ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0, ಅರ್ಜಿ ಸಲ್ಲಿಸಲು ಅನುಮೋದನೆ.
ಇಂದು ಹಲವಾರು ಜನರು ಬಾಡಿಗೆ ಮನೆ ಅಥವಾ ಸಣ್ಣ ಪುಟ್ಟ ಗುಡಿಸಲುಗಳಲ್ಲಿ ವಾಸವಿದ್ದಾರೆ. ಮಳೆಯಿಂದ ಹಾನಿ ಅಥವಾ ಇನ್ನಾವುದೇ ತೊಂದರೆಗಳು ಉಂಟಾದಾಗ ವಾಸವಿರಲು ಬಹಳ ಕಷ್ಟ ಪಡುತ್ತಾರೆ. ತಮ್ಮ ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು ದಿನವಿಡಿ ದುಡಿದು ಹಣ ಕೂಡಿಟ್ಟುಕೊಳ್ಳುತ್ತಾರೆ. ತಮಗೆ ಒಂದು ಸ್ವಂತ ಮನೆ ಇರಲು ಇಷ್ಟ ಪಡುತ್ತಾರೆ. ಅಂತಹವರು ಇನ್ನು ಚಿಂತಿಸುವ ಅವಶ್ಯಕತೆ ಇಲ್ಲ ಏಕೆಂದರೆ ಕೇಂದ್ರ ಸರ್ಕಾರದಿಂದ ಗೂಡ್ ನ್ಯೂಸ್ ತಿಳಿದು ಬಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ಯೋಜನೆಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) :
ಕೇಂದ್ರ ಸರ್ಕಾರವು ಇದೀಗ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (Pradhan Manthri Avas Yojana) 2.0 ಯೋಜನೆಗೆ ಅನುಮೋದನೆ ನೀಡಿದ್ದು, ಇದರ ಅಡಿಯಲ್ಲಿ 2024-25 ಮತ್ತು 2028-29 ರ ನಡುವೆ ನಗರ ಪ್ರದೇಶಗಳಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ – ಅರ್ಬನ್ 2.0 (PMAY-U 2.0) ಮಧ್ಯಮ-ವರ್ಗದ ಮತ್ತು ನಗರದ ಬಡ ಕುಟುಂಬಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿರುವ ಸರ್ಕಾರಿ ಉಪಕ್ರಮವಾಗಿದೆ. ಇದರ ಮೂಲಕ ಯಾರೆಲ್ಲ ತಮಗೆ ಸ್ವಂತ ಮನೆ ಮಾಡಿಕೊಳ್ಳಬಹುದಾಗಿದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶ (purpose) :
ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ನ ಮುಖ್ಯ ಉದ್ದೇಶವು ಅರ್ಹ ಫಲಾನುಭವಿಗಳಿಗೆ ನಗರ ಪ್ರದೇಶಗಳಲ್ಲಿ ವಾಸವಿರಲು ವಸತಿ ಘಟಕಗಳನ್ನು ನಿರ್ಮಿಸಿ ಕೊಡುವುದಾಗಿದೆ. ಅಷ್ಟೇ ಅಲ್ಲದೆ ಖರೀದಿಸಲು ಅಥವಾ ಬಾಡಿಗೆಗೆ ನೀಡಲು ಅನುವು ಮಾಡಿಕೊಡುತ್ತದೆ. ಈ ಒಂದು ಯೋಜನೆಯಿಂದ ಬಡವರ ಹಾಗೂ ಮಧ್ಯಮ ವರ್ಗದ ಜನರ ಜೀವನ ಉತ್ತಮ ರೀತಿಯಲ್ಲಿ ಸಾಗಲು ಅವರು ತಮ್ಮ ಬದುಕನ್ನು ಕಟ್ಟಿಕೊಂಡು ತಮ್ಮ ಜೀವನವನ್ನು ಸುಗಮವಾಗಿ ಸಾಗಿಸಲು ಸಹಾಯ ಮಾಡುತ್ತದೆ.
ಈ ಯೋಜನೆಯನ್ನು ಪಡೆಯಲು ಯಾರೆಲ್ಲ ಅರ್ಹರು (eligible) ?
ಪಿಎಂ ಇಂಡಿಯಾ ವೆಬ್‌ಸೈಟ್ ಪ್ರಕಾರ :
ಸ್ಲಂ ನಿವಾಸಿಗಳು, ಎಸ್‌ಸಿ / ಎಸ್‌ಟಿ, ಅಲ್ಪಸಂಖ್ಯಾತರು, ವಿಧವೆಯರು, ವಿಕಲಚೇತನರು ಮತ್ತು ಸಮಾಜದ ಇತರ ಹಿಂದುಳಿದ ವರ್ಗಗಳನ್ನು ಒಳಗೊಂಡಂತೆ ಅಂಚಿನಲ್ಲಿರುವ ಜನರಿಗೆ ವಿಶೇಷ ಗಮನ ನೀಡಲಾಗುತ್ತದೆ ಅಲ್ಲದೆ ಸಫಾಯಿ ಕರ್ಮಿ, ಬೀದಿ ವ್ಯಾಪಾರಿ, ಕುಶಲಕರ್ಮಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕೊಳೆಗೇರಿ ನಿವಾಸಿಗಳು ಈ ಯೋಜನೆಯ ಅರ್ಹತೆಯನ್ನು ಪಡೆಯುತ್ತಾರೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
PMAY-U 2.0 ಯೋಜನೆಯು ಆರ್ಥಿಕವಾಗಿ ದುರ್ಬಲ ವಿಭಾಗ (EWS), ಕಡಿಮೆ ಆದಾಯದ ಗುಂಪು (LIG), ಮತ್ತು ಮಧ್ಯಮ ಆದಾಯ ಗುಂಪು (MIG) ವಿಭಾಗಗಳಿಗೆ ಸೇರಿದ ಕುಟುಂಬಗಳಿಗೆ ಮೀಸಲಾಗಿದ್ದು, ದೇಶದ ಎಲ್ಲಿಯೂ ಪಕ್ಕಾ ಮನೆಯನ್ನು ಹೊಂದಿಲ್ಲದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹ ಆದಾಯದ ಮಾನದಂಡಗಳು :
EWS ಕುಟುಂಬಗಳ ವಾರ್ಷಿಕ ಆದಾಯ 3 ಲಕ್ಷ ಒಳಗಡೆ ಇರಬೇಕು.
LIG ಕುಟುಂಬಗಳ ವಾರ್ಷಿಕ ಆದಾಯ 3-6 ಲಕ್ಷದ ನಡುವೆ ಇರಬೇಕು.
MIG ಕುಟುಂಬಗಳ ವಾರ್ಷಿಕ ಆದಾಯ 6-9 ಲಕ್ಷದ ನಡುವೆ ಇರತಕ್ಕದ್ದು.
ಯೋಜನೆಯಿಂದ ಹಣಕಾಸಿನ ನೆರವು ಕೂಡ ದೊರೆಯುತ್ತದೆ :
ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 ಅಡಿಯಲ್ಲಿ, ಒಂದು ಕೋಟಿ ನಗರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ. ಐದು ವರ್ಷಗಳ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಕೈಗೆಟುಕುವ ದರದಲ್ಲಿ ಮನೆಗಳ ನಿರ್ಮಾಣ, ಖರೀದಿ ಅಥವಾ ಬಾಡಿಗೆಗೆ ಅನುಕೂಲವಾಗುವಂತೆ ಈ ಸಹಾಯವನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳ ಮೂಲಕ (ಪಿಎಲ್‌ಐ) ರವಾನಿಸಲಾಗುತ್ತದೆ. ಈ ಯೋಜನೆಗೆ ಸರ್ಕಾರವು 2.30 ಲಕ್ಷ ಕೋಟಿ ರೂಪಾಯಿ ಅನ್ನು ಮೀಸಲಾಗಿದೆ. ಹೆಚ್ಚುವರಿಯಾಗಿ, ನಗರ ಪ್ರದೇಶಗಳಲ್ಲಿ, ಉದ್ಯೋಗಿ ಮಹಿಳಾ ಹಾಸ್ಟೆಲ್‌ಗಳನ್ನು ಸ್ಥಾಪಿಸಲು ನಿಬಂಧನೆಗಳನ್ನು ಮಾಡಲಾಗಿದೆ.
ಬಡ್ಡಿ ಸಹಾಯಧನ ಯೋಜನೆ (ISS)
ಇದಲ್ಲದೆ, ಆರ್ಥಿಕವಾಗಿ ದುರ್ಬಲ ವಿಭಾಗ (EWS), ಕಡಿಮೆ ಆದಾಯದ ಗುಂಪು (LIG), ಮತ್ತು ಮಧ್ಯಮ ಆದಾಯ ಗುಂಪು (MIG) ವರ್ಗಗಳ ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ 25 ಲಕ್ಷ ರೂ. ವರೆಗಿನ ಗೃಹ ಸಾಲ(Home loan)ಗಳಿಗೆ 4% ರಷ್ಟು ಬಡ್ಡಿ ಸಬ್ಸಿಡಿ(subsidy)ಯನ್ನು ಒದಗಿಸಲಾಗುತ್ತದೆ.
ಯಾರೆಲ್ಲ ಈ ಯೋಜನೆಯನ್ನು ಪಡೆಯಲು ಅರ್ಹರು ಅಂತಹವರು ಆದಷ್ಟು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಮತ್ತು ಸರ್ಕಾರದಿಂದ ದೊರೆಯುವ ಈ ಒಂದು ಯೋಜನೆಯ ಉಪಯೋಗ ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.