ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ವಾಹನ ಖರೀದಿಗೆ 4 ಲಕ್ಷ ರೂ. ಭರ್ಜರಿ ಸಬ್ಸಿಡಿ

IMG 20240803 WA0001

ಸ್ವಂತ ವಾಹನ (Vehicle) ಖರೀದಿಸಬೇಕೆಂಬ ಯೋಚನೆ ಇದೆಯೇ? ಹಾಗಿದ್ದಲ್ಲಿ ಸರ್ಕಾರದಿಂದ ಸಿಗುತ್ತದೆ 3ಲಕ್ಷ ರೂಪಾಯಿಯ ಸಹಾಯಧನ(subsidy).

ಇಂದು ರಾಜ್ಯ ಸರ್ಕಾರದಿಂದ ( state government) ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಮುಂದೆ ತರುವ ಸದುದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಇನ್ನು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕೆಂಬ ಹಲವರಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ. ಸದ್ಯ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗಾಗಿ ( unemployees ) ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ಈಗಾಗಲೇ ಆ ಯೋಜನೆಯು ರಾಜ್ಯದಲ್ಲಿ ಅನುಷ್ಠಾನಗೊಂಡಿದ್ದು, ಆ ಯೋಜನೆಯ ಸಹಾಯಧನದ ಮೊತ್ತವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ. ಆ ಯೋಜನೆ ಯಾವುದು? ಆ ಯೋಜನೆಯಿಂದ ಯಾರೆಲ್ಲಾ ಲಾಭ ಪಡೆಯಬಹುದು?  ಅದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು ಎಲ್ಲರೂ ಕೂಡ ಸ್ವ ಉದ್ಯೋಗವನ್ನು ಮಾಡಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬ ಆಶಯದೊಂದಿಗೆ ರಾಜ್ಯ ಸರ್ಕಾರದಿಂದ ಸ್ವ ಉದ್ಯೋಗಕ್ಕಾಗಿ ಹೊಸ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಹೌದು, ನಿರುದ್ಯೋಗಿಗಳು ಸ್ವ ಉದ್ಯೋಗ ಮಾಡಲು ಹಾಗೂ ತಮ್ಮ ಸ್ವಂತ ಉದ್ಯೋಗದ ಕನಸಿಗಾಗಿ “ಸ್ವಾಲಂಭಿ ಸಾರಥಿ ಯೋಜನೆ” (Swavalambi Sarathi Scheme)ಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ನಾಲ್ಕು ಚಕ್ರಗಳ ವಾಹನವನ್ನು ಅಂದರೆ ಟ್ಯಾಕ್ಸಿ, ಟಾಟಾ ಎಸಿ, ಗೂಡ್ಸ್ ವಾಹನ ಇತ್ಯಾದಿ ನಾಲ್ಕು ಚಕ್ರಗಳ ವಾಹನ ಖರೀದಿಗಾಗಿ ಬ್ಯಾಂಕುಗಳಿಂದ ಪಡೆಯುವಂತಹ ಸಾಲದ ಶೇಕಡ 50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂಪಾಯಿಗಳ ಸಹಾಯಧನವನ್ನು ನಿಗಮಗಳ ವತಿಯಿಂದ ನೀಡಲಾಗುತ್ತದೆ. ಈ ಯೋಜನೆ ಅನೇಕರಿಗೆ ಲಾಭದಾಯಕವಾಗಿದ್ದು, ಸ್ವಾಲಂಬಿ ಜೀವನ ಸಾಗಿಸಲು ಬಯಸುವವರಿಗೆ ಇದು ಪ್ರಯೋಜನಕಾರಿಯಾಗಿದೆ.

ಇದೀಗ ಈ ಯೋಜನೆಯ ಸಹಾಯಧನ ಹೆಚ್ಚಳವಾಗಿದೆ :

ಹೌದು, ಈ ಹಿಂದೆ ರಾಜ್ಯ ಸರ್ಕಾರವು ಸರಕು ವಾಹನ, ಹಳದಿ ಬೋರ್ಡ್ (yellow board) ಟ್ಯಾಕ್ಸಿ ಖರೀದಿಗಾಗಿ ಮೂರು ಲಕ್ಷ ರೂಪಾಯಿಗಳ ಸಹಾಯ ಧನವನ್ನು ನೀಡುತ್ತಿತ್ತು. ಆದರೆ ಇದೀಗ ಆ ಸಹಾಯಧನದ ಮೊತ್ತವನ್ನು 4 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಈ ಯೋಜನೆಯ ಲಾಭವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಪಡೆದುಕೊಳ್ಳಬಹುದು.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತೆಗಳು?

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
ಅರ್ಜಿದಾರರ ಆದಾಯ ಮಿತಿ  ಗ್ರಾಮ ಹಾಗೂ ನಗರ ಪ್ರದೇಶಗಳಿಗೆ ಭಿನ್ನವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ 1 .5 ಲಕ್ಷ ರೂ. ನಗರ ಪ್ರದೇಶದಲ್ಲಿ 2 ಲಕ್ಷ ಆದಾಯ ಮಿತಿಯನ್ನು ಮೀರಿರಬಾರದು.
ಅರ್ಜಿದಾರನ ವಯಸ್ಸು 21ರಿಂದ 45 ವರ್ಷಗಳ ಮಿತಿಯಲ್ಲಿರಬೇಕು.
ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು.
ಕಳೆದ 5 ವರ್ಷಗಳಲ್ಲಿ ಅರ್ಜಿದಾರರು ಕರ್ನಾಟಕ KMDCL ಯೋಜನೆಗಳ ಫಲಾನುಭವಿ ಆಗಿರಬಾರದು.
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುವುದು.
ಅರ್ಜಿದಾರನು ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಹಾಗೂ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು.

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ಕರ್ನಾಟಕದ ನಿವಾಸ ಪುರಾವೆ.
ಬ್ಯಾಂಕ್ ಖಾತೆ ವಿವರಗಳು.
ಆದಾಯ ಪ್ರಮಾಣಪತ್ರ( income certificate ).
ಚಾಲನಾ ಪರವಾನಿಗೆ (Driving Licence)
ಆಧಾರ್ ಕಾರ್ಡ್.
ಜಾತಿ ಪ್ರಮಾಣ ಪತ್ರ (Caste certificate)
ಕುಟುಂಬವದರ ಪಡಿತರ ಚೀಟಿ.
ಮೊಬೈಲ್ ನಂಬರ್.
ಪಾಸ್ಪೋರ್ಟ್ ಗಾತ್ರದ 2 ಫೋಟೋ.
ವಾಹನ ಅಂದಾಜು ದರಪಟ್ಟಿ.
ಸ್ವಯಂ ಘೋಷಣೆ ಪತ್ರ.
ಅರ್ಜಿದಾರನು ನಿರುದ್ಯೋಗಿ ಆಗಿರಬೇಕು. (ಸ್ವಯಂ ಘೋಷಣಾ ಪತ್ರ ಸಲ್ಲಿಸುವುದು )

ಈ ಯೋಜನೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು? :

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿ.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿ.
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ.
ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿಯಮಿತ.
ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ.
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ.
ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ನಿಯಮಿತ.
ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ.
ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ.

ಈ ಮೇಲಿನ ಎಲ್ಲಾ ಸಮುದಾಯಗಳ ಅರ್ಜಿದಾರರಿಂದ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಅಹ್ವಾನಿಸಲಾಗಿದೆ.

ಈ ಯೋಜನೆಯ ಪ್ರಯೋಜನಗಳು ಈ ರೀತಿ ಇದೆ :

ಈ ಯೋಜನೆಯ ಲಾಭ ಪಡೆಯುವ ಅರ್ಹ ಫಲಾನುಭವಿಗಳು ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು.

ನಾಲ್ಕು ಚಕ್ರದ ವಾಹನವನ್ನು ಖರೀದಿಸಲು ಸಹಾಯಧನವನ್ನು ಒದಗಿಸಲಾಗುವುದು.
75% ಸಬ್ಸಿಡಿ ಅಥವಾ ರೂ. 4,00,000/- ವಾಹನ ವೆಚ್ಚವನ್ನು SC ಮತ್ತು ST ಫಲಾನುಭವಿಗಳಿಗೆ ಒದಗಿಸಲಾಗುವುದು.
50% ಸಬ್ಸಿಡಿ ಅಥವಾ ರೂ. 3,00,000/- ವಾಹನ ವೆಚ್ಚವನ್ನು OBC ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಒದಗಿಸಲಾಗುವುದು.
ಸಹಾಯಧನ ರೂ. 75,000/- ಪ್ಯಾಸೆಂಜರ್ ಆಟೋರಿಕ್ಷಾವನ್ನು ಖರೀದಿಸಲು ನೀಡಲಾಗುತ್ತದೆ.

ಅರ್ಜಿಸಲ್ಲಿಸುವುದು ಹೇಗೆ?

ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರ ಅಥವಾ ಸೇವಾಸಿಂಧು ಪೋರ್ಟಲ್ ನ ಮೂಲಕ https://sevasindhu.karnataka.gov.in/Sevasindhu/Kannada ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು ಹೀಗಿವೆ :

ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿ: 31-08-2024
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿ: 31-08-2024
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: 31-08-2024
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ: 30-08-2024
ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿಯಮಿತ: 31-08-2024
ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ: 31-08-2024
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ: 31-08-2024
ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ನಿಯಮಿತ: 31-08-2024
ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ: 31-08-2024
ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ: 30-08-2024

ಈ ಮೇಲಿನ ಎಲ್ಲಾ ನಿಗಮಗಳಿಗೆ ಅನುಗುಣವಾಗಿ ಕೊನೆಯ ದಿನಾಂಕಗಳನ್ನು ನಿಗದಿ ಮಾಡಲಾಗಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!