ಗೃಹಜ್ಯೋತಿ ಗ್ರಾಹಕರಿಗೆ ಶಾಕ್:  ಕರೆಂಟ್ ಬಿಲ್​ನಲ್ಲಿ ದಿಢೀರ್ ಏರಿಕೆ, ಇಲ್ಲಿದೆ ಮಾಹಿತಿ!

IMG 20240815 WA0002

ಗೃಹಜ್ಯೋತಿಯಿಂದ ಬಿಗ್ ಶಾಕ್, ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ ನಲ್ಲಿ ದಿಢೀರ್ ಏರಿಕೆ!

ಗೃಹ ಜ್ಯೋತಿ ಯೋಜನೆಯು ಕರ್ನಾಟಕ ಸರ್ಕಾರದ (Karnataka government) ಐದು ಗ್ಯಾರಂಟಿ ಯೋಜನೆಗಳಲ್ಲಿ ಇದು ಕೂಡ ಒಂದು ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್(free current) ಅನ್ನು ಒದಗಿಸುತ್ತದೆ. ಇದರಿಂದ ಹಲವಾರು ಜನರು ತಮ್ಮ ತಮ್ಮ ಮನೆಯ ದೀಪಗಳನ್ನು ಬೆಳಗಿಸಿಕೊಂಡಿದ್ದಾರೆ.

ಆದರೆ ಇದೀಗ ಗೃಹಜ್ಯೋತಿ (Gruhajyothi) ಯಿಂದ ಒಂದು ಬಿಗ್ ಶಾಕ್ ತಿಳಿದು ಬಂದಿದೆ. ಹೌದು, ಇಷ್ಟು ದಿನ ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ ನಲ್ಲಿ ದಿಢೀರ್ ಏರಿಕೆಯಾಗಿದ್ದು, ಈ ಕಾರಣಕ್ಕಾಗಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಸ್ಕಾಂ ನಿಂದ ದಿಢೀರ್ ವಿದ್ಯುತ್ ಬೆಲೆ (Current bill rate) ಏರಿಕೆ :

ಸ್ವಲ್ಪ ಸಮಯದ ವರೆಗೆ ಗೃಹಜ್ಯೋತಿ ಯೋಜನೆಯು ಶೂನ್ಯ ಬೆಲೆಯನ್ನು ನೀಡುತ್ತಿದ್ದು, ಸರ್ಕಾರದಿಂದ ದೊರೆಯುತ್ತಿದ್ದ ಈ ಸೌಲಭ್ಯವನ್ನು ಎಲ್ಲಾ ಫಲಾನುಭವಿಗಳು ಪಡೆಯುತ್ತಿದ್ದರು. ಹಾಗೆಯೇ ಇದೀಗ ಒಂದು ವರ್ಷವಾದ ಬೆನ್ನಲ್ಲೇ ಬೆಸ್ಕಾಂ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು, ಇಷ್ಟು ದಿನ ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ ನಲ್ಲಿ ದಿಢೀರನೇ 150, 200 ರೂಪಾಯಿ ಬಂದಿದ್ದು ಗೃಹಹ್ಯೋತಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆವಿಲೋಡ್ (Heavy load) ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ :

ಗೃಹಜ್ಯೋತಿ ಫಲಾನುಭವಿಗಳಿಗೆ ಬಂದಿರುವ ಕರೆಂಟ್ ಬಿಲ್ ನಲ್ಲಿ ಹಲವು ಸಮಸ್ಯೆಗಳು ಕಂಡು ಬಂದಿದ್ದು, ಅದರಲ್ಲಿ ಹೆವಿಲೋಡ್ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ಶೂನ್ಯ ಬಿಲ್ ಬರುತ್ತಿದ್ದ ಗ್ರಾಹಕರು 200 ರೂ. ಬಿಲ್ ಬಂದಿದ್ದನ್ನು ನೋಡಿ ಶಾಕ್ ಆಗುತ್ತಿದ್ದಾರೆ.

ಪ್ರತಿ ತಿಂಗಳು ಬಳಸಿದಸ್ಟೆ ವಿದ್ಯುತ್ ಬಳಸಿದರೂ ಇದೀಗ ಬೆಲೆಯಲ್ಲಿ ಏರಿಕೆಯಾಗಿದೆ :

ಪ್ರತಿ ತಿಂಗಳು ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತಿತ್ತು, ಆದರೆ ಈಗ ಶೂನ್ಯ ಬಿಲ್ ಜಾಗದಲ್ಲಿ 200 ರೂಪಾಯಿ ಬಂದಿದ್ದು, ಬಿಲ್ ಪಾವತಿಸಬೇಕಾ ಅಥವಾ ಬೇಡವೇ ಎಂಬ ಯೋಚನೆಯಲ್ಲಿದ್ದಾರೆ. ಅಲ್ಲದೇ ಮೂರು ಜನರಿರುವ ಮನೆಗೆ ಈ ಹಿಂದೆ 400 ರೂ. ಬಿಲ್ ಬರುತ್ತದೆ. ‌ಆದಾದ ಬಳಿಕ ಶೂನ್ಯ ಬಿಲ್ 3 ತಿಂಗಳು ಬಂದು ನಂತರ ಈ ಹಿಂದೆ ಎಷ್ಟು ಬಿಲ್ ಕಟ್ಟುತ್ತಿದ್ದೆವೋ ಅಷ್ಟೇ ಬಿಲ್ ಬರುತ್ತಿದೆ. ಈ ಕುರಿತಾಗಿ ಬೆಸ್ಕಾಂ (Bescom) ಅಧಿಕಾರಿಗಳನ್ನ ಪ್ರಶ್ನಿಸಲು ಕರೆಮಾಡಿದರೆ ಯಾರರೂ ಸ್ಪಂದಿಸುವುದಿಲ್ಲ. ಸುಳ್ಳು ಗ್ಯಾರಂಟಿಗಳನ್ನ ಕೊಟ್ಟು ಜನರನ್ನು ಮೋಸ ಮಾಡಿದರು ಎಂದು ಫಾಲಾನುಭವಿ ಶ್ರೀನಿವಾಸ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

19 ಯುನಿಟ್ ಬಳಕೆಗೆ ಹೆಚ್ಚುವರಿ ಲೋಡ್ ಹೆಸರಿನಲ್ಲಿ ದಂಡ :

ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚಾಗಿದ್ದರೆ ಭದ್ರತಾ ಟೇವಣಿ ವಿಧಿಸಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವಾಗ ಎಷ್ಟು ಕೆವಿ ಸಾಮಾರ್ಥ್ಯದ ಸಂಪರ್ಕ ಪಡೆದಿರೋತ್ತಾರೋ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಾಗ ಹೆವಿಲೋಡ್ ದಂಡವನ್ನ ವಿಧಿಸಲಾಗುತ್ತದೆ. ಆದರೆ ಈಗ, 3 ಕೆವಿ ವೋಲ್ಟೋಜ್ ಸಾಮಾರ್ಥದ ವಿದ್ಯುತ್ ಸಂಪರ್ಕ ಪಡೆದಿದ್ದರೂ ಕೇವಲ 19 ಯುನಿಟ್ ಬಳಕೆಗೆ ಹೆಚ್ಚುವರಿ ಲೋಡ್ ಹೆಸರಿನಲ್ಲಿ ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಗೃಹಜ್ಯೋತಿ ಫಲಾನುಭವಿಗಳಿಗೆ ಶೂನ್ಯಬಿಲ್ ಬದಲು ಹೆಚ್ಚು ಮೊತ್ತದ ಬಿಲ್ ಬರುತ್ತಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!