Govt Scheme: ಪ್ರತಿ ತಿಂಗಳು ₹5000 ಸಿಗುವ ಕೇಂದ್ರ ಸರ್ಕಾರದ ಯೋಜನೆ..!

IMG 20240820 WA0004

ಕೇಂದ್ರ ಸರ್ಕಾರದ ಯೋಜನೆಯಿಂದ ಗುಡ್ ನ್ಯೂಸ್! ದಿನಕ್ಕೆ ಕೇವಲ 7 ರೂಪಾಯಿ ಹೂಡಿಕೆ ಮಾಡಿದರೆ ಸಾಕು, ಪ್ರತಿ ತಿಂಗಳು ಸಿಗುತ್ತದೆ ₹5000..!

ಇಂದು ಪ್ರತಿ ಕ್ಷೇತ್ರದಲ್ಲಿಯೂ ಪೈಪೋಟಿ ನಡೆಯುತ್ತಿದೆ. ದುಡಿಮೆಯ ವಿಷಯದಲ್ಲಿಯೂ ಕೂಡ ತಾ ಮುಂದು ನಾ ಮುಂದು ಎನ್ನುತ್ತಾರೆ. ವರ್ಷವಿಡೀ ದುಡಿದರೂ, ದುಡಿದ ಹಣ ಯಾವುದಕ್ಕೂ ಸಾಲುವುದಿಲ್ಲ. ಅದಕ್ಕಾಗಿ ಇಂದು ಜನರು ಅನೇಕ ರೀತಿಯ ಹೂಡಿಕೆ(invest) ಮಾಡಲು ಬಯಸುತ್ತಾರೆ. ಖಾಸಗಿ ಅಥವಾ ಸರ್ಕಾರಿ ಯೋಜನೆಗಳೆನ್ನದೆ, ಹಲವಾರು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ತಮ್ಮ ತಮ್ಮ ಮುಂದಿನ ಜೀವನಕ್ಕೆ ಉಳಿತಾಯ ಮಾಡುತ್ತಾರೆ. ಹಾಗೆ ಇದೀಗ ಹೂಡಿಕೆ ಮಾಡಲು ಕೇಂದ್ರ ಸರ್ಕಾರದ (central government) ಯೋಜನೆಯೊಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯಲ್ಲಿ ಪಡೆಯಬಹುದು ತಿಂಗಳಿಗೆ 5,000ರೂಗಳು :

ದಿನಕ್ಕೆ ಕೇವಲ 7 ರೂಪಾಯಿ ಹೂಡಿಕೆ ಮಾಡಿದರೆ ಸಾಕು, ಪ್ರತಿ ತಿಂಗಳು ಸಿಗುತ್ತದೆ ರೂ. 5000. ಹಾಗಾಗಿ ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಇದರಲ್ಲಿ ಹೂಡಿಕೆ ಮಾಡಿ ಹಣ ಗಳಿಸಬಹುದು. ಈಗಿನ ಕಾಲದಲ್ಲಿ ಪ್ರತಿ ತಿಂಗಳು ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ, ನೀವು ಹಣ ಉಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕಷ್ಟವೇ. ಹಾಗಾಗಿ ನೀವು ಯಾವುದೇ ಸಮಯದಲ್ಲಿ ಹಣ ಉಳಿತಾಯ ಮಾಡಬೇಕು ಎಂದು ಬಯಸಿದರೆ, ಕೆಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.

ಕೇಂದ್ರ ಸರ್ಕಾರದ ಅಟಲ್ ಪೆನ್ಶನ್ ಯೋಜನೆ :

ಕೇಂದ್ರ ಸರ್ಕಾರದ ಅಟಲ್ ಪೆನ್ಶನ್ ಯೋಜನೆ (Atal pension scheme) ಇದಾಗಿದ್ದು. ಈ ಒಂದು ಯೋಜನೆಯ ಅಡಿಯಲ್ಲಿ, ನೀವು ಸಣ್ಣ ವಯಸ್ಸಿನಲ್ಲೇ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರೆ, ವೃದ್ಧಾಪ್ಯದ ವೇಳೆಗೆ ಪ್ರತಿ ತಿಂಗಳು ಪೆನ್ಶನ್ ರೂಪದಲ್ಲಿ ಹಣ ಪಡೆಯಬಹುದು. ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಒಳ್ಳೆಯ ರಿಟರ್ನ್ಸ್ (Returns) ಪಡೆಯಬಹುದು. ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡುವ ಮೂಲಕ, ಪ್ರತಿ ತಿಂಗಳು ₹5000 ಪಡೆಯಬಹುದಾಗಿದೆ.

ಚಿಕ್ಕ ವಯಸ್ಸಿನಲ್ಲಿ ಬಹಳ ಕಡಿಮೆ ಮೊತ್ತ, ಅಂದರೆ ದಿನಕ್ಕೆ 7 ರೂಪಾಯಿ ಉಳಿತಾಯ ಮಾಡಿದರೂ ಸಾಕು, ಒಳ್ಳೆಯ ರಿಟರ್ನ್ಸ್ ಈ ಯೋಜನೆಯ ಮೂಲಕ ಸಿಗುತ್ತದೆ. ಈ ಒಂದು ಯೋಜನೆಯನ್ನು ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಇರುವ ಬ್ರಾಂಚ್ ನಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ, ಅಪ್ಲಿಕೇಶನ್ ಪಡೆದು ಫಿಲ್ ಮಾಡಿ ಈ ಯೋಜನೆಯಲ್ಲಿ  ಹಣ ಹೂಡಿಕೆ ಮಾಡಲು ಶುರು ಮಾಡಬಹುದು.

ಇಂತಿಷ್ಟು  ವರ್ಷಗಳ ಅವಧಿಯ ವರೆಗೆ  ನಿರ್ದಿಷ್ಟ ಮೊತ್ತವನ್ನು ಠೇವಣಿ ಮಾಡಬೇಕು :

ಅಟಲ್ ಪೆನ್ಶನ್ ಯೋಜನೆಯ ಅಡಿಯಲ್ಲಿ 18 ವಯಸ್ಸಿನಲ್ಲಿ, 20ನೇ ವಯಸ್ಸಿನಲ್ಲಿ, 30ನೇ ವಯಸ್ಸಿನಲ್ಲಿ ಹೀಗೆ ವಯಸ್ಸಿಗೆ ಅನುಗುಣವಾಗಿ 60 ವರ್ಷ ತಲುಪುವವರೆಗು ನಿರ್ದಿಷ್ಟ ಮೊತ್ತವನ್ನು ಠೇವಣಿ (Deposite) ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಠೇವಣಿ ಮಾಡುತ್ತಾ ಬಂದರೆ, 60 ವರ್ಷ ತುಂಬಿದ ನಂತರ ಉತ್ತಮವಾದ ಮೊತ್ತವನ್ನು ಪೆನ್ಶನ್ ರೂಪದಲ್ಲಿ (Pension) ಪಡೆಯಬಹುದು.

ಅಟಲ್ ಪೆನ್ಶನ್ ಯೋಜನೆಯಲ್ಲಿ ಮಿನಿಮಮ್ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕು :

18ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ, ಪ್ರತಿ ತಿಂಗಳು ₹210 ರೂಪಾಯಿ ಪಾವತಿ ಮಾಡುತ್ತಾ ಬರಬೇಕು. ಇದರ ಅರ್ಥ ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿದರೆ ಸಾಕು. 40 ವರ್ಷಗಳ ಅವಧಿಗೆ ಇಷ್ಟು ಹಣ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹5000 ಪೆನ್ಶನ್ (pension) ಪಡೆಯಬಹುದು. 30 ವರ್ಷದಲ್ಲಿ ಹೂಡಿಕೆ ಶುರು ಮಾಡಿದರೆ, 30 ವರ್ಷಗಳ ಅವಧಿಗೆ ಪ್ರತಿ ತಿಂಗಳು ₹577 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಈ ಅಟಲ್ ಪೆನ್ಶನ್ ಯೋಜನೆಯಲ್ಲಿ ಮಿನಿಮಮ್ ಎಂದರೂ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕು.

ಹೂಡಿಕೆ ಮಾಡುತ್ತಿದ್ದ ವ್ಯಕ್ತಿ ವಿಧಿವಶವಾದರೆ ನಾಮಿನಿಗೆ ಹಣ ಸಿಗುತ್ತದೆ :

ಹೂಡಿಕೆ ಮಾಡುತ್ತಿದ್ದ ವ್ಯಕ್ತಿ ವಿಧಿವಶವಾದರೆ, ನಾಮಿನಿಗೆ (nominee) ಎಲ್ಲಾ ಹಣ ಸಿಗುತ್ತದೆ. 1000 ಪೆನ್ಶನ್ ಪಡೆಯುವ ವ್ಯಕ್ತಿ ಮರಣ ಹೊಂದಿದರೆ, ನಾಮಿನಿಗೆ 1.7 ಲಕ್ಷ ಸಿಗುತ್ತದೆ. 5000 ಪೆನ್ಶನ್ ಪಡೆಯುವವರು ಮರಣ ಹೊಂದಿದರೆ ನಾಮಿನಿಗೆ 8.6 ಲಕ್ಷ ಸಿಗುತ್ತದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!