ಹೊಸ ಪಡಿತರ ಚೀಟಿ ಪಡೆಯಲು ಈ ಹೊಸ ದಾಖಲೆಗಳು ಕಡ್ಡಾಯ..! ಇಲ್ಲಿದೆ ಕಂಪ್ಲೀಟ್ ಮಾಹಿತಿ

IMG 20240808 WA0005

ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ(Ration card correction) ಮಾಡಲು ಇದೀಗ ಮತ್ತೆ ಅವಕಾಶ ನೀಡಿದೆ, ಆಗಸ್ಟ್ 10 ರವರೆಗೆ. ಈ ಕೆಳಗೆ ತಿಳಿಸಿರುವ ಸಮಯದೊಳಗೆ ಅರ್ಜಿ ಸಲ್ಲಿಸಿ, ನಿಮ್ಮ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಮಾಡಬಹುದು.ಇದರ ಕೊನೆಯ ದಿನಾಂಕ, ಹೇಗೆ ತಿದ್ದುಪಡಿ ಮಾಡುವುದು ಇತ್ಯಾದಿ ವಿವರಗಳನ್ನು ತಿಳಿಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಕೆಳಗೆ ತಿಳಿಸಲಾದ ದಿನದೊಳಗೆ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡುವುದಿದ್ದರೆ ಮಾಡಿಕೊಳ್ಳಬಹುದಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಗಸ್ಟ್ 10 ರೊಳಗೆ ತಿದ್ದುಪಡಿ ಮಾಡಬಹುದಾಗಿದೆ.

ಆನ್‌ಲೈನ್ ಪ್ರಕ್ರಿಯೆ :

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು ಆಧಾರ್ ಕಾರ್ಡ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಹಾಲಿ ಪಡಿತರ ಚೀಟಿ ಹೊಂದಿರಬೇಕು. ಈ ಪ್ರಕ್ರಿಯೆಯು ಸುಲಭವಾಗಿ ನೀವು  ಮಾಡಿಕೊಳ್ಳಬಹುದಾಗಿದೆ.

ಆಫ್‌ಲೈನ್ ಪ್ರಕ್ರಿಯೆ :

ಆಫ್‌ಲೈನ್ ಪ್ರಕ್ರಿಯೆಗೆ, ಹತ್ತಿರುವ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಹೋಗಿ, ಮೇಲ್ಕಂಡ ದಾಖಲೆಗಳೊಂದಿಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು. ಈ ಕೇಂದ್ರಗಳು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತಿದ್ದುಪಡಿ ಪ್ರಕ್ರಿಯೆ ಮಾಡಲು ಅವಕಾಶವಿರುತ್ತದೆ.

ತಿದ್ದುಪಡಿ ಮಾಡಬಹುದಾದ ಸಂಗತಿಗಳು:

ಸದಸ್ಯರ ಹೆಸರು ತಿದ್ದುಪಡಿ: ರೇಷನ್ ಕಾರ್ಡ್‌ನಲ್ಲಿ ಯಾರಾದರೂ ಸದಸ್ಯರ ಹೆಸರಿನಲ್ಲಿ ತಪ್ಪುಗಳಿದ್ದರೆ, ಅದನ್ನು ಸರಿಪಡಿಸಬಹುದು.

ಮನೆ ಯಜಮಾನರ ಹೆಸರು ಬದಲಾವಣೆ: ಮನೆ ಯಜಮಾನರ ಹೆಸರಿನಲ್ಲಿ ಬದಲಾವಣೆ ಅಗತ್ಯವಿದ್ದರೆ, ತಿದ್ದುಪಡಿ ಮಾಡಬಹುದು.

ಹೊಸ ಸದಸ್ಯರ ಸೇರ್ಪಡೆ: ಕುಟುಂಬದಲ್ಲಿ ಹೊಸ ಸದಸ್ಯರನ್ನು ಸೇರಿಸಬಹುದು.

ವಿಳಾಸ ಬದಲಾವಣೆ: ಸ್ಥಳಾಂತರಗೊಂಡಿದ್ದರೆ, ಹೊಸ ವಿಳಾಸವನ್ನು ನವೀಕರಿಸಬಹುದು.

ಮೃತರ ಹೆಸರು ತೆಗೆಯುವುದು: ಕುಟುಂಬ ಸದಸ್ಯರ ನಿಧನವಾಗಿದ್ದರೆ, ಅವರ ಹೆಸರನ್ನು ತೆಗೆಯಬಹುದು.

ಫೋಟೊ ಮತ್ತು ಬಯೋಮೆಟ್ರಿಕ್ ಅಪ್ಡೇಟ್: ಫೋಟೊ ಅಥವಾ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸಬಹುದು.

ಏನೆಲ್ಲಾ ದಾಖಲೆಗಳು ಬೇಕು?:

ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ(Adharcard copy)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ(Income caste certificate)
ಮೊಬೈಲ್ ಸಂಖ್ಯೆ, (mobile number)
ಹಾಲಿ ಪಡಿತರ ಚೀಟಿ (ration card)

ತಿದ್ದುಪಡಿ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ಆಗಸ್ಟ್ 10, ಈ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸುವುದು ಮುಖ್ಯ. ಕರ್ನಾಟಕ ಸರ್ಕಾರದ ಈ ಅವಕಾಶವನ್ನು ಸದ್ವಿನಿಯೋಗಪಡಿಸಿಕೊಂಡು, ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಿ.ಮತ್ತು
ಇಂತಹ ಉತ್ತಮವಾದ  ಮಾಹಿತಿ  ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!