ರೈಲ್ ವಿಕಾಸ್ ನಿಗಮದಲ್ಲಿ ಖಾಲಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

IMG 20240821 WA0003

ಈ ವರದಿಯಲ್ಲಿ ರೈಲ್ವೆ ಇಲಾಖೆಯ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (Rail Vikas Nigam Limited -RVNL)
Recruitment 2024 ರ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (Rail Vikas Nigam Limited -RVNL) Recruitment 2024 ಅವಲೋಕನ:

ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (Rail Vikas Nigam Limited -RVNL)ಈ ವರ್ಷವೂ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆ ಹೊರಡಿಸಿದೆ, RVNL ಈ ಬಾರಿ 44 ಎಕ್ಸಿಕ್ಯೂಟಿವ್ ಮ್ಯಾನೇಜರ್
ಹುದ್ದೆಗಳಿಗೆ( executive Manager) ಅಧಿಸೂಚನೆ ಹೊರಡಿಸಿದೆ. RVNL 2024 ಮೂಲಕ ಎಕ್ಸಿಕ್ಯೂಟಿವ್ ಮ್ಯಾನೇಜರ್ ( executive Manager) ಹುದ್ದೆಗಳಿಗೆ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ 6 ಆಗಸ್ಟ್  2024 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 5 2024 ರಂದು ಕೊನೆಗೊಳ್ಳುತ್ತದೆ. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ಓದಿ.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

ಇಲಾಖೆ ಹೆಸರು  ರೈಲ್ ವಿಕಾಸ್ ನಿಗಮ್ ಲಿಮಿಟೆಡ್ – RVNL
ಹುದ್ದೆಗಳ ಹೆಸರು –ಎಕ್ಸಿಕ್ಯೂಟಿವ್ ಮ್ಯಾನೇಜರ್
ಒಟ್ಟು ಹುದ್ದೆಗಳು – 44
ಅಪ್ಲಿಕೇಶನ್ ವಿಧಾನ– ಆಫ್​​ಲೈನ್(Offline)
ಉದ್ಯೋಗ ಸ್ಥಳ – ಭಾರತ

ರೈಲ್ ವಿಕಾಸ್ ನಿಗಮ್ ಲಿಮಿಟೆಡ್ Recruitment ಹುದ್ದೆಗಳ ಹೆಸರು:

ಕಾರ್ಯನಿರ್ವಾಹಕ -ಹಣಕಾಸು ವಿಭಾಗ : 20
ಹಿರಿಯ ಕಾರ್ಯನಿರ್ವಾಹಕ : 10
ಸಹಾಯಕ ವ್ಯವಸ್ಥಾಪಕ : 2
ಡಿಜಿಎಂ : 6
ಹಿರಿಯ ವ್ಯವಸ್ಥಾಪಕ : 6
ಒಟ್ಟು ಹುದ್ದೆಗಳ ಸಂಖ್ಯೆ: 44
ಉದ್ಯೋಗ ಸ್ಥಳ : ಭಾರತ

ವಿದ್ಯಾರ್ಹತೆ :

ಕಾರ್ಯನಿರ್ವಾಹಕ (ಹಣಕಾಸು) ಬಿ.ಕಾಂ(Bcom) ಆಗಿರಬೇಕು.
ಡಿಜಿಎಂ, ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ಸಿಎ(CA) ಪೂರೈಸಿರಬೇಕು.
ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಸಿಎಂಎ (CMA), ಪದವಿ, ಎಂಬಿಎ (MBA)
ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಬಿ.ಕಾಂ(Bcom) ಆಗಿರಬೇಕು.

ವಯೋಮಿತಿ :

ಕಾರ್ಯನಿರ್ವಾಹಕ (ಹಣಕಾಸು) 32 ವರ್ಷ.
ಡಿಜಿಎಂ : 45 ವರ್ಷ
ಹಿರಿಯ ವ್ಯವಸ್ಥಾಪಕ 40 ವರ್ಷ
ಸಹಾಯಕ ವ್ಯವಸ್ಥಾಪಕ, ಹಿರಿಯ ಕಾರ್ಯನಿರ್ವಾಹಕ 35 ವರ್ಷ.

ಸಂಬಳದ ಪ್ಯಾಕೆಜ್ ಎಷ್ಟು?

ಕಾರ್ಯನಿರ್ವಾಹಕ (ಹಣಕಾಸು): Rs.28,000/-
DGM (ಹಣಕಾಸು): Rs.70,000 – 2,00,000 ತಿಂಗಳಿಗೆ + ಭತ್ಯೆಗಳು + PRP (IDA)
Sr. MGR (ಹಣಕಾಸು): ತಿಂಗಳಿಗೆ Rs.60,000 – 1,80,000 + ಭತ್ಯೆಗಳು + PRP (IDA)
ಸಹಾಯಕ. MGR (ಹಣಕಾಸು): ತಿಂಗಳಿಗೆ Rs.30,000 – 1,20,000 + ಭತ್ಯೆಗಳು + PRP (IDA)
ಹಿರಿಯ ಕಾರ್ಯನಿರ್ವಾಹಕ (ಹಣಕಾಸು): Rs.27,000 – 1,00,000 ತಿಂಗಳಿಗೆ + ಭತ್ಯೆಗಳು + PRP (IDA)

ಆಯ್ಕೆ ಪ್ರಕ್ರಿಯೆ :

ಲಿಖಿತ ಪರೀಕ್ಷೆ: ಅಭ್ಯರ್ಥಿಗಳ ವಿಷಯ ಜ್ಞಾನ ಮತ್ತು ಯೋಗ್ಯತೆಯನ್ನು ನಿರ್ಣಯಿಸಲು ಒಂದು ಪರೀಕ್ಷೆ.
ಮತ್ತು ಸಂದರ್ಶನ

ಅರ್ಜಿಯನ್ನು ಹೀಗೆ ಸಲ್ಲಿಸಿ :

ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು, ಅಭ್ಯರ್ಥಿಗಳು RVNL ವೆಬ್‌ಸೈಟ್‌ನಿಂದ (https://rvnl.org/home)ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಡಿಸ್ಪ್ಯಾಚ್ ವಿಭಾಗ, ನೆಲ ಮಹಡಿ, ಆಗಸ್ಟ್ ಕ್ರಾಂತಿ ಭವನ, ವಿಕಾಜಿ ಕಾಮಾ ಪ್ಲೇಸ್, RK ಪುರಂ, ನವದೆಹಲಿ-110066 ಗೆ ಕಳುಹಿಸಿ ಅಥವಾ RVNL ಕಾರ್ಪೊರೇಟ್ ಕಚೇರಿಗೆ 05.09.2024 ರಂದು 17:00 ಗಂಟೆಗಳ ಒಳಗೆ ಕಳುಹಿಸಿ. ಫಾರ್ಮ್‌ನ ಎಲ್ಲಾ ವಿಭಾಗಗಳು ಪೂರ್ಣಗೊಂಡಿವೆ ಮತ್ತು ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 06-08-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2024

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!