ರೈತರಿಗೆ ಕಾಲುದಾರಿ ಹಾಗೂ ಬಂಡಿದಾರಿ ಕುರಿತು ಸಿಹಿ ಸುದ್ದಿ ನೀಡಿದ ಹೈಕೋರ್ಟ್!

57139 download

ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಬಂಡಿದಾರಿ ಕಾಲು ದಾರಿ ಕುರಿತು ಆದೇಶ ಹೊರಡಿಸಿದ ಹೈಕೂರ್ಟ್!

ರಾಜ್ಯ ಸರ್ಕಾರವು ರೈತರಿಗೆ(Farmers) ಇದೀಗ ಸಿಹಿಸುದ್ದಿಯನ್ನು ನೀಡಿದ್ದು, ಗ್ರಾಮೀಣ ಭಾಗದ ರೈತರಿಗೆ ತಮ್ಮ ಜಮೀನಿಗೆ ಹೋಗುವ ದಾರಿ (kaludhari) ಸಮಸ್ಯೆಯು ಸರ್ವೆ ಸಾಮಾನ್ಯವಾಗಿದೆ ಈ ಕುರಿತು ಪ್ರಸ್ತುತ ಕರ್ನಾಟಕ ಹೈಕೋರ್ಟ್ (High court) ರೈತ ಪರವಾಗಿ ಮಹತ್ವದ ಆದೇಶವನ್ನು ನೀಡಿದೆ. ರೈತರು ವ್ಯವಸಾಯದ ಉದ್ದೇಶಕ್ಕಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನು ಗಳಲ್ಲಿ ಕಾಲುದಾರಿ, ಬಂಡಿದಾರಿಯ ಸೌಲಭ್ಯ ಒದಗಿಸಿದ್ದು, ರೈತರು ತಮ್ಮ ಜಮೀನಿನ ಕಾಲುದಾರಿ ಅಥವಾ ಬಂಡಿದಾರಿಯನ್ನು ಸಲುವಾಗಿ ಕ್ರಮ ವಹಿಸುವ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಾಲು ದಾರಿ ಮತ್ತು ಬಂಡಿದಾರಿಗಾಗಿ ರಾಜ್ಯ ಸರ್ಕಾರದಿಂದ ಸುತ್ತೋಲೆ :

ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿಯನ್ನು ಉಪಯೋಗಿಸಕೊಳ್ಳಬಹುದು ಅಥವಾ ಆ ಭೂ ಮಾಲೀಕರಿಂದ ಅಥವಾ ಅಲ್ಲಿನ ನಾಗರಿಕರಿಂದ ಅವರಿಗೆ ಯಾವುದೇ ತೊಂದರೆ ಆದಲ್ಲಿ ಕೇಳುವ ಹಕ್ಕು ಮತ್ತು ಕಾನೂನಿನ ಕ್ರಮ ಕೈಗೊಳ್ಳುವ ಅವಕಾಶ ನೀಡಿದ್ದು, ರಾಜ್ಯ ಸರ್ಕಾರ (state government) ಹೊರಡಿಸಿದ ಆದೇಶ ಇದಾಗಿದೆ.

ರೈತರ ದಾರಿ ಸಮಸ್ಯೆಗೆ ಪರಿಹಾರ :

ರಾಜ್ಯದಲ್ಲಿ ಗ್ರಾಮೀಣ ಭಾಗದ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿ ಸಮಸ್ಯೆ ಇದ್ದು ಬಳಕೆದಾರ ರೈತರುಗಳಿಗೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ‘ದಾರಿ’ ಸಮಸ್ಯೆ ಬಹುಕಾಲದಿಂದಲೂ ಇದ್ದು ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ಕಷ್ಟ ಪಡುತ್ತಿದ್ದಾರೆ. ಈ ಕಾರಣಕ್ಕಾಗಿ ಗ್ರಾಮೀಣ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸಲಾಗಿದೆ.

ಕಾಲುದಾರಿ ಮತ್ತು ಬಂಡಿದಾರಿಗೆ ಅಡೆ ತಡೆ ಮಾಡುವಹಾಗಿಲ್ಲ, ಹೈಕೋರ್ಟ್ :

ಕಾಲುದಾರಿ, ಬಂಡಿದಾರಿ (bandidari) ಕೂಡ ರಸ್ತೆಗಳೇ ಆಗಿದ್ದು, ಸಣ್ಣ ಪುಟ್ಟ ಜಮೀನಿನ ರೈತರು ಈ ದಾರಿ ಮೂಲಕವೇ ತಮ್ಮ ಜಮೀನಿಗೆ ತೆರಳಬೇಕು. ಅಷ್ಟೇ ಅಲ್ಲದೆ ಕೃಷಿ ಸಲಕರಣೆಗಳನ್ನು ಕೂಡ ಸಾಗಿಸಬೇಕು. ಈ ದಾರಿಗಳಲ್ಲದೆ ಬೇರೆ ದಾರಿಗಳಿಲ್ಲ. ಹಾಗಾಗಿ ಯಾರೂ ಕೂಡ ಅದಕ್ಕೆ ಅಡೆ-ತಡೆ ಮಾಡುವ ಹಾಗಿಲ್ಲ ಎಂದು ಹೈಕೊರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಮಾನ್ಯವಾಗಿ ಕೃಷಿ ಜಮೀನಿಗೆ ಹೋಗುವ ದಾರಿಯನ್ನು “ಬಿ ಖರಾಬು ಜಮೀನು” ಎಂದು ಜಮೀನಿನ ಪಹಣಿ/RTC ಅಲ್ಲಿ ಗುರುತಿಸಿರುತ್ತಾರೆ ಈ ಜಮೀನನ್ನು ಕಾಲುದಾರಿ ಮತ್ತು ಬಂಡಿದಾರಿಗೆ ಮೀಸಲಿಡಲಾಗಿರುತ್ತದೆ.

ಬಿ ಖರಾಬ್ ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ, ಹೈಕೋರ್ಟ್‌ :

ದೊಡ್ಡ ದೊಡ್ಡ ಜಮೀನುಗಳಿಗೆ ಸಣ್ಣ ಪುಟ್ಟ ದಾರಿಗಳು ಇರುತ್ತವೆ. ಈ ರಸ್ತೆಗಳು ಕಾಲುದಾರಿ ಬಂಡಿದಾರಿ ಎಂದು ಕರೆಯುತ್ತಾರೆ. ಭೂಸ್ವಾಧೀನ ಕಾಯ್ದೆ (Land Acquisition Act) ಯಡಿ ಜಮೀನು ಸ್ಮಾಧೀನಪಡಿಸಿಕೊಂಡ ಮಾತ್ರಕ್ಕೆ ಬಿ ಖರಾಬ್ ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ರಾಜ್ಯ ಸರ್ಕಾರವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 670 (land records) ಸಾರ್ವಜನಿಕ ರಸ್ತೆಗಳು, ಬೀದಿಗಳು, ಒಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಸೂಚಿಸುತ್ತದೆ. ಕಾಲುದಾರಿ ಅಥವಾ ಬಂಡಿ ದಾರಿ ಎಂದು ಈ ಹಿಂದೆ ಕರೆಯಲಾಗುತ್ತಿದ್ದ ರಸ್ತೆಗಳೆನಿಸಿವೆ ಎಂದು ನ್ಯಾಯಪೀಠ ಹೇಳಿದೆ.

ಕಾಲುದಾರಿ, ಬಂಡಿ ದಾರಿ ಸ್ಥಳವನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು ‘ಬಿ ಖರಾಬ್’ (B – Kharab Land) ಎಂದು ಗುರುತಿಸಲಾಗಿದ್ದು. ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಹಕ್ಕನ್ನೂ ನೀಡಲಾಗಿರುತ್ತದೆ’ ಎಂದು ಹೈಕೋರ್ಟ್ ತಿಳಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 68ರ ಪ್ರಕಾರ ಬಿ ಖರಾಬ್‌ ನಲ್ಲಿ (revenue department) ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ. ಈ ಸ್ಥಳದ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಅಥವಾ ಸಾರ್ವಜನಿಕರು ಕಾಲುದಾರಿ ಬಳಸಲು ಅರ್ಹರಾಗಿರುತ್ತಾರೆ. ಹಾಗಾಗಿ, ಅರ್ಜಿದಾರರು ಈ ಭೂಮಿಯನ್ನು ಮೀಸಲಿಡಬೇಕಾಗಿತ್ತು ಮತ್ತು ಅದನ್ನು ಮಾರುಕಟ್ಟೆ ಪ್ರಾಂಗಣದ ಉದ್ದೇಶಗಳಿಗಾಗಿ ಬಳಸಬಾರದು ಎಂದು ಹೈಕೋರ್ಟ್ ವಿವರಿಸಿದೆ.

ಹಳ್ಳಿಯ ಬಂಡಿದಾರಿ ಮತ್ತು ಕಾಲುದಾರಿ ಗುರುತಿಸುವ ನಕ್ಷೆಯನ್ನು ಡೌನ್ ಲೋಡ್ ಮಾಡುವ ವಿಧಾನ (how to download village map) :

ರಾಜ್ಯ ಸರಕಾರದ ಕಂದಾಯ ಇಲಾಖೆಯ ಈ ಅಧಿಕೃತ ಜಾಲತಾಣ ಭೇಟಿ ಮಾಡಿ ನಿಮ್ಮ ಜಮೀನಿನ ಕಂದಾಯ ನಕ್ಷೆಯನ್ನು ಡೌನ್ಫೋಡ್ ಮಾಡಿಕೊಳ್ಳಬವುದು. ಈ ನಕ್ಷೆಯಲ್ಲಿ ನಿಮ್ಮ ಗ್ರಾಮದಲ್ಲಿ ಒಟ್ಟು ಎಷ್ಟು ಸರ್ವೆ ನಂಬ‌ರ್ ಇವೆ ಅದರ ಗಡಿ, ಕಾಲುದಾರಿ, ಬಂಡಿದಾರಿ ಎಲ್ಲಿ ಎಲ್ಲಿ ಬರುತ್ತದೆ, ಕಾಲುವೆ, ತೆರೆದ ಬಾವಿ, ಗುಡ್ಡ, ಮನೆ, ಇತ್ಯಾದಿ ಸಂಪೂರ್ಣ ಮಾಹಿತಿ ನೋಡಬವುದು.

ಹಂತ 1 :
ಮೊದಲು ಇಲ್ಲಿ ನೀಡಿರುವ  https://landrecords.karnataka.gov.in
ಮೇಲೆ ಕ್ಲಿಕ್ ಮಾಡಿ ವೆಟ್ ಭೇಟಿ ಮಾಡಬೇಕು.

ಹಂತ 2 :
ನಂತರ ನಿಮ್ಮ ಜಿಲ್ಲೆಯ, ತಾಲ್ಲೂಕು, ಹೋಬಳಿ, Map type ಆಯ್ಕೆಯಲ್ಲಿ Cadastral map ಎಂದು ಆಯ್ಕೆ ಮಾಡಿಕೊಂಡು search ಮಾಡಬೇಕು.

ಹಂತ 3 :
ಇಲ್ಲಿ ನಿಮ್ಮ ಹೋಬಳಿಯ ಎಲಾ ಹಳ್ಳಿಯ ನಕ್ಷೆಗಳ PDF ಪೈಲ್ ಗೋಚರಿಸುತ್ತದೆ. ಇಲ್ಲಿ ನಿಮ್ಮ ಹಳ್ಳಿಯ ಹೆಸರಿರುವ ಮುಂದಿನ ಕೊನೆಯ ಕಾಲಂ ನಲ್ಲಿರುವ PDF ಸಿಂಬಲ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹಳ್ಳಿಯ ನಕ್ಷೆಯನ್ನು ಡೌನ್ ಲೋಡ್ ಮಾಡಿಕೊಂಡು ನಕ್ಷೆಯನ್ನು ವೀಕ್ಷಿಸಬಹುದು.

ಗಮನಿಸಿ : Popup notification blocked ಬಂದಲ್ಲಿ ಅದಕ್ಕೆ allow ಎಂದು ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮರು ಡೌನ್ಫೋಡ್ ಮಾಡಬೇಕು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!