು ಹೊಂದುವುದು. ಮತ್ತು ಬಡತನ ರೇಖೆಗಿಂತ ಕೆಳಗಿನವರಿಗೆ ಮನೆಗಳನ್ನು ಒದಗಿಸುವುದಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು (qualifications) :

ಸ್ವಂತ ಮನೆ ಕಟ್ಟಲು ಸಾಮರ್ಥ್ಯವಿಲ್ಲದವರು ಹಾಗೂ ಬಡತನ ರೇಖೆಗಿಂತ ಕೆಳಗಿನವರು.
ಅರ್ಜಿ ಸಲ್ಲಿಸಲು ಅರ್ಜಿದಾರನು 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವನಾಗಿರಬೇಕು.
ಈಗ ವಾಸ ಮಾಡುತ್ತಿರುವ ಮನೆಯಲ್ಲಿ ಕೇವಲ 2 ಕೋಣೆಗಳಿದ್ದರೆ ಅಂತವರು ಕೂಡ ಅರ್ಜಿಗಳನ್ನು ಸಲ್ಲಿಸಬಹುದು.
ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ರೂ.ವರೆಗೆ ಇರಬೇಕು.
ಕುಟುಂಬದಲ್ಲಿ ವಿಕಲಚೇತನ ಸದಸ್ಯರು ಇದ್ದಲ್ಲಿ.
ಅರ್ಜಿದಾರರ ಹೆಸರು ಪಡಿತರ ಚೀಟಿಯಲ್ಲಿ ಅಥವಾ ಮತದಾರರ ಪಟ್ಟಿಯಲ್ಲಿ ಇರಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕ್ರಮ : ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು, ಅಧಿಕೃತ ವೆಬ್ಸೈಟ್ https://pmaymis.gov.in ಗೆ ಭೇಟಿ ನೀಡಿ.

ಮೊದಲಿಗೆ https://pmaymis.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ನಂತರ ಆವಾಸ್ಸಾಫ್ಟ್ ಕ್ಲಿಕ್ ಮಾಡಿ.
ಆವಾಸ್ ಗಾಗಿ ಡೇಟಾ ಎಂಟ್ರಿ ಆಯ್ಕೆಮಾಡಿ.
ನಂತರ ಅರ್ಜಿದಾರನು ಅವರ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಬೇಕು.
ತದನಂತರ ನಿಮ್ಮ ಹೆಸರು, ಪಾಸ್‌ವರ್ಡ್, ಕ್ಯಾಪ್ಚಾ ಮುಂತಾದ ವಿವರಗಳನ್ನು ನಮೂದಿಸಿ ಲಾಗ್ ಇನ್ ಮಾಡಬೇಕು.
ನಂತರ ಬಳಕೆದಾರರ ನೋಂದಣಿ ಫಾರ್ಮ್ ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.
ಇದಾದ ಬಳಿಕ ನಿಮ್ಮ ಬ್ಯಾಂಕ್ ವಿವರಗಳನ್ನು (bank details) ನಮೂದಿಸಬೇಕು.
ನಂತರ ಮೂರನೇ ವಿಭಾಗದಲ್ಲಿ ಫಲಾನುಭವಿಯ ಸಮನ್ವಯ ವಿವರಗಳನ್ನು ನಮೂದಿಸಬೇಕು.
ನಾಲ್ಕನೇ ವಿಭಾಗದಲ್ಲಿ ಸಂಬಂಧಪಟ್ಟ ಕಚೇರಿಯಿಂದ ಭರ್ತಿ ಮಾಡಿದ ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿ.

ಫಲಾನುಭವಿಯು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಸಲ್ಲಿಸಿದ ಪಟ್ಟಿಯನ್ನು rhreporting.nic.in ವೆಬ್‌ಸೈಟ್‌ನಲ್ಲಿ (website) ಪರಿಶೀಲಿಸಬಹುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

One thought on “ಕೇಂದ್ರ ಸರ್ಕಾರದ ‘ಉಚಿತ ಮನೆ’ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

  1. ನೀವು ಹೇಳಿರುವ ಲಿಂಕ್ ನಾ ಓಪನ್ ಮಾಡಿದ್ವಿ, ಆದ್ರೆ ನೀವು ಹೇಳಿರುವ options ತೋರಿಸ್ತಿಲ್ಲ

Leave a Reply

Your email address will not be published. Required fields are marked *

error: Content is protected !!